newsfirstkannada.com

ರಾಹುಲ್​ ದ್ರಾವಿಡ್​ ಕ್ರಿಕೆಟ್​ ಆಡಿರೋದು ಒಂದು ದೇಶದ ಪರ ಅಲ್ಲ, 2 ರಾಷ್ಟ್ರದ ಪರವಾಗಿ.. ಇನ್ನೊಂದು ದೇಶ ಯಾವುದು?

Share :

20-06-2023

  ಟೀಮ್​ ಇಂಡಿಯಾ ಬಿಟ್ಟು ಬೇರೆ ದೇಶದ ಪರ ದ್ರಾವಿಡ್​ ಆಡಿದ್ದೇಕೆ.?

  11 ಪಂದ್ಯಗಳಲ್ಲಿ 3 ಶತಕ, 2 ಅರ್ಧಶತಕಗಳನ್ನ ಸಿಡಿಸಿದ್ದ ವಾಲ್​..!

  ಹೆಮ್ಮಯ ಕನ್ನಡಿಗನ ಬಗ್ಗೆ ಎಲ್ಲಿಯೂ ಕೇಳಿರದ ನ್ಯೂಸ್​ ರಿವೀಲ್​

ರಾಹುಲ್​ ದ್ರಾವಿಡ್ ಭಾರತ ಬಿಟ್ಟು ಮತ್ತೊಂದು ದೇಶದ ಪರವೂ ಕ್ರಿಕೆಟ್​ ಆಡಿದ್ದಾರೆ. ಈ ವಿಚಾರ ನಿಮಗೆ ಆಶ್ಚರ್ಯ ಅನಿಸಬಹುದು. ಆದರೂ ಆ ಸತ್ಯವನ್ನು ಇವತ್ತಿನ ಸಖತ್​ ಸ್ಟೋರಿ ಓದಿಯೇ ಬಿಡಿ.

ನಮ್ಮ ಹೆಮ್ಮಯ ಕನ್ನಡಿಗ ರಾಹುಲ್​ ದ್ರಾವಿಡ್​​ ಟೀಮ್​ ಇಂಡಿಯಾ ಪರ 500ಕ್ಕೂ ಹೆಚ್ಚು ಪಂದ್ಯವನ್ನಾಡಿದ್ದಾರೆ. ಏಕಾಂಗಿಯಾಗಿ ಹೋರಾಡಿ ಅದೆಷ್ಟೋ ಪಂದ್ಯಗಳಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ಟೀಮ್​ ಇಂಡಿಯಾದ ಕೋಚ್​ ಆಗಿ ಸೇವೆ ಸಲ್ಲಿಸುತ್ತಾ ಇರೋ ಈ ಲೆಜೆಂಡ್​ ಬಗೆಗಿನ ಒಂದು ಸಖತ್​ ಕಥೆಯಿದೆ. ಅದೇನಂದ್ರೆ, ದ್ರಾವಿಡ್​ ಆಡಿದ್ದು ಒಂದು ದೇಶದ ಪರ ಅಲ್ಲ, 2 ದೇಶದ ಪರ.

ಹೌದು.! 2003ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ನ್ಯಾಷನಲ್​ ಕ್ರಿಕೆಟ್​ ಲೀಗ್​ ಟೂರ್ನಿಯಲ್ಲಿ ದ್ರಾವಿಡ್​, ಸ್ಕಾಟ್ಲೆಂಡ್​ ತಂಡದ ಪರ ವಿದೇಶಿ ಆಟಗಾರನಾಗಿ ಕಣಕ್ಕಿಳಿದಿದ್ರು. ಸ್ಕಾಟ್ಲೆಂಡ್​​ ಕ್ರಿಕೆಟ್​ನ ಮನವಿಯ ಮೇರೆಗೆ ಈ ಟೂರ್ನಿಯಲ್ಲಿ ದ್ರಾವಿಡ್​​ 11 ಪಂದ್ಯಗಳಲ್ಲಿ ತಂಡವನ್ನ ಪ್ರತಿನಿಧಿಸಿದ್ರು. ಜೊತೆಗೆ ಪಾಕಿಸ್ತಾನದ ವಿರುದ್ಧವೂ ಸ್ಕಾಟ್ಲೆಂಡ್​ ಪರ ಒಂದು ಟೂರ್​​ ಗೇಮ್​ನಲ್ಲಿ ಆಡಿದ್ರು. 45 ಸಾವಿರ ಪೌಂಡ್​​ಗೆ 3 ತಿಂಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ದ್ರಾವಿಡ್​ 66.66ರ ಸರಾಸರಿಯಲ್ಲಿ 600 ರನ್​​ಗಳಿಸಿದ್ರು. 3 ಶತಕ, 2 ಅರ್ಧಶತಕಗಳನ್ನ ದ್ರಾವಿಡ್​ ಸಿಡಿಸಿ ಮಿಂಚಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಾಹುಲ್​ ದ್ರಾವಿಡ್​ ಕ್ರಿಕೆಟ್​ ಆಡಿರೋದು ಒಂದು ದೇಶದ ಪರ ಅಲ್ಲ, 2 ರಾಷ್ಟ್ರದ ಪರವಾಗಿ.. ಇನ್ನೊಂದು ದೇಶ ಯಾವುದು?

https://newsfirstlive.com/wp-content/uploads/2023/06/RAHUL_DRAVID_1.jpg

Load More