newsfirstkannada.com

ಇಶಾನ್ ಕಿಶನ್​ ಸಕ್ಸಸ್​ ಹಿಂದಿದ್ದಾಳೆ ಸ್ಫುರದ್ರೂಪಿ ಸುಂದರಿ..! ಪಂಜಾಬ್​ ಪುತ್ತರ್ ಮನಕದ್ದ ಈ ಚೆಂದುಳ್ಳಿ ಚೆಲುವೆ ಯಾರು ಗೊತ್ತಾ?

Share :

07-09-2023

  ಗೆಳೆಯನ ಏಳು-ಬೀಳಿನಲ್ಲಿ ಅದಿತಿ ಪಾತ್ರ ಅಪಾರ..!

  ಪೋಸ್ಟ್ ಹಾಕಿ ಕಿಶನ್​ ಹುರಿದುಂಬಿಸಿದ ಸುಂದರಿ

  ಕಿಶನ್​​​​​​ಗೂ ಅದಿತಿಗೆ ಏನು ಸಂಬಂಧ? ಈ ಸ್ಟೋರಿ ಓದಿ

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರ್ತಾಳೆ. ಇದು ಎಲ್ಲರ ಜೀವನದಲ್ಲಿ ಎಷ್ಟು ನಿಜವಾಗಿದೆಯೋ ಗೊತ್ತಿಲ್ಲ. ಆದರೆ ಟೀಮ್ ಇಂಡಿಯಾದ ಸೆನ್ಷೆಷನಲ್ ಸ್ಟಾರ್ ಇಶಾನ್ ಕಿಶನ್ ಸಕ್ಸಸ್​ಗೆ ಆ ಲೇಡಿನೆ ಕಾರಣ. ಜಾರ್ಖಂಡ್​ ಪುತ್ತರ್​​​​ನ ​​​ ಏಳು-ಬೀಳಿನಲ್ಲಿ ಈ ಚೆಂದುಳ್ಳಿ ಸದಾ ಬೆನ್ನಿಗೆ ನಿಂತಿದ್ದಾಳೆ. ಅಷ್ಟಕ್ಕೂ ಆಕೆ ಯಾರಪ್ಪಾ ಅಂತೀರಾ ? ಈ​ ಸ್ಟೋರಿ ಓದಿ.

ಇಶಾನ್ ಕಿಶನ್​​​. ಕಳೆದೆರಡು ದಿನಗಳಿಂದ ನ್ಯೂಸ್​​​ ಪೇಪರ್​​​ಗಳಲ್ಲಿ ಹೆಡ್​​ಲೈನ್ ಆಗಿದ್ದಾರೆ. ಇಷ್ಟು ದಿನ ಎಲೆಮರಿ ಕಾಯಿಯಂತಿದ್ದ ಪಂಜಾಬ್​ ಪುತ್ತರ್​​​ ಸದ್ಯ ಹಾಟ್​ ಟಾಫಿಕ್​​​. ಬದ್ಧವೈರಿ ಪಾಕಿಸ್ತಾನ ವಿರುದ್ಧ ವೀರಾವೇಶ ತೋರಿದ್ದೆ ಬಂತು. ಕ್ರಿಕೆಟ್​ ಪಡಸಾಲೆಯಲ್ಲಿ ಯಂಗ್​​​ಗನ್ ಕಿಶನ್​ ಜಪವೇ ನಡೆಯುತ್ತಿದೆ.

ಬಿಗ್ ಸ್ಟೇಜ್​​​, ಬಿಗ್ ಗೇಮ್​​​ನಲ್ಲಿ ಕಿಶನ್​​​ ನಡೆಸಿದ ಕೆಚ್ಚದೆಯ ಹೋರಾಟಕ್ಕೆ ನಿಜಕ್ಕೂ ಸಲಾಂ ಹೇಳಲೇಬೇಕು. ಯಾಕಂದ್ರೆ ಪಾಕ್​​ನ ಬಲಿಷ್ಠ ಬೌಲಿಂಗ್ ಕೋಟೆಯನ್ನ ಛಿದ್ರಗೊಳಿಸಿ 82 ರನ್ ಹೊಡೆಯೋದು ಸುಲಭದ ಮಾತಾಗಿರ್ಲಿಲ್ಲ. ನಿಜಕ್ಕೂ ಅದಕ್ಕೆ ಡಬಲ್​​ ಗುಂಡಿಗೆ ಬೇಕು. ಅಷ್ಟಕ್ಕೂ 25 ರ ಕಿಶನ್​​ಗೆ ಹೈ ಪ್ರೆಶರ್ ಗೇಮ್​​​​​​ನಲ್ಲಿ ನಿರ್ಭಯವಾಗಿ ಬ್ಯಾಟ್ ಬೀಸುವ ಧೈರ್ಯ ಬಂದಿದ್ದಾದ್ರು ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಕೊನೆಗೂ ಆ ಪ್ರಶ್ನೆಗೆ ಆನ್ಸರ್ ಸಿಕ್ಕಿದೆ.

ಅದಿತಿ ಹುಂಡಿಯಾ
ಅದಿತಿ ಹುಂಡಿಯಾ

ಕಿಶನ್​​ ಯಶಸ್ಸಿನ ಹಿಂದಿದ್ದಾಳೆ ಅದಿತಿ ಹುಂಡಿಯಾ

ಕಿಶನ್​ರನ್ನ ಇಂದು ಎಲ್ಲರೂ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದಾರೆ. ಪ್ರಶಂಸೆಗಳ ಮಹಾಪೂರವೇ ನಡೀತಿದೆ. ಟಿವಿ-ಪತ್ರಿಕೆಗಳಲ್ಲಿ ಕಿಶನ್​​ರನ್ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಅಷ್ಟಕ್ಕೂ ಯಂಗ್​​ ಆ್ಯಂಡ್​ ಎನರ್ಜಿಕ್ ಬ್ಯಾಟ್ಸ್​​​ಮನ್​​ ಈ ಸಕ್ಸಸ್​​ಗೆ ಕಾರಣ ಅದಿತಿ ಹುಂಡಿಯಾ.

ಕಿಶನ್​ ಇಂದು ಏನೇ ಆಗಿದ್ರೂ ಅದರ ರಿಯಲ್ ಕ್ರೆಡಿಟ್​​​ ಅದಿತಿ ಹುಂಡಿಯಾಗೆ ಸೇರಬೇಕು. ಯಾಕಂದ್ರೆ ಕಿಶನ್​​ ಸಕ್ಸಸ್​​​ನಲ್ಲಿ ಈಕೆಯ ಪಾತ್ರ ಅಪಾರ. ಎಲ್ಲ ಸಮಯದಲ್ಲಿ ಕಿಶನ್​​ಗೆ ಬೆನ್ನೆಲುಬಾಗಿ ನಿಂತಿದ್ದಾಳೆ.

ಅದಿತಿ ಹುಂಡಿಯಾ
ಅದಿತಿ ಹುಂಡಿಯಾ

ಪೋಸ್ಟ್ ಹಾಕಿ ಕಿಶನ್​ ಹುರಿದುಂಬಿಸಿದ ಸುಂದರಿ

81 ಎಸೆತಗಳಲ್ಲಿ 82 ರನ್​​. ಪಾಕ್ ವಿರುದ್ಧ ಕಿಶನ್ ಕಟ್ಟಿದ ಈ ಬೆಂಕಿ ಇನ್ನಿಂಗ್ಸ್ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿತ್ತು. ಈಗ ಅದಿತಿ ಹುಂಡಿಯಾ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿ ಗೆಳೆಯ ಕಿಶನ್​ರನ್ನ ಹುರಿದುಂಬಿಸಿದ್ದಾರೆ. ಕಿಶನ್​ ಫೋಟೋ ಹಂಚಿಕೊಂಡು ಇದೊಂದು ಡ್ರೀಮ್ ಇನ್ನಿಂಗ್ಸ್​​, ಇದಕ್ಕೆ ನೀನು ನಿಜಕ್ಕೂ ಅರ್ಹನಾಗಿದ್ದೀಯಾ ಎಂದು ಹಾರ್ಟ್​ ಇಮೋಜಿ ಹಾಕಿದ್ದಾರೆ.

ಅದಿತಿ ಹುಂಡಿಯಾ ಇನ್​​ಸ್ಟಾ ಪೋಸ್ಟ್​
ಅದಿತಿ ಹುಂಡಿಯಾ ಇನ್​​ಸ್ಟಾ ಪೋಸ್ಟ್​

ಇನ್ನು ಗೆದ್ದಾಗ ಜೊತೆಗಿದ್ದು ಸೋತಾಗ ಕೈಕೊಡೋರೆ ಹೆಚ್ಚು ಮಂದಿ. ಆದ್ರೆ ಅದಿತಿ ಹುಂಡಿಯಾ ಆಗಲ್ಲ. ಫೇಲ್ಯೂರ್ ಕಂಡಾಗಲು ಕಿಶನ್ ಜೊತೆಗಿದ್ದು ಹುರಿದುಂಬಿಸಿದ್ದಾರೆ. ಆ ಮೂಲಕ ಗೆಳೆಯನ ಏಳು-ಬೀಳಿನ ಪಯಣದಲ್ಲಿ ಅದಿತಿ ಕೂಡ ಹೆಜ್ಜೆ ಹಾಕಿದ್ದಾರೆ.

ಅದಿತಿ ಹುಂಡಿಯಾ
ಅದಿತಿ ಹುಂಡಿಯಾ

ಯಾರು ಈ ಅದಿತಿ ಹುಂಡಿಯಾ..?

ಇಷ್ಟೆಲ್ಲಾ ಕೇಳಿದ್ಮೇಲೆ ಈ ಅದಿತಿ ಹುಂಡಿಯಾ ಯಾರು ಅನ್ನೋ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿರಬಹುದು. ಅದಕ್ಕೆ ಕ್ಲಾರಿಟಿ ಕೊಡ್ತೀವಿ ಕೇಳಿ. ಅದಿತಿ ಹುಂಡಿಯಾ ಬೇಸಿಕಲಿ ಮಾಡೆಲ್​​​​. 2017 ರಲ್ಲಿ ಮಿಸ್ ಇಂಡಿಯಾದ ಫೈನಲಿಸ್ಟ್​​​. 2018 ರಲ್ಲಿ ಕಿರೀಟಕ್ಕೆ ಮುತ್ತಿಟ್ಟ ಸುಂದರಿ. ಈ ಸುಂದರಿಗಳ ಸುಂದರಿಗೆ ಟೀಮ್ ಇಂಡಿಯಾ ಮನಸೋತಿದ್ದಾರೆ. ಅಂದ್ರೆ 2019 ರಿಂದ ಕಿಶನ್ ಹಾಗೂ ಅದಿತಿ ಡೇಟಿಂಗ್​ ನಡೆಸ್ತಿದ್ದಾರೆ. ಅನೇಕ ಬಾರಿ ಈ ಲವ್ ಬರ್ಡ್ಸ್ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನ ಈ ಇಬ್ಬರ ಪ್ರೇಮ ಕಹಾನಿ ಬರೀ ಗಾಸಿಪ್ ಎಂದು ಹೇಳಲಾಗ್ತಿತ್ತು. ಆದ್ರೆ ಅದಿತಿ ಹಾರ್ಟ್​ ಇಮೋಜಿ ಜೊತೆ ಕಿಶನ್​​​ ಫೋಟೋ ಪೋಸ್ಟ್​​​ ಮಾಡುವ ಮೂಲಕ ತಮ್ಮಿಬ್ಬರ ಲವ್​​ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಸೋ ಇಶಾನ್ ಕಿಶನ್​​​-ಅದಿತಿ ಹುಂಡಿಯಾ ಮತ್ತೊಂದು ಸ್ಟಾರ್ ಸೆಲಬ್ರಿಟಿ ಪೇರ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಶಾನ್ ಕಿಶನ್​ ಸಕ್ಸಸ್​ ಹಿಂದಿದ್ದಾಳೆ ಸ್ಫುರದ್ರೂಪಿ ಸುಂದರಿ..! ಪಂಜಾಬ್​ ಪುತ್ತರ್ ಮನಕದ್ದ ಈ ಚೆಂದುಳ್ಳಿ ಚೆಲುವೆ ಯಾರು ಗೊತ್ತಾ?

https://newsfirstlive.com/wp-content/uploads/2023/09/Ishan-Kishan-girl-friend-1.jpg

Load More