ದೋಸ್ತಿಯಿಂದ ಲೋಕಸಭೆಗೆ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ವಿಧಾನಸಭೆ ಎಲೆಕ್ಷನ್ನಲ್ಲಿ ಮುಸ್ಲಿಂ ಸಮುದಾಯದ ಮತ ಕಾಂಗ್ರೆಸ್ ಪಾಲು
ಬಿಜೆಪಿ-ಜೆಡಿಎಸ್ ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ ಆಗುತ್ತಾ?
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರೋ ಬಿಜೆಪಿ ವರಿಷ್ಠರು ದೋಸ್ತಿಗೆ ಅಸ್ತು ಎಂದಿದ್ದಾರೆ ಎನ್ನಲಾಗಿದೆ. ಇನ್ನೇನಿದ್ದರೂ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯೊಂದೇ ಬಾಕಿ ಉಳಿದಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 11 ಅಥವಾ 13ರಂದು ಮತ್ತೊಂದು ಮೈತ್ರಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಉಭಯ ಪಕ್ಷಗಳ ನಾಯಕರು ಮಾತುಕತೆ ನಡೆಸಿ ಅಂದೇ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಈ ದೋಸ್ತಿ ಮೂಲಕ 25ಕ್ಕೂ ಹೆಚ್ಚು ಲೋಕಸಭಾ ಸೀಟ್ ಗೆಲ್ಲಲು ರಣತಂತ್ರ ಹೆಣೆಯಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್-ಬಿಜೆಪಿ ಒಗ್ಗಟ್ಟಾಗಿ ಹೋರಾಟ ನಡೆಸಲಿವೆ. ವಿರೋಧ ಪಕ್ಷಗಳು ಒಂದಾಗೋದ್ರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸವಾಲು ಎದುರಾಗಬಹುದು.
JDS, BJP ಜೊತೆ ಮೈತ್ರಿಗೆ ಮುಂದಾಗಿದ್ದೇಕೆ?
ಜೆಡಿಎಸ್ ಪಕ್ಷದ್ದು ಜಾತ್ಯಾತೀತ ತತ್ವ ಸಿದ್ಧಾಂತ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮತಗಳು ಬಂದಿಲ್ಲ. ಮುಸ್ಲಿಂ ಸಮುದಾಯದ ಮತಗಳು ಸಂಪೂರ್ಣ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಪಾಲಾದ ಮುಸ್ಲಿಂ ಸಮುದಾಯದ ಮತಗಳೇ ಬಿಜೆಪಿಯನ್ನು ಸೋಲಿಸಲು ಸಹಕಾರಿಯಾಗಿದೆ. ಹೀಗಾಗಿ ಜಾತ್ಯಾತೀತ ಸಿದ್ಧಾಂತಕ್ಕೆ ಕಟ್ಟಿ ಬಿದ್ದು ಬಿಜೆಪಿಯಿಂದ ದೂರ ಇದ್ದರೇ ಲಾಭ ಇಲ್ಲ ಎನ್ನಲಾಗಿದೆ. ಹೀಗಾಗಿ ರಾಜಕೀಯ ಲಾಭ ಮತ್ತು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಬಿಜೆಪಿಯ ಆಸರೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: BJP-JDS ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್
ಲೋಕಸಭಾ ಚುನಾವಣೆಯು ರಾಷ್ಟ್ರೀಯ ವಿಚಾರದ ನಿರ್ಧಾರವಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ಅಲೆ, ರಾಷ್ಟ್ರೀಯ ಭದ್ರತೆಯ ವಿಷಯಗಳ ಮೇಲೆ ಮತದಾನ ನಡೆಯುತ್ತೆ. ಇದೇ ಕಾರಣಕ್ಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಜೆಡಿಎಸ್ ನಿರ್ಧಾರ ಮಾಡಿರುವ ಸಾಧ್ಯತೆಯಿದೆ. ಬಿಜೆಪಿ ಮತ, ಜೆಡಿಎಸ್‌ಗೆ ವರ್ಗಾವಣೆಯಾದರೆ ಮಾತ್ರವೇ ಜೆಡಿಎಸ್‌ಗೆ ಲಾಭವಾಗುತ್ತೆ. ಜೆಡಿಎಸ್ ಪಕ್ಷದ ಶೇಕಡಾ 13 ರಷ್ಟು ಮತ NDA ಮೈತ್ರಿಕೂಟಕ್ಕೆ ಸಿಗುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ