1985ರಲ್ಲಿ ಮೊದಲ ಬಾರಿಗೆ ಜರ್ಸಿ ತೊಟ್ಟು ಅಖಾಡಕ್ಕಿಳಿದ ಭಾರತ
ಇಂಡಿಯನ್ ಪ್ಲೇಯರ್ಸ್ ಜರ್ಸಿಗೂ, ತ್ರಿವರ್ಣ ಧ್ವಜಕ್ಕೂ ಇದೆ ಲಿಂಕ್
ಜರ್ಸಿ ವಿನ್ಯಾಸ ಬದಲಾದರು ನೀಲಿ ಬಣ್ಣ ಮಾತ್ರ ಹಾಗೇ ಇದೆ ನೋಡಿ
ಭಾರತೀಯ ಕ್ರಿಕೆಟ್ಗೆ 93 ವರ್ಷಗಳ ಇತಿಹಾಸವಿದೆ. ಟೀಮ್ ಇಂಡಿಯಾ ಧರಿಸುವ ನೀಲಿ ಬಣ್ಣದ ಜರ್ಸಿಗೂ ಒಂದು ಹಿಸ್ಟರಿ ಇದೆ. ಅದು ಬಹುತೇಕರಿಗೆ ಗೊತ್ತೇ ಇಲ್ಲ. ಗೊತ್ತಿರದ ಆ ಇನ್ಸೈಡ್ ಸ್ಟೋರಿನೇ ಇವತ್ತಿನ ಸಖತ್ ಸ್ಟೋರಿ.
ಭಾರತ ಕ್ರಿಕೆಟ್ ತಂಡ ನೀಲಿ ಬಣ್ಣದ ಜರ್ಸಿ ಯಾಕೆ ಧರಿಸುತ್ತೆ ಈ ಪ್ರಶ್ನೆ ಎಲ್ಲ ಭಾರತೀಯ ಕ್ರೀಡಾಭಿಮಾನಿಗಳನ್ನ ಕಾಡಿರುತ್ತೆ. ಟೀಮ್ ಇಂಡಿಯಾ ನೀಲಿ ಜರ್ಸಿಯನ್ನೇ ತೊಡಲು ಒಂದು ಬಲವಾದ ಕಾರಣವಿದೆ. ಅದೇನು ಅನ್ನೋದು ಗೊತ್ತಾಗಬೇಕಾದ್ರೆ ಭಾರತದ ರಾಷ್ಟ್ರಧ್ವಜವನ್ನ ಒಮ್ಮೆ ನೆನಪಿಸಿಕೊಳ್ಳಬೇಕು.
ಭಾರತದ ರಾಷ್ಟ್ರಧ್ವಜವನ್ನ ತ್ರಿವರ್ಣ ಧ್ವಜ ಎಂದು ಕರೀತಿವಿ. ಕೇಸರಿ, ಬಿಳಿ ಮತ್ತು ಹಸಿರು ಈ 3 ಬಣ್ಣದಿಂದ ಕೂಡಿರೋದಕ್ಕೆ ತ್ರಿವರ್ಣದ ಧ್ವಜ ಎಂಬ ಹೆಸರು ಬಂದಿದೆ. ಆದ್ರೆ, ಮಧ್ಯದಲ್ಲಿರುವ ಅಶೋಕ್ ಚಕ್ರದ ನೀಲಿ ವರ್ಣವನ್ನ ಮರೆಯೋಕಾಗುತ್ತಾ? ನಮ್ಮ ಟೀಮ್ ಇಂಡಿಯಾ ಇದೇ ಬಣ್ಣವನ್ನ ಸ್ಪೂರ್ತಿಯಾಗಿ ತೆಗೆದುಕೊಂಡಿರುವುದು.
24 ಚಕ್ರಗಳಿರುವ ಕಡು ನೀಲಿ ಬಣ್ಣದ ಅಶೋಕ ಚಕ್ರವೇ ಭಾರತದ ಕ್ರಿಕೆಟ್ ತಂಡದ ಸಮವಸ್ತ್ರಕ್ಕೆ ಸ್ಪೂರ್ತಿಯಾಗಿದೆ. 1985 ರಲ್ಲಿ ಟೀಮ್ ಇಂಡಿಯಾದ ಮೊದಲ ಬಾರಿಗೆ ನೀಲಿ ಜರ್ಸಿ ತೊಟ್ಟು ಕ್ರಿಕೆಟ್ ಆಡಿತು. ಅಲ್ಲಿಂದ ಇಲ್ಲಿತನಕ ಜರ್ಸಿ ಹಲವು ಬದಲಾವಣೆಗಳನ್ನ ಕಂಡಿದೆ. ಒಮ್ಮೆ ಕಡು ನೀಲಿ ಜರ್ಸಿಯಲ್ಲಿ ಆಡಿದ್ರೆ ಮತ್ತೊಮ್ಮೆ ತಿಳಿ ನೀಲಿ ಜರ್ಸಿ ತೊಟ್ಟು ಆಡಿದೆ. ಜರ್ಸಿಯ ವಿನ್ಯಾಸ ಎಷ್ಟೇ ಬದಲಾದರು ಮೂಲ ನೀಲಿ ಬಣ್ಣವನ್ನು ಹಾಗೇ ಉಳಿಸಿಕೊಳ್ಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ