newsfirstkannada.com

VIDEO: ‘ಟ್ರಿಪ್‌ ಹೋಗ್ತಿದ್ದೀವಿ.. ವಾಪಸ್ ಮನೆಗೆ ಹೋಗೋಷ್ಟ್ರಲ್ಲಿ ನನ್ನ ಗಂಡಾನೇ ಅಡುಗೆ ಮಾಡಿರ್ತಾರೆ’- ಫ್ರೀ ಶಕ್ತಿ ಪ್ರದರ್ಶನ!

Share :

25-06-2023

    ಗಂಡನನ್ನು ಮನೆಯಲ್ಲಿ ಬಿಟ್ಟು ಮಹಿಳಾ ಮಣಿಗಳ ಸಖತ್​ ಟ್ರಿಪ್​

    ಸರ್ಕಾರದ ಶಕ್ತಿ ಯೋಜನೆಗೆ 2ನೇ ವೀಕೆಂಡ್‌ನಲ್ಲೂ ಭರ್ಜರಿ ರೆಸ್ಪಾನ್ಸ್

    ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ದಂಡು, ಬಸ್‌ಗಳು ಹೌಸ್ ಫುಲ್‌

ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಸತತ 2ನೇ ವೀಕೆಂಡ್‌ನಲ್ಲೂ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಉಚಿತ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಇನ್ನು ಇವತ್ತು ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ.

ರಾಜ್ಯದ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ, ಅಂಜನಾದ್ರಿ ಬೆಟ್ಟ,  ಮಹದೇಶ್ವರ ಬೆಟ್ಟ ಹೀಗೆ ರಾಜ್ಯದ ನಾನಾ ಧಾರ್ಮಿಕ ಕೇಂದ್ರಗಳಿಗೆ ಫ್ರೀ ಸಾರಿಗೆ ಬಸ್‌ನಲ್ಲಿ ಪ್ರಯಾಣ ಬೆಳಸಿದ್ದಾರೆ. ಹೀಗಾಗಿ ಸರ್ಕಾರಿ ಬಸ್‌ಗಳು ಹೌಸ್ ಫುಲ್‌ ಆಗಿವೆ.​ ಬಸ್​​ನಲ್ಲಿ ಸೀಟ್​ ಇಲ್ಲದಿದ್ದರು ಜನರು ನಿಂತುಕೊಂಡೆ ಪ್ರಯಾಣ ಮಾಡುತ್ತಿರುವುದು ವಿಪರ್ಯಾಸ. ಇನ್ನು, ಮಹಿಳೆಯರಂತೂ ತಮ್ಮ ಗಂಡಂದಿರನ್ನು ಮನೆಯಲ್ಲೇ ಬಿಟ್ಟು ಗೆಳತಿಯರೊಂದಿಗೆ ಟ್ರಿಪ್​ ಹಾಕುತ್ತಿದ್ದಾರೆ. ಹೀಗಾಗಿ ಗಂಡಸರ ಪಾಡು ಹೇಳತೀರದಾಗಿದೆ.

ಇನ್ನು, ಈ ಕುರಿತು ನ್ಯೂಸ್​​ಫಸ್ಟ್​​ಗೆ ಪ್ರತಿಕ್ರಿಯೆ ನೀಡಿದ ಮಹಿಳೆಯೊಬ್ಬರು, ಮಕ್ಕಳಿಗೆ ಶಾಲೆ ಇದ್ದ ಕಾರಣ ಗಂಡನನ್ನು ಮನೆಯಲ್ಲಿ ಬಿಟ್ಟು ಟ್ರಿಪ್​ ಹೋಗುತ್ತಿದ್ದೇವೆ. ನಾವು ಮನೆಗೆ ವಾಪಸ್​​ ಆಗುತ್ತಿದ್ದಂತೆ ಗಂಡಂದಿರೇ ಅಡುಗೆ ಮಾಡಿರುತ್ತಾರೆ. ನಾವು ಸುತ್ತಾಡುತ್ತೇವೆ ಪಾಪ ಅವರಿಗೆಲ್ಲ ಕಷ್ಟ ಆಗಿದೆ. ಗಂಡಂದಿರಿಗೂ ಸಹ ಫ್ರೀ ಬಸ್​​​ ಯೋಚನೆ ಮಾಡಬೇಕಿತ್ತು. ನಮ್ಮನ್ನು ಮನೆಯಿಂದ ಹೊರಗಡೆ ಕಳುಹಿಸಲು ಅವರು ಬೇಸರ ಆಗುತ್ತಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಟ್ರಿಪ್‌ ಹೋಗ್ತಿದ್ದೀವಿ.. ವಾಪಸ್ ಮನೆಗೆ ಹೋಗೋಷ್ಟ್ರಲ್ಲಿ ನನ್ನ ಗಂಡಾನೇ ಅಡುಗೆ ಮಾಡಿರ್ತಾರೆ’- ಫ್ರೀ ಶಕ್ತಿ ಪ್ರದರ್ಶನ!

https://newsfirstlive.com/wp-content/uploads/2023/06/free-bus-8.jpg

Load More