ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್, ಕೆ.ಎಲ್ ರಾಹುಲ್ ಮಧ್ಯೆ ಬಿರುಕು
ಇಬ್ಬರ ಮಧ್ಯೆ ಜಗಳ ತಂದಿಟ್ಟ ಟೀಮ್ ಇಂಡಿಯಾ ಕ್ರಿಕೆಟರ್ ಯಾರು ಗೊತ್ತಾ?
ಸ್ಟಾರ್ ಕ್ರಿಕೆಟರ್ನಿಂದ ಕ್ಯಾಪ್ಟನ್ ರೋಹಿತ್, ಕೆ.ಎಲ್ ರಾಹುಲ್ ಮಧ್ಯೆ ಮುನಿಸು
ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ಸುದ್ದಿ ಒಂದು ವೈರಲ್ ಆಗಿದೆ. ಇಂದು ಕೆ.ಎಲ್ ರಾಹುಲ್ ತನ್ ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿ ಪೋಸ್ಟ್ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದು ಫ್ಯಾನ್ಸ್ ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕೆ.ಎಲ್ ರಾಹುಲ್ ನಿವೃತ್ತಿ ಘೋಷಿಸಿದ ಕುರಿತು ಹಲವು ಸ್ಕ್ರೀನ್ ಶಾಟ್ಗಳು ಹರಿದಾಡುತ್ತಿವೆ. ಎಲ್ಲಾ ಪೋಸ್ಟ್ಗಳನ್ನು ನಿರ್ಲಕ್ಷಿಸಿ. ಕೆ.ಎಲ್ ರಾಹುಲ್ ನಿಜವಾದ ಪೋಸ್ಟ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ರಾಜಕೀಯದ ಬಗ್ಗೆ ಮಾತಾಡಿದ್ದಾರೆ ಎಂದು ಅಭಿಮಾನಿ ಒಬ್ಬ ಬರೆದುಕೊಂಡಿದ್ದಾರೆ.
ವೈರಲ್ ಆದ ಪೋಸ್ಟ್ನಲ್ಲೇನಿದೆ?
ನಾನು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದೇನೆ. ಇದಕ್ಕೆ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ. ನಾನು ಕ್ರಿಕೆಟ್ನಲ್ಲಿ ಮುಂದುವರಿಯಬೇಕು ಎಂದಿದ್ದೇನೆ. ಆದರೆ, ರೋಹಿತ್ ರಾಜಕೀಯಕ್ಕೆ ನನ್ನ ಕರಿಯರ್ ಬಲಿಯಾಗಿದೆ ಎಂದು ರಾಹುಲ್ ಬರೆದುಕೊಂಡಿದ್ದಾರೆ ಎನ್ನಲಾದ ಪೋಸ್ಟ್ ಒಂದು ವೈರಲ್ ಆಗಿದೆ.
ರೋಹಿತ್, ಕೆ.ಎಲ್ ರಾಹುಲ್ ಮಧ್ಯೆ ಬಿರುಕು ಮೂಡಲು ಕಾರಣ ಯಾರು?
ಶ್ರೀಲಂಕಾ ಪ್ರವಾಸ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ರೆಸ್ಟ್ನಲ್ಲಿದ್ದಾರೆ. ಮುಂದಿನ ತಿಂಗಳಿನಿಂದ ಟೆಸ್ಟ್ ಸರಣಿ ಶುರುವಾಗಲಿದ್ದು, ಎಲ್ಲರೂ ಎದುರು ನೋಡುತ್ತಿದ್ದಾರೆ. ಇದರ ಮಧ್ಯೆ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಅನ್ನೋ ಚರ್ಚೆ ಜೋರಾಗಿದೆ. ಅದರಲ್ಲೂ ಸೆಲೆಕ್ಟರ್ಸ್ ಯಾವ ವಿಕೆಟ್ ಕೀಪರ್ಗೆ ಮಣೆ ಹಾಕಬಹುದು ಅನ್ನೋ ಕುತೂಹಲ ಇದೆ. ಟೀಮ್ ಇಂಡಿಯಾದಲ್ಲಿ ಮೂವರು ವಿಕೆಟ್ ಕೀಪರ್ಸ್ ಇದ್ದು, ಎಲ್ಲರೂ ಫಿಟ್ ಆಗಿದ್ದಾರೆ. ಆದರೆ, ಅಪಘಾತದ ಬಳಿಕ ಸಂಪೂರ್ಣ ಚೇತರಿಸಿಕೊಂಡು ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ ಪಂತ್. ಹಾಗಾಗಿ ಇವರೇ ಬಾಂಗ್ಲಾದೇಶದ ವಿರುದ್ಧ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಆಯ್ಕೆಯಾಗಬೇಕಿದ್ದ ಕೆ.ಎಲ್ ರಾಹುಲ್ ಇದು ಶಾಕಿಂಗ್ ಆಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಕೊಹ್ಲಿ ಆಪ್ತ ಕೆ.ಎಲ್ ರಾಹುಲ್ಗೆ ಮೋಸ ಮಾಡಿದ್ದು, ತನಗೆ ಬೇಕಾದ ಪಂತ್ಗೆ ಅವಕಾಶ ನೀಡಿ ಹಠ ಸಾಧಿಸಿದ್ದಾರೆ. ಪಂತ್ನಿಂದಲೇ ರಾಹುಲ್ ಮತ್ತು ರೋಹಿತ್ ಮಧ್ಯೆ ಬಿರುಕು ಬಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೆ.ಎಲ್ ರಾಹುಲ್ ನಿವೃತ್ತಿ ಘೋಷಿಸಲು ರೋಹಿತ್ ಕಾರಣವೇನು? ಮತ್ತೊಂದು ಪೋಸ್ಟ್ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ