ಧೋನಿಗೆ ಬಹಳಷ್ಟು ಹೆಸರು ತಂದಿದ್ದ ಹೆಲಿಕಾಪ್ಟರ್ ಶಾಟ್
ಕ್ರಿಕೆಟ್ಗೆ ಗುಡ್ ಬಾಯ್ ಹೇಳಿದ್ರು ಇದರ ಖ್ಯಾತಿ ಕುಗ್ಗಿಲ್ಲ..!
ಫ್ರೆಂಡ್ ಕಲಿಸಿಕೊಟ್ಟಿದ್ದಕ್ಕೆ ಧೋನಿ ಏನ್ ಕೊಡಿಸಿದ್ರು ಗೊತ್ತಾ?
ಎಂ.ಎಸ್ ಧೋನಿಯ ಬ್ಯಾಟಿಂಗ್ ಅಂದ ಕೂಡಲೇ ಎಲ್ಲರಿಗೂ ಹೆಲಿಕಾಪ್ಟರ್ ಶಾಟ್ ನೆನಪಾಗುತ್ತೆ. ವಿಶ್ವ ಕ್ರಿಕೆಟ್ ಲೋಕಕ್ಕೆ ವಿಭಿನ್ನ ಶಾಟ್ ಅನ್ನ ಪರಿಚಯಿಸಿದ ಮಾಂತ್ರಿಕ ಧೋನಿ. ಧೋನಿ ಈ ಹೆಲಿಕಾಪ್ಟನ್ ಶಾಟ್ ಕಲಿತಿದ್ದೇ ರೋಚಕ. ಅದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಟೀಮ್ ಇಂಡಿಯಾ ಮಾಜಿ ನಾಯಕ ಎಮ್.ಎಸ್ ಧೋನಿ ವಿಶ್ವ ಕ್ರಿಕೆಟ್ ಲೋಕದ ಮಾಂತ್ರಿಕ ಅಂದ್ರೆ ತಪ್ಪಾಗಲ್ಲ. ತನ್ನ ಸರ್ಪ್ರೈಸ್ ಕ್ಯಾಪ್ಟೆನ್ಸಿ, ಮಿಂಚಿನ ಕೀಪಿಂಗ್, ಅತ್ಯದ್ಭುತ ಫಿನಿಷಿಂಗ್ ಸ್ಕಿಲ್ಸ್ನಿಂದ ವಿಶ್ವ ಕ್ರಿಕೆಟ್ ಅಭಿಮಾನಿಗಳನ್ನ ಮಂತ್ರ ಮುಗ್ದಗೊಳಿಸಿದ ಜಾದೂಗಾರ. ಅದರಲ್ಲೂ ಧೋನಿ ಹೆಲಿಕಾಪ್ಟರ್ ಶಾಟ್ಗೆ ಫಿದಾ ಆಗದ ಅಭಿಮಾನಿಗಳೇ ಇಲ್ಲ. ಧೋನಿ ಈ ಶಾಟ್ ಬಾರಿಸಿದ್ರೆ, ಬಾಲ್ ಬೌಂಡರಿ ಗೆರೆಯಾಚೆ ಫಿಕ್ಸ್ ಅನ್ನುವಷ್ಟರ ಮಟ್ಟಿಗೆ ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ.
ವಿಶ್ವ ಕ್ರಿಕೆಟ್ ಲೋಕಕ್ಕೆ ಈ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ ಕೀರ್ತಿ ಧೋನಿಗೆ ಸಲ್ಲುತ್ತೆ. ಆದ್ರೆ, ಧೋನಿಗೆ ಈ ಶಾಟ್ ಕಲಿಸಿದ ಗುರು ಗೆಳೆಯ ಸಂತೋಷ್ ಲಾಲ್. ಈ ಶಾಟ್ ಸಂತೋಷ್ ಲಾಲ್ ಇಟ್ಟಿದ್ದ ಹೆಸರು ಥಪ್ಪಡ್ ಶಾಟ್ ಅಂತಾ. ಕ್ರಿಕೆಟ್ ಕರಿಯರ್ನ ಆರಂಭಿಕ ದಿನಗಳಲ್ಲಿ ಸಂತೋಷ್ ಈ ಶಾಟ್ ಅನ್ನ ಹೆಚ್ಚಾಗಿ ಬಾರಿಸ್ತಾ ಇದ್ರಂತೆ.. ಇದರಿಂದ ಇಂಪ್ರೆಸ್ ಆದ ಧೋನಿ ನನಗೂ ಈ ಶಾಟ್ ಕಲಿಸಿಕೊಡಿ ಎಂದು ಸಂತೋಷ್ ಬಳಿ ಕೇಳಿಕೊಂಡಿದ್ರಂತೆ.
ಆಗ ಷರತ್ತು ವಿಧಿಸಿದ್ದ ಸಂತೋಷ್, ಸಮೋಸ ಕೊಡಿಸಬೇಕು ಎಂದು ಬೇಡಿಕೆ ಇಟ್ಟು, ಧೋನಿಗೆ ಗುರುವಾಗಿ ಪಾಠ ಮಾಡಿದ್ರಂತೆ. ಸಂತೋಷ್ ಲಾಲ್ ಪಾಠ, ಸತತ ಅಭ್ಯಾಸದಿಂದ ಸ್ಕಿಲ್ಫುಲ್ ಶಾಟ್ ಕಲಿತ ಧೋನಿ, ಇದನ್ನ ಜಗತ್ತಿಗೆ ಪರಿಚಯಿಸಿದ್ರು. ಧೋನಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಗುಡ್ ಬೈ ಹೇಳಿ ವರ್ಷಗಳೇ ಕಳೆದ್ರೂ ಈ ಶಾಟ್ನ ಖ್ಯಾತಿ ಕುಂದಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ