ವೃತ್ತಿ ಜೀವನದ ಕೊನೇ ಘಟ್ಟದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ
ಸದ್ಯದಲ್ಲೇ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ರೋಹಿತ್ ಗುಡ್ ಬೈ..!
ರೋಹಿತ್ ಸ್ಥಾನ ತುಂಬಬಲ್ಲ ಇಬ್ಬರು ಯುವ ಆಟಗಾರರು ಇವರೇ!
ಟೀಂ ಇಂಡಿಯಾದ ಎಲ್ಲಾ ಮಾದರಿ ಕ್ಯಾಪ್ಟನ್ ರೋಹಿತ್ ಶರ್ಮಾ ವೃತ್ತಿ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ. ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಅಂತೂ ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡುವುದಾಗಿ ರೋಹಿತ್ ಘೋಷಿಸಿದ್ದಾರೆ. ಹೀಗಿರುವಾಗಲೇ ಭಾರತ ತಂಡದಲ್ಲಿ ರೋಹಿತ್ ಸ್ಥಾನ ತುಂಬಬಲ್ಲ ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ.
2019 ರವರೆಗೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ರೋಹಿತ್ ಬಳಿಕ ಓಪನರ್ ಆಗಿ ಭಾರತದ ಪರ ಆಡುತ್ತಿದ್ದಾರೆ. ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಪೂಜಾರ ಮತ್ತು ಕೊಹ್ಲಿ ಬಳಿಕ ಹೆಚ್ಚು ರನ್ ಗಳಿಸಿದ್ದು ರೋಹಿತ್. ಈಗ ರೋಹಿತ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರರನ್ನು ಆಯ್ಕೆ ಮಾಡಲೇಬೇಕಾಗಿದೆ. ಇದೇ ಸಂದರ್ಭದಲ್ಲಿ ಇಬ್ಬರು ಯುವ ಆಟಗಾರರು ರೋಹಿತ್ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ ಎಂಬ ಚರ್ಚೆ ನಡೆಯುತ್ತಿದೆ.
ಯೆಸ್, ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಸ್ಥಾನವನ್ನು ತುಂಬಬಲ್ಲ ಆಟಗಾರರು ಎಂದರೆ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಮೇಲೆ ಬಿಸಿಸಿಐ ನಿಗಾಯಿಟ್ಟಿದೆ.

ಈ ಬಾರಿ ಐಪಿಎಲ್‌ನಲ್ಲಿ ಜೈಸ್ವಾಲ್ 48ರ ಸರಾಸರಿಯಲ್ಲಿ 625 ರನ್ ಗಳಿಸಿದ್ದರು. 1 ಶತಕ ಮತ್ತು 5 ಅರ್ಧಶತಕ ಸಿಡಿಸಿದ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 163 ಇದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯಕ್ಕೆ ಮೀಸಲು ಆಟಗಾರನಾಗಿ ಗಾಯಕ್ವಾಡ್ ಆಯ್ಕೆಯಾಗಿದ್ದರು. ಇದರರ್ಥ ರೋಹಿತ್ ಸ್ಥಾನಕ್ಕೆ ಗಾಯಕ್ವಾಡ್ ಬೆಸ್ಟ್ ಆಯ್ಕೆ ಎಂಬುದು ಅರ್ಥ ಮಾಡಿಕೊಳ್ಳಬಹುದು. ಗಾಯಕ್ವಾಡ್ 28 ಪ್ರಥಮ ದರ್ಜೆ ಪಂದ್ಯಗಳಲ್ಲಿ 6 ಶತಕ ಮತ್ತು 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ