newsfirstkannada.com

ಹರಿಯಾಣ ಬೂದಿ ಮುಚ್ಚಿದ ಕೆಂಡ.. ಈ ಮೋನು ಮನೇಸಾರ್​​ಗೂ ಗಲಾಟೆಗೂ ಏನು ಸಂಬಂಧ..

Share :

02-08-2023

    ಗಲಾಟೆಯಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ

    44 FIR, 80ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಹರಿಯಾಣ ಹಿಂಸಾಚಾರಕ್ಕೆ ಕಾರಣ ಏನು..?

ಹರಿಯಾಣದ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೊನ್ನೆ ಮತ್ತು ನಿನ್ನೆ ನಡೆದ ಗಲಭೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ಸೋಮವಾರ ನೂಹ್ ಪಟ್ಟಣದಲ್ಲಿ ಶುರುವಾಗಿದ್ದ ಹಿಂಸಾಚಾರ, ಗುರುಗ್ರಾಮಕ್ಕೂ ಆವರಿಸಿತ್ತು. ಮೊನ್ನೆ ನಡೆದ ಹಿಂಸಾಚಾರ ಬೆನ್ನಲ್ಲೇ ತಡರಾತ್ರಿ ಮಸೀದಿ ಒಂದಕ್ಕೆ ಬೆಂಕಿ ಹಚ್ಚಲಾಗಿತ್ತು. ನಿನ್ನೆ ಸಂಜೆ ವೇಳೆಗೆ ಇದು ಗುರುಗ್ರಾಮಕ್ಕೆ ವ್ಯಾಪಿಸಿ ರೆಸ್ಟೋರೆಂಟ್​ ಮತ್ತು ಹೋಟೆಲ್​ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ್ದರು.

ಇದೀಗ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಯಾವಾಗ ಬೇಕಾದರೂ ಗಲಭೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಹೀಗಿದ್ದೂ ಗುರುಗ್ರಾಮದಲ್ಲಿ ಯಾವುದೇ ನಿಷೇಧಾಜ್ಞೆ ಇಲ್ಲ. ಎಂದಿನಂತೆ ಶಾಲಾ-ಕಾಲೇಜು, ಕಚೇರಿಗಳು, ಇಂಟರ್ನೆಟ್ ಸೇವೆಗಳು ಲಭ್ಯ ಇರಲಿವೆ. ಯಾರು ಕೂಡ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಹಿಂಸಾಚಾರಕ್ಕೆ ಕಾರಣ ಏನು..?

ಕಳೆದ ಸೋಮವಾರ ನೂಹ್ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ‘ಜಲಾಭಿಷೇಕ ಯಾತ್ರೆ’ ಹಮ್ಮಿಕೊಂಡಿತ್ತು. ಈ ಯಾತ್ರೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಗೋರಕ್ಷಕ ಮೋನು ಮನೇಸಾರ್ ಭಾಗಿಯಾಗುವುದಾಗಿ ಹೇಳಿದ್ದ. ಇದು ಇನ್ನೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಜಲಾಭಿಷೇಕ ಯಾತ್ರೆ ಶುರುವಾಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿ ವಿಕೃತಿ ಮೆರೆದಿದ್ದರು. ನಂತರ ಅದು ಹಿಂಸಾಚಾರಕ್ಕೆ ತಿರುಗಿತ್ತು.

ಯಾರು ಈ ಮನೇಸಾರ್..?

ಮೋನು ಮನೇಸಾರ್ ಅಲಿಯಾಸ್ ಮೋಹಿತ್ ಯಾದವ್, ಬಜರಂಗದಳದ ಕಾರ್ಯಕರ್ತ. ಗುರುಗ್ರಾಮ ಬಳಿಯ ಮನೇಸಾರ್ ಮೂಲದವ. ಹರಿಯಾಣ ಗೋವುಗಳ ರಕ್ಷಣೆ ವಿಚಾರದಲ್ಲಿ ಈತನ ಹೆಸರು ದೊಡ್ಡದಿದೆ. ಈ ವರ್ಷದ ಆರಂಭದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳ ಹತ್ಯೆಯಾಗಿತ್ತು. ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹತ್ಯೆ ಪ್ರಕರಣದಲ್ಲಿ ಮನೇಸಾರ್​ ಆರೋಪಿಯಾಗಿದ್ದಾನೆ. ಯಾವಾಗ ಮನೇಸಾರ್, ‘ಜಲಾಭಿಷೇಕ ಯಾತ್ರೆ’ಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದನೋ, ಅದು ಇನ್ನೊಂದು ಕೋಮಿನ ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ ಹಿಂಸಾಚಾರ ನಡೆದಿದೆ ಎನ್ನಲಾಗಿದೆ.

ಮನೇಸಾರ್ ಯಾತ್ರೆಯಲ್ಲಿ ಭಾಗಿಯಾಗಿದ್ನಾ?

ಸೋಶಿಯಲ್ ಮೀಡಿಯಾದಲ್ಲಿ ಮನೇಸಾರ್ ತಾನು ಯಾತ್ರೆಯಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಪ್ರಚೋದನಾಕಾರಿ ವಿಡಿಯೋವನ್ನು ಹಂಚಿಕೊಂಡಿದ್ದ. ಇದನ್ನು ಗಮನಿಸಿದ ಹರಿಯಾಣ ಪೊಲೀಸರು ಆತನನ್ನು ‘ಜಲಾಭಿಷೇಕ ಯಾತ್ರೆ’ಯಲ್ಲಿ ಭಾಗಿಯಾಗದಂತೆ ತಡೆದಿದ್ದಾರೆ ಎಂದು ಸುದ್ದಿಯಾಗಿದೆ. ಇನ್ನು ಮೃತರಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಆಗಿದ್ದಾರೆ. ಮತ್ತೋರ್ವ ಮಸೀದಿಯಲ್ಲಿದ್ದ ಇಮಾನ್. ಹಲವು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹರಿಯಾಣ ಬೂದಿ ಮುಚ್ಚಿದ ಕೆಂಡ.. ಈ ಮೋನು ಮನೇಸಾರ್​​ಗೂ ಗಲಾಟೆಗೂ ಏನು ಸಂಬಂಧ..

https://newsfirstlive.com/wp-content/uploads/2023/08/HARIYANA-2.jpg

Load More