newsfirstkannada.com

‘What’s happening in India..?’ ದೆಹಲಿಯಲ್ಲಿ ಸ್ವಾಗತಿಸಲು ಬಂದವರಿಗೆ ಮೋದಿ ಪ್ರಶ್ನೆ -ಜೆ.ಪಿ.ನಡ್ಡಾ ಏನೆಂದು ಉತ್ತರಿಸಿದರು ಗೊತ್ತಾ..?

Share :

26-06-2023

    ಪ್ರಧಾನಿ ನರೇಂದ್ರ ಮೋದಿಯ 6 ದಿನಗಳ ವಿದೇಶ ಪ್ರವಾಸ ಮುಕ್ತಾಯ

    ದೆಹಲಿಗೆ ಬರ್ತಿದ್ದಂತೆಯೇ ಆತ್ಮೀಯವಾಗಿ ಬರಮಾಡಿಕೊಂಡ ನಡ್ಡಾ

    ಅಮೆರಿಕ ಪ್ರವಾಸದಲ್ಲಿ ಮೋದಿ ಮಹತ್ವದ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರು 6 ದಿನಗಳ ವಿದೇಶ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್​ ಪ್ರವಾಸ ಮುಗಿಸಿ ಇಂದು ಬೆಳಗ್ಗೆ ಮೋದಿ ದೆಹಲಿಗೆ ಬಂದಿಳಿದಿದ್ದಾರೆ.

ಮೋದಿಯನ್ನು ಸ್ವಾಗತಿಸಲು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಮೀನಾಕ್ಷಿ ಲೇಖಿ ಆಗಮಿಸಿದ್ದರು. ಮೋದಿ ವಿಮಾನದಿಂದ ಇಳಿಯುತ್ತಿದ್ದಂತೆಯೇ, ನಡ್ಡಾ ಶಾಲು ಹೊದಿಸಿ, ಹೂವು ನೀಡಿ ಬರಮಾಡಿಕೊಂಡರು. ನಂತರ ಉಳಿದ ಗಣ್ಯರು ಮೋದಿಗೆ ಸ್ವಾಗತ ಕೋರಿದರು.

ಈ ವೇಳೆ ಮೋದಿಗೆ ನಡ್ಡಾಗೆ ‘ಇಲ್ಲಿ (ದೇಶ) ಏನ್ ನಡೆಯುತ್ತಿದೆ’ ಎಂದು ಕೇಳಿದ್ದಾರೆ. ‘ಪಕ್ಷದ ನಾಯಕರು ಒಂಬತ್ತು ವರ್ಷಗಳ ಅಭಿವೃದ್ಧಿ ಕಾರ್ಡ್‌ ಹಿಡಿದು ಜನರನ್ನು ತಲುಪಲು ಹೊರಟಿದ್ದಾರೆ. ದೇಶವು ಸಂತೋಷವಾಗಿದೆ ಅಂತಾ ನಡ್ಡಾ ಉತ್ತರಿಸಿದ್ದಾರೆ ಎಂದು ಬಿಜೆಪಿ ಎಂಪಿ ಮನೋಜ್ ತಿವಾರಿ ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.

ಬಿಜೆಪಿ ಎಂಪಿ ಪರ್ವೇಶ್ ವರ್ಮಾ ಮಾಧ್ಯಮಗಳ ಜೊತೆ ಮಾತನಾಡಿ, ಮೋದಿ ದೇಶದಲ್ಲಿ ಏನ್ ನಡೀತಿದೆ ಮತ್ತು ಜನಪರ ಕೆಲಸಗಳನ್ನು ಪಕ್ಷವು ಜನರಿಗೆ ಹೇಗೆ ತಲುಪಿಸುತ್ತಿದೆ ಎಂದು ಕೇಳಿದರು. ಆ ಬಗ್ಗೆ ನಾವು ಅವರಿಗೆ ತಿಳಿಸಿದ್ದೇವೆ ಎಂದಿದ್ದಾರೆ.

ಮೋದಿ ಅಮೆರಿಕ ಪ್ರವಾಸ

ಜೂನ್ 20 ರಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಆರಂಭಿಸಿದ್ದರು. ಜೂನ್ 21 ರಿಂದ 24ರವೆರೆಗೆ ಅಮೆರಿಕದಲ್ಲಿದ್ದರು. ನ್ಯೂಯಾರ್ಕ್​ನಿಂದ ಪ್ರವಾಸ ಆರಂಭಿಸಿದ್ದ ಮೋದಿ, ಮೊದಲ ದಿನ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಸಂಸ್ಥೆಯ ಮಖ್ಯ ಕಚೇರಿಯಲ್ಲಿ ಆಚರಿಸಿದರು. ನಂತರ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದರು. ಶ್ವೇತಭವನದಲ್ಲಿ ಅಧ್ಯಕ್ಷ ಬೈಡನ್ ಆತ್ಮೀಯವಾಗಿ ಸ್ವಾಗತಿಸಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದರು. ದ್ವಿಪಕ್ಷೀಯ ಮಾತುಕತೆ ವೇಳೆ ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ನಂತರ US ಕಾಂಗ್ರೆಸ್​ ಉದ್ದೇಶಿಸಿ ಮೋದಿ ಮಾತನಾಡಿದ್ದರು. ಮಾತ್ರವಲ್ಲ, ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘What’s happening in India..?’ ದೆಹಲಿಯಲ್ಲಿ ಸ್ವಾಗತಿಸಲು ಬಂದವರಿಗೆ ಮೋದಿ ಪ್ರಶ್ನೆ -ಜೆ.ಪಿ.ನಡ್ಡಾ ಏನೆಂದು ಉತ್ತರಿಸಿದರು ಗೊತ್ತಾ..?

https://newsfirstlive.com/wp-content/uploads/2023/06/JP_NADDA.jpg

Load More