newsfirstkannada.com

ಮಿತಿಮೀರಿದ ತೋಳಗಳ ಕಾಟ; ನೈಜ ಕಾರಣ ಬಿಚ್ಚಿಟ್ಟ ವನ್ಯಜೀವಿ ತಜ್ಞರು; ತಪ್ಪದೆ ಓದಿ

Share :

Published September 1, 2024 at 6:22am

    ಉತ್ತರಪ್ರದೇಶದ ಬೆಹ್ರೈಚ್​ನಲ್ಲಿ ಮಿತಿ ಮೀರಿದ ತೋಳಗಳ ಹಾವಳಿ

    ಒಂದೇ ತಿಂಗಳಲ್ಲಿ ಮಕ್ಕಳು ಸೇರಿ 7 ಜನರನ್ನು ಎಳೆದೊಯ್ದ ತೋಳಗಳು

    ಭೀಕರ ಮಳೆ, ಉಕ್ಕಿದ ಪ್ರವಾಹ, ನೆಲೆ ಕಳೆದುಕೊಂಡ ತೋಳಗಳು ಗ್ರಾಮದತ್ತ

ಲಖನೌ: ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶದ ಬೆಹ್ರೈಚ್ ಪ್ರದೇಶದಲ್ಲಿ ನರಿಗಳ ಕಾಟ ಹೇಳತೀರದ ಮಟ್ಟಕ್ಕೆ ಬಂದು ನಿಂತಿದೆ. ಚಿಕ್ಕ ಮಕ್ಕಳ ಕುತ್ತಿಗೆಯನ್ನು ಕಚ್ಚಿಕೊಂಡು ಎಳೆದುಕೊಂಡು ಹೋಗುತ್ತಿವೆ. ಒಂದೇ ತಿಂಗಳಲ್ಲಿ ನರಿಗಳ ಕಾಟಕ್ಕೆ ಏಳು ಜನರ ಜೀವ ಹೋಗಿದೆ.ರಾತ್ರಿಯಾದ್ರೆ ಸಾಕು ಯಾರ ಮನೆಗೆ ಯಾವ ತೋಳ ನುಗ್ಗಿ ಬರುತ್ತೋ ಅನ್ನೋ ಜೀವ ಭಯದಲ್ಲಿ ಬದುಕುತ್ತಿದ್ದಾರೆ.
ಬೆಹ್ರೈಚ್​ ಪ್ರದೇಶ ಶತಮಾನಗಳಿಂದಲೂ ಘಘರಾ ಮತ್ತು ಕತರ್ನಿಘಾಟ್​ನ ಅರಣ್ಯ ಪ್ರದೇಶದಲ್ಲಿಯೇ ಬೆಚ್ಚಗೆ ಇದೆ. ಸುತ್ತಲೂ ತೋಳಗಳು ಶತಮಾನಗಳಿಂದಲೂ ವಾಸವಾಗಿವೆ. ಆದ್ರೆ ಈಗ ಆಗುತ್ತಿರುವ ಸಮಸ್ಯೆಗಳನ್ನ ಹಿಂದೆ ಈ ಜನರು ಎಂದಿಗೂ ಅನುಭವಿಸಿಲ್ಲ. ಹಾಗಾದ್ರೆ ಕಾರಣಗಳೇನು? ಏಕಾಏಕಿ ಮನುಷ್ಯರಿರುವ ಜಾಗಕ್ಕೆ ತೋಳಗಳು ನುಗ್ಗಿ ಬಂದು ಜೀವ ತೆಗೆಯುತ್ತಿರುವುದೇಕೆ ಅಂದ್ರೆ. ಅದು ಮಾನವನನು ಮಾಡಿಕೊಳ್ಳುತ್ತಿರುವ ಸ್ವಯಂಕೃತ ಅಪರಾಧ ಅನ್ನುತ್ತಿದ್ದಾರೆ ಪರಿಸರ ತಜ್ಞರು ಹಾಗೂ ವನ್ಯಜೀವಿ ತಜ್ಞರು.

ಇದನ್ನೂ ಓದಿ: ನಟಿ ಕಂಗನಾ ಎಮರ್ಜೆನ್ಸಿ ಸಿನಿಮಾ ರಿಲೀಸ್​​ಗೆ ನೂರೆಂಟು ವಿಘ್ನ; ಜೀವ ಬೆದರಿಕೆ ಹಾಕಿದ್ಯಾರು?

ತೋಳಗಳು ಒಂದು ಪ್ರದೇಶಕ್ಕೆ ಹೊಂದಿಕೊಂಡ ಬದುಕುತ್ತವೆ. ಅವುಗಳಿಗೆ ಅವುಗಳದ್ದೇ ಆದ ಒಂದು ಭೂಪ್ರದೇಶವೆಂದು ನಿಗದಿಮಾಡಿಕೊಂಡಿರುತ್ತವೆ. ನದಿಯ ಸುತ್ತಮುತ್ತಲು, ಹಳ್ಳ ತೊರೆಗಳ ಸಮೀಪ ಅವುಗಳ ವಾಸ. ನೀರು ಬೇಗ ಸಿಗುವಲ್ಲಿ ಅವುಗಳು ನೆಲೆಸುತ್ತವೆ. ಆದ್ರೆ ಈಗ ಉತ್ತರಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಅವುಗಳು ವಾಸ ಮಾಡುತ್ತಿರುವ ಪ್ರದೇಶವನ್ನು ಆಪೋಷನ ತೆಗೆದುಕೊಂಡುಬಿಟ್ಟಿವೆ. ಹೀಗಾಗಿ ಅವು ಅನಿವಾರ್ಯವಾಗಿ ಆಹಾರ ಹಾಗೂ ನೀರು ಹುಡುಕಿಕೊಂಡು ಮನುಷ್ಯರು ನೆಲಗೊಂಡ ಪ್ರದೇಶಕ್ಕೆ ನುಗ್ಗುತ್ತವೆ. ಈಗ ಉತ್ತರಪ್ರದೇಶದಲ್ಲಿ ಆಗುತ್ತಿರುವುದು ಇದೆ

ಇದನ್ನೂ ಓದಿ: VIDEO: ವಡಾಪಾವ್​​ ತಿನ್ನಲು ಹೋಗಿ ಚಿನ್ನದ ಒಡವೆ ಕಳೆದುಕೊಂಡ ದಂಪತಿ; ಕಳ್ಳ ಕದ್ದಿದ್ದು ಹೀಗೆ!

ಭೀಕರ ಮಳೆಯಿಂದಾಗಿ ನದಿಗಳಲ್ಲಿ ದೊಡ್ಡ ಪ್ರವಾಹವೇ ಉದ್ಭವಗೊಂಡಿವೆ. ಹೀಗಾಗಿ ತೋಳಗಳು ವಾಸವಿರುವ ಪ್ರದೇಶಗಳೆಲ್ಲಾ ಹೆಚ್ಚುಕಡಿಮೆ ಮುಳುಗಿ ಹೋಗಿವೆ, ಇದೇ ಕಾರಣದಿಂದಾಗಿ ಅವು ಅನಿವಾರ್ಯವಾಗಿ ತಮ್ಮ ಪ್ರದೇಶವನ್ನು ತೊರೆದು ಮಾನವರಿರುವ ವಲಯಕ್ಕೆ ನುಗ್ಗುತ್ತಿವೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮಯಾಂಕ ಶ್ರೀವತ್ಸ ಹೇಳುತ್ತಾರೆ. ಭೀಕರ ಮಳೆಯಿಂದಾಗಿ ಉಂಟಾಗಿರುವ ಪ್ರವಾಹವೇ ಸದ್ಯ ಬೆಹ್ರೈಚ್​ನಲ್ಲಿ ತೋಳಗಳ ಕಾಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿತಿಮೀರಿದ ತೋಳಗಳ ಕಾಟ; ನೈಜ ಕಾರಣ ಬಿಚ್ಚಿಟ್ಟ ವನ್ಯಜೀವಿ ತಜ್ಞರು; ತಪ್ಪದೆ ಓದಿ

https://newsfirstlive.com/wp-content/uploads/2024/08/WOLF-ATTACK-IN-UP.jpg

Load More