newsfirstkannada.com

Bigg Boss: ಪದೇ ಪದೇ ಸಂಗೀತಾ ಜೊತೆ ಕಾರ್ತಿಕ್ ಜಗಳ; ಇಬ್ಬರ ಮಧ್ಯೆ ಆಗ್ತಿರೋ ಸಮಸ್ಯೆಯಾದರೂ ಏನು?

Share :

08-11-2023

    ನಾನು ಸಿಂಗಲ್​​ ನನಗೆ ಮಿಂಗಲ್​ ಆಗಲು ಹೇಳಬೇಡ ಅಂದಿದ್ಯಾರು?

    ಕಾರ್ತಿಕ್​ ಮಾತಾಡುತ್ತಿರೋ ಮಾತಿಗೆ ಕೋಪಗೊಳ್ಳುವುದೇಕೆ?

    ನೋಡ ನೋಡುತ್ತಿದ್ದಂತೆ ಕಾರ್ತಿಕ್​​ ವಿರುದ್ಧ ತಿರುಗಿ ಬಿದ್ದಿದ್ದೇಕೆ

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್​. ಈ ಬಿಗ್​ಬಾಸ್​ ಸೀಸನ್ 10ರಲ್ಲಿ ಹಿಂದೆಂದಿಗೂ ನಡೆಯದ ಟ್ವಿಸ್ಟ್​ ಆ್ಯಂಡ್​ ಟರ್ನ್ ಈ ಸೀಸನ್​ನಲ್ಲಿ ನಡೆಯುತ್ತಿದೆ. ಬಿಗ್​​ಬಾಸ್​​ ಶುರುವಾಗಿದ್ದಾಗಿನಿಂದ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ​ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಅದೇ ರೀತಿ ​ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಇದೆ ಎಂಬ ಫೋಟೋಗಳು ಸಹ ವೈರಲ್​ ಆಗಿತ್ತು. ಆದರೆ ದಿನ ಕಳೆದಂತೆ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಆಗಾಗ ಗಲಾಟೆ ನಡೆಯುತ್ತಲೇ ಇರುತ್ತದೆ.

ಬಿಗ್​ಬಾಸ್​ ಕೊಟ್ಟ ಟಾಸ್ಕ್​​, ಅಡುಗೆ ಮನೆಯ ವಿಚಾರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕಾರ್ತಿಕ್​ ಜೊತೆ ಜಗಳ ಮಾಡುತ್ತಲೇ ಇರುತ್ತಾರೆ. ತಂಡದ ನಾಯಕಿಯಾಗಿ ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೂ ಕೂಡ ಸಂಗೀತಾ ಕಾರ್ತಿಕ್​ ಅವರಿಗೆ ಫೇಕ್​ ಎಂಬ ಪಟ್ಟವನ್ನು ಕೊಟ್ಟಿದ್ದರು. ಬಿಗ್​ಬಾಸ್​ ಮನೆಯ ಸಾಕಷ್ಟು ಕಡೆಗಳಲ್ಲಿ ಕುಳಿತುಕೊಂಡು ಹಲವು ವಿಚಾರಗಳ ಬಗ್ಗೆ ಮಾತಾಡಿದ್ದರು. ಇತ್ತ ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದು ಸಹ ವೈರಲ್​ ಆಗಿತ್ತು. ಇದೇ ವಿಚಾರವಾಗಿ ಸಂಗೀತಾ ಅವರು ಭಾಗ್ಯಶ್ರೀ ಬಳಿ ನನಗೆ ಯಾವುದೇ ರೀತಿಯಲ್ಲಿ ಲವ್​ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ನಿನ್ನೆಯೂ ಕೂಡ ಬಿಗ್​ಬಾಸ್​ ಮನೆಯಲ್ಲಿ ಕಾರ್ತಿಕ್​ ಹಾಗೂ ಸಂಗೀತಾ ಮನಸ್ತಾಪ ಮೂಡಿತ್ತು. ಹೀಗೆ ಬೇಸರದಲ್ಲಿ ತನಿಶಾ ಬಳಿ ಹೇಳಿಕೊಂಡ ಕಾರ್ತಿಕ್​ ಅವರು, ಅವಳ ಪ್ರಕಾರ ಶ್ ಅಂದ ತಕ್ಷಣ ನಾನು ಸುಮ್ಮನಿರಬೇಕು. ಮಾತಾಡು ಅಂದ ಕ್ಷಣ ಮಾತಾಡಬೇಕು. ಇಷ್ಟೊಂದು ಡಾಮಿನೇಷನ್ ಆದರೆ ನಾನು ತಗೋಳೋದು ಇಲ್ಲ ಎಂದು ಹೇಳಿದ್ದರು. ಕೇವಲ ಸಂಗೀತಾ ಕಾರ್ತಿಕ್​ ಜತೆ ಅಲ್ಲದೇ ವಿನಯ್​​, ನಮ್ರತಾ, ತನಿಶಾ, ಸ್ನೇಹಿತ್​ ಹೀಗೆ ಬಿಗ್​ಬಾಸ್​ ಮನೆಯ ಕೆಲ ಸ್ಪರ್ಧಿಗಳ ಜೊತೆ ಗಲಾಟೆ ಸಹ ಮಾಡಿಕೊಂಡಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಈ ಜಗಳ ಅಂತ್ಯಗೊಂಡು ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss: ಪದೇ ಪದೇ ಸಂಗೀತಾ ಜೊತೆ ಕಾರ್ತಿಕ್ ಜಗಳ; ಇಬ್ಬರ ಮಧ್ಯೆ ಆಗ್ತಿರೋ ಸಮಸ್ಯೆಯಾದರೂ ಏನು?

https://newsfirstlive.com/wp-content/uploads/2023/11/bigg-boss-2023-11-08T150927.701.jpg

Load More