newsfirstkannada.com

ಸ್ಪೀಕರ್ ಆದವರಿಗೆಲ್ಲಾ ಸೋಲಿನ ಭಯ.. ಸಭಾಧ್ಯಕ್ಷರಾಗಲು ಹಿಂದೇಟು ಹಾಕ್ತಿರೋದಕ್ಕೆ ಕಾರಣ ಇಲ್ಲಿದೆ

Share :

21-05-2023

  ವಿಧಾನಸಭಾಧ್ಯಕ್ಷರಾಗಲು ಹಿರಿಯ ಶಾಸಕರು ಹಿಂದೇಟು

  2008ರಿಂದ ಈವರೆಗೆ ಸ್ಪೀಕರ್​​ ಹುದ್ದೆ ಮೇಲೆ ಕೂತವರ ಸೋಲು

  2018-23ರಲ್ಲಿ ಸ್ಪೀಕರ್​​​ ಆಗಿದ್ದ ರಮೇಶ್​​ಕುಮಾರ್​​, ಕಾಗೇರಿ

ಶಾಸಕಾಂಗದ ಸಂಪೂರ್ಣ ಜವಾಬ್ದಾರಿ. ಕಲಾಪಗಳ ಸುಗಮ ನಿರ್ವಹಣೆ. ಶಾಸನ ರಚಿಸುವ ಅತ್ಯುನ್ನತ ಸ್ಥಾನ. 224 ಶಾಸಕರ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಹುದ್ದೆ. ಆದ್ರೆ, ಈ ಉನ್ನತ ಹುದ್ದೆ ಅಲಂಕರಿಸಲು ಈ ಬಾರಿ ಹಲವು ಹಿರಿಯ ಶಾಸಕರು ಹಿಂದೇಟು ಹಾಕಿದ್ದಾರೆ. ಏನ್​​ ರೀಸನ್​​ ಅನ್ನೋದು ತುಂಬಾ ಇಂಟ್ರಸ್ಟಿಂಗ್​​ ಆಗಿದೆ.

ಸ್ಪೀಕರ್​​.. ಶಾಸಕಾಂಗದ ಒಡೆಯ.. ಶಾಸಕರ ಪಾಲಿನ ನ್ಯಾಯದಾತ.. ಶಾಸನಸಭೆಯಲ್ಲಿ ನ್ಯಾಯಾಧೀಶನಂತೆ ಕಾಣುವ ವಿಧಾನಸಭಾ ಅಧ್ಯಕ್ಷ ಗಾದಿ, ಸಾಂವಿಧಾನಿಕವಾಗಿ ಬಲಿಷ್ಠ ಹುದ್ದೆ.. ಆದ್ರೆ, ವಿಧಾನಸಭಾ ಅಧ್ಯಕ್ಷರಾಗಲು ಹಲವು ಹಿರಿಯ ಶಾಸಕರು ಈ ಹಿಂದಿನಂತೆ ಈ ಬಾರಿಯೂ ಹಿಂದೇಟು ಹಾಕ್ತಿದ್ದಾರೆ.. ಈ ಸಾಂವಿಧಾನಿಕವಾದ ದೊಡ್ಡ ಹುದ್ದೆ ಬೇಡ ಅಂತಿರೋದ್ಯಾಕೆ ಅನ್ನೋದೆ ಕುತೂಹಲ.

ಸ್ಪೀಕರ್​ ಹುದ್ದೆ, ಸೋಲು ರಾಜಕೀಯ ನೇಪತ್ಯದ ಭೀತಿ
ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.. ಡೆಲ್ಲಿ ಅಂಗಳದಲ್ಲಿ ಹೊತ್ತಿದ ಕಿಡಿ, ರಾಜಧಾನಿ ಬೆಂಗಳೂರಿನಲ್ಲಿ ಧಗಧಗಿಸ್ತಿದ್ದು, ಸಂಪುಟ ಸೇರಲು ಕಿತ್ತಾಟ ನಡೀತಿದೆ.. ಆದ್ರೆ, ವಿಧಾನಸಭೆ ಸ್ಪೀಕರ್ ಹುದ್ದೆಗೇರಲು ಯಾರೂ ತಯಾರಿಲ್ಲ ಅನ್ನೋದು ಅಚ್ಚರಿ ವಿಚಾರ.. ಈ ಚರ್ಚೆಗೆ ಕಾರಣ ವಿಧಾನ ಸಭಾಧ್ಯಕ್ಷರ​​ ಚೇರ್​​​ ಮೇಲಿರುವ ಸೋಲಿನ ಇತಿಹಾಸ. ಈ ಬಾರಿ ಕಾಂಗ್ರೆಸ್‌ನ ಐವರು ನಾಯಕರು ಸ್ಪೀಕರ್ ಹುದ್ದೆ ನನಗೆ ಬೇಡ, ನನಗೆ ಬೇಡ ಎನ್ನುತ್ತಿದ್ದಾರೆ.

ನನಗೆ ಸ್ಪೀಕರ್​ ಬೇಡ!

 • ತಮಗೆ ಸಚಿವ ಸ್ಥಾನವೇ ಬೇಕೆಂದ ಆರ್.ವಿ. ದೇಶಪಾಂಡೆ
 • ಮಾಜಿ ಸಚಿವ ಟಿ.ಬಿ. ಜಯಚಂದ್ರ ಕೂಡ ಹುದ್ದೆಗೆ ಹಿಂದೇಟು
 • ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಬೇಡವಾದ ಹುದ್ದೆ
 • ಹುದ್ದೆ ಅಲಂಕರಿಸಲ್ಲ ಅಂತಿರುವ ಶಾಸಕ ಬಿ.ಆರ್ ಪಾಟೀಲ್
 • ಆಫರ್​​ ಹೋದ್ರು ಆಸಕ್ತಿ ತೋರದ ಎನ್.ವೈ ಗೋಪಾಲಕೃಷ್ಣ

ತಮಗೆ ಸಚಿವ ಸ್ಥಾನವೇ ಬೇಕು ಎಂದು ಹಿರಿಯ ಮುಖಂಡರಾದ ಆರ್.ವಿ.ದೇಶಪಾಂಡೆ ಪಟ್ಟು ಹಿಡಿದಿದ್ದರು. ಶಿರಾದಿಂದ ಮರಳಿ ಗೆದ್ದು ಬಂದ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಗದಗದ ಹಿರಿಯ ನಾಯಕ ಹೆಚ್.ಕೆ ಪಾಟೀಲ್, ಆಳಂದ ಶಾಸಕ ಬಿ.ಆರ್ ಪಾಟೀಲ್ ಕೂಡ ಹುದ್ದೆ ಅಲಂಕರಿಸಲು ಹಿಂದೇಟು ಹಾಕ್ತಿದ್ದಾರೆ.. ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣಗೂ ಸ್ಪೀಕರ್​​​ ಹುದ್ದೆ ಆಫರ್​​ ಹೋಗಿದ್ದು ಅಷ್ಟಾಗಿ ಆಸಕ್ತಿ ತೋರಿಲ್ಲ ಎನ್ನಲಾಗ್ತಿದೆ. ಸಿಎಂ ಸಿದ್ದರಾಮಯ್ಯ ಮನವೊಲಿಸಿ ಹಂಗಾಮಿ ಸ್ಪೀಕರ್ ಆಗಿ ಆರ್.ವಿ ದೇಶಪಾಂಡೆ ಅವರನ್ನೇ ನೇಮಕ ಮಾಡಿದ್ದಾರೆ.

ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇವೆ, ಆದರೆ ಅದೊಂದು ಸ್ಥಾನ ಮಾತ್ರ ಬೇಡ. ನಮಗೆ ಸಚಿವಗಿರಿ ಕೊಡಿ. ಇಲ್ಲಾ ಅಂದರೆ ಶಾಸಕರಾಗಿಯೇ ಇರುತ್ತೇವೆ. ಸ್ಪೀಕರ್ ಸ್ಥಾನ ಮಾತ್ರ ನಮಗೆ ಬೇಡ ಅಂತ ಸಾರಾಸಗಟಾಗಿ ತಿರಸ್ಕರಿಸ್ತಿದ್ದಾರೆ.. ಸ್ಪೀಕರ್ ಸ್ಥಾನ ಸ್ವೀಕರಿಸಲು ಶಾಸಕರು ಹಿಂದೇಟು ಹಾಕಲು ಕಾರಣ 2004ರಿಂದ ಶುರುವಾದ ಅದೊಂದು ಪರಂಪರೆ, ಆರೋಪ ಈ ಆತಂಕಕ್ಕೆ ಕಾರಣ ತಂದೊಡ್ಡಿದೆ.. ಅಷ್ಟಕ್ಕೂ ಆ ಸೋಲಿನ ಸರಪಳಿಯ ಇತಿಹಾಸ ಏನು ಅನ್ನೋದು ಕುತೂಹಲ.. 2004ರಿಂದಲೂ ಸ್ಪೀಕರ್ ಆದವರು ಬಳಿಕ ನಡೆದ ಚುನಾವಣೆಯಲ್ಲಿ ಸೋಲು ಕಾಣ್ತಿದ್ದಾರೆ..

2004 ರಿಂದ ಅಂಟಿದ ಶಾಪ?

 • 2004 ರಿಂದ ಸ್ಪೀಕರ್ ಆದವರು ಬಳಿಕ ಎಲೆಕ್ಷನ್​​​ನಲ್ಲಿ ಸೋಲು
 • 2004 – ಸ್ಪೀಕರ್​​​ ಆಗಿದ್ದ ಕೆ.ಆರ್ ಪೇಟೆ ಕೃಷ್ಣ 2008ರಲ್ಲಿ ಸೋಲು
 • 2013 – ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ 2018ಕ್ಕೆ ಪರಾಭವ
 • 2017 – ಸ್ಪೀಕರ್ ಆಗಿದ್ದ ಕೆಬಿ ಕೋಳಿವಾಡ 2018ರಲ್ಲಿ ಪರಾಜಯ
 • 2019 – ಬೈಎಲೆಕ್ಷನ್​​​ನಲ್ಲೂ ಕೆ.ಬಿ ಕೋಳಿವಾಡ ಸೋಲಿಗೆ ಶರಣು
 • 2018 – ಸ್ಪೀಕರ್​ ಆಗಿದ್ದ ರಮೇಶ್​ಕುಮಾರ್​ 2023ರಲ್ಲಿ ಸೋಲು
 • 2019 – ಭದ್ರಕೋಟೆ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಶಾಕ್​​​

ಕೆ.ಆರ್ ಪೇಟೆ ಕೃಷ್ಣ 2008ರಲ್ಲಿ ಸೋಲುಂಡಿದ್ದಾರೆ. 2013ರಲ್ಲಿ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ 2018ರಲ್ಲಿ ಸೋತಿದ್ದಾರೆ.. ಕಾಗೋಡು ಸಚಿವರಾದ ಬಳಿಕ 2017ರಲ್ಲಿ ಸ್ಪೀಕರ್ ಆದ ಕೋಳಿವಾಡ ಕೂಡ 2018ರಲ್ಲಿ ಪರಾಭವ ಆದ್ರು.. ಅಷ್ಟೇ ಅಲ್ಲ, ಬಳಿಕ ನಡೆದ ಬೈಎಲೆಕ್ಷನ್​​​ನಲ್ಲೂ ಸೋಲಿಗೆ ಶರಣಾದ್ರು.. 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್​ಕುಮಾರ್​ ಸೋತಿದ್ದಾರೆ.. ಬಿಜೆಪಿ ಭದ್ರಕೋಟೆ ಶಿರಸಿಯಲ್ಲಿ ಸತತವಾಗಿ ಗೆದ್ದು ದಾಖಲೆ ಬರೆದ ವಿಶ್ವೇಶ್ವರ ಹೆಗಡೆ ಕಾಗೇರಿ 2019ರಲ್ಲಿ ಸ್ಪೀಕರ್ ಆಗಿದ್ದವರು.. ಅಂಥ ಗಟ್ಟಿ ನೆಲದಲ್ಲೇ ಕಾಗೇರಿ ಸೋಲನ್ನಪ್ಪಿದ್ದಾರೆ..

ಆದ್ರೆ, ಇದಕ್ಕೆ ಅಪವಾದಗಳು ಇವೆ.. ಸ್ಪೀಕರ್​ ಆಗಿದ್ದ ಕೆ.ಜಿ ಬೋಪಯ್ಯ, ಜಗದೀಶ್​​ ಶೆಟ್ಟರ್​​​ 2013ರಲ್ಲಿ ಮರಳಿ ವಿಧಾನಸಭೆ ಪ್ರವೇಶಿಸಿ ಪರಂಪರೆಯ ವಿರುದ್ಧ ಈಜಿ ಗೆದ್ದು ದಡ ಸೇರಿದ್ದರು. ಏನೇ ಇರಲಿ ನಮಗೆ ಸಚಿವ ಸ್ಥಾನವೇ ಬೇಕು, ಸ್ಪೀಕರ್ ಸ್ಥಾನ ಬೇಡ ಅಂತ ಹಿರಿಯರು ಪಟ್ಟು ಹಿಡಿದಿದ್ದಾರೆ. ಈ ಇತಿಹಾಸ ಇಷ್ಟಕ್ಕೆ ನಿಲ್ಲಲ್ಲ, 2023ರ ಫಲಿತಾಂಶ ಇನ್ನೊಂದು ಶಾಕ್​ ಕೂಡ ಕೊಟ್ಟಿದೆ.

2023ರಲ್ಲಿ ಸ್ಪೀಕರ್​​ ಆದವರಿಗೆ ಶಾಕ್‌!

 • 2008ರಿಂದ ಈವರೆಗೆ ಸ್ಪೀಕರ್​​ ಹುದ್ದೆ ಮೇಲೆ ಕೂತವರ ಸೋಲು
 • ಸ್ಪೀಕರ್​​​ ಚೇರ್​​​ ಮೇಲೆ ಕೂತಿದ್ದ ಎಲ್ಲರೂ 2023ರಲ್ಲಿ ಪರಾಜಯ
 • 2008ರಲ್ಲಿ ಸ್ಪೀಕರ್​​​ ಶೆಟ್ಟರ್​​, 2009ರಲ್ಲಿ ಸ್ಪೀಕರ್​​ ಬೋಪಯ್ಯ
 • 2023ರ ಎಲೆಕ್ಷನ್​​​ನಲ್ಲಿ ಶೆಟ್ಟರ್​​​​, ಕೆ.ಜಿ ಬೋಪಯ್ಯ ಪರಾಭವ
 • 2013-18ರ ಅವಧಿಯಲ್ಲಿ ಸ್ಪೀಕರ್​​​​ ಕಾಗೋಡು & ಕೋಳಿವಾಡ
 • 2018ರಲ್ಲಿ ಕಾಗೋಡು, ಕೋಳಿವಾಡ ಸೋತು ಈಗ ನೇಪತ್ಯಕ್ಕೆ
 • 2018-23ರಲ್ಲಿ ಸ್ಪೀಕರ್​​​ ಆಗಿದ್ದ ರಮೇಶ್​​ಕುಮಾರ್​​, ಕಾಗೇರಿ
 • 2023ರ ಚುನಾವಣೆಯಲ್ಲಿ ಇಬ್ಬರೂ ನಾಯಕರಿಗೂ ಸೋಲು
 • ಡೆಪ್ಯೂಟಿ ಸ್ಪೀಕರ್​​ ಆನಂದ ಮಾಮನಿ ಅಕಾಲಿಕ ಮರಣ
 • ಸ್ಪೀಕರ್​ ಅನುಪಸ್ಥಿತಿಯಲ್ಲಿ ಚೇರ್​ ಮೇಲೆ ಕುಳಿತವರಿಗೆ ಶಾಕ್​​
 • ಮಾಲೀಕಯ್ಯ ಗುತ್ತೇದಾರ್​, ಎನ್​​ಹೆಚ್​​ ಶಿವಶಂಕರ್​ ರೆಡ್ಡಿ
 • ಜೆ.ಕೆ ಕೃಷ್ಣಾರೆಡ್ಡಿ, ಕುಮಾರ ಬಂಗಾರಪ್ಪ, ಪಿ.ರಾಜೀವ್​​​ಗೆ ಶಾಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೀಕರ್ ಆದವರಿಗೆಲ್ಲಾ ಸೋಲಿನ ಭಯ.. ಸಭಾಧ್ಯಕ್ಷರಾಗಲು ಹಿಂದೇಟು ಹಾಕ್ತಿರೋದಕ್ಕೆ ಕಾರಣ ಇಲ್ಲಿದೆ

https://newsfirstlive.com/wp-content/uploads/2023/05/Speaker.jpg

Load More