/newsfirstlive-kannada/media/post_attachments/wp-content/uploads/2024/06/MAHARASTRA-1.jpg)
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಅಘಾಡಿ ಧೂಳೀಪಟವಾಗಿದ್ದು ಶಿವಸೇನೆ, ಬಿಜೆಪಿ, ಅಜಿತ್ ಪವಾರ್ ತ್ರಿಬಲ್ ರೈಡಿಂಗ್ ಸರ್ಕಾರ ರಚನೆಗೆ ಕಸರತ್ತು ನಡೆದಿದೆ. ಇದೆಲ್ಲದರ ಮಧ್ಯೆ ಮಹಾರಾಷ್ಟ್ರ ಸಿಎಂ ಯಾರಾಗ್ತಾರೆ ಅನ್ನೋದೇ ಬಹು ದೊಡ್ಡ ಕೌತುಕವಾಗಿದೆ. ಇತ್ತ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ಸಿಎಂ ಪಟ್ಟಕ್ಕೇರೋದು ಫಿಕ್ಸ್ ಆಗಿದ್ದು, ಮುಹೂರ್ತ ನಿಗದಿಯಾಗಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಒಗ್ಗಟ್ಟಿಗೆ ಮತ್ತೊಮ್ಮೆ ಅದೃಷ್ಟ ಒಲಿದು ಬಂದಿದೆ. ಮ್ಯಾಜಿಕ್ ನಂಬರ್ ದಾಟಿ ದಾಖಲೆಯ ಗೆಲುವು ಪಡೆದ ಮಹಾಯುತಿ ಮೈತ್ರಿ ನೂತನ ಸರ್ಕಾರ ರಚನೆಯ ಕಸರತ್ತು ನಡೆಸ್ತಿದೆ. ‘ತ್ರಿ’ ಶಕ್ತಿಯ ಬಲ ಹೊಂದಿರುವ ಮಹಾಯುತಿ ಸರ್ಕಾರದ ‘ಮಹಾ’ ರಾಜ ಯಾರು ಅನ್ನೋದು ಕುತೂಹಲ ಮೂಡಿಸಿದೆ.
‘ಮಹಾ’ ಸಿಎಂ ಪಟ್ಟ ಶಿಂಧೆಗಾ, ಫಡ್ನವೀಸ್​ಗಾ, ಪವಾರ್​ಗಾ?
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂಧೆ ಬಣ (ಶಿವಸೇನೆ), ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಬಣಗಳ ಮಹಾಯುತಿ ಮೈತ್ರಿಕೂಟ ಬಂಪರ್ ಬಹುಮತ ಪಡೆದಿವೆ. ಭರ್ಜರಿ ಗೆಲುವಿನೊಂದಿಗೆ ನೂತನ ಸರ್ಕಾರ ರಚನೆಗೆ ಕಸರತ್ತು ಜೋರಾಗಿದೆ. ಬಿಜೆಪಿ 132 ಸ್ಥಾನಗಳನ್ನು ಗೆದ್ದಿದ್ದು ಶಿವಸೇನೆ 54 ಸ್ಥಾನಗಳನ್ನು ಗೆದ್ರೆ ಅಜಿತ್ ಪವಾರ್ ಎನ್​ಸಿಪಿ 43 ಸ್ಥಾನಗಳನ್ನು ಗೆದ್ದು ಬೀಗಿದೆ. ಸದ್ಯ ಶಾಸಕಾಂಗ ಪಕ್ಷದ ನಾಯಕನ ರಚನೆ ಕಸರತ್ತು ನಡೆಯುತ್ತಿದ್ದು ಸಿಎಂ ಯಾರು ಅನ್ನೋದು ಫೈನಲ್ ಆಗಬೇಕಿದೆ.
ಯಾರಿಗೆ ‘ಮಹಾ’ ಸಿಎಂ ಪಟ್ಟ?
- ಇವತ್ತಿಗೆ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಅಂತ್ಯವಾಗಲಿದೆ
- ನಾಳೆಯೊಳಗೆ 15ನೇ ‘ಮಹಾ’ ವಿಧಾನಸಭೆ ರಚನೆಯಾಗಬೇಕು
- ಈ ಮಧ್ಯೆ ಸಿಎಂ ಯಾರಾಗಬೇಕು ಎಂಬ ಚರ್ಚೆಯೂ ನಡೀತಿದೆ
- 132 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ
- ದೇವೇಂದ್ರ ಫಡ್ನವೀಸ್ ಸಿಎಂ ಆಗಬೇಕು ಎಂಬ ಚರ್ಚೆ ಶುರು
- ದೇವೇಂದ್ರ ಫಡ್ನವೀಸ್‌ಗೆ ಅಜಿತ್ ಪವಾರ್ ಬಣದಿಂದ ಬೆಂಬಲ
- 57 ಸ್ಥಾನಗಳಲ್ಲಿ ಗೆದ್ದಿರೋ ಶಿಂಧೆ ಮತ್ತೆ ಸಿಎಂ ಪಟ್ಟದ್ಮೇಲೆ ಕಣ್ಣು
- ಏಕ್‌ನಾಥ್ ಶಿಂಧೆಯೇ ಸಿಎಂ ಎನ್ನುತ್ತಿರೋ ಶಿವಸೇನೆ ನಾಯಕರು
- ಇದೆಲ್ಲದರ ಮಧ್ಯೆ ಸಿಎಂ ಯಾರಾಗ್ತಾರೆ ಅನ್ನೋದೆ ಬಿಗ್ ಸಸ್ಪೆನ್ಸ್
ಈ ಬಾರಿ ಚುನಾವಣೆಯಲ್ಲಿ ಎನ್‌ಸಿಪಿ ಅಜಿತ್ ಪವಾರ್ ಬಣ 41 ಸೀಟ್‌ಗಳನ್ನ ಗೆದ್ದಿದೆ. ಇದೀಗ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಜಿತ್ ಪವಾರ್‌ರನ್ನ ಆಯ್ಕೆ ಮಾಡಲಾಗಿದೆ. ಆದ್ರೂ ದೇವೇಂದ್ರ ಫಡ್ನವೀಸ್‌ಗೆ ಎನ್‌ಸಿಪಿಯ ಬೆಂಬಲವಿದೆ ಎಂಬ ದಾಟಿಯಲ್ಲಿ ಕೆಲ ನಾಯಕರು ಮಾತನಾಡಿದ್ದಾರೆ. ಹೀಗಾಗಿ ಫಡ್ನವೀಸ್ ಸಿಎಂ ಆಗುವ ಸಾಧ್ಯತೆ ದಟ್ಟವಾಗಿದೆ. ಆದ್ರೂ ಅಧಿಕೃತ ತೀರ್ಮಾನದ ತನಕ ಕಾಯಬೇಕಿದೆ.
ನ.28ಕ್ಕೆ ಹೇಮಂತ್ ಸೊರೆನ್ ಪ್ರಮಾಣವಚನ
ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟ ಜಯಭೇರಿ ಬಾರಿಸಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ 54 ಸ್ಥಾನಗಳನ್ನ ಗೆದ್ದು ಅಧಿಕಾರದ ಪಟ್ಟಕ್ಕೇರಿದೆ. ಇದೀಗ ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಮರು ಆಯ್ಕೆಯಾಗಿದ್ದಾರೆ. ನವೆಂಬರ್ 28ಕ್ಕೆ ಹೇಮಂತ್ ಸೊರೆನ್ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ನಾಲ್ಕನೇ ಬಾರಿಗೆ ಜೆಎಂಎಂ ನಾಯಕ ಹೇಮಂತ್ ಸೊರೆನ್ ಮುಖ್ಯಮಂತ್ರಿ ಪಟ್ಟಕ್ಕೇರಲಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಒಟ್ಟಾರೆ ಜಾರ್ಖಂಡ್‌ನಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಅಂತಿಮ ಹಂತದಲ್ಲಿದೆ. ಕಾಂಗ್ರೆಸ್ ನಾಯಕರೊಂದಿಗೆ ಹೇಮಂತ್ ಸೊರೆನ್ ಚರ್ಚೆ ನಡೆಸಿದ್ದಾರೆ. ಅದೇನೆ ಇರಲಿ, ಫಲಿತಾಂಶ ಬರುವ ಮುನ್ನವೇ ಸಿಎಂ ಪಟ್ಟಕ್ಕಾಗಿ ಜಟಾಪಟಿ ನಡೆದಿತ್ತು. ಇದೀಗ ತ್ರಿಮೂರ್ತಿಗಳ ಸರ್ಕಾರದಲ್ಲಿ ಯಾರಿಗೆ ಮುಖ್ಯಮಂತ್ರಿ ಗಾದಿ ಒಲಿಯುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮಕಾಡೆ ಮಲಗಿದ ಅಘಾಡಿ.. ಯಾರಾಗ್ತಾರೆ ಮುಂದಿನ ಸಿಎಂ? NDA ಗೆಲುವು ಮೋದಿಗೂ ಬೂಸ್ಟರ್ ಡೋಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us