newsfirstkannada.com

ಗೃಹಲಕ್ಷ್ಮೀಯರೇ.. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ.. ಗೊಂದಲವಿದ್ರೆ ಪರಿಹಾರ ಇಲ್ಲಿದೆ

Share :

20-07-2023

  ಗೃಹಲಕ್ಷ್ಮಿಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

  ಆನ್‌ಲೈನ್ ಮೂಲಕ‌ ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಕೆ ಸದ್ಯಕ್ಕಿಲ್ಲ

  ಗೃಹಲಕ್ಷ್ಮಿಗೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ ಕಡ್ಡಾಯ

ಕಾಂಗ್ರೆಸ್ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇಂದಿನಿಂದ ಗೃಹಲಕ್ಷ್ಮಿಗೆ ಅರ್ಜಿ ಅಲ್ಲಿಕೆ ಆರಂಭವಾಗಿದೆ. ಗೃಹಲಕ್ಷ್ಮೀಯರು ಧನಲಕ್ಷ್ಮಿಯನ್ನ ಸ್ವಾಗತಿಸೋಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಮನೆಯಜಮಾನಿಯರು ಗೃಹಲಕ್ಷ್ಮೀಯನ್ನ ಒಲಿಸಿಕೊಳ್ಳೊದು ಹೇಗೆ? ಅರ್ಜಿ ಸಲ್ಲಿಸೋದು ಹೇಗೆ ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ..

ಮನೆ ಯಜಮಾನಿಗೆ ಅಕೌಂಟ್ಗೆ ಬೀಳಲಿದೆ ಕಾಂಚಾಣ

ಗೃಹಲಕ್ಷ್ಮಿ. ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ. ಕೊನೆಗೂ ನೀರಿಕ್ಷೆಯಂತೆ ಮಹತ್ವಕಾಂಶಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗೃಹಿಣಿಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಗೆ ನಿನ್ನೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಚಾಲನೆ ನೀಡಿದ್ದಾರೆ.. ಇಂದಿನಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದೆ.

ಹಾಗಾದ್ರೆ, ಮನೆ ಯಜಮಾನಿ ಧನಲಕ್ಷಮಿಯನ್ನ ಒಲಿಸಿಕೊಳ್ಳೋದು ಹೇಗೆ? ಗೃಹ ಲಕ್ಷ್ಮಿಗೆ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರಲಿದೆ ಹಾಗೇ, ಏನೆಲ್ಲಾ ದಾಖಲೆ ಬೇಕು?

ಕರ್ನಾಟಕ ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬೇಕು

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ರೂ, ಸದ್ಯಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ. ಇನ್ನು, ನಿಮ್ಮ ಮನೆ ಹತ್ತಿರದ ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು.. ಬೆಂಗಳೂರು ಒನ್‌ ಹಾಗೂ ಬಾಪೂಜಿ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಹಾಗಾದ್ರೆ, ಅರ್ಜಿ ಸಲ್ಲಿಸಲು ನಿಮ್ಮ ಬಳಿ ಏನ್ ಏನ್ ಇರ್ಬೇಕು?

ಗೃಹಲಕ್ಷ್ಮಿ.. ಅರ್ಜಿ ಸಲ್ಲಿಸೋದು ಹೇಗೆ?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಬಿಪಿಎಲ್‌, ಎಪಿಎಲ್‌ ಅಥವಾ ಅಂತ್ಯೋದಯ ಕಾರ್ಡ್‌ ಇರಬೇಕು. ಆಧಾರ್ ಕಾರ್ಡ್, ಪಡಿತರ ಚೀಟಿ ಕಡ್ಡಾಯವಾಗಿ ತರಬೇಕು. ಜೊತೆಗೆ, ಆಧಾರ್‌ ಲಿಂಕ್‌ ಆಗಿರೋ ಮೊಬೈಲ್‌ ಕೂಡ ತರಬೇಕು. ಇಂಟ್ರೆಸ್ಟಿಂಗ್ ಅಂದ್ರೆ, ಸೇವಾ ಕೇಂದ್ರ ಹಾಗೂ ಪ್ರಜಾಪ್ರತಿನಿಧಿಗಳು ನಿಮ್ಮ ಮನೆ ಬಾಗಿಲ ಬಳಿ ಬಂದು ರಿಜಿಸ್ಟ್ರೇಶನ್‌ ಮಾಡಿ ಕೊಡ್ತಾರೆ. ಮುಖ್ಯವಾಗಿ, ನೊಂದಣಿ ಮಾಡಿಕೊಡುವ ಪ್ರಜಾ ಪ್ರತಿನಿಧಿ, ಮಧ್ಯವರ್ತಿಗಳಿಗೆ ಯಾವುದೇ ಹಣ ಕೊಡುವಂತಿಲ್ಲ

ಇನ್ನು, ಈ ಯೋಜನೆಯಲ್ಲಿ ಗೊಂದಲ ಉಂಟಾದಲ್ಲಿ ಅದನ್ನ ಹೇಗೆ ಬಗೆಹರಿಸಿಕೊಳ್ಳೋದು?

ನಿಮಗೆ ಈ ಯೋಜನೆ ಕುರಿತು ಯಾವುದೇ ಗೊಂದಲ ಉಂಟಾದಲ್ಲಿ, 1902 ಸಹಾಯವಾಣಿಯನ್ನ ಬಳಕೆ ಮಾಡಬಹುದು.. ಹಾಗೇ, 8147500500 ಸಂಖ್ಯೆಗೆ ಎಸ್ಎಂಎಸ್ ಮಾಡಬಹುದು. ಪ್ರಮುಖ ವಿಚಾರ ಅಂದ್ರೆ, ಗೃಹಜ್ಯೋತಿ ರೀತಿ, ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೂ ಯಾವುದೇ ಕಾಲಮಿತಿ ಇರೋದಿಲ್ಲ. ಯಾರೆಲ್ಲಾ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲಿದ್ದಾರೆ, ಅವರಿಗೆ ಮುಂದಿನ ತಿಂಗಳು ಅಂದ್ರೆ, ಆಗಸ್ಟ್ 15 ರಂದು ಅಕೌಂಟ್ಗೆ ಹಣ ಬೀಳಲಿದೆ.

ಪ್ರತಿದಿನ 10ರಿಂದ ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ದಿನವೊಂದಕ್ಕೆ 60 ಮಂದಿ ಅರ್ಜಿ ಸಲ್ಲಿಸಬಹುದು.. ಅರ್ಜಿ ಸಲ್ಲಿಕೆ ಬಳಿಕ ರಿಜಿಸ್ಟ್ರೇಷನ್ ಕಾಪಿ ನೀಡಲಾಗುತ್ತೆ. ಅರ್ಜಿ ಸಲ್ಲಿಕೆಗೆ ಕಾಲಮಿತಿ ಇಲ್ಲದೇ ಇರೋದ್ರಿಂದ ಆದಷ್ಟು ನೂಕು-ನೂಗ್ಗಲಿಗೆ ಅವಕಾಶ ಮಾಡಿಕೊಡದಂತೆ ಅರ್ಜಿ ಸಲ್ಲಿಸಲು ಸರ್ಕಾರ ಮನವಿ ಮಾಡಿದೆ.

ಒಟ್ನಲ್ಲಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಷ್ಮೀಯನ್ನ ಒಲಿಸಿಕೊಳ್ಳಲು ಗೃಹಿಣಿಯರೂ ಸಜ್ಜಾಗ್ತಿದ್ದಾರೆ. ಆದ್ರೆ ಯಾವುದೇ ತೊಡಕುಗಳಿಲ್ಲದೇ ಅರ್ಜಿ ಸಲ್ಲಿಕೆ ನಡೆಯುತ್ತಾ ಅಂತಾ ಕಾದುನೋಡಬೇಕಷ್ಟೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮೀಯರೇ.. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ.. ಗೊಂದಲವಿದ್ರೆ ಪರಿಹಾರ ಇಲ್ಲಿದೆ

https://newsfirstlive.com/wp-content/uploads/2023/07/Gruhalaxmi.jpg

Load More