/newsfirstlive-kannada/media/post_attachments/wp-content/uploads/2024/10/bbk1121.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಅದ್ಭುತವಾಗಿ ಮೂಡಿ ಬರುತ್ತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 15 ಸ್ಪಧಿಗಳಲ್ಲಿ 9 ಮಂದಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/BBK11-8.jpg)
ಅವರ ಪೈಕಿ ಭವ್ಯಾ ಗೌಡ , ಗೌತಮಿ, ಚೈತ್ರಾ, ಹಂಸ, ಮೋಕ್ಷಿತಾ, ಶಿಶಿರ್, ಸುರೇಶ್​ ಹಾಗೂ ಕ್ಯಾಪ್ಟನ್​ ಅವರಿಂದ ನೇರವಾಗಿ ಮಾನಸ ಹಾಗೂ ಮಂಜು ನಾಮಿನೇಟ್ ಆಗಿದ್ದಾರೆ. ಈ 9 ಸ್ಪರ್ಧಿಗಳ ಪೈಕಿ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಲಿದ್ದಾರೆ ಅಂತ ನಾಳಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.
/newsfirstlive-kannada/media/post_attachments/wp-content/uploads/2024/10/bbk1122.jpg)
ಆದರೆ ಮತ್ತೆ ಈ ವಾರ ಬಿಗ್​ಬಾಸ್​ ಟ್ವಿಸ್ಟ್​ ಕೊಡಲಿದ್ದಾರಾ ಅಂತ ಕಾದು ನೋಡಬೇಕಿದೆ. ಆದರೆ ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್​ ಆಗಿದ್ದರು. ಆದ್ರೆ ಅದು ಕಿಚ್ಚ ಸುದೀಪ್​ ಅವರು ಘೋಷಣೆ ಮಾಡಿರಲಿಲ್ಲ. ಆದರೆ ಬಿಗ್​ಬಾಸ್​ ಮನೆಯಲ್ಲಿ ನಡೆದ ಗಲಾಟೆಯಲ್ಲಿ ಲಾಯರ್​ ಜಗದೀಶ್​ ಹಾಗೂ ರಂಜಿತ್​ ಆಚೆ ಬಂದಿದ್ದರು. ಆದ್ರೆ ಈ ವಾರದ ಪಂಚಾಯ್ತಿಗೆ ಕಿಚ್ಚ ಸುದೀಪ್​ ಬರೋದಿಲ್ಲ. ಬದಲಿಗೆ ಸೃಜನ್ ಲೋಕೇಶ್ ಅವರು ನಡೆಸಿಕೊಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us