‘ಬಿಜೆಪಿ ಚಾಣಕ್ಯನ ಕಡೆ ‘ಮೂಡ್ ಆಫ್ ದಿ ನೇಷನ್’ ಒಲವು
ಬಿಜೆಪಿ ಪಕ್ಷದಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲವಾ?
ಇನ್ನೆರಡು ವರ್ಷದ ಬಳಿಕ ಅಧಿಕಾರ ತ್ಯಜಿಸುತ್ತಾರಾ ಮೋದಿ?
ಮೋದಿ ಬಳಿಕ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಯಾರು ಸೂಕ್ತ ವ್ಯಕ್ತಿ. ಮೋದಿ ಬಳಿಕ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಯಾರನ್ನ ಆಯ್ಕೆ ಮಾಡಬಹುದು. ಮೋದಿಗೆ ಸರಿ ಹೊಂದುವ ನಾಯಕ ಯಾರು ಅನ್ನೋದರ ಬಗ್ಗೆ ಇಂಡಿಯಾ ಟುಡೆ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಆಗಸ್ಟ್ ಆವೃತ್ತಿಯಲ್ಲಿ ಮೋದಿ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರು ಎಂಬ ಬಗ್ಗೆ ಜನರ ಅಭಿಪ್ರಾಯದ ವರದಿ ಇಲ್ಲಿದೆ.
ಇದನ್ನೂ ಓದಿ: ಉಡುಪಿ ರೀಲ್ಸ್ ಹೆಂಡತಿಯ ಕೊಲೆ ಕೇಸ್‌ಗೆ ಭಯಾನಕ ಟ್ವಿಸ್ಟ್.. ಮಹಿಳೆಯ 2ನೇ ಗಂಡ ಬಾಯ್ಬಿಟ್ಟಿದ್ದೇನು?
ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ, 5 ವರ್ಷವೂ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲ ಅಂತ ಬಿಜೆಪಿ ನಾಯಕರೇ ಹಾಕಿಕೊಂಡ ನಿಯಮದ ಪ್ರಕಾರ 73 ವರ್ಷದ ಮೋದಿ ಇನ್ನೆರಡು ವರ್ಷದ ಬಳಿಕ ಅಧಿಕಾರ ತ್ಯಜಿಸುತ್ತಾರಾ? ಎನ್ನುವ ಗುಸು ಗುಸು ಚರ್ಚೆ ಹೀಗೊಂದು ಚರ್ಚೆ ಇದ್ದೇ ಇದೆ. ಮೋದಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಮೊದಲೇ ಕೆಳಗಿಳಿಯಲಿ, ಅವರ ನಂತರ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಯಾರು ಸೂಕ್ತ ಅನ್ನೋದರ ಬಗ್ಗೆ ಇಂಡಿಯಾ ಟುಡೆ ಸಮೀಕ್ಷೆ ನಡೆಸಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಮೋದಿ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರು ಎಂಬ ಬಗ್ಗೆ ಜನರ ಅಭಿಪ್ರಾಯ ಹೀಗಿದೆ.
ಜನತಾ ಜಪ
ಅಮಿತ್ ಶಾ 25%
ಯೋಗಿ ಆದಿತ್ಯನಾಥ್ 19 %
ನಿತಿನ್ ಗಡ್ಕರಿ 13%
ಬಿಜೆಪಿಯ ಇತರೆ ಪ್ರಭಾವಿ ನಾಯಕರಿಗಿಂತ ಪ್ರಧಾನಿ ಹುದ್ದೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿದ್ದಾರೆ. ಸಮೀಕ್ಷೆಯಲ್ಲಿ ಶೇಕಡಾ 25ರಷ್ಟು ಮಂದಿ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನ ಅನುಮೋದಿಸಿದ್ದಾರೆ. ಈ ಮೂಲಕ ಜನರ ಮುಖ್ಯ ಆಯ್ಕೆ ಮತ್ತೊಬ್ಬ ಗುಜರಾತ್‌ನ ರಾಜಕಾರಣಿಯೇ ಆಗಿದ್ದಾರೆ. ಅಮಿತ್ ಶಾ ನಂತರದ ಸ್ಥಾನದಲ್ಲಿರೋದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್. ಯೋಗಿ ಪರ ಶೇಕಡಾ 19ರಷ್ಟು ಮಂದಿ ಒಲವು ತೋರಿಸಿದ್ದಾರೆ. ಹಾಗೇ ಶೇಕಡ 13ರಷ್ಟು ಜನರ ಬೆಂಬಲ ಹೊಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಮೂರನೇ ಸ್ಥಾನದಲ್ಲಿದ್ದಾರೆ.
ಜನತಾ ಜಪ
ರಾಜನಾಥ್ ಸಿಂಗ್ 5%
ಶಿವರಾಜ್ ಸಿಂಗ್ ಚೌಹಾಣ್ 5%
ಇವರನ್ನ ಹೊರತುಪಡಿಸಿದ್ರೆ, ಸುಮಾರು ಶೇ 5ರಷ್ಟು ಮತ ಪಡೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. 2023 ಆಗಸ್ಟ್‌ನಲ್ಲಿ ನಡೆಸಿದ್ದ ಮೂಡ್ ಆಫ್ ದಿ ನೇಷನ್ ಸರ್ವೆಯ ಫಲಿತಾಂಶಕ್ಕೆ ಹೋಲಿಸಿದರೆ ಅಮಿತ್ ಶಾ, ಯೋಗಿ ಆದಿತ್ಯನಾಥ್ ಜನಪ್ರಿಯತೆಯೂ ಕುಸಿತ ಕಂಡಿದೆ. ಪ್ರಧಾನಿ ಮೋದಿ ಕಾರ್ಯಕ್ಷಮತೆಯ ರೇಟಿಂಗ್ ಕೂಡ ಕುಸಿದಿದೆ.
ಇದನ್ನೂ ಓದಿ: ನಮಸ್ಕಾರ ದೇವ್ರು.. ಡಾಕ್ಟರ್ ಬ್ರೋಗೆ ಇದೆಂಥಾ ವರ! ಇದೇ ನೋಡಿ ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ!
ಶೇ 25ರಷ್ಟು ಅನುಮೋದನೆ ಪಡೆದಿರುವ ಅಮಿತ್ ಶಾಗೆ ಅತಿ ಹೆಚ್ಚು ಬೆಂಬಲ ಸಿಕ್ಕಿರುವುದು ದಕ್ಷಿಣ ಭಾರತದಲ್ಲಿ ಎನ್ನುವುದು ಗಮನಾರ್ಹ. ಈ ನಡುವೆ ರಾಜನಾಥ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕಡೆ ಜನರ ಒಲವು ಹೆಚ್ಚುತ್ತಿದೆ ಎನ್ನುವುದು ಗಮನಿಸಬೇಕಾದ ಸಂಗತಿ. ಸಮೀಕ್ಷೆಯ ಪ್ರಕಾರ ಪ್ರಧಾನಿ ಹುದ್ದೆ ರೇಸ್ನಲ್ಲಿ ಅಮಿತ್ ಶಾ ಮುಂಚೂಣಿಯಲ್ಲಿದ್ದಾರೆ. ಆದ್ರೆ ಇದಕ್ಕೆಲ್ಲ ಸೂಕ್ತ ಉತ್ತರ ಸಿಗಬೇಕು ಅಂದ್ರೆ ಕಾಯಲೇಬೇಕು. ಅಲ್ಲದೇ ಬಿಜೆಪಿ ಪದ್ಧತಿಯಂತೆ 75 ವರ್ಷದ ಬಳಿಕ ಮೋದಿ ಕೆಳಗಿಳಿಯುತ್ತಾರಾ? ಅಧಿಕಾರದಿಂದ ಕೆಳಗೆ ಇಳಿದಿದ್ದೇ ಆದ್ರೆ ಯಾರು ಪ್ರಧಾನಿಯಾಗುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ