ಮಾಹಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಇಲ್ಲಿದೆ
ಮಹೇಂದ್ರ ಸಿಂಗ್ ಧೋನಿ ಅಂದು ದೇವರಿಕೆ ಹರಕೆ ಕಟ್ಟಿಕೊಂಡಿದ್ರಾ?
ರಾಂಚಿಯ ಮಾಹಿ ತಿರುಪತಿ ತಿಮ್ಮಪ್ಪನ ಪರಮ ಭಕ್ತನೇ? ಸಖತ್ತಿದೆ ಈ ಸ್ಟೋರಿ
2011ರ ವಿಶ್ವಕಪ್ ಗೆದ್ದ ರಾತ್ರಿಯೇ ಧೋನಿ ಹೆರ್ಕಟ್ ಮಾಡಿಸಿದ್ದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇಂದಿಗೂ ಹಲವರಿಗೆ ಉತ್ತರ ಗೊತ್ತಿಲ್ಲ. ಅವತ್ತಿನ ರಾತ್ರಿ ನಡೆದಿದ್ದೇನು ಅನ್ನೋದರ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.
2011ರ ಏಕದಿನ ವಿಶ್ವಕಪ್ ಗೆಲುವು ಭಾರತೀಯರ ಪಾಲಿಗೆ ಅವಿಸ್ಮರಣೀಯ ಕ್ಷಣ. 28 ವರ್ಷಗಳ ಬಳಿಕ ವಿಶ್ವ ಕೀರಿಟಕ್ಕೆ ಮುತ್ತಿಟ್ಟ ಆ ಕ್ಷಣವನ್ನ ಮರೆಯಲು ಸಾಧ್ಯವೇ ಇಲ್ಲ. ಆ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಧೋನಿ ಹೆಡ್ ಶೇವ್ ಮಾಡಿಸಿಕೊಂಡು ಕೊಟ್ಟ ಸರ್ಪ್ರೈಸ್ ಶಾಕ್, ಇಂದಿಗೂ ಹಲವರಿಗೆ ಅರ್ಥವೇ ಆಗಿಲ್ಲ.
ಧೋನಿ ಕೊಟ್ಟ ಸರ್ಪ್ರೈಸ್ ಶಾಕ್
ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಿದ್ದು ಏಪ್ರಿಲ್ 2 ತಡರಾತ್ರಿ. ಆಟಗಾರರು ಹೋಟೆಲ್ಗೆ ತೆರಳಿ ಅಲ್ಲಿ ಸಂಭ್ರಮಾರಣೆ ಮುಗಿಸಿ ಮಲಗುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತಂತೆ. ಬೆಳಗ್ಗೆ ಎದ್ದಾಗ ಆಟಗಾರರಿಗೆಲ್ಲಾ ಧೋನಿ ಸರ್ಪ್ರೈಸ್ ಶಾಕ್ ಕೊಟ್ಟಿದ್ರು. ರಾತ್ರಿ ಮಲಗುವಾಗ ಇದ್ದ ಧೋನಿ ತಲೆ ಕೂದಲು ಬೆಳಗಾಗುವಷ್ಟರಲ್ಲಿ ಮಾಯವಾಗಿತ್ತು. ಇದನ್ನ ಕಂಡ ಅಭಿಮಾನಿಗಳೂ ಕೂಡ ಬೆರಗಾಗಿದ್ರು. ಇದ್ರ ಹಿಂದಿನ ಕಾರಣ ಧೋನಿಯ ದೈವಭಕ್ತಿ.
ತಿರುಪತಿ ತಿಮ್ಮಪ್ಪನ ಭಕ್ತ
ವಿಶ್ವಕಪ್ಗೂ ಮುನ್ನ ತಾವು ತುಂಬಾ ನಂಬ್ತಿದ್ದ ರಾಂಚಿಯ ದೇವರಲ್ಲಿ ಧೋನಿ ಮುಡಿಕೊಡುವ ಹರಕೆ ಮಾಡಿಕೊಂಡಿದ್ರು. ಹೀಗಾಗಿ, ವಿಶ್ವಕಪ್ ಗೆದ್ದ ದಿನ ರಾತ್ರಿ, ಧೋನಿ ತಾವು ಹರಕೆ ಮಾಡಿಕೊಂಡಿದ್ದ ದೇವಸ್ಥಾನದ ಪೂಜಾರಿಗಳು ತಿಳಿಸಿದಂತೆ, ರಾತ್ರಿ 2.45ರಿಂದ 3ಗಂಟೆಯ ಅವಧಿಯಲ್ಲಿ ಮುಡಿ ತೆಗೆಸಿಕೊಂಡಿದ್ರು. ಇಷ್ಟೇ ಅಲ್ಲದೆ, ಆ ಕೂದಲನ್ನ ಧೋನಿ, ತಿರುಮಲ ತಿರುಪತಿಗೆ ಕೂದಲು ಕಳುಹಿಸಿಕೊಟ್ಟಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ