ಇದೊಂದು ಅಜ್ಜಿಯ ಕಥೆ, 93 ಆದರೂ ಕೆಲಸದಲ್ಲಿ ನವ ಯುವತಿ
‘ನೀವು ಇವತ್ತಿನ ದಿನ ವ್ಯರ್ಥ ಮಾಡಿದರೆ, ನಾಳೆ ಇರಲ್ಲ’-ಅಜ್ಜಿ
ತಮ್ಮ ಕೆಲಸದ ಬಗ್ಗೆ ಅಜ್ಜಿ ಏನೇನು ಮಾತನಾಡಿದ್ದಾರೆ ಗೊತ್ತಾ..?
ನಿತ್ಯದ ಕೆಲಸ. ಕೆಲಸ ಮುಗಿಸಿ ಮನೆಗೆ ಹೋಗೋಣ, ಯಾರಿಗೆ ಬೇಕು ಈ ಕೆಲಸ ಅಂದುಕೊಂಡಿದ್ರು, ಜೀವನ ಸಾಗಿಸೋಕೆ ಕೆಲಸ ಬಹಳ ಮುಖ್ಯ. ಅದೇ ರೀತಿ ಕೆಲಸ ಮಾಡೋ ಜೊತೆಗೆ ನಿವೃತ್ತಿ ಯಾವಾಗ ಅಂತ ಕನಸು ಇಟ್ಟುಕೊಂಡೇ ಕೆಲಸ ಮಾಡ್ತಾರೆ. ಅದರಲ್ಲೂ 40, 50 ವರ್ಷ ಆದ್ರೇ ಸಾಕು ಸಾಕಪ್ಪ ಸಾಕು, ಈ ಕೆಲಸದ ಸಹವಾಸ ಸಾಕು ಅನ್ನೋರ ನಡುವೆ 93 ವಯಸ್ಸಿನ ಅಜ್ಜಿ ಕೆಲಸದ ಬಗ್ಗೆ ಕೇಳಿದ್ರೇ ನಿಜಕ್ಕೂ ಬಾಯ್ ಮೇಲೆ ಬೆರಳು ಇಟ್ಟುಕೊಳ್ತೀರಾ, ಇದರ ಜೊತೆಗೆ ಸೂಪರ್ ಅಜ್ಜಿ ಅಂತ ಹೇಳೇ ಹೇಳ್ತೀರ.
ಜಪಾನ್ ದೇಶದ ನಿವಾಸಿ ಯಾಸುಕೊ ತಮಕಿ ಎನ್ನುವರು 1930 ಮೇ 15ರಂದು ಜಪಾನ್ನಲ್ಲಿ ಜನಿಸಿದರು. ಯಾಸುಕೊ ತಮಕಿ ಅವರು 1956 ರಿಂದ ಸನ್‌ಕೋ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಫೀಸ್ನಲ್ಲಿರೋ ಸಹೋದ್ಯೋಗಿಗಳಂತೆ ವಾರದಲ್ಲಿ 5 ದಿನಗಳು ಕೆಲಸ ಮಾಡ್ತಾರೆ. ದಿನಕ್ಕೆ 7ವರೆಗೆ ಗಂಟೆಗಳ ಶಿಫ್ಟ್ನಲ್ಲಿ ಚಿರಯುವತಿಯಂತೆ ಕೆಲಸದಲ್ಲಿ ಮಗ್ನರಾಗುತ್ತಾರೆ.
ಇದನ್ನೂ ಓದಿ: 4, 4, 6, 6, 6, 4 SRH ಬ್ಯಾಟ್ಸ್ಮನ್ ಸ್ಫೋಟಕ ಆಟ.. ಸ್ಯಾಮ್ ಕರನ್ ಓವರ್ನಲ್ಲಿ 30 ರನ್ ಚಚ್ಚಿದ ಹೆಡ್
ಈ ವಯಸ್ಸಲ್ಲೂ ಎನರ್ಜಿಯಾಗಿ ಕೆಲಸ ಮಾಡೋ ಬಗ್ಗೆ ಯಾಸುಕೊ ಅವರಿಗೆ ಕೇಳಿದಾಗ ಹೇಳಿದ ಉತ್ತರ ಮಾತ್ರ ಎಂಥವರಿಗೂ ಮತ್ತಷ್ಟೂ ಸ್ಪೂರ್ತಿಯಾಗಿರುತ್ತೆ. ಇವೆಲ್ಲಾ ನಾವು ಪಡೆದುಕೊಳ್ಳೋದರ ಮೇಲೆ ಡಿಪೆಂಡ್ ಆಗಿರುತ್ತೆ. ಮಾಡಬೇಕು, ಕಲೀಬೇಕು ಅನ್ನೋ ಹುಮ್ಮಸ್ಸಿತ್ತು ಅಷ್ಟೇ ನಾನು ಯಾವಾಗಲೂ, ಯಾರಿಗಾದರೂ ಏನಾದ್ರೂ ಸಹಾಯ ಮಾಡೋಕೆ ಈ ಭೂಮಿ ಮೇಲೆ ಹುಟ್ಟಿದ್ದೇನೆ ಅಂತ ತಿಳಿದುಕೊಳ್ತೇನೆ. ಹೀಗಾಗಿ ಈ ಸಂಸ್ಥೆಯ ಛೇರ್ಮೆನ್, ಮ್ಯಾನೇಜರ್ ಹಾಗೂ ಇಲ್ಲಿ ನನ್ನ ಜೊತೆ ಕೆಲಸ ಮಾಡೋ ಸಿಬ್ಬಂದಿಯನ್ನು ಖುಷಿ ಪಡಿಸೋ ಕೆಲಸಗಳನ್ನ ಮಾಡೋದಕ್ಕೆ ಇಷ್ಟ ಪಡುತ್ತೇನೆ. ಇದು ನನ್ನ ಜೀವಮಾನದ ಗುರಿಯಾಗಿ ಉಳಿದಿದೆ ಅಂತ 90 ವಯಸ್ಸಿನ ಅಜ್ಜಿ ಹೇಳುತ್ತಾರೆ.
ಇದನ್ನೂ ಓದಿ: ‘ಮಂಡ್ಯದಲ್ಲಿ ಇಂತಹ ಗಲಾಟೆ ನಡೆದಿರಲಿಲ್ಲ’- ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ
ಅಷ್ಟಕ್ಕೂ ಯಾರು ಯಾಸುಕೊ ತಮಾಕಿ ಅಂತಂದ್ರೆ ಸ್ಕ್ರೂಗಳನ್ನ ತಯಾರ್ ಮಾಡೋ ಕಂಪನಿಯಾದ ಸುನ್ಕೋ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು 60 ವರ್ಷಗಳಿಗೂ ಹೆಚ್ಚಿನ ಕಾಲ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯನ್ನು 1948ರಲ್ಲಿ ಸ್ಥಾಪನೆಯಾಗಿತ್ತು. ಯಾಸುಕೊ ಅವರು ಕಂಪನಿ ಸ್ಟಾರ್ಟ್ ಆದ 8 ವರ್ಷ ನಂತರ ಜಾಬ್ಗೆ ಸೇರಿಕೊಂಡರು. ಆಫೀಸ್ನಲ್ಲಿ ಅಕೌಂಟ್ ಕೆಲಸಗಳನ್ನ ಕೆಲಸಗಳನ್ನ ನಿರ್ವಹಿಸುತ್ತಾರೆ. ಕಂಪನಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಯ ಸ್ಯಾಲರಿ, ಬೋನಸ್ ಮತ್ತು ಟ್ಯಾಕ್ಸ್ ಕಟ್ ವಿಚಾರಗಳ ಬಗ್ಗೆ ಅಕೌಂಟ್ಸ್ ಮಾಡ್ತಾರೆ. ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳಿಗೆ ತಮ್ಮದೇ ಸ್ಟೈಲ್ನಲ್ಲಿ IF YOU WASTE TODAY, THEN THERE IS NO TOMORROW ಅಂತಂದ್ರೆ ‘ನೀವು ಇವತ್ತಿನ ದಿನ ವ್ಯರ್ಥ ಮಾಡಿದರೆ, ನಾಳೆ ಇರಲ್ಲ’ ಅಂತ ಹೇಳ್ತಾರಂತೆ. ಇನ್ನೂ ರಿಟೈರ್ಮೆಂಟ್ ಬಗ್ಗೆ ಕೇಳಿದ್ರೇ 90ರ ವಯಸ್ಸಿನ ಅಜ್ಜಿ ಹೇಳಿದ್ದು ಕೇಳಿದ್ರೇ ನೀವು ಒಮ್ಮೆ ಅಚ್ಚರಿ ಪಡುತ್ತೀರ. ನಿವೃತ್ತಿಗೆ ನನ್ನ ಮನಸ್ಸು ದಾಟಿಲ್ಲ. ಒಂದ್ ಸಾರಿ ಒಂದು ವರ್ಷ ಎಂಡ್ ಆಗುತ್ತೆ.. ಆದಾದ್ಮೇಲೆ ಇನ್ನೊಂದು ವರ್ಷ ಇರುತ್ತೆ. ಹೀಗಾಗಿ ನಾನು ಕೂಡ ಹೀಗೆಯೇ ಕಂಟಿನ್ಯೂ ಆಗೋದಕ್ಕೆ ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.
ವಿಶ್ವದ ಅತ್ಯಂತ ಹಿರಿಯ ಆಫೀಸ್ ಮ್ಯಾನೇಜರ್ ಎಂದು 90 ವರ್ಷವಿದ್ದಾಗ ಯಾಸುಕೊ ತಮಕಿ ಖ್ಯಾತಿಗೆ ಪಾತ್ರರಾಗಿದ್ದರು. ಹೀಗಾಗಿಯೇ ಅವರನ್ನು ಗುರುತಿಸಿ 2021ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.
ಈ ಜಗತ್ತಲ್ಲಿ ಆಗದೇ ಇರೋದು ಏನೂ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದ್ರೂ 2 ಬಾರೀ ಆದ್ರೂ ಕಂಪನಿ ಚೇಂಜ್ ಮಾಡೋರು, ಸ್ಯಾಲರಿಗೋಸ್ಕರ ಗಿಮಿಕ್ ಮಾಡೋರು, ಒಂದಾ ಎರಡಾ ಕಾಯಕವೇ ಕೈಲಾಸ ಅನ್ನೋ ರೀತಿ ಅಜ್ಜಿಯ ಕೆಲಸ. ಮಾತು, ದೃಢ ಮನಸ್ಸು ಮುಖದ ಮೇಲೆ ನಗು. ಸಾವಿರ ನೋವು, ಕಷ್ಟಗಳಿಗೆ ಇದೊಂದೇ ಉತ್ತರ. ಈ ಅಜ್ಜಿ ನೋಡಿ ನಾವು- ನೀವು ತಿಳಿದುಕೊಳ್ಳಬೇಕಿರುವುದು ನಂಥಿಂಗ್ ಈಸ್ ಇಂಪಾಸಿಬಲ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ