newsfirstkannada.com

ಅಂತೂ ಅನ್ನಭಾಗ್ಯ ಯೋಜನೆ ಗ್ಯಾರಂಟಿ ಜಾರಿ; ಅಕೌಂಟ್‌ಗೆ ₹170 ರೂಪಾಯಿ ಹಣ ಹಾಕೋದು ಯಾವಾಗ?

Share :

01-07-2023

  ಮನೆ ಯಜಮಾನರ ಖಾತೆಗೆ ಅನ್ನಭಾಗ್ಯ ಹಣ ವರ್ಗಾವಣೆ ಯಾವಾಗ?

  1.28 ಲಕ್ಷ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ತಲಾ 170 ರೂಪಾಯಿ

  ರೇಷನ್ ಕಾರ್ಡ್​ಗೆ ಇ-ಕೆವೈಸಿ ಅಥವಾ ಆಧಾರ್ ಲಿಂಕ್ ಆಗಿರಬೇಕು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಮಾತು ಕೊಟ್ಟಂತೆ ಇವತ್ತು ಮತ್ತೆರಡು ಗ್ಯಾರಂಟಿ ಯೋಜನೆಯನ್ನ ಜಾರಿಗೆ ತಂದಿದೆ. ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಅಧಿಕೃತವಾಗಿ ಜಾರಿಗೆ ಬಂದಿದ್ದು, ಇಂದಿನಿಂದ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅನ್ನಭಾಗ್ಯ ಯೋಜನೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಜುಲೈ 1ರಿಂದ ಈ ಯೋಜನೆ ಜಾರಿಗೊಳಿಸಿದ್ದೇವೆ. ಜುಲೈ ತಿಂಗಳಲ್ಲಿ ದುಡ್ಡು ಕೊಡ್ತೀವಿ ಅಂತಾ ಹೇಳಿದ್ದೇವೆ ಜುಲೈ 1ಕ್ಕೆ ಹಣ ಹಾಕ್ತೀವಿ ಅಂತಾ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಆದರೆ ರಾಜ್ಯದ ಪಡಿತರ ಅಂಗಡಿಗಳಲ್ಲಿ ಇವತ್ತೇ ಪಡಿತರ ವಿತರಿಸಿಲ್ಲ. 5 ಕೆಜಿ ಅಕ್ಕಿ ವಿತರಣೆಗೆ ಇನ್ನೂ ಸಮಯಾವಕಾಶವಿದ್ದು, ಶೀಘ್ರದಲ್ಲೇ ಬಿಪಿಎಲ್ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇನ್ನು ಉಳಿದ 5 ಕೆಜಿ ಅಕ್ಕಿಗೆ ಬದಲು 170 ರೂಪಾಯಿ ದುಡ್ಡನ್ನು ಅಕೌಂಟ್‌ಗೆ ಹಾಕಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ಅದು ಯಾವಾಗ ಅನ್ನೋದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದೆ.

170 ರೂಪಾಯಿ ಹಾಕಲು 15 ದಿನ ಬೇಕು!
ಇನ್ನೊಂದು ವಾರದಲ್ಲಿ ಪಡಿತರ ಅಂಗಡಿಯಲ್ಲಿ 5 ಕೆಜಿ ಅಕ್ಕಿ ವಿತರಿಸಿದ್ರೂ ಸರ್ಕಾರ ಈಗಲೇ ಜನರ ಖಾತೆಗೆ ಅನ್ನಭಾಗ್ಯದ ಹಣ ಹಾಕಲ್ಲ. ಯಾಕಂದ್ರೆ, ಖಾತೆಗೆ ಹಣ ವರ್ಗಾವಣೆ ಆಗಲು ಇನ್ನೂ 15 ದಿನ ಬೇಕಾಗಬಹುದು. ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಗ್ಯಾನೇಂದ್ರ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೊದಲಿಗೆ ರೇಷನ್ ಕಾರ್ಡ್​ಗೆ ಆಧಾರ್ ಲಿಂಕ್‌ ಮಾತ್ರ ಬೇಕಿತ್ತು. ಇದೀಗ ಬ್ಯಾಂಕ್ ಅಕೌಂಟ್ ಕೂಡ ಆಧಾರ್​ಗೆ ಲಿಂಕ್ ಆಗಿರಬೇಕು. ರೇಷನ್ ಕಾರ್ಡ್​ಗೆ ಇ-ಕೆವೈಸಿ ಅಥವಾ ಆಧಾರ್ ಲಿಂಕ್ ಆಗಿರಬೇಕು. ಜೊತೆಗೆ ಬ್ಯಾಂಕ್​ನಲ್ಲೂ ಅಕೌಂಟ್‌ ಆಧಾರ್ ಲಿಂಕ್‌ ಮಾಡಿರಬೇಕು. ಬ್ಯಾಂಕ್ ಖಾತೆ ಇಲ್ಲದಿದ್ರೆ ಪೋಸ್ಟ್ ಆಫೀಸ್ ಅಕೌಂಟ್ ಆದರೂ ಲಿಂಕ್ ಆಗ್ಬೇಕು. ಲಿಂಕ್ ಆಗಿರುವ ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆ ಌಕ್ಟಿವ್ ಆಗಿರಬೇಕು. ಮನೆ ಯಜಮಾನ ಯಾರಿದ್ದಾರೋ ಅವರು ಬದುಕಿರುವ ದೃಢೀಕರಣ ಮಾಡಬೇಕು. ಇದಾದ ನಂತರ ಮನೆ ಯಜಮಾನರ ಖಾತೆಗೇ ಅನ್ನಭಾಗ್ಯ ಹಣ ವರ್ಗಾವಣೆ ಆಗುತ್ತೆ.

ಬ್ಯಾಂಕ್‌ ಖಾತೆ ಲಿಂಕ್ ಆಗಿರುವ ಬಗ್ಗೆ ಎನ್​ಸಿಪಿಐ ಸಂಸ್ಥೆ ಮಾಹಿತಿ ಕಲೆ ಹಾಕ್ತಿದೆ. ಕರ್ನಾಟಕದಲ್ಲಿ 1.28 ಲಕ್ಷ ಬಿಪಿಎಲ್ ಕಾರ್ಡ್ ಕುಟುಂಬಗಳು ಇವೆ. ಲಿಂಕ್ ಆದವರಲ್ಲಿ ಎಷ್ಟು ಜನರ ಖಾತೆ ಌಕ್ಟಿವ್ ಆಗಿದೆ ಅಂತಾ ಚೆಕ್ ಮಾಡಬೇಕಿದೆ. ಎಲ್ಲವನ್ನೂ ಪರಿಶೀಲಿಸಿ ಮಾಹಿತಿ ಕಲೆ ಹಾಕಲು ಕನಿಷ್ಠ ಇನ್ನೂ ಎರಡು ಮೂರು ದಿನಗಳು ಇದಕ್ಕಾಗಿ ಬೇಕಾಗಬಹುದು. ಮಾಹಿತಿ ಪಡೆದ ನಂತರ ಡಿಬಿಟಿಗೆ ಎಲ್ಲಾ ಡೇಟಾ ನೀಡಲಾಗುತ್ತದೆ. ಡಿಬಿಟಿಯವರು ಖಜಾನೆ 2ಕ್ಕೆ ಈ ಡೇಟಾ ಎಲ್ಲವನ್ನೂ ನೀಡುತ್ತಾರೆ. ಅಲ್ಲಿಂದ ವೆರಿಫಿಕೇಷನ್​ಗೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತೆ. ಈ ಎಲ್ಲಾ ಪ್ರಕ್ರಿಯೆ ಮುಗಿಯೋಕೆ ಇನ್ನೂ 10-15 ದಿನ ಬೇಕಾಗುತ್ತೆ. ಜುಲೈ 15 ಅಥವಾ 16ನೇ ತಾರೀಕಿನಿಂದ ಅನ್ನಭಾಗ್ಯ ಹಣ ಜನರ ಖಾತೆಗೆ ಬೀಳುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಂತೂ ಅನ್ನಭಾಗ್ಯ ಯೋಜನೆ ಗ್ಯಾರಂಟಿ ಜಾರಿ; ಅಕೌಂಟ್‌ಗೆ ₹170 ರೂಪಾಯಿ ಹಣ ಹಾಕೋದು ಯಾವಾಗ?

https://newsfirstlive.com/wp-content/uploads/2023/07/Cm-Siddaramaiah-1.jpg

Load More