newsfirstkannada.com

Virat Kohli: ನಂಬಿಕೆ ಇಲ್ಲ ಎಂದಿದ್ದ ಕೊಹ್ಲಿ ದೇವರ ಮೊರೆ ಹೋಗಿದ್ದೇಕೆ? ವಿರಾಟ್​ ಇಂಥಾ ಬದಲಾವಣೆಗೆ ಕಾರಣ ಯಾರು?

Share :

14-11-2023

    ವಿರಾಟ್​ ಪಾಲಿಗೆ ಆ ಮೂರು ವರ್ಷ ಕರಾಳ ಅಧ್ಯಾಯ!

    ವೃತ್ತಿ ಜೀವನದಲ್ಲಿ ಕೆಟ್ಟ ದಿನಗಳನ್ನ ಎಣಿಸಿದ್ದ ಕೊಹ್ಲಿ!

    ಸಕ್ಸಸ್​​​ನಿಂದ ತೇಲಾಡ್ತಿದ್ದ ಕೊಹ್ಲಿ ಪಾಠ ಕಲಿತಿದ್ದೇಗೆ..?

ವಿರಾಟ್ ಕೊಹ್ಲಿ. ಆಧುನಿಕ ಕ್ರಿಕೆಟ್​ ಜಗತ್ತಿನ ರಿಯಲ್ ಬ್ಯಾಟಿಂಗ್ ಕಿಂಗ್. ಇವತ್ತು ಕೊಹ್ಲಿ ವಿಶ್ವ ಕ್ರಿಕೆಟ್​ನ GREATEST ಬ್ಯಾಟ್ಸ್​​ಮನ್ ಆಗಿರುವ ಹಿಂದೆ ಟ್ಯಾಲೆಂಟ್, ಹಾರ್ಡ್ ವರ್ಕ್​ ಇದೆ. ಇದರ ಜೊತೆಗೆ ದೇವರ ಅನುಗ್ರಹವೂ ಇದೆ. ಆರಂಭದಲ್ಲಿ ದೇವರು ಅಂದ್ರೆ ದೂರ ಅಂತಿದ್ದ ಕೊಹ್ಲಿ, ಆ ಬಳಿಕ ಬದಲಾಗಿದ್ದು ಹೇಗೆ.? ಬದಲಾವಣೆಯೇ ಸಕ್ಸಸ್​ ಹಿಂದಿನ ಸೀಕ್ರೆಟ್​ ಆಯ್ತಾ.? ಇಲ್ಲಿದೆ ಮಾಹಿತಿ.

ನಾನು ಪೂಜೆ ಮಾಡುವನ ರೀತಿ ಕಾಣ್ತೀನಾ..? ನನಗೆ ಆಶ್ಚರ್ಯವಾಗ್ತಿದೆ. ನಿಜವಾಗಿಯೂ ಹೆಚ್ಚು ಮಂದಿ ತಪ್ಪು ತಿಳಿದುಕೊಂಡಿದ್ದೀರಿ. ನನ್ನಲ್ಲಿ ಟ್ಯಾಟೋಗಳಿವೆ. ಸ್ಟ್ರೈಲಿಶ್ ಬಟ್ಟೆಗಳನ್ನ ಧರಿಸುತ್ತೇನೆ. ನೆಗೆಟಿವ್ ವಿಚಾರಗಳನ್ನು ಹರಡುವುದು ಸುಲಭ. ಆದರೆ ನಾನು ಅದೇನು ಮಾಡಲ್ಲ. ಓರ್ವ ಕ್ರಿಕೆಟರ್​ ಆಗಿ ಪ್ರತಿನಿತ್ಯ ಸ್ಕಿಲ್ಸ್​ ಮೇಲೆ ವರ್ಕೌಟ್ ಮಾಡದೆ ಬೆಳವಣಿಗೆ ಅಸಾಧ್ಯ.

ವಿರಾಟ್​ ಕೊಹ್ಲಿ, ಕ್ರಿಕೆಟಿಗ

ಇದು ಆರಂಭಿಕ ದಿನಗಳಲ್ಲಿ ವಿರಾಟ್​ ಕೊಹ್ಲಿಯೇ ಹೇಳಿದ್ದ ಮಾತುಗಳು. ಸಕ್ಸಸ್​ ಎಂಬ ಅಲೆಯಲ್ಲಿ ತೇಲಾಡುತ್ತಿದ್ದ ವಿರಾಟ್, ಅಂದು ದೇವರನ್ನ ಅಷ್ಟಾಗಿ ನಂಬುತ್ತಿರಲಿಲ್ಲ. ಸ್ವಪ್ರಯತ್ನವೇ ಸಕ್ಸಸ್​ ಸಿಕ್ರೇಟ್​ ಎಂದೆಲ್ಲ ಹೇಳ್ತಿದ್ರು. ತಾಯಿ ಜೊತೆ ಒಮ್ಮೆ ಗುರುದ್ವಾರಕ್ಕೆ ಹೋಗಿದ್ದು ಬಿಟ್ರೆ, ಬಹಿರಂಗವಾಗಿ ದೇವಸ್ಥಾನಕ್ಕೆ, ಮಠ ಮಾನ್ಯಗಳಿಗೆ ತೆರಳಿದ್ದು ತೀರಾ ಕಡಿಮೆ. ಆದ್ರೆ, ಈಗ ಕಥೆಯೇ ಬೇರೆ.

ಈ ಅವಧಿಯಲ್ಲಿ ವಿರಾಟ್​ ಕಲಿತಿದ್ದು ಬದುಕಿನ ಪಾಠ..!

2019ರ ನವೆಂಬರ್​ನಿಂದ ಹಿಡಿದು 2022ರ ಏಷ್ಯಾಕಪ್​ವರೆಗಿನ ಕಾಲ. ಕೊಹ್ಲಿ ಪಾಲಿನ ಕರಾಳ ದಿನಗಳು. ಕಿಂಗ್​ ಮುಟ್ಟಿದ್ದೆಲ್ಲಾ ಚಿನ್ನ ಅಂತಿದ್ದ ದಿನಗಳು ದೂರವಾಗಿ ಟೀಕೆಗಳು, ಹತಾಶೆ, ನೋವು, ಅವಮಾನಗಳು ಕೊಹ್ಲಿ ಎಂಬ ಸಾಮ್ರಾಟನ ಆವರಿಸಿಕೊಂಡಿದ್ವು. ಎಷ್ಟೇ ಕಷ್ಟ ಪಟ್ರೂ, ಹಾರ್ಡ್​ವರ್ಕ್​ ಮಾಡಿದ್ರೂ, ಫಾರ್ಮ್​ ಅನ್ನೋದು ಮರೀಚಿಕೆಯಾಗಿತ್ತು. ನಾನು ಯಾರನ್ನಾದರು ಗೆಲ್ಲಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲಾಡಿದ್ದ ವಿರಾಟ್, ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ಹೋಗಿದ್ದೆ ಆಧ್ಯಾತ್ಮದತ್ತ.

ರವಿ ಶಾಸ್ತ್ರಿ

‘ಆಂತರಿಕ ಅಹಂಕಾರವನ್ನ ಸಮಾಧಿ ಮಾಡಬೇಕು’

ನೀವು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರೆ. ಯಾವುದೇ ಬೌಲರ್​​ ಅಥವಾ ಪರಿಸ್ಥಿತಿಯಲ್ಲಿ ಪ್ರಾಬಲ್ಯ ಸಾಧಿಸಬಹುದು ಎಂದು ಭಾವಿಸುತ್ತೀರಿ. ಆದರೆ, ಅದು ಯಾವಾಗಲೂ ಸರಿಯಲ್ಲ. ಇಂಥಹ ಸನ್ನಿವೇಶದಲ್ಲಿ ನಿಮ್ಮ ಆಂತರಿಕ ಅಹಂಕಾರವನ್ನ ಸಮಾಧಿ ಮಾಡಬೇಕು. ಇದನ್ನೇ ವಿರಾಟ್ ಕೊಹ್ಲಿ ಮಾಡಿದರು. ಮತ್ತೆ ವಿರಾಟ್ ಹಿಂತಿರುಗಿ ನೋಡಲಿಲ್ಲ.

ರವಿ ಶಾಸ್ತ್ರಿ, ಮಾಜಿ ಕೋಚ್

ದೇವರ ಅನುಗ್ರಹ, ಹಳೇ ಖದರ್​ಗೆ ಮರಳಿದ ಕೊಹ್ಲಿ!

ಅಂದು ಟೀಕೆಗಳಿಂದ ನೊಂದು ಬೆಂದಿದ್ದ ವಿರಾಟ್​​ ಕೊಹ್ಲಿ, ಯಾವಾಗ ದೇವರ ಮೇಲೆ ಭಾರ ಹಾಕಿದ್ರೋ ಆಗಲೇ ಎಲ್ಲಾ ಬದಲಾಗಿ ಬಿಡ್ತು ನೋಡಿ. ಬ್ಯಾಡ್​ ಲಕ್​ನ ಸುಳಿಗೆ ಸಿಲುಕಿದ್ದ ಕೊಹ್ಲಿ, ಫಿನಿಕ್ಸ್​ನಂತೇ ಎದ್ದು ಬಂದ್ರು. 3 ವರ್ಷಗಳಿಂದ ಕಾಡಿದ ಶತಕದ ಬರಕ್ಕೆ ಏಷ್ಯಾಕಪ್​ನಲ್ಲೇ ಬ್ರೇಕ್​ ಹಾಕಿದ್ರು. ಕಠಿಣ ಅಭ್ಯಾಸ, ಛಲದ ಹೋರಾಟವನ್ನೂ ನಡೆಸಿದ್ರು.. ದೇವರನ್ನೇ ನಂಬದ ವಿರಾಟ್, ಸಕ್ಸಸ್​ಗೆ ದೇವರ ಲೇಪನ ಹಚ್ಚಿದರು. ನಂದೇನಿದೆ. ಎಲ್ಲವೂ ಆ ಭಗವಾನ್​ ದಯೆ ಎಂದೇ ಉಚ್ಚರಿಸಿದರು.

ನೀವು ಇಷ್ಟು ಸಮಯದಿಂದ ಆಡ್ತೀರಾ. ಪ್ರಾಮಾಣಿಕವಾಗಿ ಆಡ್ತೀರಾ. ಆದರೆ ಕೊಡುವವನು ಮೇಲಿದ್ದಾನೆ. ಇದಕ್ಕಿಂತ ಹೆಚ್ಚು ನಾನು ಏನು ಹೇಳಲಾರೆ. ನೀವು ಕೈ ಮುಗಿದು ಎಷ್ಟೇ ಬೇಡಿಕೊಂಡ್ರು, ಅವನಿಗೆ ಯಾವಾಗ ಕೊಡ್ಬೇಕು ಅನ್ಸುತ್ತೋ ಅವಾಗ್ಲೇ ಕೊಡ್ತಾನೆ. ಯಾರೂ ಏನೂ ಮಾಡೋಕೆ ಆಗಲ್ಲ.

ವಿರಾಟ್​ ಕೊಹ್ಲಿ, ಕ್ರಿಕೆಟಿಗ

ಕೊಹ್ಲಿ ನಡೆದಿದ್ದೇ ದಾರಿ.. ವಿಶ್ವಕಪ್​ನಲ್ಲೂ ದರ್ಬಾರ್!

ವಿರಾಟ್​ ಆಧ್ಯಾತ್ಮದತ್ತ ಚಿತ್ತ ನೆಟ್ಟಿದ್ದೆ ತಡ, ಸಂಪೂರ್ಣ ವಿರಾಟ್​ ಬದಲಾದರು. ಮತ್ತೆ ಗತ ವೈಭವದ ಬ್ಯಾಟಿಂಗ್​ನಿಂದ ಗಮನ ಸೆಳೆದ ವಿರಾಟ್, ಶತಕ ಸರದಾರ ಎನಿಸಿಕೊಂಡರು. ಮತ್ತೆ ವಿಶ್ವ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿಯ ದರ್ಬಾರ್ ಶುರುವಾಯ್ತು. ಪ್ರಸಕ್ತ ವಿಶ್ವಕಪ್​ನಲ್ಲೂ ಬ್ಯಾಟ್​ ಝಳಪಿಸಿದ ವಿರಾಟ್, ರನ್​ ಶಿಖರವನ್ನೇ ಕಟ್ತಿದ್ದಾರೆ. ಟಾಪ್ ಸ್ಕೋರರ್ ಆಗಿ ಮಿಂಚುತ್ತಿರುವ ವಿರಾಟ್, ವಿಶ್ವಕಪ್ ಗೆಲ್ಲಿಸಿಕೊಡುವತ್ತಾ ಹೆಜ್ಜೆ ಹಾಕಿದ್ದಾರೆ.

ದೇವರು ಆಶೀರ್ವಾದದಿಂದ ವಿರಾಟ್ ಕೊಹ್ಲಿ​​ ಕಮ್​ಬ್ಯಾಕ್​ ಮಾಡಿದ್ರಾ ಇಲ್ವಾ.? ಅನ್ನೋದು ಗೊತ್ತಿಲ್ಲ. ಆದ್ರೆ, ಇದರಿಂದ ಕೊಹ್ಲಿ ಮಾನಸಿಕವಾಗಿ ಬಲಿಷ್ಠವಾಗಿರೋದಂತೂ ಸತ್ಯ. ಆಶೀರ್ವಾದವೋ..? ಕಠಿಣ ಪರಿಶ್ರಮದ ಫಲವೋ..? ಕೊಹ್ಲಿ ಸದ್ಯ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಇದೇ ಫಾರ್ಮ್​ ಮುಂದುವರೆದು ವಿಶ್ವಕಪ್​ ಗೆಲ್ಲಿಸಿಕೊಡಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli: ನಂಬಿಕೆ ಇಲ್ಲ ಎಂದಿದ್ದ ಕೊಹ್ಲಿ ದೇವರ ಮೊರೆ ಹೋಗಿದ್ದೇಕೆ? ವಿರಾಟ್​ ಇಂಥಾ ಬದಲಾವಣೆಗೆ ಕಾರಣ ಯಾರು?

https://newsfirstlive.com/wp-content/uploads/2023/10/Kohli-Century_1.jpg

Load More