newsfirstkannada.com

ಯುವರಾಜ್​ ಸಿಂಗ್​ ತಂದೆ ಯೋಗರಾಜ್,​ ಧೋನಿ ಬಳಿ ಕ್ಷಮೆ ಕೇಳಿದ್ದೇಕೆ..? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ..!

Share :

13-07-2023

  ಆ ಕಾರಣಕ್ಕೆ ವಿಶ್ವಕಪ್​ನಲ್ಲಿ ಸ್ಲೋ ಬ್ಯಾಟಿಂಗ್ ಮಾಡಿದ್ರಾ ಮಾಹಿ?

  'ಧೋನಿ ಶೂನ್ಯ'..'ಮೀಡಿಯಾದಿಂದಲೇ ದೇವರಾದ MS ಧೋನಿ'

  ಕೂಲ್​ ಕ್ಯಾಪ್ಟನ್​​ನನ್ನು ಕಂಡ್ರೆ ಕೆಂಡಾಮಂಡಲ ಆಗೋದ್ಯಾಕೆ..?

ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾಗೆ 3 ಐಸಿಸಿ ಟ್ರೋಫಿ ಗೆದ್ದು ಕೊಟ್ಟಿರುವ ನಾಯಕ. ಇಂಥಹ ಸಕ್ಸಸ್​ಫುಲ್ ಕ್ಯಾಪ್ಟನ್​ ಧೋನಿಯ ನೀವ್​ ನೋಡಿರದ ಮತ್ತೊಂದು ಮುಖವಿದೆಯಂತೆ. ಅದರಲ್ಲೂ 2019ರ ಏಕದಿನ ವಿಶ್ವಕಪ್​​ನಲ್ಲಿ ಧೋನಿ ರನೌಟ್​ ಹಿಂದೆ ಮೋಸದಾಟ ಇದೆಯಾ..? ಇಂಥ ಆರೋಪ ಮಾಡಿದ್ದಾದ್ರೂ ಯಾರು..?

ಜುಲೈ 09, 2019 ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ಚಿದ್ರವಾಗಿದ್ದ ದಿನ. ಈ ದಿನಕ್ಕೆ ಬರೋಬ್ಬರಿ 4 ವರ್ಷ 4 ದಿನಗಳು ತುಂಬಿದೆ. ಸೆಮಿಫೈನಲ್​ ಪಂದ್ಯದಲ್ಲಿ ಧೋನಿ ಆಗಿದ್ದ ರನೌಟ್​​ ಪರಿ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಈ ರನೌಟ್​​ ಬಳಿಕ ಸ್ವತಃ ಧೋನಿ ಕಣ್ಣೀರಿಟ್ಟಿದ್ದರು. ಭಾರವಾದ ಹೃದಯದೊಂದಿಗೆ ಪವಿಲಿಯನ್​ಗೆ ಹೆಜ್ಜೆ ಹಾಕಿದ್ದರು.

ಈ ಘಟನೆ ಮುಗೀದು ನಾಲ್ಕು ವರ್ಷಗಳೇ ಮುಗಿದಿದೆ. ಅಷ್ಟೇ ಅಲ್ಲ. ಮತ್ತೊಂದು ಏಕದಿನ ವಿಶ್ವಕಪ್​​ ಆರಂಭಕ್ಕೂ ಕೌಂಟ್​ಡೌನ್ ಶುರುವಾಗ್ತಿದೆ. ಈ ಹೊತ್ತಲ್ಲೇ ಮತ್ತೆ ಧೋನಿ ರನೌಟ್​ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆಲ್ಲ ಕಾರಣ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್​ ಸಿಂಗ್​​​​​.

ಧೋನಿಗೆ ರನೌಟ್ ಹಿಂದಿತ್ತಾ ದುರಾಲೋಚನೆ..?

ಮಾಹಿ, ಟೀಮ್​​ ಇಂಡಿಯಾಗೆ 3 ಐಸಿಸಿ ಟ್ರೋಫಿಗಳನ್ನ ಗೆದ್ದು ಕೊಟ್ಟ ನಾಯಕ. ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ. ಆದ್ರೆ, 2019ರ ಏಕದಿನ ವಿಶ್ವಕಪ್ ಕನಸು ಭಗ್ನಗೊಳ್ಳೋಕೆ ಕಾರಣ ಧೋನಿಯ ರನೌಟ್​ ಅನ್ನೋದು ಎಲ್ಲರಿಗೋ ಗೊತ್ತಿರೋ ವಿಚಾರ. ಆದ್ರೆ, ಧೋನಿ ರನೌಟ್ ಹಿಂದೆ ದುರಾಲೋಚನೆಯಂತೆ, ಈ ಆರೋಪ​ ಹೇಳ್ತಿರೋದು ಯುವರಾಜ್ ಸಿಂಗ್ ತಂದೆ ಯೋಗರಾಜ್​ ಸಿಂಗ್​.

2019ರಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದ ಯೋಗರಾಜ್ ಸಿಂಗ್, ಧೋನಿ ಸ್ಲೋ ಬ್ಯಾಟಿಂಗ್ ಹಾಗೂ ರನೌಟ್​ ಬಗ್ಗೆ ಕೆಂಡಕಾರಿದ್ದರು. ಕೊಹ್ಲಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್​ ಗೆಲ್ಲುವ ಆಸೆ ಇಲ್ಲದೆಯೇ ಧೋನಿ ರನೌಟ್​ ಆಗಿದ್ರು. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದ ಮತ್ತೊಬ್ಬ ನಾಯಕನ ಅಡಿ ವಿಶ್ವಕಪ್ ಗೆಲ್ಲಬಾರದು ಅನ್ನೋ ದುರಾಸೆ ಅಂತೆಲ್ಲ ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೆ ಟ್ವಿಟರ್​ನಲ್ಲಿ ಅದೇ ವಿಡಿಯೋ ಪೋಸ್ಟ್​ ಮಾಡಿರೋ ಯೋಗರಾಜ್ ಸಿಂಗ್, ಮತ್ತೆ ಮಾಹಿಯನ್ನ ಟಾರ್ಗೆಟ್ ಮಾಡಿದ್ದಾರೆ.

ಟ್ವಿಟರ್​ನಲ್ಲಿ ನನ್ನ ರಕ್ತ ಕುದಿಯುತ್ತಿದೆ ಎಂದು ಬರೆದುಕೊಂಡಿರೋ ಯೋಗರಾಜ್, ತನ್ನ ಸಂಪೂರ್ಣ ಸಂದರ್ಶನ ಕೊನೆಯವರೆಗೂ ನೋಡುವಂತೆ ಕ್ರಿಕೆಟ್ ಫ್ಯಾನ್ಸ್​ಗೆ ಕೇಳಿಕೊಂಡಿದ್ದಾರೆ.

ಇದೇ ಮೊದಲಲ್ಲ ಯೋಗರಾಜ್ ಸಿಂಗ್​ರ ಟಾರ್ಗೆಟ್

ಧೋನಿಯನ್ನ ಯೋಗರಾಜ್​ ಸಿಂಗ್ ಇದೇ ಮೊದಲ ಸಲ ಟಾರ್ಗೆಟ್ ಮಾಡ್ತಿಲ್ಲ. ಈ ಹಿಂದೆ ಹಲವು ಸಲ ಧೋನಿ ವಿರುದ್ಧ ಗುಡುಗಿದ್ದಾರೆ. ಅದರಲ್ಲೂ 2015ರ ಏಕದಿನ ವಿಶ್ವಕಪ್​​ ತಂಡದಲ್ಲಿ ಯುವರಾಜ್​​ಗೆ ಸ್ಥಾನ ನೀಡದಕ್ಕಾಗಿ ನಿಂದಿಸಿದ್ದರು. ಯುವರಾಜ್ ಸಿಂಗ್ ಕರಿಯರ್​ ಖತಂ ಆಗೋಕೆ ಧೋನಿ ಕಾರಣ ಅಂತೆಲ್ಲ ಟೀಕಿಸಿದ್ದರು.

ಇದನ್ನು ಓದಿ: ಪೂಜಾರ ವಿಚಿತ್ರ ನಡೆ.. ನೀರು ಕುಡಿಯಲಿ, ಹಣ್ಣು ತಿನ್ನಲಿ ಚೇತೇಶ್ವರ್​ಗೆ ಇದು ಬೇಕೆಬೇಕು..!

ಅಷ್ಟೇ ಅಲ್ಲ, ಮಾಹಿ ಸಾಧನೆಗಳನ್ನ ಒಪ್ಪಿಕೊಳ್ಳದ ಯೋಗರಾಜ್ ಸಿಂಗ್​, ಮೀಡಿಯಾಗಳೇ ಧೋನಿಯನ್ನ ದೇವರನ್ನಾಗಿಸಿವೆ ಅಂತಾ ಕಿಡಿಕಾರಿದ್ದರು. ಆದ್ರೆ, 3 ವರ್ಷಗಳ ಬಳಿಕ ಯುವರಾಜ್ ಟೀಮ್ ಇಂಡಿಯಾಗೆ ಕಮ್​​ಬ್ಯಾಕ್ ಮಾಡಿದ್ದೇ ತಡ ಕ್ಷಮಿಸುಬಿಡು ಧೋನಿ ಎಂದು ಮೊಸಳೆ ಕಣ್ಣೀರು ಹಾಕಿದ್ದರು.

ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗುತ್ತಾ..?

ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಎಷ್ಟೇ ಟೀಕೆ ಟಿಪ್ಪಣೆಗಳು ಮಾಡಿದ್ರು. ಧೋನಿ ಎಂದಿಗೂ ಅಭಿಮಾನಿಗಳ ಪಾಲಿನ ಯುಗಪುರುಷನೆ. ಯಾಕಂದ್ರೆ, ಧೋನಿ ಕ್ರಿಕೆಟ್​​ ಎಂಬ ಜಂಟಲ್​ಮನ್​ಗೆ ಸಿಕ್ಕ ಅತ್ಯದ್ಭುತ ಮಾಣಿಕ್ಯ. ಇದಕ್ಕೆ ಸಾಕ್ಷಿ ಭಾರತೀಯ ಕ್ರಿಕೆಟ್​​ಗೆ ನೀಡಿದ ಕೊಡುಗೆ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗೇ ಧೋನಿ ಫ್ಯಾನ್ಸ್​, ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ..? ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗ್ತಾವಾ ಎಂದು ಟಾಂಗ್ ನೀಡ್ತಿದ್ದಾರೆ. ಯಾರೇ ಏನೇ ಹೇಳಲಿ.. ಟೀಕಿಸಲಿ.. ಧೋನಿ, ಕ್ರಿಕೆಟ್ ಎಂಬ ಜಂಟಲಮನ್​ ಗೇಮ್​​ಗೆ ಸಿಕ್ಕ ರಿಯಲ್​​ ಜಂಟಲ್​​ಮ್ಯಾನ್ ಅನ್ನೋದನ್ನ ಮರೆಯುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯುವರಾಜ್​ ಸಿಂಗ್​ ತಂದೆ ಯೋಗರಾಜ್,​ ಧೋನಿ ಬಳಿ ಕ್ಷಮೆ ಕೇಳಿದ್ದೇಕೆ..? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ..!

https://newsfirstlive.com/wp-content/uploads/2023/07/DHONI_YUVARAJ_SINGH.jpg

Load More