newsfirstkannada.com

ಪೊಲೀಸ್​ ಸ್ಟೇಷನ್​​ ಮುದೆಯೇ ಹುಡುಗ ಹುಡುಗಿಯರ ಬೈಕ್​​ ವ್ಹೀಲಿಂಗ್.. ಆಮೇಲೇನಾಯ್ತು?

Share :

14-11-2023

    ಪೊಲೀಸ್​ ಸ್ಟೇಷನ್​​ ಮುಂದೆಯೇ ಹುಡುಗ ಹುಡುಗಿಯರ ಪುಂಡಾಟ

    ಜೀವಭಯ ಇಲ್ಲದೆ ಬೈಕ್​​ನಲ್ಲಿ ವ್ಹೀಲಿಂಗ್​ ಮಾಡಿದ ನಾಲ್ವರ ಗ್ಯಾಂಗ್​​!

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಬೈಕ್​ ವ್ಹೀಲಿಂಗ್​ ವಿಡಿಯೋ!

ಚಿತ್ರದುರ್ಗ: ವ್ಹೀಲಿಂಗ್ ಮಾಡೋದು ಅಂದ್ರೆ ಯುವಕರಿಗೆ ಕ್ರೇಜ್​​. ಬೈಕ್ ಹತ್ತಿ ವ್ಹೀಲಿಂಗ್ ಮಾಡುತ್ತಾ ವಿಡಿಯೋ ಮಾಡೋದು, ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಫೇಮಸ್ ಆಗೋದು ಇವರ ಕೆಲಸ. ಆದ್ರೆ ಇಲ್ಲೊಂದು ಗ್ಯಾಂಗ್​ ಜೀವದ ಭಯವಿಲ್ಲದೇ ಬೈಕ್ ವ್ಹೀಲಿಂಗ್​ ಮಾಡಿದ್ದಲ್ಲದೇ, ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಖತರ್ನಾಕ್​​​ ಐಡಿಯಾ ಮಾಡಿದೆ.

ಎರಡು ಬೈಕ್​​ಗಳಲ್ಲಿ ಬಂದ ನಾಲ್ವರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಮುಂದೆ ಹುಡುಗ ಹಿಂದೆ ಹುಡುಗಿಯನ್ನು ಕೊಡಿಸಿಕೊಂಡು ವ್ಹೀಲಿಂಗ್ ಮಾಡಿದ್ದಾರೆ. ಇನ್ನೊಂದು ಬೈಕ್​ನಲ್ಲಿ ಇಬ್ಬರು ಯುವಕರು ನಡುರಸ್ತೆಯಲ್ಲಿ ವಿವಿಧ ರೀತಿಯ ವ್ಹೀಲಿಂಗ್ ಮಾಡಿ ವಿಡಿಯೋ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ಅಷ್ಟೆಯಲ್ಲ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದರಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್​ಗಳ ನಂಬರ್ ಪ್ಲೇಟ್​ಗಳು ತೆಗೆದು ವಿಡಿಯೋ ಮಾಡಿದ್ದಾರೆ. ಚಿತ್ರದುರ್ಗದ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆಯೇ ನಡೆದ ಡೆಡ್ಲಿ ವ್ಹೀಲಿಂಗ್ ಇದು. ಸ್ಟೇಷನ್ ಮುಂದೆಯೇ ಪುಂಡಾಟ ಮೆರೆದ್ರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ರಾ ಅನ್ನೋದು ಸಾರ್ವಜನಿಕರ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್​ ಸ್ಟೇಷನ್​​ ಮುದೆಯೇ ಹುಡುಗ ಹುಡುಗಿಯರ ಬೈಕ್​​ ವ್ಹೀಲಿಂಗ್.. ಆಮೇಲೇನಾಯ್ತು?

https://newsfirstlive.com/wp-content/uploads/2023/11/Wheeling.jpg

Load More