newsfirstkannada.com

ಇಸ್ಕಾನ್ ದ್ವಾರಕಾ ಮಂದಿರದ ಉಪಾಧ್ಯಕ್ಷನಿಗೆ ಬ್ಯಾನ್ ಶಿಕ್ಷೆ; ಅಮೋಘ ಲೀಲಾ ದಾಸ್‌ ಮಾಡಿದ ತಪ್ಪೇನು? ಯಾರಿವರು?

Share :

12-07-2023

    ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದ ಅಮೋಘ ಲೀಲಾ ದಾಸ್

    ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿಕೆ

    ಕೊನೆಗೆ ತನ್ನ ತಪ್ಪಿಗೆ ಕ್ಷಮೆ ಕೇಳಿರುವ ಅಮೋಘ ಲೀಲಾ ದಾಸ್

ನವದೆಹಲಿ: ಇಸ್ಕಾನ್ ದ್ವಾರಕಾ ಮಂದಿರದ ಉಪಾಧ್ಯಕ್ಷ ಅಮೋಘ ಲೀಲಾ ದಾಸ್‌ ಅವರನ್ನು ನಿಷೇಧಿಸಿರೋ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಸ್ಕಾನ್ ಆಡಳಿತ ಮಂಡಳಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ತಪ್ಪಿಗೆ ಕ್ಷಮೆ ಕೇಳಿರುವ ಅಮೋಘ ಲೀಲಾ ದಾಸ್ ಅವರು ಪ್ರಾಯಶ್ಚಿತವಾಗಿ ಒಂದು ತಿಂಗಳ ಕಾಲ ಗೋವರ್ಧನ್ ಬೆಟ್ಟಕ್ಕೆ ಹೋಗಲು ನಿರ್ಧಾರ ಮಾಡಿದ್ದಾರೆ.

ಇತ್ತೀಚೆಗೆ ಅಮೋಘ ಲೀಲಾ ದಾಸ್‌ ಅವರು ಮಾಡಿದ ಉಪನ್ಯಾಸದ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಮೋಘ ಲೀಲಾ ದಾಸ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಂತಹ ಸಿದ್ಧಪುರುಷರು ಮೀನು ಸೇವನೆ ಮಾಡಬಹುದೇ ಎಂದು ಪ್ರಶ್ನಿಸಿದ್ದರು. ದಾಸ್ ಅವರ ಈ ಮಾತು ಆಧ್ಯಾತ್ಮಿಕ ಚಿಂತಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ವಿವಾದಾತ್ಮಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಇಸ್ಕಾನ್, ಅಮೋಘ ಲೀಲಾ ದಾಸ್ ಅವರಿಗೆ ಒಂದು ತಿಂಗಳ ನಿಷೇಧ ವಿಧಿಸಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿಯು ಅಮೋಘ ಲೀಲಾ ದಾಸ್ ಅಭಿಪ್ರಾಯಗಳು ಇಸ್ಕಾನ್ ಅಭಿಪ್ರಾಯವಲ್ಲ. ಅಮೋಘ ಲೀಲಾ ದಾಸ್ ಮಾತುಗಳನ್ನು ಖಂಡಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.

ಅಮೋಘ ಲೀಲಾ ದಾಸ್‌ ಹಿನ್ನೆಲೆ ಏನು?
ದೆಹಲಿ ಇಸ್ಕಾನ್ ದ್ವಾರಕಾ ಮಂದಿರದ ಉಪಾಧ್ಯಕ್ಷರಾಗಿದ್ದ ಅಮೋಘ ಲೀಲಾ ದಾಸ್‌ ಮೂಲ ಹೆಸರು ಆಶಿಶ್ ಅರೋರ. ಪಂಜಾಬಿ ಕುಟುಂಬದಲ್ಲಿ ಹುಟ್ಟಿದ ಇವರು ಲಕ್ನೋದಿಂದ ಬಂದು ದೆಹಲಿಯಲ್ಲಿ ನೆಲೆಸಿದ್ದರು. 2004ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮುಗಿಸಿದ ಅಮೋಘ ಲೀಲಾ ದಾಸ್ ಅವರು ಅಮೆರಿಕಾ ಮೂಲದ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. 2010ರಲ್ಲಿ ಆ ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿದ ದಾಸ್‌ ತನ್ನ 29ನೇ ವಯಸ್ಸಿಗೆ ಇಸ್ಕಾನ್ ಸಂಸ್ಥೆ ಸೇರಿಕೊಂಡರು.

43 ವರ್ಷ ವಯಸ್ಸಿನ ಅಮೋಘ ಲೀಲಾ ದಾಸ್ ಆಧ್ಯಾತ್ಮಿಕ ಹೋರಾಟಗಾರರು, ಲೈಫ್‌ಸ್ಟೈಲ್ ಕೋಚ್‌, ಸ್ಫೂರ್ತಿದಾಯಕ ಪ್ರವಚನಗಳಿಗೆ ಹೆಸರುವಾಸಿಯಾಗಿದ್ದರು. ಅಮೋಘ ಲೀಲಾ ದಾಸ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿ ಬಳಗವಿದೆ. ಇಸ್ಕಾನ್ ಸಂಸ್ಥೆಯೊಂದಿಗೆ 12 ವರ್ಷದ ನಂಟು ಹೊಂದಿರುವ ಅಮೋಘ ಲೀಲಾ ದಾಸ್‌ ಸದ್ಯ ಇಸ್ಕಾನ್ ದ್ವಾರಕಾ ಮಂದಿರದ ಉಪಾಧ್ಯಕ್ಷರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇಸ್ಕಾನ್ ದ್ವಾರಕಾ ಮಂದಿರದ ಉಪಾಧ್ಯಕ್ಷನಿಗೆ ಬ್ಯಾನ್ ಶಿಕ್ಷೆ; ಅಮೋಘ ಲೀಲಾ ದಾಸ್‌ ಮಾಡಿದ ತಪ್ಪೇನು? ಯಾರಿವರು?

https://newsfirstlive.com/wp-content/uploads/2023/07/Amogh-Lal-Das.jpg

Load More