newsfirstkannada.com

ಮಹಿಳೆಯರೇ ಗಮನಿಸಿ.. ನಾಳೆಯಿಂದ ಯಾವ್ಯಾವ ಬಸ್‌ ನಿಮಗೆ ಫ್ರೀ? ನಿಮ್ಮ ಬಳಿ ಏನಿರಬೇಕು?

Share :

10-06-2023

  ನಾಳೆ ಮಧ್ಯಾಹ್ನ 1 ಗಂಟೆಯಿಂದ ಫ್ರೀ.. ಫ್ರೀ.. ಫ್ರೀ

  ಸ್ಟೀಕರ್ ಅಂಟಿಸಿದ ಬಸ್‌ಗಳಲ್ಲಿ ಮಾತ್ರ ಉಚಿತ

  ರಾಜ್ಯಾದ್ಯಂತ ಫ್ರೀ ಬಸ್​ಗಳ ಲೆಕ್ಕಾಚಾರವೇ ಬೇರೆ

ಬೆಂಗಳೂರು: ನಾಳೆ ರಾಜ್ಯದ ಎಲ್ಲಾ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಫ್ರೀಯಾಗಿ ಸಂಚರಿಸುವ ಶಕ್ತಿ ಯೋಜನೆಗೆ ಚಾಲನೆ ಸಿಕ್ತಿದೆ. ವಿಧಾನಸೌಧದ ಮುಂಭಾಗ ಶಕ್ತಿ ಯೋಜನೆ ಉದ್ಘಾಟಿಸಲು ಸ್ಟೇಜ್ ನಿರ್ಮಿಸಲಾಗಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳು ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಬಿಎಂಟಿಸಿ ಬಸ್‌ನಲ್ಲಿ ಟ್ರಯಲ್ ರನ್ ಮಾಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮದ ಬಳಿಕ ಅಂದ್ರೆ ನಾಳೆ ಮಧ್ಯಾಹ್ನ 1 ಗಂಟೆಯಿಂದ ರಾಜ್ಯದ ಮಹಿಳೆಯರು ಬಸ್‌ಗಳಲ್ಲಿ ಫ್ರೀಯಾಗಿ ಓಡಾಟ ನಡೆಸಬಹುದಾಗಿದೆ.

ವಿಧಾನಸೌಧಕ್ಕೆ ಭೇಟಿ ನೀಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆ BMTC ಹಾಗೂ KSRTC ಬಸ್ ನಿಲ್ದಾಣಕ್ಕೆ ಸಿಎಂ ಭೇಟಿ‌ ನೀಡ್ತಾರೆ. ಮಧ್ಯಾಹ್ನ 1 ಗಂಟೆಯ ನಂತರ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿದ್ದೇವೆ ಎಂದಿದ್ದಾರೆ.

ಸ್ಟೀಕರ್ ಅಂಟಿಸಿದ ಬಸ್‌ಗಳಲ್ಲಿ ಮಾತ್ರ!
ಮಹಿಳೆಯರಿಗೆ ಫ್ರೀ ಬಸ್ ಯೋಜನೆ ನೀಡುತ್ತಿರುವ ಸಾರಿಗೆ ಇಲಾಖೆ ಉಚಿತ ಬಸ್‌ಗಳಿಗೆ ಸ್ಟೀಕರ್ ಅಂಟಿಸಲು ಮುಂದಾಗಿದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾ ಸ್ಟೀಕರ್ ಅಂಟಿಸಲಾಗುತ್ತೆ. ಯಾವ ಬಸ್‌ನಲ್ಲಿ ಸ್ಟಿಕರ್ ಇರುತ್ತೋ ಅದರಲ್ಲಿ ಮಾತ್ರ ಮಹಿಳೆಯರಿಗೆ ಉಚಿತ. ಶೇಕಡಾ 50ರಷ್ಟು ಆಸನ ಪುರುಷರಿಗೆ ಮೀಸಲು ಇರಲಿದೆ. ಪುರುಷರು ಇಲ್ಲಾ ಅಂದ್ರೆ ಆ ಆಸನದಲ್ಲಿ ಮಹಿಳೆಯರು ಕುಳಿತುಕೊಳ್ಳಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಸ್ಪಷ್ಟಪಡಿಸಿದ್ದಾರೆ.

ನಾಳೆಯಿಂದ ಸಾಮಾನ್ಯ, ವೇಗದೂತ, ಬಿಎಂಟಿಸಿ ಬಸ್​ನಲ್ಲಿ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಬಹುದು. ಅಂತರ್ ರಾಜ್ಯ, ಎಸಿ, ಐರಾವತ ಬಸ್​ಗಳು ಪುಷ್​​ಬ್ಯಾಕ್​, ರಾಜಹಂಸದಲ್ಲೂ ಉಚಿತ ಪ್ರಯಾಣ ಇರೋದಿಲ್ಲ.

ಶಕ್ತಿಕಾರ್ಡ್ ನೀಡೋವರೆಗೆ ರಾಜ್ಯದ ಮಹಿಳೆಯರು ಗುರುತಿನ ಚೀಟಿ ಬಳಕೆ ಮಾಡಿ ಉಚಿತವಾಗಿ ಸಂಚಾರ ಮಾಡಲು ಅವಕಾಶವಿದೆ. ಫ್ರೀ ಪ್ರಯಾಣಕ್ಕೆ ಏನಿರಬೇಕು ಅಂತಾ ನೋಡೋದಾದ್ರೆ..

 1. ಆಧಾರ್ ಕಾರ್ಡ್
 2. ಪಾನ್ ಕಾರ್ಡ್
 3. ವಾಸಸ್ಥಳ ದೃಢೀಕರಣ ಪತ್ರ
 4. ಡ್ರೈವಿಂಗ್ ಲೈಸೆನ್ಸ್

ಫ್ರೀ ಬಸ್​ಗಳ ಲೆಕ್ಕಾಚಾರ
KSRTC
ಚಲಾವಣೆಯಲ್ಲಿರುವ ಬಸ್​ಗಳು – 7,482
ಫ್ರೀ ಪ್ರಯಾಣ ಮಾಡಬಹುದಾದ ಬಸ್‌ – 6,239

BMTC
ಚಲಾವಣೆಯಲ್ಲಿರುವ ಬಸ್‌ಗಳು – 5,547
ಫ್ರೀ ಪ್ರಯಾಣ ಮಾಡಬಹುದಾದ ಬಸ್‌ – 5,102

NWKRTC
ಚಲಾವಣೆಯಲ್ಲಿರುವ ಬಸ್​​ಗಳು – 4,542
ಫ್ರೀ ಪ್ರಯಾಣ ಮಾಡಬಹುದಾದ ಬಸ್‌ – 3,986

KKRTC
ಚಲಾವಣೆಯಲ್ಲಿರುವ ಬಸ್‌ಗಳು – 4,106
ಫ್ರೀ ಪ್ರಯಾಣ ಮಾಡಬಹುದಾದ ಬಸ್‌ -3,376

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಹಿಳೆಯರೇ ಗಮನಿಸಿ.. ನಾಳೆಯಿಂದ ಯಾವ್ಯಾವ ಬಸ್‌ ನಿಮಗೆ ಫ್ರೀ? ನಿಮ್ಮ ಬಳಿ ಏನಿರಬೇಕು?

https://newsfirstlive.com/wp-content/uploads/2023/06/BMTC.jpg

Load More