newsfirstkannada.com

BCCIಗೆ ಬೇಡವಾದ ಕೂಸುಗಳು ಇವರು..! ಯ್ಯೂಸ್ & ಥ್ರೋ ರೀತಿ ಬಳಸಿಕೊಳ್ತಿದ್ಯಾ..? ತುಳಿತಕ್ಕೆ ಒಳಗಾದವರ ಕಥೆ

Share :

26-06-2023

  ಕೆಲವು ಸರಣಿಯಲ್ಲಿ ಚಾನ್ಸ್, ಆಮೇಲೆ ಕಿಕ್ಔಟ್..!

  ಈ ಆಟಗಾರರ ಭವಿಷ್ಯ ಏನು? ಮುಗೀತಾ ಕರಿಯರ್?

  ಬಿಸಿಸಿಐನಿಂದ ನೆಗ್ಲೆಟ್​ಗೆ ಒಳಗಾದವರು ಯಾಱರು?

ವೆಸ್ಟ್ ಇಂಡೀಸ್ ಟೂರ್ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಿದೆ ನಿಜ. ಆದ್ರೆ ಇದರ ಜೊತೆಗೆ ಹಲ ಯಂಗ್​​ಸ್ಟರ್ಸ್​ ಕಳೆದೂ ಹೋಗಿದ್ದಾರೆ. ಕೆಲ ಆಟಗಾರರನ್ನು ಬಿಸಿಸಿಐ, ಯೂಸ್ ಆ್ಯಂಡ್ ಥ್ರೋನಂತೆ ಬಳಸಿಕೊಂಡು ಬೀಸಾಡಿ ಬಿಡ್ತಾ? ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಆ ಆಟಗಾರರು ಯಾರು? ಅವರಿಗೆ ಮುಂದೆ ಚಾನ್ಸ್ ಸಿಗುತ್ತಾ ಇಲ್ವಾ? ಅನ್ನೋ ಪ್ರಶ್ನೆ ಉದ್ಭವಿಸಿದೆ.

ಕಾಲ ಬದಲಾದಂತೆ ಕ್ರಿಕೆಟ್ ಆಟದ ವೈಖರಿಯೂ ಬದಲಾಗುತ್ತೆ. ಆಟಗಾರರ ಪ್ಲೇಯಿಂಗ್ ಸ್ಟ್ರೈಲ್ ಕೂಡ ಬದಲಾಗ್ತಿದೆ. ಸರಣಿ ಸರಣಿಗೂ ತಂಡವೂ ಬದಲಾಗ್ತಿದೆ. ಹಲವರಿಗೆ ಜಾಕ್ ಪಾಟ್ ಹೊಡೆದ್ರೆ, ಇನ್ನು ಕೆಲವರಿಗೆ ಶಾಕ್ ಟ್ರೀಟ್ಮೆಂಟ್ ಸಿಗ್ತಿದೆ. ಇದೀಗ ವಿಂಡೀಸ್ ಸರಣಿಗೆ ತಂಡ ಪ್ರಕಟವಾದಾಗ್ಲೂ, ಟೀಮ್ ಇಂಡಿಯಾದಿಂದ ಹಲ ಆಟಗಾರರು ಹೊರಬಿದ್ದಿದ್ದಾರೆ. ಹಿರಿಯರ ಅಲಭ್ಯತೆಯಲ್ಲಿ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಂಡವರು, ಫ್ಯೂಚರ್ ಸ್ಟಾರ್ಸ್ ಅನಿಸಿಕೊಂಡವರು ಈಗ ಬಿಸಿಸಿಐ ಆ್ಯಂಡ್ ಸೆಲೆಕ್ಟರ್ಸ್​ಗೆ ಬೇಡವಾಗಿದ್ದಾರೆ.

2021ರ ಟಿ20 ವಿಶ್ವಕಪ್ ಮುನ್ನ ಟೀಮ್ ಇಂಡಿಯಾದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಈ ವೇಳೆ ಹಲವು ಯುವ ಕ್ರಿಕೆಟಿಗರಿಗೆ ಬಿಸಿಸಿಐ & ಸೆಲೆಕ್ಟರ್ಸ್ ಚಾನ್ಸ್ ನೀಡುತ್ತ ಬಂದಿತ್ತು. ಆದ್ರೆ ಒಂದೆರಡು ಸರಣಿಗಳಲ್ಲಿ ಆಡಿದ ಇವರು, ಮಂಗಮಾಯವಾಗಿ ಬಿಟ್ಟರು. ಈಗ ಆ ಆಟಗಾರರತ್ತ ತಿರುಗಿಯೂ ನೋಡ್ತಿಲ್ಲ.

ಬೇಡವಾದ್ರಾ ದೀಪಕ್ ಚಹರ್-ಅರ್ಷ್​ ದೀಪ್?

ಅರ್ಷ್​ದೀಪ್ ಸಿಂಗ್, ದೀಪಕ್ ಚಹರ್. ಉತ್ತಮ ಸ್ವಿಂಗ್ ಜೊತೆಗೆ ಡೆತ್ ಓವರ್​ಗಳಲ್ಲಿ ಪರಿಣಾಮಕಾರಿ ಬೌಲರ್​ಗಳಾಗಿದ್ದಾರೆ. ಸ್ಟಾರ್ ಆಟಗಾರರ ಅಲಭ್ಯತೆ ವೇಳೆ ತಂಡಕ್ಕೆ ನೆರವಾಗ್ತಿದ್ದೇ ಈ ದೀಪಕ್ ಚಹರ್ ಆ್ಯಂಡ್ ಅರ್ಷ್ದೀಪ್. ವೈಟ್​ಬಾಲ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಇವರು, ಆಗೊಮ್ಮೆ ಈಗೊಮ್ಮೆ ಹಳಿ ತಪ್ಪಿದ್ದು ಬಿಟ್ರೆ, ನಿಜಕ್ಕೂ ಟೀಮ್ ಇಂಡಿಯಾದ ಎಫೆಕ್ಟೀವ್ ಬೌಲರ್ಸ್. ಆದ್ರೀಗ ಇವರನ್ನೇ ವಿಂಡೀಸ್ ಟೂರ್ನಿಂದ ಕೈ ಬಿಡಲಾಗಿದೆ.

ಹೂಡಾಗಿಲ್ಲ ಸ್ಥಾನ.. ತ್ರಿಪಾಠಿ ಸ್ಥಿತಿಯೂ ಅತಂತ್ರ..!

ದೀಪಕ್ ಹೂಡಾ ಹಾಗೂ ರಾಹುಲ್ ತ್ರಿಪಾಠಿ. ಇವರಿಗೆ ಸಿಕ್ಕಿದ್ದು ಕೆಲವೇ ಕೆಲ ಅವಕಾಶಗಳೂ ಆದ್ರೀಗ ಇವರೂ ಕೂಡ ಮಾಯವಾಗಿದ್ದಾರೆ. ಈಗಾಗಲೇ ಏಕದಿನ ತಂಡದಿಂದ ಹೂಡಾ ದೂರವಾಗಿದ್ದಾರೆ. ಸದ್ಯ ಟಿ-20ಯಲ್ಲಿ ಮಾತ್ರವೇ ಸ್ಥಾನ ಉಳಿಸಿಕೊಂಡಿದ್ದ ದೀಪಕ್ ಹೂಡಾ, ಇದೇ ಪ್ರವಾಸದಲ್ಲಿ ಟಿ20 ಕ್ರಿಕೆಟ್​ನಿಂದ ಕಾಣೆಯಾಗೋ ಲಕ್ಷಣ ಕಾಣಿಸ್ತಿದೆ. ಟ್ಯಾಲೆಂಟೆಟ್ ಕ್ರಿಕೆಟರ್ ರಾಹುಲ್ ತ್ರಿಪಾಠಿ ಪರಿಸ್ಥಿಯೂ ಇದೇ ಆಗಿದೆ. ಜಿಂಬಾಬ್ವೆ ಪ್ರವಾಸದ ವೇಳೆ ಏಕದಿನ ತಂಡಕ್ಕೆ ಸೆಲೆಕ್ಟ್ ಆಗಿದ್ದ ತ್ರಿಪಾಠಿ, ಈಗ ಕಿಕ್ಔಟ್ ಆಗಿದ್ದಾರೆ.

ಆಲ್​ರೌಂಡರ್ಸ್​​ ಆಟಕ್ಕೂ ಇಲ್ಲ.. ಲೆಕ್ಕಕ್ಕೂ ಇಲ್ಲ

ವಾಷಿಗ್ಟಂನ್ ಸುಂದರ್, ಕೃನಾಲ್ ಪಾಂಡ್ಯ. ಇವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದೇ ಅಪರೂಪದಲ್ಲಿ ಅಪರೂಪಕ್ಕೆ. ವಾಷಿಂಗ್ಟನ್ ಸುಂದರ್ ಆಗಾಗ ಟೀಮ್ ಇಂಡಿಯಾಗೆ ಗೆಸ್ಟ್ ಅಪಿರಿಯನ್ಸ್ ಕೊಡ್ತಿದ್ರು. ಇಂಜುರಿ ಕೂಡ ಕರಿಯರ್​ನಲ್ಲಿ ಆಟವಾಡ್ತು. ಕೃನಾಲ್ ಪಾಂಡ್ಯ ಅಂತೂ ತಂಡದಿಂದ ದೂರಾಗಿ ಸುಮಾರು 1 ವರ್ಷವೇ ಆಯ್ತು. ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿದ್ದು ಇದೇ ಪರಿಸ್ಥಿತಿ. 10 ಟಿ20 ಪಂದ್ಯದಲ್ಲೇ 16 ವಿಕೆಟ್ ಉರುಳಿಸಿದ್ದ ಬಿಷ್ನೋಯಿಗೆ, ಏಕದಿನ ಫಾರ್ಮೆಟ್​ನಲ್ಲೂ ಮ್ಯಾಜಿಕ್ ಮಾಡೋ ತಾಕತ್ತಿದೆ. ಆದ್ರೆ ಈತ ಟೀಮ್ ಇಂಡಿಯಾದಿಂದ ದೂರ ಆಗಿ 9 ತಿಂಗಳೇ ಕಳೆದಿವೆ. ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಹರ್ಷಲ್ ಪಟೇಲ್ ಪಾಡೂ ಇದೇ ಆಗಿದೆ.

ಸಿಕ್ಕ ಅವಕಾಶದಲ್ಲಿ ಪರ್ಫಾಮ್ ಮಾಡಿದ್ರೂ ಯುವ ಕ್ರಿಕೆಟಿಗರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನವೇ ಅಭದ್ರವಾಗಿದೆ. ಇದಕ್ಕೆಲ್ಲ ತಂಡದಲ್ಲಿ ಸ್ಥಾನಕ್ಕಿರೋ ಪೈಪೋಟಿಯೇ ಕಾರಣವಾಗಿದೆ. ಒಂದೊಂದು ಸ್ಥಾನಕ್ಕೆ ಕನಿಷ್ಠ ಇಬ್ಬರು ಕ್ಲಾಸ್ ಆಟಗಾರರ ನಡುವೆ ಪೈಪೋಟಿ ಇದ್ದೇ ಇದೆ. ರೋಟೆಶನ್ ಪದ್ದತಿಯನ್ನ ಅನುಸರಿಸೋದೆ ಸದ್ಯಕ್ಕಿರೋ ಬೆಸ್ಟ್ ಆಪ್ಷನ್ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

BCCIಗೆ ಬೇಡವಾದ ಕೂಸುಗಳು ಇವರು..! ಯ್ಯೂಸ್ & ಥ್ರೋ ರೀತಿ ಬಳಸಿಕೊಳ್ತಿದ್ಯಾ..? ತುಳಿತಕ್ಕೆ ಒಳಗಾದವರ ಕಥೆ

https://newsfirstlive.com/wp-content/uploads/2023/06/DEEPAK_HUDA.jpg

Load More