ಸುದೀಪ್ ಹೊರತು ಪಡ್ಸಿ ಬೇರೆ ನಟರನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ!
ಅದ್ಭುತ ವೇದಿಕೆಯಾಗಿರೋ ಬಿಗ್ ಶೋ ಕಿಚ್ಚ ಬಿಟ್ಟು ಹೋಗುತ್ತಿರೋದೇಕೆ?
ದಕ್ಷಿಣ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು ಕನ್ನಡದ ಬಿಗ್‌ಬಾಸ್
ಒಂದು ಸಿನಿಮಾ ಒಪ್ಪಿಕೊಳ್ಳುವಾಗ ಕಥೆ ಹೇಗಿದೆ? ನಿರ್ದೇಶಕರು ಯಾರು? ನಿರ್ಮಾಪಕರು ಯಾರಿದ್ದಾರೆ? ಅದೆಲ್ಲಾ ಸೂಕ್ಷ್ಮವಾಗಿ ನೋಡಿನೇ ಸುದೀಪ್ ಫೈನಲ್ ಮಾಡ್ತಾರೆ. ಅಂತಾದ್ರಲ್ಲಿ ಸುದೀಪ್ ಹೆಸರನ್ನ ಮತ್ತರು ಎತ್ತರಕ್ಕೆ ಕೊಂಡೊಯ್ದ ಬಿಗ್‌ಬಾಸ್ ಶೋಗೆ ಗುಡ್‌ಬೈ ಹೇಳಿದ್ದಾರೆ. ಆದರೆ, ಈಗ ಹುಟ್ಟಿರೋ ಪ್ರಶ್ನೆ ಈ ಸೀಸನ್ನ ಏನೋ ಸುದೀಪ್ ನಡೆಸಿಕೊಡ್ತಾರೆ ಸರಿ, ಆದ್ರೆ ಮುಂದಿನ ಸೀಸನ್ನಿಂದ ಬಿಗ್ಬಾಸ್ನ ಹೋಸ್ಟ್ ಮಾಡೋಱರು? ಸುದೀಪ್ ನನ್ನ ತಮ್ಮನೇ ನಡೆಸಿಕೊಡಲಿ ಅಂದಿದ್ದು ಯಾರಿಗೆ ಹೇಳಿದ್ರು ಎಂಬುವುದರ ಎಲ್ಲರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: KicchaSudeep: ಕೃಷ್ಣನಿಲ್ಲದ ಮಹಾಭಾರತ, ಸುದೀಪ್ ಇಲ್ಲದ ಬಿಗ್ ಬಾಸ್.. ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?
ಬಿಗ್ ಬಾಸ್ ಮನೆಗೆ ಪ್ರತಿ ವರ್ಷವೂ ಒಳ್ಳೊಳ್ಳೆ ನಟರು, ನಿರೂಪಣೆ, ಸೋಷಿಯಲ್ ಮೀಡಿಯಾ ಸ್ಟಾರ್ಸ್, ಕಾಂಟವರ್ಸಿ ಮುಖಗಳು ಬರ್ತಾನೆ ಇರ್ತಾರೆ. ಅಂಥವರಿಗೆಲ್ಲಾ ತಮ್ಮ ತಮ್ಮ ವ್ಯಕ್ತಿತ್ವ ತಿದ್ದುಕೊಳ್ಳೋದಕ್ಕೆ, ಇಮೇಜ್ ಬಿಲ್ಡ್ ಮಾಡಿಕೊಳ್ಳೋದಕ್ಕೆ ಇರೋ ಅದ್ಭುತ ವೇದಿಕೆಯೇ ಬಿಗ್ ಬಾಸ್. ಹಾಗೆಯೇ, ಇಲ್ಲಿಗೆ ಬರೋ ಪ್ರತಿಯೊಬ್ಬ ಕಂಟೆಸ್ಟೆಂಟ್ನ ವೀಕ್ ಎಂಡ್ನಲ್ಲಿ ನಡೆಯೋ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಹ್ಯಾಂಡಲ್ ಮಾಡ್ತಾರೆ. ಆಟ ಚೆನ್ನಾಗಿ ಆಡಿದ್ರೆ ಹೊಗಳ್ತಾರೆ. ಯಾರು ತಪ್ಪು ಮಾಡಿರ್ತಾರೋ ಮುಲಾಜಿಲ್ಲದೇ ಕ್ಲಾಸ್ ತಗೋತಾರೆ. ಕಿಚ್ಚನ ಕಟಕಟೆ ಹಾಗೂ ಈ ರಾಜಿ ಪಂಚಾಯ್ತಿ ನೋಡೋದಕ್ಕೆ ಇಡೀ ರಾಜ್ಯವೇ ಶನಿವಾರ ಭಾನುವಾರ ಕಾಯ್ಕೊಂಡ್ ಕೂತಿರುತ್ತೆ ಅಂದ್ರೆ ತಪ್ಪಿಲ್ಲ.
ಬರೋಬ್ಬರಿ 10 ವರ್ಷಗಳ ಕಾಲ ಸುದೀಪ್ ಬಿಗ್ ಬಾಸ್ ನಡೆಸಿ ಕೊಟ್ಟಿದ್ದಾರೆ. ಈಗ ನಡೀತಾ ಇರೋದೂ ಸೇರಿದ್ರೆ, 11. ಹೀಗಾಗಿಯೇ, ಬಿಗ್ ಬಾಸ್ ಅಂದ್ರೆ ಸಾಕು ವೀಕ್ಷಕರ ಕಣ್ಣ ಮುಂದೆ ಬರುವುದೇ ಕಿಚ್ಚ ಸುದೀಪ್.
ಹೀಗಾಗಿ, ಬಿಗ್‌ಬಾಸ್‌ನಲ್ಲಿ ಕಿಚ್ಚನ ಸ್ಥಾನದಲ್ಲಿ ಮತ್ತೊಬ್ಬರನ್ನ ಕಲ್ಪನೆ ಮಾಡಿಕೊಳ್ಳೋದು ಕೂಡ ಕಷ್ಟಾನೆ. ಆದ್ರೂ, ಕಿಚ್ಚನ ಸ್ಥಾನ ತುಂಬಿಸೋದಕ್ಕೆ ಬೇರೆ ಸ್ಟಾರ್ನ ಹುಡುಕಲೇಬೇಕು. 11 ವರ್ಷದ ಹಿಂದೆ ಕನ್ನಡದಲ್ಲಿ ಬಿಗ್‌ಬಾಸ್ ಶೋ ಶುರುವಾಗೋ ವೇಳೆಗೆ ತಮಿಳು ತೆಲುಗಿನಲ್ಲಿಯೂ ಶುರುವಾಗಿತ್ತು. ಆದ್ರೆ, ಭಾರೀ ದೊಡ್ಡ ಮಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಸಕ್ಸಸ್ ಆಗಿದ್ದು ಅಂದ್ರೆ ಕನ್ನಡದಲ್ಲಿ ಮಾತ್ರ. ಅದಕ್ಕೆ ಕಲರ್ಸ್ ಕನ್ನಡದ ಎಫರ್ಟ್ ಜೊತೆಗೆ ಕಿಚ್ಚನ ಪ್ರೆಸೆನ್ಸ್ ಕೂಡ ಕಾರಣ ಅಂದ್ರೆ ತಪ್ಪಾಗೋದಿಲ್ಲ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಸನ್ನಿಧಿ ಮುಂದೆ ರೀಲ್ಸ್.. ಶಾಸಕನ ಸಂಗಾತಿ ಮೇಲೆ ದಾಖಲಾಯ್ತು ಕೇಸ್
ಇನ್ನು, ಇಲ್ಲಿವರೆಗೂ ಬಿಗ್ಬಾಸ್ಶೋ ನಡೆದುಬಂದಿರೋ ದಾರಿ ನೋಡಿದ್ರೆ ಅದರ ಸಕ್ಸಸ್ ಶಿಖರದಂತಿದೆ. ಕನ್ನಡದ ಬಿಗ್‌ಬಾಸ್ ತಮಿಳು, ತೆಲುಗು ಬಿಗ್ಬಾಸ್ಗಳಿಂದ ಒಂದು ಹೆಜ್ಜೆ ಮೇಲಿದೆ. ಹೀಗಿದ್ದಾಗ, ಸುದೀಪ್ ಹೋದ್ರೆ ಅವರ ಜಾಗಕ್ಕೆ ಸಣ್ಣ ಪುಟ್ಟ ನಟರನ್ನ ಕರೆತಂದು ಶೋ ನಿರೂಪಣೆ ಮಾಡಿಸೋದಕ್ಕಾಗಲ್ಲ. ಬಿಗ್‌ಬಾಸ್ ಬಿಗ್ಗೆಸ್ಟ್ ಶೋ ಆಗಿರೋದ್ರಿಂದ ಮತ್ತೊಬ್ಬ ದೊಡ್ಡ ಸ್ಟಾರೇ ಶೋನ ಹೋಸ್ಟ್ ಮಾಡ್ಬೇಕು. ಆ ಶೋನ ತೂಕಕ್ಕೆ ಮ್ಯಾಚ್ ಆಗುವಂತಹ ಸ್ಟಾರ್ ಆಗಿರ್ಬೇಕು. ಹಾಗಾಗಿಯೇ, ಸುದೀಪ್ ಬಿಟ್ರೆ ಇನ್ಯಾರು ಅನ್ನೋ ಪ್ರಶ್ನೆ ಓಡಾಡ್ತಿರೋವಾಗ್ಲೇ ಹಲವು ಸ್ಟಾರ್ಗಳ ಹೆಸರು ಜೋರಾಗಿ ಸದ್ದು ಮಾಡ್ತಿದೆ.
ಕಿಚ್ಚನ ಬಿಟ್ರೆ ಯಾರು?
ನಂ.01
ರಿಷಬ್ ಶೆಟ್ಟಿ
ನಂ.02
ಶಿವರಾಜ್ ಕುಮಾರ್
ನಂ.03
ಡಾಲಿ ಧಂಜಯ್
ನಂ.04
ರಮೇಶ್ ಅರವಿಂದ್
ಸುದೀಪ್ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದ್ರೆ ಯಾರು ನಡ್ಸಿ ಕೊಡ್ತಾರೆ ಅನ್ನೋ ಪ್ರಶ್ನೆಗೆ ಮೊದಲು ಕೇಳಿ ಬರ್ತಾ ಇರೋ ಹೆಸ್ರು ನಟ ರಿಷಬ್ ಶೆಟ್ಟಿ ಅವ್ರದ್ದು. ರಾಷ್ಟ್ರ ಪ್ರಶಸ್ತಿಯ ವಿಜೇತ ಈ ನಟ, ನಿರ್ದೇಶಕನ ಹೆಸ್ರು ಮುಂಚೂಣಿಯಲ್ಲಿದೆ. ಇನ್ನು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವ್ರ ಹೆಸ್ರು ಕೇಳಿಬರ್ತಿದೆ. ಈಗಾಗಲೇ ಕನ್ನಡದ ಕೆಲವು ರಿಯಾಲಿಟಿ ಶೋದಲ್ಲಿ ಶಿವರಾಜ್ ಕುಮಾರ್ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ಹಾಗೇ ಇತ್ತೀಚಿನ ವರ್ಷಗಳ ಕನ್ನಡದ ಸಿನಿ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿರೋ ಡಾಲಿ ಧನಂಜಯ್ ಹೆಸ್ರು ಕೂಡ ಬಿಗ್ ಬಾಸ್ ಹೋಸ್ಟ್ ರೇಸ್‌ನಲ್ಲಿದೆ. ಇನ್ನೊಂದು ಅಂದ್ರೆ, ವೀಕ್ ಅಂಡ್ ವಿತ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ಹೆಸ್ರು ಬಿಗ್ ಬಾಸ್-12ನೇ ಆವೃತ್ತಿಗೆ ಕೇಳಿಬರ್ತಿದೆ.
ಇದನ್ನೂ ಓದಿ: BBK11: ಐಶ್ವರ್ಯ VS ಅನುಷಾ ಮಧ್ಯೆ ಶುರುವಾಯ್ತು ಗದ್ದಲ; ಬಿಗ್‌ಬಾಸ್ ಮನೆಯಲ್ಲಿ ‘ಬಕೆಟ್’ ಹಿಡಿಯೋದ್ಯಾರು?
ಬಿಗ್‌ಬಾಸ್-11 ಆರಂಭವಾಗೋದಕ್ಕೂ ಮುನ್ನವೇ ಈ ಬಾರಿ ಸುದೀಪ್ ಹೋಸ್ಟ್ ಮಾಡೋದಿಲ್ಲ ಅನ್ನೋ ಗಾಳಿಸುದ್ದಿಗಳು ಭಾರೀ ವೈರಲ್ ಆಗಿದ್ದವು. ಆದ್ರೆ, ಅದ್ಕೆ ಪುಷ್ಟಿ ನೀಡುವಂತೆ ಸುದೀಪ್ ಕೂಡ ತಾವು ಸಿನಿಮಾದತ್ತ ದೃಷ್ಟಿ ಹರಿಸ್ಬೇಕು, ಜನ ತನ್ನನ್ನು ಮರ್ತು ಬಿಡ್ತಾರೆ ಅನ್ನೋ ಮಾತುಗಳನ್ನು ಆಡ್ತಾನೇ ಬರ್ತಿದ್ರು. ಬಟ್, ಚಾನೆಲ್‌ನವ್ರು ಮನವೊಲೀಸುವಲ್ಲಿ ಯಶಸ್ವಿಯಾಗಿದ್ರು. ಇನ್ನು ಬಿಗ್‌ಬಾಸ್-11ರ ಪ್ರೇಸ್‌ಮೀಟ್‌ಗೆ ಬಂದಾಗ ಪತ್ರಕರ್ತರು ಇದೇ ಪ್ರಶ್ನೆಯನ್ನು ಸುದೀಪ್ ಮುಂದೆ ಇಟ್ಟಾಗ ಅವ್ರು ಹೇಳಿದ್ದೇನು ಅನ್ನೋದು ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಈಗಾಗಲೇ 10 ಆವೃತ್ತಿಗಳು ಸೂಪರ್ ಹಿಟ್ ಆಗಿವೆ. 11ನೇ ಆವೃತ್ತಿಯೂ ಧಾಮ್ ಧೂಮ್ ಅಂತಾ ನಡೀತಿದೆ. ಹಾಗೇ ಪ್ರತಿ ವರ್ಷ ಹತ್ತಾರು ಸ್ಪರ್ಧಿಗಳು ಬರ್ತಾರೆ. ಹಾಗೇ ಬಂದು ಹೋದವ್ರು ಸಿನಿಮಾ ಕ್ಷೇತ್ರದಲ್ಲಿ, ಧಾರವಾಹಿಗಳಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ಕಾಣಿಸ್ಕೊಳ್ತಿದ್ದಾರೆ. ಅವರೆಲ್ಲರಿಗೂ ಸುದೀಪ್ ಜೊತೆ ಬಾಂಧವ್ಯವಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಸುದೀಪ್ ಜೊತೆ ಮಾತಾಡಿರೋದು ಅವರಲ್ಲಿ ಹಚ್ಚ ಹಸಿರಾಗಿಯೇ ಇದೆ. ಅವರಿಗೂ ಸುದೀಪ್ ಬಿಗ್ ಬಾಸ್‌ಗೆ ಗುಡ್‌ಬೈ ಹೇಳಿರೋದು ಶಾಕ್ ಆಗಿದೆ. ಅದೇ ಶಾಕ್‌ನಲ್ಲಿ ನ್ಯೂಸ್ ಫಸ್ಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ.
ನಿಜಕ್ಕೂ ಬಿಗ್‌ಬಾಸ್‌ನಲ್ಲಿ ಸುದೀಪ್ ಹೊರತು ಪಡ್ಸಿ ಬೇರೆ ನಟರನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಬಿಗ್ ಬಾಸ್ ಅಂದ್ರೆ ಕಿಚ್ಚ ಸುದೀಪ್, ಕಿಚ್ಚ ಸುದೀಪ್ ಅಂದ್ರೆ ಬಿಗ್ ಬಾಸ್ ಅನ್ನೋ ರೀತಿಯಲ್ಲಿತ್ತು ರಿಯಾಲಿಟಿ ಶೋ. ಆದ್ರೆ, ಸುದೀಪ್ ಏನಾದ್ರೂ ನಿಲುವು ಬದಲಾಯಿಸ್ತಾರಾ? ಇಲ್ಲವೇ ಗುಡ್‌ಬೈಗೆ ಗಟ್ಟಿಯಾಗಿ ನಿಂತುಕೊಳ್ಳುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.
ಕಿಚ್ಚ ಸುದೀಪ್ ನಿಲುವು ಏನೇ ಇರಲಿ ಅದನ್ನು ಜನ ಗೌರವಿಸ್ಬೇಕು. ಯಾಕಂದ್ರೆ, ಅವ್ರು ತಮ್ಮನ್ನು ತಾವು ಸಿನಿಮಾ ಕ್ಷೇತ್ರದಲ್ಲಿ ಜಾಸ್ತಿ ತೊಡಗಿಸ್ಕೊಳ್ಳಬೇಕು ಅನ್ನೋ ನಿಲುವಿನಲ್ಲಿದ್ದಾರೆ. ಹೀಗಾಗಿ ಅವ್ರಿಂದ ಇನ್ನಷ್ಟು ಕನ್ನಡ ಸಿನಿಮಾಗಳು ಬರ್ಲಿ, ಸ್ಯಾಂಡ್‌ವುಡ್‌ಗೆ ಹೆಸರು ತರ್ಲಿ ಅಂತಾ ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ