newsfirstkannada.com

ಬಿಜೆಪಿ ಮಹಿಳಾ ಸಂಸದರಿಗೆ ಫ್ಲೇಯಿಂಗ್ ಕಿಸ್​​ ಕೊಟ್ರಂತೆ ರಾಹುಲ್ ಗಾಂಧಿ -ಸ್ಮೃತಿ ಇರಾನಿ ಗಂಭೀರ ಆರೋಪ

Share :

09-08-2023

    ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ ಶೋಭಾ ಕರಂದ್ಲಾಜೆ

    ಇವತ್ತು ಸಂಸತ್ ಕಲಾಪದಲ್ಲಿ ಭಾಷಣ ಮಾಡಿರುವ ರಾಹುಲ್ ಗಾಂಧಿ

    ಭಾಷಣ ಮುಗಿಸಿ ವಾಪಸ್ ಆಗುವ ವೇಳೆ ಫ್ಲೇಯಿಂಗ್ ಕಿಸ್ ಆರೋಪ

ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಇವತ್ತು ಮಾತನಾಡಿದರು. ತಮ್ಮ ಭಾಷಣ ಮುಗಿಸಿ ವಾಪಸ್ ಆಗುವ ವೇಳೆ ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗಂಭೀರ ಆರೋಪ ಮಾಡಿದ್ದಾರೆ.

ಇವರ ವಂಶದ ಲಕ್ಷಣ ಇದು

ಮಹಿಳಾ ಸಂಸದರು ಕುಳಿತಿರುವ ಕಡೆಗೆ ಫ್ಲೈಯಿಂಗ್ ಕಿಸ್ ಕೊಟ್ಟು ಹೋಗಿದ್ದಾರೆ. ಇವರ ಘನತೆ ಇದು, ದೇಶದ ಸದನ ಈ ರೀತಿಯ ವರ್ತನೆಯನ್ನು ಎಂದೂ ನೋಡಿಲ್ಲ. ಇವರ ವಂಶದ ಲಕ್ಷಣ ಇದು ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯ ಈ ವರ್ತನೆ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು ನೀಡಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸ್ಪೀಕರ್​​ ದೂರು ನೀಡಲಾಗಿದೆ. ಲೋಕಸಭೆಯಲ್ಲಿ ರಾಹುಲ್ ಅಸಭ್ಯ ವರ್ತನೆ ಪ್ರದರ್ಶಿಸಿದ್ದಾರೆ. ಈ ವರ್ತನೆಗೆ ರಾಹುಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಲೋಕಸಭೆಯಲ್ಲಿ ಬಿಜೆಪಿಯ ಮಹಿಳಾ ಸಚಿವರು, ಸಂಸದರತ್ತ ಪ್ಲೈಯಿಂಗ್ ಕಿಸ್ ಕೊಟ್ಟಿದ್ದು ಸರಿಯಲ್ಲ ಎಂದು ದೂರು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಮಹಿಳಾ ಸಂಸದರಿಗೆ ಫ್ಲೇಯಿಂಗ್ ಕಿಸ್​​ ಕೊಟ್ರಂತೆ ರಾಹುಲ್ ಗಾಂಧಿ -ಸ್ಮೃತಿ ಇರಾನಿ ಗಂಭೀರ ಆರೋಪ

https://newsfirstlive.com/wp-content/uploads/2023/08/RAHUL_GANDHI-12.jpg

Load More