ಎಲ್ಲರಂತಲ್ಲ ಸಿರಾಜ್, ಯಶಸ್ಸು ಸಾಧಿಸಿದ್ದೇ ರೋಚಕ
ಗುರುವಿನ ವಿಚಾರದಲ್ಲಿ ಮೊಹ್ಮದ್ ಸಿರಾಜ್ ಉಲ್ಟಾ-ಪಲ್ಟಾ
ಸಿರಾಜ್ ಮುಟ್ಟಿದ್ದೆಲ್ಲ ಚಿನ್ನ, 3 ಮಾದರಿಗೂ ನಂಬಿಗಸ್ಥ ಬೌಲರ್
ಮುಂದೆ ಗುರು ಇರಬೇಕು. ಹಿಂದೆ ಗುರಿ ಇರಬೇಕು ಅಂತಾರೆ. ಆದರೆ ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ಗೆ ಈ ಎರಡರಲ್ಲಿ ಇದ್ದಿದ್ದು ಗುರಿ ಮಾತ್ರ. ಗುರು ಅನ್ನೋರೆ ಇಲ್ಲ. ಆದರೂ ಗುರುವಿನ ಗುರುಬಲವಿಲ್ಲದೇ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿದ್ದಾರೆ.
ಗುರುವಿನ ಗುಲಾಮನಾಗದೇ ಮುಕ್ತಿ ದೊರಕದಣ್ಣ ಅನ್ನೋ ಮಾತಿದೆ. ಅದು ಹಂಡ್ರೆಂಡ್ ಪರ್ಸೆಂಟ್ ಸತ್ಯವು ಕೂಡ. ಆದ್ರೆ ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಕಥೆ ಮಾತ್ರೆ ಈ ಮಾತಿಗೆ ತದ್ವಿರುದ್ಧ. ಯಾಕಂದ್ರೆ ಸಿರಾಜ್ ಇಂದು ಏನೇ ಆಗಿದ್ರೂ ಸ್ವಪ್ರಯತ್ನ ಮತ್ತು ಸ್ವ ಛಲದ ಪ್ರತಿಫಲ. ಯಾಕಂದ್ರೆ ಈ ಡೆಡ್ಲಿ ಬೌಲರ್ಗೆ ಇಲ್ಲಿತನಕ ಗುರು ಅನ್ನೋರೇ ಇಲ್ಲ. ಹೌದು, ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಸತ್ಯ. ಟೆನಿಸ್ ಬಾಲ್ ಕ್ರಿಕೆಟ್ನಿಂದಲೇ ಸಿರಾಜ್ ಜೆರ್ನಿ ಶುರುವಾಯ್ತು.
ಎಲ್ಲರಂತೆ ಅವರಿಗೂ ಕೋಚ್ ಗರಡಿಯಲ್ಲಿ ಬೆಳಿಬೇಕು ಅನ್ನೋ ಆಸೆ ಇತ್ತು. ಆದ್ರೆ ಬಡತನ ಅನ್ನೋ ಹೆಮ್ಮಾರಿ ಆ ಆಸೆಗೆ ಸಣ್ಣ ವಯಸ್ಸಿನಲ್ಲೇ ಕೊಳ್ಳಿ ಇಟ್ಟಿತು. ಆರ್ಥಿಕವಾಗಿ ಸದೃಢವಲ್ಲದ ಸಿರಾಜ್ ಗುರುವಿನ ಮಾರ್ಗದರ್ಶನವಿಲ್ಲದೇ ಬೆಳೆದ್ರು. ತನಗೆ ತಾನೇ ಗುರುವಾದರು.
ಯಾರ ನೆರವಿಲ್ಲದೇ ಸ್ವಾವಲಂಬಿ ಕ್ರಿಕೆಟ್ ಬದುಕು ಶುರು ಮಾಡಿದ್ರು. ಸ್ವಪ್ರಯತ್ನ ಮತ್ತು ಕ್ರಿಕೆಟ್ ಬಗೆಗಿನ ಬದ್ಧತೆ ಅವರನ್ನ ಕೈಬಿಡಲಿಲ್ಲ. ಗುರುವಿನ ಗುರುಬಲವಿಲ್ಲದೇ 2017 ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ರು. ಬಳಿಕ ತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ. ಮೂರು ಮಾದರಿಯಲ್ಲಿ ನಂಬಿಗಸ್ಥ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಏನಂದ್ರೆ ಇಂದು ಘಾತಕ ಸ್ಪೆಲ್ ಮೂಲಕ ರಾರಾಜಿಸ್ತಿರೋ ಈ ಹೈದ್ರಾಬಾದ್ ವೇಗಿ ಬ್ಯಾಟ್ಸ್ಮನ್ ಆಗುವ ಕನಸು ಕಂಡಿದ್ರಂತೆ. ಆದ್ರೆ ಕೊನೆಗೆ ಆಗಿದ್ದು ಮಾತ್ರ ಸ್ಟಾರ್ ಬೌಲರ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ