newsfirstkannada.com

Watch: ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​ ಸಹೋದರಿಯರ ಭೇಟಿ; ಇವರಿಬ್ಬರ ಪ್ರಾರ್ಥನೆ ಒಂದೇ!

Share :

05-08-2023

    ಪತಿ ಜತೆಗೆ ಶಿವನ ದರ್ಶನಕ್ಕೆ ತೆರಳಿದ್ದ ಮೋದಿ ಸಹೋದರಿ

    ಅಧಿಕ ಶ್ರಾವಣ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ

    ಪಾರ್ವತಿ ದರ್ಶನಕ್ಕೆ ಹೋಗಿದ್ದಾಗ ಇಬ್ಬರು ಪರಸ್ಪರ ಭೇಟಿ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯವರ ಸಹೋದರಿ ವಾಸಂತಿಬೆನ್ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿದೇವಿರನ್ನು ಭೇಟಿಯಾಗಿ ಪರಸ್ಪರ ತಬ್ಬಿಕೊಂಡು ಅಭಿನಂದಿಸಿದ್ದಾರೆ. ಈ ವೇಳೆ ಇಬ್ಬರು ಕೆಲ ಸಮಯವನ್ನು ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ.

ಮೋದಿಯವರ ಸಹೋದರಿ ವಾಸಂತಿಬೆನ್ ಅವರು ಅಧಿಕ ಶ್ರಾವಣ ಮಾಸ ಹಿನ್ನೆಲೆಯಲ್ಲಿ ತನ್ನ ಪತಿಯೊಂದಿಗೆ ಉತ್ತರಾಖಂಡ್​ನ ಪೌರಿ ಗರ್ವಾಲ್ ಪ್ರದೇಶದಲ್ಲಿನ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಇದೇ ವೇಳೆ ಕೊಠಾರಿ ಗ್ರಾಮದ ಪಾರ್ವತಿ ದೇವಸ್ಥಾನಕ್ಕೂ ಭೇಟಿ ನೀಡಿದರು. ಆಗ ಅಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿಯವರನ್ನು ಭೇಟಿ ಮಾಡಿದ್ದಾರೆ.

ಮೋದಿ ಸಹೋದರಿ ಶಶಿ ದೇವಿಯವರನ್ನು ನೋಡುತ್ತಿದ್ದಂತೆ ಪರಸ್ಪರ ತಬ್ಬಿಕೊಳ್ಳುವುದರ ಮೂಲಕ ಅಭಿನಂದಿಸಿದರು. ಬಳಿಕ ಇಬ್ಬರು ಸೇರಿ ದೇವಾಲಯದ ಕಡೆಗೆ ಹೋಗಿ ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಮೌಲ್ಯಯುತ ಕೆಲ ಸಮಯ ಕಳೆದಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಈ ಇಬ್ಬರು ಸಹೋದರಿಯರು ಮೋದಿ ಹಾಗೂ ಯೋಗಿ ಅವರಿಗೆ ಒಳ್ಳೆಯದಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸದ್ಯ ಈ ವಿಡಿಯೋವನ್ನು ಬಿಜೆಪಿ ನಾಯಕ ಅಜಯ್​ ನಂದ ಅವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪಿಎಂ ಮೋದಿ, ಸಿಎಂ ಯೋಗಿ ಅವರ ಸಹೋದರಿಯರು ಪರಸ್ಪರ ಭೇಟಿಯಾಗಿ ತುಂಬಾ ಸರಳತೆ ಮರೆದರು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​ ಸಹೋದರಿಯರ ಭೇಟಿ; ಇವರಿಬ್ಬರ ಪ್ರಾರ್ಥನೆ ಒಂದೇ!

https://newsfirstlive.com/wp-content/uploads/2023/08/MODI_PM_YOGI_CM_SISTERS.jpg

Load More