newsfirstkannada.com

ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್ ಹತ್ಯೆ ಕೇಸ್​ಗೆ ಟ್ವಿಸ್ಟ್​​.. ಕೆನಡಾ, ಭಾರತ ಸಂಬಂಧ ಹದಗೆಟ್ಟಿದ್ದು ಹೇಗೆ?

Share :

20-09-2023

  ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡುತ್ತಿದ್ದ ನಿಜ್ಜರ್‌ ಮೇಲೆ ಕೇಸ್​​

  2010ರಲ್ಲಿ ಪಾಟಿಯಾಲದಲ್ಲಿ ನಡೆದ ಬಾಂಬ್ ಬ್ಲಾಸ್ಟ್‌ ಪ್ರಕರಣಕ್ಕೆ ಟ್ವಿಸ್ಟ್​

  ಭಾರತದ ರಾಜತಾಂತ್ರಿಕ ಅಧಿಕಾರಿಯನ್ನ ಕೆನಡಾದಿಂದ ಉಚ್ಚಾಟನೆ

ಭಾರತ ಮತ್ತು ಕೆನಡಾದ ಸಂಬಂಧ ಮತ್ತಷ್ಟು ಹಳಸಿಬಿಟ್ಟಿದೆ. ಖಾಲಿಸ್ತಾನಿ ಉಗ್ರನ ಹತ್ಯೆಗೆ ಸಂಬಂಧಪಟ್ಟಂತೆ ಕಠಿಣ ಕ್ರಮ ಕೈಗೊಂಡಿರೋ ಕೆನಡಾ, ಭಾರತದ ರಾಜತಾಂತ್ರಿಕ ಅಧಿಕಾರಿಯನ್ನ ಉಚ್ಟಾಟಿಸಿದೆ. ಕೆನಡಾದ ಪ್ರಧಾನಿ ಕೂಡ ಆ ಹತ್ಯೆಯ ಹಿಂದೆ ಭಾರತವಿದೆ ಅಂತಾ ಹೇಳಿಕೆ ಕೊಟ್ಟು ಬಿಟ್ಟಿದ್ದಾರೆ. ಹರ್ದಿಪ್‌ ಸಿಂಗ್ ನಿಜ್ಜರ್‌ ಹತ್ಯೆ ನಡೆದು ನಾಲ್ಕು ತಿಂಗಳು ಕಳೆಯಿತು. ಆತನ ಹತ್ಯೆಯ ನಂತರ ಈಗ ಗಂಭೀರವಾದ ಬೆಳವಣಿಗೆಗಳು ನಡೆಯುತ್ತಿವೆ. ಮೊದಲೇ ಹಳಸಿದ್ದ ಭಾರತ ಮತ್ತು ಕೆನಡಾ ಸಂಬಂಧ ಈಗ ಮತ್ತಷ್ಟು ಜಟಿಲವಾಗಿದೆ.

ಖಾಲಿಸ್ತಾನಿ ಭಯೋತ್ಪಾದಕನ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರುಗಳ ಕೈವಾಡವಿದೆ ಎಂಬುದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷ್ಯಗಳಿವೆ ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಸೋಮವಾರ ಸಂಸತ್ ಅಧಿವೇಶದಲ್ಲಿ ತಿಳಿಸಿದ್ದರು. ಇದಾದ ಬಳಿಕ ಮಹತ್ವದ ಬೆಳವಣಿಗೆ ನಡೆದಿದ್ದು, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ಹರ್ದಿಪ್ ಸಿಂಗ್ ನಿಜ್ಜರ್‌ ಹತ್ಯೆಯ ಬಗ್ಗೆ ಕೆನಡಾ ಸರ್ಕಾರ ಕಠಿಣ ನಿಲುವು ತಾಳಿದೆ. ಭಾರತದ ರಾಜತಾಂತ್ರಿಕ ಅಧಿಕಾರಿಯನ್ನ ಕೆನಡಾದಿಂದ ಉಚ್ಚಾಟನೆ ಮಾಡಲಾಗಿದೆ ಅಂತಾ ಹೇಳಿದರು. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ ಅಂದ್ರೆ ರಾ ಮುಖ್ಯಸ್ಥ ಪವನ್ ಕುಮಾರ್ ರೈ ಉಚ್ಚಾಟನೆಗೊಂಡ ಅಧಿಕಾರಿ ಎಂದು ಕೆನಡಾದ ಸುದ್ದಿಸಂಸ್ಥೆ ಸಿಬಿಸಿ ನ್ಯೂಸ್ ವರದಿ ಮಾಡಿದೆ. ರಾಜತಾಂತ್ರಿಕ ಅಧಿಕಾರಿಯನ್ನ ಉಚ್ಚಾಟನೆ ಮಾಡಿದ ಬಳಿಕ ಭಾರತ ತೀಕ್ಷಣವಾಗಿ ಪ್ರತಿಕ್ರಿಯಿಸಿದೆ.

ಭಾರತ ಮತ್ತು ಕೆನಡಾ ಸಂಬಂಧವನ್ನ ಮತ್ತಷ್ಟು ಹಳಸಿದ ಈ ಪ್ರಕರಣ ಸದ್ಯ ಸಾಕಷ್ಟು ಸುದ್ದಿಯಾಗ್ತಿದೆ. 1997ರಲ್ಲಿ ನಿಜ್ಜರ್‌ ಫೇಕ್ ಪಾರ್ಸ್‌ಪೋರ್ಟ್ ಬಳಸಿ, ಕೆನಡಾಗೆ ಹೋಗ್ತಾನೆ. ನಿರಾಶ್ರಿತರ ಎಂದು ಕ್ಲೈಮ್ ಮಾಡಿಕೊಂಡರು ಆತನಿಗೆ ಕೆನಡಾ ಪೌರತ್ವ ಸಿಗೋದಿಲ್ಲ. ಕೊನೆಗೆ ಆತ ಮದ್ವೆಯಾದ ಪತ್ನಿಯಿಂದ ಅಪ್ಲೈ ಮಾಡಿದ್ರೂ ಪ್ರಯೋಜನವಾಗೋದಿಲ್ಲ. ಕೊನೆಯಲ್ಲಿ ಜಸ್ಟಿನ್ ಟ್ರುಡೋ ರೆಫರ್ ಮಾಡಿ ಕೆನಡಾ ಪೌರತ್ವ ಸಿಕ್ಕಿತು ಎಂದು ಗ್ಲೋಬಲ್ ವರದಿ ಮಾಡಿದೆ. 2020ರಲ್ಲಿ ಭಾರತ, ನಿಜ್ಜಾರ್‌ನ ಮೋಸ್ಟ್ ವಾಂಟೆಡ್‌ ಟೆರರಿಸ್ಟ್‌ಗಳ ಪಟ್ಟಿಗೆ ಸೇರಿಸುತ್ತೆ. ಅಷ್ಟಕ್ಕೂ ನಿಜ್ಜಾರ್‌ನ ಈ ಪಟ್ಟಿಗೆ ಸೇರಿಸಲು ಕಾರಣ ಏನಂದ್ರೆ, ಈತ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಕೊಂಡಿದ್ದ. ಜನರನ್ನ ಕರೆತಂದು ಅವರಿಗೆ ತರಬೇತಿ ನೀಡುವ ಕೆಲ್ಸ ಆತ ಮಾಡುತ್ತಿದ್ದ. ಸಿಖ್ಖರಿಗಾಗಿ ನ್ಯಾಯ ಅಂದ್ರೆ ಎಸ್‌ಎಫ್‌ಜೆ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಯಾವಾಗ ನಿಜ್ಜರ್‌ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡನೋ, ಭಾರತ ಕೆನಡಾಗೆ ಈ ಬಗ್ಗೆ ಮಾಹಿತಿ ನೀಡುತ್ತಾ ಬಂದಿತು.

2018ರಲ್ಲಿ ಪಂಜಾಬ್‌ನ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕೆನಡಾದ ಪ್ರಧಾನಿಗೆ ನೀಡಿದ್ದ ಭಯೋತ್ಪಾದಕರ ಲಿಸ್ಟ್‌ನಲ್ಲಿ ಈತನ ಹೆಸರು ಕೂಡ ಇತ್ತು. ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಾ ಹೋದ ಸಂದರ್ಭದಲ್ಲಿ, ಪಂಜಾಬ್‌ ಪೊಲೀಸರು ನಿಜ್ಜಾರ್‌ನ ಒಪ್ಪಿಸಿ ಎಂದು ಕೆನಡಾ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹಲವು ಕೇಸ್‌ಗಳಲ್ಲಿ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ನಿಜ್ಜರ್‌, 2007ರಲ್ಲಿ ಲುಧಿಯಾನದಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಘಟನೆಯ ಪ್ರಮುಖ ಆರೋಪಿಯಾಗಿದ್ದ. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟು, 42 ಜನರು ಗಾಯಗೊಂಡಿದ್ದರು. 2010ರಲ್ಲಿ ಪಾಟಿಯಾಲದಲ್ಲಿ ನಡೆದ ಬಾಂಬ್ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಲಿಸ್ತಾನಿ ಭಯೋತ್ಪಾದಕರ ಮೇಲೆ ಪಂಜಾಬ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬ್ರಿಟನ್‌ ಮೂಲದ ಪರಮಜಿತ್‌ ಸಿಂಗ್‌ ಪಮ್ಮಾ ಈ ಕೇಸ್‌ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.

2015ರಲ್ಲಿ ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡ್ತಿದ್ದ ಆರೋಪದ ಮೇಲೆ ನಿಜ್ಜರ್‌ ಮೇಲೆ ಇನ್ನೊಂದ್ ಕೇಸ್ ದಾಖಲಾಗಿತ್ತು. ಲುಕ್ ಔಟ್ ನೋಟಿಸ್‌, ರೆಡ್‌ಕಾರ್ನರ್‌ ನೋಟಿಸ್‌ ಕೂಡ ಈತನ ವಿರುದ್ಧ ಜಾರಿಯಾಗಿತ್ತು. 2018ರಲ್ಲಿ ಆರ್‌ಎಸ್‌ಎಸ್‌ ನಾಯಕನ ಮರ್ಡರ್‌ಗೆ ಸಂಬಂಧಪಟ್ಟಂತೆ, ಎನ್‌ಐಎ ನಿಜ್ಜರ್‌ ಭಾಗವಹಿಸುವಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. 2022ರಲ್ಲಿ ಎನ್‌ಐಎ, ನಿಜ್ಜಾರ್‌ನ ಹುಡುಕಿಕೊಟ್ಟವರಿಗೆ, 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಅಷ್ಟಕ್ಕೂ ಸಿಖ್ಖರಿಗೂ ಕೆನಡಾಗೋ ಏನು ಸಂಬಂಧ? ಅಲ್ಲಿ ನೆಲೆಸಿರೋ ಹಲವರು ಭಾರತದ ವಿರುದ್ಧ ಷಡ್ಯಂತ್ರ ಏಕೆ ಮಾಡುತ್ತಿದ್ದಾರೆ ಅನ್ನೋದನ್ನ ತಿಳಿದುಕೊಂಡರಷ್ಟೇ ಈ ಪ್ರಕರಣ ಅರ್ಥವಾಗೋದು.

ಅಷ್ಟಕ್ಕೂ ಸಿಖ್‌ ದಂಗೆಯ ನಂತರ ಖಲಿಸ್ಥಾನ ಹೋರಾಟಕ್ಕೆ ದೊಡ್ಡ ಮಟ್ಟದ ಗತಿ ಸಿಗುತ್ತೆ. ಇದಾದ ಬಳಿಕ ಸಾವಿರಾರು ಸಿಖ್ಖರು ಕೆನಡಾ ಸೇರಿಕೊಂಡರು. ಅಲ್ಲಿಂದ ಭಾರತ ಮತ್ತು ಕೆನಡಾ ಸಂಬಂಧವನ್ನು ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟವು ನೆರಳಿನಂತೆ ಹಿಂಬಾಲಿಸುತ್ತಿದೆ. ಇತ್ತೀಚೆಗೆ ನಡೆದ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ಎಲ್ಲಾ ದೇಶಗಳ ಅಧ್ಯಕ್ಷರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆದ್ರೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರೊಂದಿಗೆ ಕೆಲವೇ ನಿಮಿಷಗಳ ಕಾಲ ಮಾತ್ರ ಸಭೆ ನಡೆಸಿದ್ದರು.

ಕೆನಡಾದಲ್ಲಿ 13ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಅಲ್ಲಿ ಜನಸಂಖ್ಯೆ ಶೇ.4ರಷ್ಟು. ಭಾರತ ಬಿಟ್ಟರೆ ಸಿಖ್ಖರು ಹೆಚ್ಚಿರೋದು ಅಲ್ಲಿಯೇ. ಈ ಕಾರಣಕ್ಕಾಗಿಯೇ ಸಿಖ್ಖರು ಕೆನಡಾದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಜಸ್ಟಿನ ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಬೆಂಬಲ ನೀಡಿರುವುದು, ಖಲಿಸ್ಥಾನ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಜಗಮಿತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ. ಕೆನಡಾದಲ್ಲಿ ಖಲಿಸ್ಥಾನ ಪರ ಹೋರಾಟವೂ ಹೆಚ್ಚು ತೀವ್ರತೆ ಪಡೆದುಕೊಂಡಿದೆ. ಱಲಿ, ಪ್ರತಿಭಟನೆಗಳು ಹೆಚ್ಚಾಗುತ್ತಿವೆ.

ಈ ಎಲ್ಲಾ ಚಟುವಟಿಕೆಗಳನ್ನ ನಿಯಂತ್ರಣಕ್ಕೆ ತರುವಂತೆ ಭಾರತವು ಕೆನಡಾವನ್ನು ಒತ್ತಾಯಿಸುತ್ತಲೇ ಬಂದಿದೆ. ಆದ್ರೆ, ಕೆನಡಾ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕತಾವಾದಿಯನ್ನ ನಿಯಂತ್ರಣ ಮಾಡುತ್ತಿಲ್ಲ. ಯಾವ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿಲ್ಲ ಅಂತಾ ಕೆನಡಾ ವಾದಿಸುತ್ತಲೇ ಬಂದಿದೆ. ಪರೋಕ್ಷವಾಗಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡ್ತಿರೋದನ್ನ ಭಾರತ ಖಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಹರ್ದಿಪ್‌ ಸಿಂಗ್ ನಿಜ್ಜರ್‌ ಹತ್ಯೆ ಮಹತ್ವ ಪಡೆದುಕೊಂಡಿರೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್ ಹತ್ಯೆ ಕೇಸ್​ಗೆ ಟ್ವಿಸ್ಟ್​​.. ಕೆನಡಾ, ಭಾರತ ಸಂಬಂಧ ಹದಗೆಟ್ಟಿದ್ದು ಹೇಗೆ?

https://newsfirstlive.com/wp-content/uploads/2023/09/death-80.jpg

Load More