ಸಿಎಂ ಅರವಿಂದ್ ಕೇಜ್ರಿವಾಲ್ ಸ್ಥಾನವನ್ನು ತುಂಬಲಿದ್ದಾರೆ ಅತಿಶಿ ಮೆರ್ಲೇನಾ
ಅತಿಶಿ ಸಿಎಂ ಸ್ಥಾನವೇರಲು ಒಮ್ಮತದ ಒಪ್ಪಿಗೆ ನೀಡಿದ ಆಪ್ ಪಕ್ಷದ ಶಾಸಕರು
ಸುಷ್ಮಾ, ಶೀಲಾ ದೀಕ್ಷಿತ್ ಬಳಿಕ 3ನೇ ಮಹಿಳಾ ಸಿಎಂ ಆಗಿ ಅತಿಶಿ ರಾಜ್ಯಭಾರ
ನವದೆಹಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಈಗ ವೇದಿಕೆ ಸಿದ್ಧವಾಗಿದೆ. ಅಬಕಾರಿ ಹಗರಣದ ಆರೋಪದಲ್ಲಿ ತಿಂಗಳಾನುಟ್ಟಲೇ ಜೈಲುವಾಸ ಅನುಭವಿಸಿ ಬಂದ ಅರವಿಂದ್ ಕೇಜ್ರಿವಾಲ್ ನೂರೆಂಟು ತಂತ್ರಗಳನ್ನು ಹೆಣೆದು, ಹಲವಾರು ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಈಗ ಸಿಎಂ ಕುರ್ಚಿಯಿಂದ ಕೆಳಗಿಳಿಯಲು ಸಜ್ಜಾಗಿದ್ದಾರೆ. ಕೇಜ್ರಿವಾಲ್ ರಾಜೀನಾಮೆ ಸುದ್ದಿಯ ಹಿಂದೆ ತೂರಿ ಬಂದ ಪ್ರಶ್ನೆಯೆಂದರೆ ಅದು ಕೇಜ್ರಿವಾಲ್ ಜಾಗಕ್ಕೆ ಯಾರು ಬಂದು ಕುಳಿತುಕೊಳ್ಳಲಿದ್ದಾರೆ ಅನ್ನೋದು. ಈಗ ಅದಕ್ಕೂ ಕೂಡ ಉತ್ತರ ಸಿಕ್ಕಿದೆ. ಅತಿಶಿ ಮರ್ಲೇನಾ ಮುಂದಿನ ಸಿಎಂ ಎಂದು ಆಪ್ ಪಕ್ಷದ ಎಲ್ಲಾ ಶಾಸಕರು ಒಮ್ಮತ ಅಭಿಪ್ರಾಯದೊಂದಿಗೆ ಆಯ್ಕೆ ಮಾಡಿದ್ದಾರೆ
ದೆಹಲಿಗೆ 3ನೇ ಮಹಿಳಾ ಸಿಎಂ ಅತಿಶಿ ಮರ್ಲೇನಾ!
ಈ ಹಿಂದೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಅತಿಶಿ ಮರ್ಲೇನಾ ಒಬ್ಬರೇ ಮಹಿಳಾ ಮಂತ್ರಿಯಾಗಿದ್ದರು. ಈಗ ಅವರನ್ನೇ ಸಿಎಂ ಸ್ಥಾನಕ್ಕೆ ತಂದು ಕೂರಿಸಲು ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡದ ದಿನದಿಂದಲೂ ಹಲವು ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿ ಬಂದಿದ್ದವು. ಅತಿಶಿ ಜೊತೆ ಜೊತೆಗೆ ಗೋಪಾಲ್ ರೈ, ಕೈಲಾಶ್ ಗೆಹ್ಲೊಟ್, ಸೌರಭ್ ಭಾರದ್ವಾಜ್ ಹಾಗೂ ಸುನೀತಾ ಕೇಜ್ರಿವಾಲ್ ಹೆಸರು ಮುನ್ನೆಲೆಯಲ್ಲಿದ್ದವು. ಕೊನೆಗೆ ಅವಕಾಶ ಗಿಟ್ಟಿಸಿಕೊಂಡಿದ್ದು ಅತಿಶಿ ಮೆರ್ಲೇನಾ.
ಇದನ್ನೂ ಓದಿ: ದಿನಕ್ಕೆ ಮೂರುವರೆ ಗಂಟೆ ನಿದ್ದೆ, ಸಂಜೆ 6 ಗಂಟೆಯ ಮೇಲೆ ಊಟವಿಲ್ಲ, ಹೇಗಿದೆ ಪ್ರಧಾನಿ ಮೋದಿ ಜೀವನ ಶೈಲಿ?
ಕಳೆದ ಮಾರ್ಚ್ 21 ರಂದು ಅಬಕಾರಿ ನೀತಿ ಹಗರಣದ ಆರೋಪದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದರು. ಅವರಿಗಿಂತಲೂ ಮೊದಲು ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೂಡ ಜೈಲಿನಲ್ಲಿದ್ದರು. ಈ ವೇಳೆ ಪಕ್ಷವನ್ನು ಮುನ್ನಡೆಸುವ ಗಟ್ಟಿ ಕೈಗಳು ಇಲ್ಲದಂತಾಗಿತ್ತು. ಆ ವೇಳೆಯೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು. ಸಿಸೊಡಿಯಾ ಹಾಗೂ ಕೇಜ್ರಿವಾಲ್ ಬಂಧನದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಗಟ್ಟಿಯಾಗಿ ಧ್ವನಿಯೆತ್ತಿದ್ದು ಅತಿಶಿ.
ಅದರ ಜೊತೆಗೆ ಲೋಕಸಭಾ ಚುನಾವಣೆಯನ್ನು ಸೌರಭ ಭಾರದ್ವಾಜ್ ಜೊತೆ ಸೇರಿಕೊಂಡು ಸಮರ್ಥವಾಗಿ ಎದುರಿಸಿದ್ದು ಕೂಡ ಇದೇ ಅತಿಶಿ. ಈ ವೇಳೆ ಆಪ್ ಪಾಳಯದಲ್ಲಿ ಅತ್ಯಂತ ಪ್ರಮುಖ ನಾಯಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಹರಿಯಾಣ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಈ ವೇಳೆ ಅವರು ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ಸೇರಿದ್ದು ಇವೆಲ್ಲವೂ ಅತಿಶಿಯವರ ನಾಯಕತ್ವದ ಗುಣವನ್ನ ಆಚೆ ತಂದಿದ್ದವು
ಇದನ್ನೂ ಓದಿ;ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ; ಆಮೇಲೆ ಆಗಿದ್ದೇನು?
ಇಂದು ಸಂಜೆ 4.30ಕ್ಕೆ ಅರವಿಂದ್ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೆನಾ ಅವರನ್ನು ಭೇಟಿ ಮಾಡಿ ಅವರ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ. ಇದಾದ ಬಳಿಕ ಅತಿಶಿ ಪದಗ್ರಹಣದ ದಿನಾಂಕವು ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೆಹಲಿ ಸರ್ಕಾರದಲ್ಲಿ ಹಣಕಾಸು, ಶಿಕ್ಷಣ ಹಾಗೂ ಲೋಕೋಪಯೋಗಿ ಸಚಿವಾಲಯವನ್ನು ಸಮರ್ಥವಾಗಿ ನಿರ್ವಹಿಸಿರುವ ಅತಿಶಿ ಸಿಎಂ ಸ್ಥಾನವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸುವ ಭರವಸೆಯಲ್ಲಿ ಆಪ್ ಸರ್ಕಾರವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ