newsfirstkannada.com

ಸರಳ ಸಂಪರ್ಕ ಸಾಧಿಸುವ ಗುರಿ.. ಹೊಸ ಫೀಚರ್​ ಪರಿಚಯಿಸಲು ಸಜ್ಜಾದ ವಾಟ್ಸ್​ಆ್ಯಪ್​!

Share :

Published August 31, 2024 at 8:30am

    ಬಹು ಖಾತೆಗಳ ಸಂಪರ್ಕಗಳನ್ನು ಸರಳಗೊಳಿಸುವ ಗುರಿ

    ಮೆಟಾ ಒಡೆತನದ ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ನ್ಯೂ ಫೀಚರ್​

    ವಾಟ್ಸ್​ಆ್ಯಪ್​ ಸಂಪರ್ಕ ಸಿಂಕ್​ ಎಂದರೇನು? ಹೇಗೆ ಕೆಲಸ ಮಾಡುತ್ತೆ?

ಮೆಟಾ ಒಡೆತನದ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸಲು ಮುಂದಾಗಿದೆ. ಬಳಕೆದಾರರು ಬಹು ಖಾತೆಗಳಲ್ಲಿ ತಮ್ಮ ಸಂಪರ್ಕ ಸಿಂಕ್​ ಮಾಡುವ ಫೀಚರ್​ ಇದಾಗಿದೆ. ಇದರ ಮೂಲಕ ಗ್ರಾಹಕರಿಗೆ ಸಂಪರ್ಕ ಸಾಧಿಸಲು ಇನ್ನಷ್ಟು ಸುಲಭವಾಗಲಿದೆ ಎನ್ನಲಾಗುತ್ತಿದೆ.

ವಾಬೇಟಾಇನ್​ಫೋ ಪ್ರಕಾರ, ಬಹು ಖಾತೆಗಳಲ್ಲಿ ಸಂಪರ್ಕಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಸುಧಾರಿಸುವ ಗುರಿಯನ್ನು ಹೊಸ ವೈಶಿಷ್ಟ್ಯ ಹೊಂದಿದೆ. ಇದು ಸಂಪರ್ಕ ಸಿಂಕ್ರೋನೈಸೇಶನ್​ ಮಾಡಲು ಹೆಚ್ಚಿನ ನಿಯಂತ್ರಣವನ್ನು ಒದಗಿಸುವ ನಿರೀಕ್ಷೆಯಿದೆ. ಇದಲ್ಲದೆ ಗೌಪ್ಯತೆ ಮತ್ತು ಅನುಕೂಲತೆಗೆ ತಕ್ಕಂತೆ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ.

ವಾಟ್ಸ್​ಆ್ಯಪ್​ ಸಂಪರ್ಕ ಸಿಂಕ್​ ಎಂದರೇನು?

ಸ್ಮಾರ್ಟ್​ಫೋನ್​​ನಲ್ಲಿರುವ ಕ್ವಾಂಟ್ಯಾಕ್ಟನ್ನು ಸ್ವಯಂಚಾಲಿತವಾಗಿ ಸಿಂಕ್​ ಮಾಡುವ ಪ್ರಕ್ರಿಯೆ ಇದಾಗಿದೆ. ಇದು ಸಂಪರ್ಕ ಪಟ್ಟಿಯನ್ನು ಪ್ರವೇಶಿಸಲು ಮತ್ತು ನವೀಕರಿಸಲು ಸಹಾಯ ಮಾಡುತ್ತದೆ. ವಾಟ್ಸ್​ಆ್ಯಪ್​ ಹೊಸ ಬಹು ಖಾತೆಯ ಬೆಂಬಲದೊಂದಿಗೆ ವಿವಿಧ ಖಾತೆಯನ್ನು ಸಂಪರ್ಕಿಸಬಹುದಾಗಿದೆ.

ಹೇಗೆ ಕೆಲಸ ಮಾಡುತ್ತೆ?

ಒಬ್ಬ ಬಳಕೆದಾರ 2 ವಾಟ್ಸ್​ಆ್ಯಪ್​ ಖಾತೆಯನ್ನು ಹೊಂದಿರಬಹುದು. ಅದರಲ್ಲಿ ಒಂದನ್ನು ಕೆಲಸಕ್ಕಾಗಿ ಬಳಸಿದರೆ ಮತ್ತೊಂದನ್ನು ವೈಯಕ್ತಿಕವಾಗಿ ಬಳಸಬಹುದು. ಆದರೆ ಒಂದು ಖಾತೆಯನ್ನು ಮತ್ತೊಂದು ಖಾತೆಗೆ ಸಿಂಕ್​ ಮಾಡುವ ಮೂಲಕ ಮತ್ತೊಂದನ್ನು ನಿಷ್ಕ್ರೀಯ ಮಾಡಬಹುದಾಗಿದೆ.

ಇದನ್ನೂ ಓದಿ: BSNL Rs107 vs Rs153 Plan: ಕೈಗೆಟಕುವ ದರ, ಹಲವು ಬೆನಿಫಿಟ್ಸ್​.. ಇವೆರಡು ಪ್ಲಾನ್​ಗಳಲ್ಲಿ ಯಾವುದು ಬೆಸ್ಟ್​?

ಅಂದಹಾಗೆಯೇ ಈ ಫೀಚರ್​ನಲ್ಲಿ ವೈಯಕ್ತಿಕ ಖಾತೆಯಲ್ಲಿ ಬ್ಯುಸಿನೆಸ್​​ ಸಂಪರ್ಕ ಘೋಚರಿಸುವುದಿಲ್ಲ. ಇದರಲ್ಲದೆ ಮ್ಯಾನುಯೆಲ್​​ ಸಿಂಕ್​ ಆಯ್ಕೆಯನ್ನು ನೀಡುತ್ತದೆ. ಗೌಪತ್ಯೆ ಮತ್ತು ಸುರಕ್ಷತೆಯ ಬಗ್ಗೆಯೂ ಹೆಚ್ಚು ಒತ್ತು ನೀಡುತ್ತದೆ. ಸಿಂಕ್​ ಮಾಡಲಾದ ಸಂಪರ್ಕಗಳ ಬ್ಯಾಕಪ್​ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: ಮದುವೆ ಆಗ್ರೋ.. ಮಕ್ಕಳು ಮಾಡ್ಕೊಳ್ರೋ.. 31 ಲಕ್ಷ ಕೊಡ್ತೀವಿ ಅಂತಿದೆ ಸರ್ಕಾರ!

ವಾಟ್ಸ್​ಆ್ಯಪ್​​ ಸಂಪರ್ಕ ನಿರ್ವಹಣೆಯನ್ನು ಸರಳಗೊಳಿಸಲು ಈ ಸಿಂಕ್​​ ಮಾಡುವ ಫೀಚರ್​ ಪರಿಚಯಿಸುತ್ತಿದೆ. ಸದ್ಯ ಈ ನೂತನ ಫೀಚರ್​ ಬೀಟಾದಲ್ಲಿದೆ. ಬಳಕೆದಾರರ ಅನುಕೂಲತೆಗೆ ತಕ್ಕಂತೆ ವಿಕಸನ ಮಾಡುತ್ತಿದೆ. ಸದ್ಯದಲ್ಲೇ ಈ ಹೊಸ ಫೀಚರ್​ ಪರಿಚಯಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರಳ ಸಂಪರ್ಕ ಸಾಧಿಸುವ ಗುರಿ.. ಹೊಸ ಫೀಚರ್​ ಪರಿಚಯಿಸಲು ಸಜ್ಜಾದ ವಾಟ್ಸ್​ಆ್ಯಪ್​!

https://newsfirstlive.com/wp-content/uploads/2024/04/Whatsapp-2.jpg

Load More