newsfirstkannada.com

ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ಭಾರೀ ಡಿಮ್ಯಾಂಡ್​.. ಹೋಟೆಲ್ಸ್​ ಭರ್ತಿ, ಆಸ್ಪತ್ರೆ ಬೆಡ್​ ಮೊರೆ ಹೋದ ಫ್ಯಾನ್ಸ್​​..!

Share :

25-07-2023

    2 ತಿಂಗಳಿಗೂ ಮುನ್ನವೇ ಶುರುವಾಯ್ತು ವಿಶ್ವಕಪ್​ ಫೀವರ್

    ಇಲ್ಲಿತನಕ ಒಂದು ಲೆಕ್ಕ.. ಈ ಸಲ ಬೇರೆಯದ್ದೇ ಲೆಕ್ಕ

    ವಿಮಾನ ಪ್ರಯಾಣ ದರದಲ್ಲಿ ಮೂರು ಪಟ್ಟು ಹೆಚ್ಚಳ

ನೀವೆಲ್ಲರೂ ಥಿಯೇಟರ್​ ಹೌಸ್​ಫುಲ್ ಆಗೋದನ್ನು ನೋಡಿರ್ತಿರಾ. ಕ್ರಿಕೆಟ್​​​​​ ಮಟ್ಟಿಗೆ ಹೌಸ್​ಫುಲ್​​​ ಪದ ಕೇಳೋದೇ ಕಮ್ಮಿ. ಒಂದು ವೇಳೆ ಕೇಳಿದ್ರೆ ಅದು ಇಂಡೋ-ಪಾಕ್​​ ಪಂದ್ಯದಿಂದ ಮಾತ್ರ ಸಾಧ್ಯ. 2023ರ ಭಾರತ-ಪಾಕ್​​​ ವಿಶ್ವಕಪ್​​​​​​ ಪಂದ್ಯಕ್ಕೆ ಫುಲ್​ ಡಿಮ್ಯಾಂಡ್ ಹೆಚ್ಚಿದೆ.

2023ರ ಒನ್ಡೇ ವಿಶ್ವಕಪ್​​​ಗೆ ಕೌಂಟ್​ಡೌನ್​ ಶುರುವಾಗಿದೆ. ಕ್ರಿಕೆಟ್ ಮಹಾಜಾತ್ರೆಗೆ ಹೆಚ್ಚೇನೂ ದಿನ ಉಳಿದಿಲ್ಲ. ಜಸ್ಟ್​ 70 ದಿನ ಮಾತ್ರ ಬಾಕಿ ಇದೆ. ಫಿಫ್ಟಿ ಓವರ್​​ ಬಿಗ್ ಬ್ಯಾಟಲ್ ಸಮೀಪಿಸ್ತಿದ್ದಂತೆ ಇಂಡೋ-ಪಾಕ್​ ಪಂದ್ಯಕ್ಕೆ ಸಿಕ್ಕಾಪಟ್ಟೇ ಬೇಡಿಕೆ ಹೆಚ್ಚಿದೆ.
ಬದ್ಧವೈರಿ ಭಾರತ-ಪಾಕಿಸ್ತಾನ ಪಂದ್ಯ ಅಂದರೆ ಅದೇನೋ ಗೊತ್ತಿಲ್ಲ. ಎಲ್ಲಿಲ್ಲದ ಕ್ರೇಜ್​ ಹುಟ್ಟಿಕೊಳ್ಳುತ್ತೆ. ಯಾಕಂದ್ರೆ ಇದೊಂದು ಬರೀ ಪಂದ್ಯವಲ್ಲ. ಅಂಗಳದಲ್ಲಿ ನಡೆಯುವ ಮಹಾಯುದ್ಧ. ಈ ಮಹಾಯುದ್ಧವೇ 2023ರ ಒನ್ಡೇ ವಿಶ್ವಕಪ್​​ನ ಸೆಂಟರ್​ ಆಫ್ ಅಟ್ರ್ಯಾಕ್ಷನ್​​. ಅಕ್ಟೋಬರ್​​ 15 ರಂದು ಕ್ರಿಕೆಟ್ ಲೋಕದ ಬದ್ಧವೈರಿಗಳ ಕಾಳಗ ನಡೆಯಲಿದ್ದು, ಎರಡು ತಿಂಗಳಿಗೂ ಮುನ್ನವೇ ಹೈ-ವೋಲ್ಟೇಜ್​ ಪಂದ್ಯದ ಫೀವರ್​​ ಶುರುವಾಗಿದೆ.

ಇಂಡೋ-ಪಾಕ್​​ ಕಾಳಗಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​

ಇಂಡೋ-ಪಾಕ್​​ ಪಂದ್ಯದ ಪವರ್ ಅಂತಹದ್ದು. ಇಡೀ ವಿಶ್ವಕಪ್​​ನಲ್ಲಿ ಎಲ್ಲಾ ಪಂದ್ಯಗಳ ಕಥೆ ಒಂದಾದ್ರೆ ಸಾಂಪ್ರದಾಯಿಕ ಎದುರಾಳಿಗಳ ಕಾಳಗದ ಕಥೆಯೇ ಬೇರೆ. ಬದ್ಧವೈರಿಗಳ ಕದನದಲ್ಲಿ ಸಿಗುವಷ್ಟು ರೋಚಕತೆ ಯಾವ ಪಂದ್ಯದಲ್ಲೂ ದೊರೆಯಲ್ಲ. ಹೀಗಾಗಿ ಭಾರತ-ಪಾಕ್​​ ವಿಶ್ವಕಪ್​ ಪಂದ್ಯಕ್ಕೆ ಫುಲ್ ಡಿಮ್ಯಾಂಡ್​​​ ಬಂದಿದೆ.

ಇಂಡೋ-ಪಾಕ್​​​​​ ಪಂದ್ಯ ವೀಕ್ಷಿಸಲು ಹಾಸ್ಪಿಟಲ್​ ಬೆಡ್​​ ಬುಕ್

ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಅಹ್ಮದಾಬಾದ್​ ಹೋಟೆಲ್​ಗಳಿಗೆ ಫುಲ್ ಡಿಮ್ಯಾಂಡ್ ಕುದುರಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಹೋಟೆಲ್​​ಗಳ ಮಾಲೀಕರು ಹೋಟೆಲ್​ಗಳ ದರವನ್ನ ದುಪ್ಪಟ್ಟು ಮಾಡಿದ್ದಾರೆ. 8 ಸಾವಿರ ಇದ್ದ ಹೋಟೆಲ್ ದರ ಲಕ್ಷಕ್ಕೆ ತಲುಪಿದೆ. ಇದರಿಂದ ಹೈರಾಣಾಗಿರೋ ಅಭಿಮಾನಿಗಳು ಪರ್ಯಾಯ ಮಾರ್ಗ ಹುಡುಕಿದ್ದಾರೆ. ಅದೇನಂದ್ರೆ ಅಹ್ಮದಾಬಾದ್​​​ನಲ್ಲಿನ ಆಸ್ಪತ್ರೆಗಳನ್ನೇ ಬುಕ್ ಮಾಡುತ್ತಿದ್ದಾರೆ.

ಯಾವ್ಯಾಗ ಹೋಟೆಲ್​ ದರ ದಿನವೊಂದಕ್ಕೆ 50 ರಿಂದ 70 ಸಾವಿರ ಆಯ್ತೋ ಆಗ ಫ್ಯಾನ್ಸ್​ ನರೇಂದ್ರ ಮೋದಿ ಸ್ಟೇಡಿಯಂ ಸಮೀಪ ಇರುವ ಆಸ್ಪತ್ರೆಗಳ ಬೆಡ್​ ಬುಕ್ ಮಾಡಲು ಮುಂದಾಗಿದ್ದಾರೆ. ಬಾಡಿ ಚೆಕಪ್ ನೆಪದಲ್ಲಿ ಮೂರು ಹೊತ್ತು ಉಪಾಹಾರ ನೀಡುವ ಸೌಲಭ್ಯ ಹೊಂದಿರುವ ಆಸ್ಪತ್ರೆಗಳನ್ನು ಬುಕ್ ಮಾಡುತ್ತಿದ್ದಾರೆ.

ಆಸ್ಪತ್ರೆ ಬೆಡ್​​ಗಳಿಗೆ ಹೆಚ್ಚಿದ ಬೇಡಿಕೆ..! ಬೆಡ್ಸ್​​​​ ಫುಲ್ ಭರ್ತಿ

ಹೌದು, ಇಂಡೋ-ಪಾಕ್​ ಪಂದ್ಯದ ಪ್ರಯುಕ್ತ ಅಹ್ಮದಾಬಾದ್​​ನಲ್ಲಿ ಆಸ್ಪತ್ರೆಗಳ ಬೇಡಿಕೆ ಹೆಚ್ಚಿದೆ. ಯಾಕಂದ್ರೆ ಹೋಟೆಲ್​ಗಳಿಗೆ ಹೋಲಿಸಿದ್ರೆ ಇಲ್ಲಿ ಶುಲ್ಕವೂ ಕಮ್ಮಿ. ಹಾಸಿಗೆಗೆ ದಿನಕ್ಕೆ 3 ಸಾವಿರದಿಂದ 25 ಸಾವಿರದವರೆಗೆ ಶುಲ್ಕ ವಿಧಿಸುತ್ತವೆ. ಇಲ್ಲಿ ಆಹಾರವೂ ನೀಡಲಾಗುತ್ತದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಹೋಟೆಲ್‌ನಿಂದ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿವೊಬ್ಬರು ಹೇಳುವ ಪ್ರಕಾರ ಹೀಗಾಗಲೇ ಅಕ್ಟೋಬರ್​ 20 ರ ತನಕ ಬೆಡ್​​ ಬುಕ್​ ಆಗಿವೆಯಂತೆ.

ವಿಮಾನ ದರ ಮೂರು ಪಟ್ಟು ಹೆಚ್ಚಳ

ಬರೀ ಹೋಟೆಲ್​​​, ಆಸ್ಪತ್ರೆಗಳ ದರ ಮಾತ್ರ ಹೆಚ್ಚಳವಾಗಿಲ್ಲ. ಬದಲಿಗೆ ಭಾರತ-ಪಾಕ್​​​​ ಹೈವೋಲ್ಟೇಜ್​​ ಪಂದ್ಯದ ಕಾರಣಕ್ಕಾಗಿ ವಿಮಾನದ ದರವು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಎರಡು ತಿಂಗಳಿಗೂ ಮುನ್ನವೇ ಪಂದ್ಯ ವೀಕ್ಷಿಸಲು ಫ್ಲೈಟ್​​ ಬುಕ್ಕಿಂಗ್ ಶುರುವಾಗಿದ್ದು, ವಿಮಾನದ ದರ 40 ಸಾವಿರ ರೂಪಾಯಿಗೂ ಅಧಿಕವಾಗಿದೆ. ನಾರ್ಮಲ್​​​ ದಿನದಲ್ಲಿ ಚೆನ್ನೈ ಟು ಅಹ್ಮದಾಬಾದ್​​​ ವಿಮಾನ ದರ 10 ಸಾವಿರ ರೂಪಾಯಿ ಇರ್ತಿತ್ತು. ಆದ್ರೀಗ ವಿಶ್ವಕಪ್​​​​​ ಪಂದ್ಯಾವಳಿ ಹಿನ್ನಲೆ ದರ ಮೂರು ಪಟ್ಟು ಏರಿಕೆಯಾಗಿದೆ.

ಒಟ್ಟಿನಲ್ಲಿ ಹಾಸ್ಪಿಟಲ್​​ ಬೆಡ್​ ಬುಕ್​​​ ಮತ್ತು ಹೋಟೆಲ್​ ದರ ನೋಡಿದ್ರೆ ಇಂಡೋ-ಪಾಕ್​ ವಿಶ್ವಕಪ್​​ ಪಂದ್ಯದ ಕ್ರೇಜ್​​​​​ ಯಾವ ಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತೆ. ಒನ್ಡೇ ವಿಶ್ವಕಪ್​ ಸಮೀಪಿಸಿದ ಬೆನ್ನಲ್ಲೇ ಈ ಕ್ರೇಜ್​ ಮತ್ತಷ್ಟು ಹೆಚ್ಚಾದ್ರು ಆಶ್ಚರ್ಯವಿಲ್ಲ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ಭಾರೀ ಡಿಮ್ಯಾಂಡ್​.. ಹೋಟೆಲ್ಸ್​ ಭರ್ತಿ, ಆಸ್ಪತ್ರೆ ಬೆಡ್​ ಮೊರೆ ಹೋದ ಫ್ಯಾನ್ಸ್​​..!

https://newsfirstlive.com/wp-content/uploads/2023/06/IND_PAK.jpg

Load More