2013ರಲ್ಲಿ ಸಿನಿಮಾ ಪ್ರಪಂಚಕ್ಕೆ ಎಂಟ್ರಿ..!
‘ಕಾಂತಾರ 2’ ಲೋಡಿಂಗ್ ಎಂದಿದ್ದ ಊರ್ವಸಿ
‘ಗಾಸಿಪ್ ಊರ್ವಶಿ’ಯ ಅಸಲಿ ಕಥೆ
ಊರ್ವಶಿ ರೌಟೇಲಾ.. ಹೊನಪು ವೈಯಾರಕ್ಕೇನೂ ಕಮ್ಮಿ ಇಲ್ಲ.. ಒಳ್ಳೆ ಹೈಟು ಒಳ್ಳೆ ಫಿಸಿಕ್. ಹೇಳಿ ಮಾಡಿಸಿದ ಹೀರೋಯಿನ್.. ಅದರಲ್ಲೂ ಆರಡಿ ಹೀರೋಗಳಿಗೆ ಊರ್ವಶಿ ಬೆಸ್ಟ್ ಜೋಡಿ. ಮೂಲತಃ ಮಾಡೆಲ್ ಆಗಿದ್ದ ಈಕೆ ಈಗ ಸಿನಿಮಾ ಪ್ರಪಂಚದ ಗ್ಲಾಮರ್ ಗೊಂಬೆ. ಅಂದ ಚೆಂದ ಸ್ವಲ್ಪ ಜಾಸ್ತಿನೇ ಇದೆ ಅನ್ನೋದು ಬಿಟ್ರೆ ಅದೃಷ್ಟ ಅಷ್ಟಕಷ್ಟೇ. ಅವಕಾಶಗಳು ಕೂಡ ಅಷ್ಟಕಷ್ಟೇ.. ಮೂರಕ್ಕೆ ಇಳಿದಿಲ್ಲ, ಆರಕ್ಕೆ ಹತ್ತಿಲ್ಲ.. ಸೋಲು ಮತ್ತು ಗೆಲುವು ಎರಡನ್ನೂ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ದಾರೆ.
2013ರಲ್ಲಿ ಬಾಲಿವುಡ್ ಚಿತ್ರದೊಂದಿಗೆ ಸಿನಿಮಾ ಪ್ರಪಂಚಕ್ಕೆ ಬಂದ ಊರ್ವಶಿ ತನ್ನ ಎರಡನೇ ಸಿನಿಮಾನೇ ಕನ್ನಡದಲ್ಲಿ ಮಾಡಿದ್ರು. ಹಾಗಾಗಿ ಸ್ಯಾಂಡಲ್ವುಡ್ ಸಿನಿಮಾ ಮಂದಿಗೂ ಊರ್ವಶಿ ರೌಟೇಲಾ ಅಂದ್ರೆ ತುಂಬಾನೇ ಪರಿಚಿತ. ಇದಾದ ಮೇಲೆ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ ಅವರು.
ಊರ್ವಶಿ ಸಿನಿಮಾಗಳ ಲಿಸ್ಟ್ ನೋಡಿದ್ರೆ ಈಕೆ ಫುಲ್ ಟೈಂ ಹೀರೋಯಿನ್ ಆಗಿದ್ದಕ್ಕಿಂತ ಪಾರ್ಟ್ ಟೈಂ ಸಾಂಗ್ ಮಾಡಿದ್ದೇ ಹೆಚ್ಚು. ‘ಹೇಟ್ಸ್ಟೋರಿ 4’, ‘ಪಾಗಲ್ಪಂತಿ’, ‘ಗ್ರೇಟ್ಗ್ರ್ಯಾಂಡ್ಮಸ್ತಿ’ ಚಿತ್ರಗಳನ್ನು ಬಿಟ್ಟರೆ ಉಳಿದ ಚಿತ್ರಗಳಲ್ಲಿ ಸ್ಪೆಷಲ್ ಅಪಿರಿಯೆನ್ಸ್ ಮಾಡಿದ್ದೇ ಸಾಧನೆ.
ಗಾಸಿಪ್ಗಳಿಂದಲೇ ಸುದ್ದಿ ಆಗೋದ್ಯಾಕೆ ಈ ಬ್ಯೂಟಿ?
ಊರ್ವಶಿ ರೌಟೇಲಾ ಬಳಿ ಟ್ಯಾಲೆಂಟ್ ಇದೆ. ಒಂದಿಷ್ಟು ಸಿನಿಮಾಗಳೂ ಇವೆ. ಆದರೆ ಇದುವರೆಗೂ ಈ ಬ್ಯೂಟಿ ಮಾಡಿದ್ದೆಲ್ಲವೂ ಸಣ್ಣ ಪುಟ್ಟ ಚಿತ್ರಗಳೇ. ಯಾವುದೇ ದೊಡ್ಡ ಬ್ಯಾನರ್ನಲ್ಲಿ ಅಥವಾ ದೊಡ್ಡ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿಲ್ಲ. ದೊಡ್ಡ ಸಿನಿಮಾ ಕಾಣಿಸಿಕೊಂಡ್ರು ಬರೀ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಷ್ಟೆ ಬಂತು. ಹಾಗಾಗಿ ತನ್ನ ಕೆರಿಯರ್ನ ಇನ್ನಷ್ಟು ಬಿಲ್ಡ್ ಮಾಡ್ಕೊಳ್ಳೋಕೆ, ತನ್ನ ಫ್ರೊಫೈಲ್ನ ಇನ್ನಷ್ಟು ಕಾಸ್ಟ್ಲೀ ಮಾಡ್ಕೊಳ್ಳೋಕೆ ಒಂದಿಷ್ಟು ಗಾಸಿಪ್ಗಳನ್ನ ತಾನೇ ಸೃಷ್ಟಿಸಿಕೊಳ್ಳುತ್ತಾರೆ ಎಂಬ ಟೀಕೆ ಈಕೆಯ ಮೇಲಿದೆ. ಅದು ತಾನು ಹಾಕೋ ಬಟ್ಟೆಗಳಾಗಿರಬಹುದು ಅಥವಾ ತಾನು ತೊಡೋ ಆಭರಣಗಳಾಗಿರಬಹುದು ಅಥವಾ ತಾನು ನಟಿಸೋ ಸಿನಿಮಾಗಳ ವಿಚಾರದಲ್ಲಾದರೂ ಆಗಿರಬಹುದು. ಒಟ್ಟಿನಲ್ಲಿ ಯಾವುದಾದರೂ ಒಂದು ವಿಷ್ಯದಲ್ಲಿ ತಾನು ಸುದ್ದಿಯಲ್ಲಿರಬೇಕು ಅನ್ನೋದು ಈಕೆಯ ಮೈಂಡ್ ಸೆಟ್ ಅಂತೆ.
ಮೈಲೇಜ್ ಪಡೆಯೋದ್ರಲ್ಲಿ ಪಂಟರ್
ಇದಕ್ಕೆ ರಿಸೆಂಟ್ ಎಕ್ಸಾಂಪಲ್ ಪರ್ವಿನ್ ಬಾಬಿ ಬಯೋಪಿಕ್.. ಹೌದು, ಖ್ಯಾತ ನಟಿ ಕಮ್ ಮಾಡೆಲ್ ಪರ್ವಿನ್ ಬಾಬಿ ಬಗ್ಗೆ ಬಯೋಪಿಕ್ ಬರ್ತಿದ್ದು, ಈ ಪಾತ್ರಕ್ಕೆ ಊರ್ವಶಿಗೆ ಆಫರ್ ಮಾಡಲಾಗಿದೆ ಎನ್ನುವ ಸುದ್ದಿ ನಾಲ್ಕೈದು ದಿನದಿಂದ ಸೆನ್ಸೇಷನ್ ಆಗಿತ್ತು.. ಇದನ್ನ ಊರ್ವಶಿ ಕೂಡ ‘ಹೌದು’ ಅಂತಾಲೇ ಹೇಳ್ಕೊಂಡು ಒಂದಿಷ್ಟು ಮೈಲೇಜ್ ಹೆಚ್ಚಿಸಿಕೊಂಡ್ರು. ಆಮೇಲ್ ನೋಡಿದ್ರೆ ಪ್ರೊಡಕ್ಷನ್ ಟೀಮ್ ಕಡೆಯಿಂದ ಇದು ಸುಳ್ಳು ಅನ್ನೋ ಸುದ್ದಿ ಹೊರಬಿತ್ತು. ನಾವು ಇದುವರೆಗೂ ಯಾವ ನಟಿಯನ್ನು ಫೈನಲ್ ಮಾಡಿಲ್ಲ ಅಂತ ಸ್ಪಷ್ಟನೆ ಕೊಟ್ಟರು. ಅಲ್ಲಿಗೆ ಊರ್ವಶಿ ಹೇಳಿದ್ದು ಸುಳ್ಳು ಅಂತಾಯ್ತು.
ಇತ್ತೀಚೆಗಷ್ಟೇ ನಡೆದ ಕ್ಯಾನೆಸ್ ಫೆಸ್ಟಿವಲ್ನಲ್ಲಿ ಊರ್ವಶಿ ರೌಟೇಲಾ ರೆಡ್ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ರು. ಈ ವೇಳೆ ತಮ್ಮ ಕೊರಳಲ್ಲೊಂದು ಮೊಸಳೆ ವಿನ್ಯಾಸದ ನೆಕ್ಲೆಸ್ ಪಳಪಳ ಅಂತ ಮಿಂಚಿತ್ತು. ಈ ನೆಕ್ಲೆಸ್ ಬಗ್ಗೆ ಊರ್ವಶಿ ಅವರೇ ಟೀಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಇದ್ರ ಬೆಲೆ 200 ಕೋಟಿ ಅಂತ ಹೇಳ್ಕೊಂಡಿದ್ರು.. ಇದನ್ನ ನಂಬದ ನೆಟ್ಟಿಗರು ಇದು ಡಮ್ಮಿ ನೆಕ್ಲೆಸ್ ಪಬ್ಲಿಸಿಟಿಗಾಗಿ ಬಿಲ್ಡಪ್ ಕೊಡ್ತಿದ್ದಾರೆ ಅಂತ ಟ್ರೋಲ್ ಮಾಡಿದ್ರು.
ಕಾಂತಾರ 2 ಲೋಡಿಂಗ್ ಎಂದಿದ್ದ ಊರ್ವಸಿ
ಕಾಂತಾರ ಸಿನಿಮಾ ಬ್ಲಾಕ್ಬಸ್ಟರ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದಾದ ಮೇಲೆ ಕಾಂತಾರ ಪ್ರಿಕ್ವೆಲ್ ಮಾಡ್ತಿರೋದು ಹಾಟ್ ಟಾಪಿಕ್. ಈ ನಡುವೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯನ್ನ ಮೀಟ್ ಮಾಡಿದಾಗ ತೆಗೆದುಕೊಂಡಿದ್ದ ಫೋಟೋವೊಂದನ್ನ ಶೇರ್ ಮಾಡಿದ್ದ ಊರ್ವಶಿ ಕಾಂತಾರ 2 ಲೋಡಿಂಗ್ ಅಂತ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ನ ನೋಡ್ದವ್ರೆಲ್ಲಾ ಓಹ್ ಕಾಂತಾರ ಪ್ರಿಕ್ವೆಲ್ನಲ್ಲಿ ಊರ್ವಶಿ ನಟಿಸ್ತಿದ್ದಾರೆ ಅಂತ ಮಾತಾಡ್ಕೊಂಡ್ರು. ಆಮೇಲೆ ವಿಚಾರಿಸಿದ್ರೆ ಇದು ಸುಳ್ಳು ಅಂತಾ ಗೊತ್ತಾಯ್ತು.
ಕಳೆದ ವರ್ಷ ತಮಿಳಿನಲ್ಲಿ ‘ಲೆಜೆಂಡ್’ ಅಂತ ಸಿನಿಮಾ ಮಾಡಿದ್ರು. ಇದು ಈಕೆಯ ಚೊಚ್ಚಲ ತಮಿಳು ಸಿನಿಮಾ. ಈ ಚಿತ್ರಕ್ಕಾಗಿ ಊರ್ವಶಿ ಬರೋಬ್ಬರಿ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಗಳು ಇಂಟರ್ನೆಟ್ನಲ್ಲಿ ಕೋಲಾಹಲ ಸೃಷ್ಟಿಸಿಬಿಡ್ತು.. ನಿಜಕ್ಕೂ ಈ ಚಿತ್ರಕ್ಕೆ ಊರ್ವಶಿ 20 ಕೋಟಿ ತಗೊಂಡ್ರಾ? ಈಗಲೂ ಇದಕ್ಕೆ ಉತ್ತರ ಇಲ್ಲ.
ಗಾಸಿಪ್ಗಳಿಗೆ ಉತ್ತರವೇ ಇಲ್ಲ
ರಿಸೆಂಟ್ ಆಗಿ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿರುವ ಊರ್ವಶಿ ದುಬಾರಿ ಲೈಫ್ ಲೀಡ್ ಮಾಡ್ತಾ ಇದ್ದಾರಂತೆ. ಈ ಮನೆಯ ಬೆಲೆ ಅಂದಾಜು 190 ಕೋಟಿಯಂತೆ.. ಐಷಾರಾಮಿ ಬಂಗಲೆಯಲ್ಲಿ ಏನೆಲ್ಲಾ ಇರಬೇಕು ಅದೆಲ್ಲವೂ ಈ ಮನೆಯಲ್ಲಿದೆಯಂತೆ. ಖಾಸಗಿ ಇವೆಂಟ್ವೊಂದರಲ್ಲಿ ಊರ್ವಶಿ ತೊಟ್ಟಿದ್ದ ಗೋಲ್ಡನ್ ಕಲರ್ನ ಗೌನ್ ಬೆಲೆ 50 ಕೋಟಿಯಂತೆ. ಈ ಹಿಂದೆ ತಮ್ಮ ಬರ್ತ್ಡೇ ಸೆಲೆಬ್ರೆಟ್ ಮಾಡ್ಕೊಂಡಿದ್ದ ನಟಿ 95 ಲಕ್ಷ ಖರ್ಚು ಮಾಡಿದ್ದರಂತೆ. ಅವಾರ್ಡ್ ಫಂಕ್ಷನ್ ಅಥವಾ ರೆಡ್ಕಾರ್ಪೆಟ್ಗಳಲ್ಲಿ ಮಿಂಚಲು ಈಕೆ ಧರಿಸುವ ಬಟ್ಟೆಯ ಬೆಲೆ ಅಂದಾಜು 30 ರಿಂದ 40 ಲಕ್ಷ ಇರುತ್ತಂತೆ.
ಈ ಮೊದಲೇ ಹೇಳಿದಂಗೆ ಊರ್ವಶಿಗೆ ಹೇಳಿಕೊಳ್ಳುವ ಅವಕಾಶಗಳು ಇಲ್ಲ. ಅಲ್ಲೊಂದು ಇಲ್ಲೊಂದು ಚಾನ್ಸ್ ಸಿಕ್ಕರೂ ಅದು ಐಟಂ ಸಾಂಗ್ ಅಷ್ಟೇ. ರಿಸೆಂಟ್ ಆಗಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಲ್ತೇರು ವೀರಯ್ಯ ಚಿತ್ರದಲ್ಲಿ ಹೆಜ್ಜೆ ಹಾಕಿದ್ರು. ಇದಕ್ಕಾಗಿ ಊರ್ವಶಿಗೆ 3 ಕೋಟಿ ಸಂಭಾವನೆ ಕೊಡಲಾಗಿದೆಯಂತೆ. ಅಖಿಲ್ ನಟನೆಯ ‘ಏಜೆಂಟ್’ ಚಿತ್ರದಲ್ಲೂ ಹಾಡೊಂದು ಸೊಂಟು ಬಳುಕಿಸಿದ್ದು ಈಗ ಬಯೋಪಟಿ ಸೀನು ನಿರ್ದೇಶನದ ಚಿತ್ರದಲ್ಲೂ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಂತೆ.
ಕೇವಲ 12 ಸಿನಿಮಾಗಳಲ್ಲಿ ನಟನೆ
ಆಲ್ಮೋಸ್ಟ್ 10 ವರ್ಷದ ಕೆರಿಯರ್.. ಲೆಕ್ಕ ಹಾಕಿದ್ರೆ ಹತ್ತು ಅಥವಾ ಹನ್ನೆರಡು ಸಿನಿಮಾದಲ್ಲಿ ನಟನೆ. ಅದರಲ್ಲಿ ಹೀರೋಯಿನ್ ಆಗಿ ನಟಿಸಿದ್ದು ತೀರಾ ಕಡಿಮೆ. ಈ ನಡುವೆ ತನ್ನ ಇಮೇಜ್ ಉಳಿಸಿಕೊಳ್ಳೋಕೆ, ಕಾಪಾಡಿಕೊಳ್ಳೋಕೆ ಆಗಾಗ ಗಾಸಿಪ್ ಕ್ರಿಯೇಟ್ ಮಾಡೋದು, ಅದನ್ನ ನಿಜ ಅಂತ ಬಿಂಬಿಸೋದನ್ನೂ ಮಾಡ್ತಾರೆ. ಇದು ಸಿನಿಮಾ ಇಂಡಸ್ಟ್ರಿಯ ಕೆಲವು ನಿರ್ಮಾಪಕ ನಿರ್ದೇಶಕರಿಗೆ ಗೊತ್ತಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್