CRPC ಸೆಕ್ಷನ್ 156 (3) ಅಡಿ FIR ರಿಜಿಸ್ಟರ್ ಮಾಡಲು ಕೋರ್ಟ್ ನಿರ್ದೇಶನ
ಲಾಯರ್ ಸಿದ್ದರಾಮಯ್ಯ ಮೇಲೆ ಕೇಸ್ ದಾಖಲಾದ ಮೇಲೆ ‘ಲೋಕಾ’ ಲಾಕ್?
ಸಿಎಂ ಪತ್ನಿ, ಬಾಮೈದ, ಇತರೆ ಆರೋಪಿಗಳಿಗೂ ಸಂಕಷ್ಟ ಎದುರಾಗುತ್ತಾ?
ಬೆಂಗಳೂರು: ಕೇವಲ 2 ದಿನದಲ್ಲಿ ಮುಡಾ ಅಕ್ರಮ ಸೈಟು ಹಗರಣ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯದ ದಿಕ್ಕು ದೆಸೆಗಳನ್ನೇ ಬದಲಾಯಿಸಿ ಬಿಟ್ಟಿದೆ. ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳು ಇಡೀ ದೇಶದ ಕುತೂಹಲವನ್ನು ಕೆರಳಿಸಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮೈಸೂರು ಲೋಕಾಯುಕ್ತ ಪೊಲೀಸರಿಗೆ CRPC ಸೆಕ್ಷನ್ 156 (3) ಅಡಿ FIR ರಿಜಿಸ್ಟರ್ ಮಾಡಲು ಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕೂ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಮಾಡಿ ಡಿಸೆಂಬರ್ 24ರೊಳಗೆ ತನಿಖಾ ವರದಿ ನೀಡಲು ಮಹತ್ವದ ಸೂಚನೆ ನೀಡಿದೆ.
ಸಿದ್ದರಾಮಯ್ಯಗೆ ಸಂಕಷ್ಟ ಫಿಕ್ಸ್?
ಹೈಕೋರ್ಟ್ ಬಳಿಕ ಜನಪ್ರತಿನಿಧಿಗಳ ಕೋರ್ಟ್ನಲ್ಲೂ ಹಿನ್ನಡೆ ಆಗಿರೋದ್ರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಅನ್ನೋದು ಫಿಕ್ಸ್ ಆಗಿದೆ. FIR ದಾಖಲಿಸಲು ಕೋರ್ಟ್ ಸೂಚನೆ ನೀಡಿರೋದ್ರಿಂದ ಮೈಸೂರು ಲೋಕಾಯುಕ್ತದಲ್ಲಿ ತನಿಖೆ ಆರಂಭವಾಗಲಿದೆ.
ಇದನ್ನೂ ಓದಿ: ಇಂದು ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ.. ಸಿಎಂ ಕೇರಳಕ್ಕೆ ಹೋಗುತ್ತಿರುವುದು ಏಕೆ?
ಕೋರ್ಟ್ ಆದೇಶ ಪ್ರತಿ ಸಿಗುತ್ತಿದಂತೆ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ. ಸರ್ಕಾರಿ ಸ್ವತ್ತಿನ ದುರುಪಯೋಗ ಆರೋಪದಲ್ಲಿ ಪಿಸಿ ಌಕ್ಟ್ 13 (1)(A)ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ.
ಸಿಎಂ ವಿರುದ್ಧ ತನಿಖೆ ಹೇಗಿರುತ್ತೆ?
ಕೋರ್ಟ್ ಆದೇಶದ ಬಳಿಕ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಲಿದೆ. ನಂತರ ಮುಡಾ ಹಗರಣದ ಆರೋಪಗಳ ಆಧಾರದ ಮೇಲೆ ಸಿಎಂಗೆ ನೋಟಿಸ್ ಜಾರಿ ಮಾಡಲಾಗುತ್ತೆ.
ತನಿಖಾ ತಂಡ ರಚನೆಯಾದ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತೆ. ವಿಚಾರಣೆಗೆ ಹಾಜರಾದಾಗ ಪ್ರಾಥಮಿಕ ಹಂತದ ಹೇಳಿಕೆ ದಾಖಲು ಮಾಡಲಾಗುತ್ತದೆ. ನಂತರ ಕೇಸ್ ಸಂಬಂಧ ಅವಶ್ಯಕತೆ ಇರುವವರಿಗೂ ನೋಟಿಸ್ ಜಾರಿ ಮಾಡುವುದಕ್ಕೆ ಅವಕಾಶಗಳಿವೆ.
ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸಿಎಂ ಪತ್ನಿ, ಬಾಮೈದ, ಇತರೆ ಆರೋಪಿಗಳು, ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರಣೆ ಹಾಗೂ ತನಿಖೆಯ ವೇಳೆ ಸಿಗುವ ಸಾಕ್ಷ್ಯಗಳನ್ನ ಕಲೆ ಹಾಕಲಾಗುತ್ತೆ. ಸಾಕ್ಷ್ಯ ಹಾಗೂ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗುತ್ತೆ.
ಇದನ್ನೂ ಓದಿ: BIG BREAKING: ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
ಸೆಕ್ಷನ್ ಯಾವುದು? ಯಾಕೆ?
ಮುಡಾ ಹಗರಣದ ಆರೋಪದಲ್ಲಿ ಪಿಸಿ ಌಕ್ಟ್ 13 (1)(A) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತೆ. ಸಾರ್ವಜನಿಕ ಸೇವಕನಿಂದ ಸರ್ಕಾರಿ ಸ್ವತ್ತಿನ ದುರುಪಯೋಗದ ಸೆಕ್ಷನ್ ಇದಾಗಿದೆ. ಈ ಸೆಕ್ಷನ್ ಅಡಿ ಆರೋಪ ಸಾಬೀತು ಆದಲ್ಲಿ ಮುಂದಿನ ಕ್ರಮ ಜರುಗಿಸಲಾಗುತ್ತೆ.
ಸೆಕ್ಷನ್ 13(2) ಅಡಿಯಲ್ಲಿ ಆರೋಪ ಸಾಬೀತಾದ ಬಳಿಕ ಶಿಕ್ಷೆ ನೀಡಲಾಗುತ್ತೆ. ಈ ಸೆಕ್ಷನ್ ಅಡಿಯಲ್ಲಿ ಅಪರಾಧಿಗೆ ಕನಿಷ್ಟ 4 ರಿಂದ ಗರಿಷ್ಠ 10 ವರ್ಷಗಳ ಶಿಕ್ಷೆಯನ್ನ ನೀಡುವುದಕ್ಕೆ ಅವಕಾಶಗಳಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ