newsfirstkannada.com

ದಿವಂಗತ ಪಾರ್ವತಮ್ಮ ರಾಜ್​ಕುಮಾರ್ ಸಂಬಂಧಿಗೆ ಅಪಘಾತ.. ದುರ್ಘಟನೆಯಲ್ಲಿ ಕಾಲು ಕಳೆದುಕೊಂಡ ಈ ಯುವ ನಟ ಯಾರು..?

Share :

25-06-2023

  ಟಿಪ್ಪರ್ ಗುದ್ದಿದ ಹೊಡೆತಕ್ಕೆ ಬುಲೆಟ್ ಪೀಸ್ ಪೀಸ್

  ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಸಿನಿಮಾ ರಿಲೀಸ್​ಗಾಗಿ ಓಡಾಡುತ್ತಿದ್ದ ಯುವ ನಟ

ಬೆಂಗಳೂರು: ದಿವಂಗತ ಪಾರ್ವತಮ್ಮ ರಾಜ್​ಕುಮಾರ್ ಸಂಬಂಧಿ ಹಾಗೂ ಯುವ ನಟ ಸೂರಜ್​​​​ ಭೀಕರ ರಸ್ತೆ ಅಪಘಾತದಲ್ಲಿ ಬಲಗಾಲು ಕಳೆದುಕೊಂಡಿದ್ದಾರೆ. ಗಂಭೀರವಾದ ಪೆಟ್ಟುಬಿದ್ದ ಪರಿಣಾಮ ಮಂಡಿಯವರೆಗೆ ವೈದ್ಯರು ಅವರ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಸೂರಜ್ ಮೈಸೂರಿನಿಂದ ಓಟಿಗೆ ಬುಲೆಟ್ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದರು. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಟಿಪ್ಪರ್, ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಹೊಡೆತಕ್ಕೆ ಬುಲೆಟ್ ಬೈಕ್​ನ ಮುಂದಿನ ಚಕ್ರ ಅರ್ಧ ಕಟ್ ಆಗಿದೆ. ಈ ದುರ್ಘಟನೆಯಲ್ಲಿ ಧುವನ್ ಅಲಿಯಾಸ್ ಸೂರಜ್ ಬಾಲಗಾಲನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: BREAKING: ಭೀಕರ ರಸ್ತೆ ಅಪಘಾತ.. ಪಾರ್ವತಮ್ಮ ರಾಜ್​ಕುಮಾರ್ ತಮ್ಮನ ಪುತ್ರನಿಗೆ ಗಂಭೀರ ಗಾಯ

ಸದ್ಯ ಸೂರಜ್​​ಗೆ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೂರಜ್ ಆರೋಗ್ಯ ವಿಚಾರಿಸಲು ನಟ ಶಿವಣ್ಣ ಮೈಸೂರಿಗೆ ಬಂದಿದ್ದಾರೆ ಎನ್ನಲಾಗಿದೆ. ರಾಜಕುಮಾರ್ ಸಂಬಂಧಿ ಮಾತ್ರವಲ್ಲದೇ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದಲ್ಲಿ ಸೂರಜ್ ನಟಿಸಿ, ಯುವನಟರಾಗಿ ಗುರುತಿಸಿಕೊಂಡಿದ್ದರು.

ಡಿಸೆಂಬರ್ ತಿಂಗಳಲ್ಲಿ ತಮ್ಮ ಹೊಸ ಸಿನಿಮಾ ಲಾಂಚ್ ಮಾಡಲು ಓಡಾಡುತ್ತಿದ್ದರು. 2020 ಆಗಸ್ಟ್ ತಿಂಗಳು ಧ್ರುವನ್ ನಟನೆಯ ಹೊಸ ಸಿನಿಮಾ ಮುಹೂರ್ತವಾಗಿತ್ತು. ನಿರ್ಮಾಪಕ ಮತ್ತು ನಟರ ನಡುವಿನ ಮುನಿಸಿನಿಂದ ಸಿನಿಮಾ ನಿಂತು ಹೋಗಿತ್ತು. ಇದೀಗ ತಮ್ಮ ಹೊಸ ಸಿನಿಮಾ ಲಾಂಚ್​​ಗಾಗಿ ಓಡಾಡುತ್ತಿದ್ದರು. ಎರಡ್ಮೂರು ಹೊಸ ಸಿನಿಮಾಗಳ ಮಾತುಕಥೆಯೂ ನಡೆಸಿದ್ದರು. ಇದೀಗ ಧ್ರುವನ್ ಬಲಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದಿವಂಗತ ಪಾರ್ವತಮ್ಮ ರಾಜ್​ಕುಮಾರ್ ಸಂಬಂಧಿಗೆ ಅಪಘಾತ.. ದುರ್ಘಟನೆಯಲ್ಲಿ ಕಾಲು ಕಳೆದುಕೊಂಡ ಈ ಯುವ ನಟ ಯಾರು..?

https://newsfirstlive.com/wp-content/uploads/2023/06/25062023.png

Load More