/newsfirstlive-kannada/media/post_attachments/wp-content/uploads/2023/06/Whatsaap.jpg)
ವಾಟ್ಸ್​ಆ್ಯಪ್​ ಜನಪ್ರಿಯ ಮೊಬೈಲ್​ ಅಪ್ಲಿಕೇಶನ್​ಗಳಲ್ಲಿ ಒಂದು. ವಿಶ್ವದಾದ್ಯಂತ ಸಾಕಷ್ಟು ಜನರು ಇದನ್ನು ಬಳಕೆ ಮಾಡುತ್ತಾರೆ. ದೈನಂದಿನ ವ್ಯವಹಾರಗಳಿಂದ ಹಿಡಿದು, ಡಾಕ್ಯುಮೆಂಟ್​, ವಿಡಿಯೋ, ಆಡಿಯೋ ಕಳುಹಿಸುವುದರೆ ಜೊತೆಗೆ ನಾನಾ ಕೆಲಸಗಳನ್ನು ಮಾಡಲು ಯೋಗ್ಯವಾದ ಅಪ್ಲಿಕೇಶನ್​ ಇದಾಗಿದೆ. ಹಾಗಾಗಿ ಈ ಆ್ಯಪ್​ ಬಹುತೇಕರ ಮನ ಗೆದ್ದಿದೆ​. ಆದರೆ ಶಾಕಿಂಗ್​ ವಿಚಾರ ಎಂದರೆ ವಾಟ್ಸ್​ಆ್ಯಪ್​ ಕೆಲವೊಂದು ಫೋನ್​ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಮುಂದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ವಾಟ್ಸ್​ಆ್ಯಪ್​​ ಅಕ್ಟೋಬರ್​ 24ರ ಬಳಿಕ ಆ್ಯಂಡ್ರಾಯ್ಡ್​​ ಒಎಸ್​ ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಫೋನ್​ಗಳಿಗೆ ಬೆಂಬಲವನ್ನು ಕೊಡುವುದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ವಾಟ್ಸ್​ಆ್ಯಪ್​ ಫಾಕ್​​ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಅಂದಹಾಗೆಯೇ ವಾಟ್ಸ್​ಆ್ಯಪ್​​ ಯಾವೆಲ್ಲಾ ಫೋನ್​ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನೋಡುವುದಾದರೆ..
1.ನೆಕ್ಸಸ್​ 7 (ಆ್ಯಂಡ್ರಾಯ್ಡ್​ 4.2 ಗೆ ಅಪ್‌ಗ್ರೇಡ್ ಮಾಡಬಹುದು)
2. ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್​ 2 (Samsung Galaxy Note 2)
3. ಹೆಚ್​ಟಿಸಿ ಒನ್​
4. ಸೋನಿ ಎಕ್ಸ್‌ಪೀರಿಯಾ Z
5. ಎಲ್ಜಿ ಆಪ್ಟಿಮಸ್ ಜಿ ಪ್ರೊ
6. ಸ್ಯಾಮ್​ಸಂಗ್​ ಗ್ಯಾಲಕ್ಸಿ S2
7. ಸ್ಯಾಮ್​ಸಂಗ್​ ಗ್ಯಾಲಕ್ಸಿ ನೆಕ್ಸಸ್​​
8. ಹೆಚ್​ಟಿಸಿ ಸೆನ್ಸೇಶನ್
9. ಮೊಟೊರೊಲಾ ಡ್ರೋಯ್ಡಿ ರೇಜರ್​
10. ಸೋನಿ ಎಕ್ಸ್‌ಪೀರಿಯಾ S2
11. ಮೊಟೊರೊಲಾ ಕ್ಸೂಮ್​
12. ಸ್ಯಾಮ್​ಸಂಗ್​ ಗ್ಯಾಲಕ್ಸಿ ಟಾಬ್​ 10.1
13. ಅಸೂಸ್​ ಇ ಪ್ಯಾಡ್ ಟ್ರಾನ್ಸ್ಫಾರ್ಮರ್
14. ಏಸರ್ ಐಕೋನಿಯಾ ಟ್ಯಾಬ್ A5003
15. ಸ್ಯಾಮ್​ಸಂಗ್​ ಗ್ಯಾಲಕ್ಸಿ S
16. ಹೆಚ್​ಟಿಸಿ ಡಿಸೈರ್ HD
17. ಎಲ್​ಜಿ ಆಪ್ಟಿಮಸ್​ 2X
18. ಸೋನಿ ಎರಿಕ್ಸನ್​ ಎಕ್ಸ್​ಪೀರಿಯಾ Arc3
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us