ಲತಾ ಮಂಗೇಶ್ಕರ್ ಮಾಡಿದ ಸಹಾಯವನ್ನು ಸ್ಮರಿಸುತ್ತಿದೆ BCCI
ಅಂದು ವಿಶ್ವಕಪ್ ಗೆದ್ದ ಧೀರರಿಗೆ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ
BCCI ಬಳಿ ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ಸಹಾಯ ಮಾಡಿದ್ದ ಲತಾ ಮಂಗೇಶ್ಕರ್
1983ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಟ್ರೋಪಿ ಗೆದ್ದಿತು. ಕಪಿಲ್ ದೇವ್ ನಾಯಕತ್ವದ ತಂಡ ಜಯವನ್ನು ತನ್ನಗಾಗಿಸುವ ಮೂಲಕ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಆದರೆ ಆ ಸಮಯದಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಹಣ ನೀಡಲು ಬಿಸಿಸಿಐ ಬಳಿ ಅಷ್ಟೊಂದು ಹಣ ಇರಲಿಲ್ಲ ಎಂದರೆ ನಂಬುತ್ತೀರಾ? ಆ ಸಮಯದಲ್ಲಿ ಬಿಸಿಸಿಐ ಕೈ ಹಿಡಿದದ್ದು ಯಾರು ಗೊತ್ತಾ? ಭಾರತದ ಗಾನ ಕೋಗಿಲೆ ಎಂದರೆ ನಂಬಲೇಬೇಕು.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಅಂದಿನ ಸ್ಥಿತಿ ಮಾತ್ರ ಕೆಟ್ಟದಾಗಿತ್ತು. ಆಗಿನ ಬಿಸಿಸಿಐ ಅಧ್ಯಕ್ಷ ಎನ್ಕೆಪಿ ಸಾಳ್ವೆ ಭಾರತೀಯ ಕ್ರಿಕೆಟಿಗರಿಗೆ ಪ್ರಶಸ್ತಿ ನೀಡಲು ಮುಂದಾದರು . ಆದರೆ ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಈ ಸಮಯದಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಹಾಯ ಕೋರಿದ್ದರಂತೆ.
ಹೌದು. ಅಂದು ಭಾರತ ತಂಡ ವಿಜಯೋತ್ಸವ ಆಚರಿಸಲು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರನ್ನು ಬರಮಾಡಿಕೊಂಡಿದ್ದರು. ಮಾತ್ರವಲ್ಲದೆ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ವಿಶ್ವಕಪ್ ಗೆದ್ದ ಆಟಗಾರರಿಗೆ ಅಂದು ನೀಡಲು ಏನು ಇಲ್ಲದ ಕಾರಣ ಲತಾ ಮಂಗೇಶ್ಕರ್ ತಲಾ ಒಬ್ಬೊಬ್ಬ ಆಟಗಾರರಿಗೆ ಒಂದೊಂದು ಲಕ್ಷವನ್ನು ಬಹುಮಾನವನ್ನಾಗಿ ನೀಡಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಅಂದು ಲತಾ ಮಂಗೇಶ್ಕರ್ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು ಸಹ ಬಿಸಿಸಿಐ ಬಳಿ ಒಂದು ರೂಪಾಯಿಯನ್ನು ಸಹ ತೆಗೆದುಕೊಂಡಿಲ್ಲ. ಇವರ ಸಹಾಯವನ್ನು ಬಿಸಿಸಿಐ ಇಂದಿಗೂ ಸ್ಮರಿಸುತ್ತಿದೆ. ಮಾತ್ರವಲ್ಲದೆ ಲತಾ ಮಂಗೇಶ್ಕರ್ ಬದುಕಿರುವಾಗ ಭಾರತದ ಪ್ರತಿಯೊಂದು ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಅವರಿಸಗೆ ಆಸನವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ