newsfirstkannada.com

IPL2023: ಅವ್ರು ಅಲ್ಲ, ಇವ್ರು ಅಲ್ಲ.. ಐಪಿಎಲ್​ ಟೂರ್ನಿಯ ಅಸಲಿ ಕಿಂಗ್​ ಇವರೇ!!

Share :

Published June 1, 2023 at 5:49am

Update September 27, 2023 at 10:37pm

    ಈ ಬಾರಿಯ ಐಪಿಎಲ್​ ಕಿಂಗ್​ ಯಾರು?

    2023ರ ಐಪಿಎಲ್​ನ ಬೆಸ್ಟ್​ ಮ್ಯಾನ್ಸ್​ ಇವರೇ

    ಅಭಿಮಾನಿಗೆ ಮನಗೆದ್ದ​ ಬ್ಯಾಟ್ಸ್​ಮನ್​ ಈತ

ಇಂಡಿಯನ್​ ಪ್ರೀಮಿಯರ್ ಲೀಗ್​. ಇದು ಬ್ಯಾಟ್ಸ್​​ಮನ್​ಗಳ ಗೇಮ್..!  ಈ ಶ್ರೀಮಂತ ಕ್ರಿಕೆಟ್​​ ಲೀಗ್​ನ ಇತಿಹಾಸದಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರದ ಮುಂದೆ ಬೌಲರ್​​ಗಳು ದಂಗಾಗಿದ್ದಾರೆ. ಪ್ರತಿ ಸೀಸನ್​​ನಲ್ಲೂ ಬ್ಯಾಟ್ಸ್​ಮನ್​ಗಳ ವಿಜಯಯಾತ್ರೆಯೇ ನಡೆದಿದೆ. ಈ ಸೀಸನ್​ನಲ್ಲೂ ನಡೆದಿದ್ದು ಅದೇ. ಹಾಗಾದ್ರೆ, ಚುಟುಕು ಕ್ರಿಕೆಟ್​​ ಲೀಗ್​ನ ಬೆಸ್ಟ್​​ ಬ್ಯಾಟ್ಸ್​ಮನ್​ಗಳು ಯಾರು.? ತಿಳಿಯೋಣ.

ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಚಾಂಪಿಯನ್​ ಪಟ್ಟಕ್ಕೇರೋದ್ರೊಂದಿಗೆ ಐಪಿಎಲ್​ ಸೀಸನ್​-16ಕ್ಕೆ ತೆರೆ ಬಿದ್ದಾಗಿದೆ. 53 ದಿನಗಳ ಕಾಲ ನಡೆದ ಈ ಎಂಟರ್​ಟೈನ್​ಮೆಂಟ್​ ಕಾ ಬಾಪ್​ ಐಪಿಎಲ್​ನಲ್ಲಿ, ರನ್​ ಹೊಳೆಯೇ ಹರಿಯಿತು. ಬ್ಯಾಟ್ಸ್​ಮನ್​ಗಳ ಅಬ್ಬರದ ಮುಂದೆ ಬೌಲರ್​ಗಳು ಬೆಚ್ಚಿ ಬಿದ್ರು.. ಮೈದಾನದ ಸುತ್ತಲೂ ಬೌಂಡರಿ, ಸಿಕ್ಸರ್​​ಗಳು ಸಿಡಿದವು.

ಹೊಡಿ ಬಡಿ ಲೀಗ್​ನಲ್ಲಿ ಘರ್ಜಿಸಿದವರೇ ರಾಜರು.!

ಇದೊಂದೇ ಸೀಸನ್​ ಅಲ್ಲ. ಇದಕ್ಕೂ ಹಿಂದಿನ 15 ಸೀಸನ್​ಗಳಲ್ಲೂ ಬೌಲರ್ಸ್​ಗಳ ಮೇಲೆ ಬ್ಯಾಟ್ಸ್​ಮನ್​ಗಳು ಸವಾರಿ ಮಾಡಿದ್ದಾರೆ. ಪ್ರತಿ ಸೀಸನ್​​ನಲ್ಲೂ ಬ್ಯಾಟ್ಸ್​​ಮನ್​ಗಳು ಹೊಡಿಬಡಿ ಲೀಗ್​ ದರ್ಭಾರ್​ ನಡೆಸಿದ್ದಾರೆ. ಈ ಸೀಸನ್​ನಲ್ಲೂ ಯಂಗ್​​ಗನ್​ ಶುಭ್​ಮನ್​ ಗಿಲ್​ ಬೌಲರ್​ಗಳನ್ನ ಬೆಸ್ತು ಬೀಳಿಸಿದ್ರು. ಆದ್ರೆ, ಐಪಿಎಲ್​ ಸಾಮ್ರಾಜ್ಯವನ್ನ ಕಬ್ಜ ಮಾಡುವಲ್ಲಿ ಎಡವಿದ್ರು.

ಐಪಿಎಲ್​ ಸಾಮ್ರಾಜ್ಯಕ್ಕೆ ಕಿಂಗ್​ ಕೊಹ್ಲಿಯೇ ಅಧಿಪತಿ.!

ಐಪಿಎಲ್​ ಅನ್ನೋ ಸಾಮ್ರಾಜ್ಯಕ್ಕೆ ವಿರಾಟ್​ ಕೊಹ್ಲಿಯೇ ಅಧಿಪತಿ ಅನ್ನೋ ಮಾತನ್ನ ಒಪ್ಪಿಕೊಳ್ಳದೇ ಇರೋಕಾಗುತ್ತಾ.? ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್​ಗಳಿಸಿದ ಕೀರ್ತಿ ಕೊಹ್ಲಿಯದ್ದು. ಇದೊಂದೆ ಅಲ್ಲ. ಸೀಸನ್​ವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ಖ್ಯಾತಿಯೂ ಕೊಹ್ಲಿಯದ್ದೇ ಆಗಿದೆ. 2016ರ ಸೀಸನ್​ನಲ್ಲಿ ಆಡಿದ 16 ಪಂದ್ಯಗಳಲ್ಲಿ ಘರ್ಜಿಸಿದ್ದ ವಿರಾಟ್​ ದಾಖಲೆಯ 973 ರನ್​ ಸಿಡಿಸಿದ್ರು. ಆ ದಾಖಲೆಯನ್ನ ಈವರೆಗೂ ಯಾರೂ ಟಚ್​ ಮಾಡೋಕೂ ಆಗಿಲ್ಲ.

ಕಿಂಗ್​ ಕೊಹ್ಲಿಗೆ ಪ್ರಿನ್ಸ್​​ ಶುಭ್​ಮನ್​ ಉತ್ತರಾಧಿಕಾರಿ.!

ಕೊಹ್ಲಿ ಬಿಟ್ರೆ, ಒಂದೇ ಸೀಸನ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಹೆಗ್ಗಳಿಕೆ ಇದೀಗ ಶುಭ್​ಮನ್​ ಗಿಲ್​ ಪಾಲಾಗಿದೆ. ಈ ಸೀಸನ್​ ಐಪಿಎಲ್​ನಲ್ಲಿ ಬೊಂಬಾಟ್​ ಬ್ಯಾಟಿಂಗ್​ ಮಾಡಿದ ಗಿಲ್​, 3 ಸೆಂಚುರಿ ಸಿಡಿಸಿ ಆರ್ಭಟಿಸಿದ್ರು. ಒಂದು ಹಂತದಲ್ಲಿ ಕೊಹ್ಲಿಯ ರೆಕಾರ್ಡ್​​ ಬ್ರೇಕ್​ ಮಾಡೇ ಬಿಡ್ತಾರೆ ಎಂದೇ ಹೇಳಲಾಗ್ತಿತ್ತು. ಆದ್ರೆ, ಗಿಲ್​ ಎಡವಿದ್ರು.. ಹಾಗಿದ್ರೂ, ಆಡಿದ 17 ಪಂದ್ಯಗಳಿಂದ 890 ರನ್​ ಸಿಡಿಸಿದ ಗಿಲ್​, ಐಪಿಎಲ್​ ಸೀಸನ್​ವೊಂದರಲ್ಲಿ ಹೆಚ್ಚು ರನ್​ ಸಿಡಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ರು.

2022ರಲ್ಲಿ ಬೊಂಬಾಟ್​ ಆಟವಾಡಿದ್ದ ಬಟ್ಲರ್​​.!

2022ರ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ನ ಜೋಸ್​​ ಬಟ್ಲರ್​ ಬೊಂಬಾಟ್​ ಆಟವಾಡಿದ್ರು. ಬೌಲರ್​ಗಳ ಮನಬಂದಂತೆ ದಂಡಿಸಿದ್ದ ಬಟ್ಲರ್​, 57.53ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ರು. ಆಡಿದ 17 ಪಂದ್ಯಗಳಲ್ಲೇ 863 ರನ್​ಗಳನ್ನ ಸಿಡಿಸಿ ದಾಖಲೆ ಬರೆದಿದ್ರು. ಆ ಸೀಸನ್​​ನಲ್ಲಿ 4 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಬಟ್ಲರ್​ಗೆ ಸೀಸನ್​ವೊಂದರಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ..!

ಐಪಿಎಲ್​ನ ಡೇರ್​ಡೆವಿಲ್ ಬ್ಯಾಟ್ಸ್​ಮನ್​​ ವಾರ್ನರ್​​​.!  

ಕಳೆದ 2 ಐಪಿಎಲ್​ ಸೀಸನ್​ನಿಂದ ಡೇವಿಡ್​ ವಾರ್ನರ್​ ಕಳೆಗುಂದಿದೆ. ಆದ್ರೆ, ವಾರ್ನರ್​ ಅಸಲಿ ಆಟದ ಖದರ್​ ಐಪಿಎಲ್​ ಇತಿಹಾಸಕ್ಕೆ ತಿಳಿದಿದೆ. 3 ಬಾರಿ ಆರೆಂಜ್​ ಕ್ಯಾಪ್​ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಡೇವಿಡ್​ ವಾರ್ನರ್​ದು. ಅದ್ರಲ್ಲೂ, 2016ರ ಸೀಸನ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ್ದ ಈ ವಾರ್ನರ್​​ 17 ಪಂದ್ಯದಲ್ಲೇ 848 ರನ್​ ಸಿಡಿಸಿದ್ರು.

ಈ ಸೀಸನ್​ನ ಅಂತ್ಯಕ್ಕೆ ಈ ನಾಲ್ವರು ಆಟಗಾರರೇ ಐಪಿಎಲ್​ ಟೂರ್ನಿಯನ್ನ ಲೀಡ್​ ಮಾಡ್ತಿದ್ದಾರೆ. ಆದ್ರೆ, ಇವರೇ ಐಪಿಎಲ್​ನ​ ಪರ್ಮನೆಂಟ್​​ ಕಿಂಗ್​ಗಳಾಗಿ ಇರ್ತಾರೆ ಅಂತಾ ಹೇಳೋಕೆ ಆಗಲ್ಲ. ಇದು ಬ್ಯಾಟ್ಸ್​​ಮನ್​ ಗೇಮ್​.. ಯಾವ ಸೀಸನ್​ನಲ್ಲಿ ಯಾವ ದಾಖಲೆಗಳು ಬೇಕಾದ್ರೂ ಉಡೀಸ್​​ ಆಗ್ಬೋದು…!

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

IPL2023: ಅವ್ರು ಅಲ್ಲ, ಇವ್ರು ಅಲ್ಲ.. ಐಪಿಎಲ್​ ಟೂರ್ನಿಯ ಅಸಲಿ ಕಿಂಗ್​ ಇವರೇ!!

https://newsfirstlive.com/wp-content/uploads/2023/06/IPL2023-1.jpg

Load More