newsfirstkannada.com

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸೋದು ಯಾಕೆ? ಎಲ್ವಿಶ್ ಯಾದವ್ ಪ್ರಕರಣದಿಂದ ‘ನಶೆ’ಯ ಸತ್ಯ ಬಹಿರಂಗ

Share :

03-11-2023

    ಯುವಕರು ವಿಷದಿಂದ ಹೆಚ್ಚು ಸಂತೋಷ, ಅತಿಯಾದ ನಿದ್ರೆಗೆ ಜಾರುತ್ತಾರೆ

    ನೋಯ್ಡಾ ರೇವ್‌ ಪಾರ್ಟಿಯಲ್ಲಿ 9 ಹಾವುಗಳ ಜೊತೆಗೆ ವಿಷದ ಬಾಟಲಿ ಪತ್ತೆ

    ಮನೇಕಾ ಗಾಂಧಿ ಅವರ ಪೀಪಲ್ಸ್ ಫಾರ್ ಅನಿಮಲ್ಸ್ NGO ಸಾರಿದ ಸಮರ

ನೋಯ್ಡಾ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಪತ್ತೆಯಾದ ಪ್ರಕರಣ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಬಿಗ್‌ಬಾಸ್ OTT 2 ವಿನ್ನರ್ ಹಾಗೂ ಜನಪ್ರಿಯ ಯುಟ್ಯೂಬರ್ ಎಲ್ವಿಶ್ ಯಾದವ್‌ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಎಲ್ವಿಶ್ ಯಾದವ್ ಅವರೇ ರೇವ್ ಪಾರ್ಟಿಗೆ ಹಾವಿನ ವಿಷವನ್ನು ಬುಕ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ತಮ್ಮ ವಿರುದ್ಧ ಮಾಡಿರೋ ಆರೋಪಗಳನ್ನೆಲ್ಲಾ ಎಲ್ವಿಶ್ ಯಾದವ್ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ಎಲ್ವಿಶ್ ಯಾದವ್ ಅವರ ರೇವ್ ಪಾರ್ಟಿ ಪ್ರಕರಣ ಬಯಲಾದ ಮೇಲೆ ದೇಶಾದ್ಯಂತ ಹಾವಿನ ವಿಷದ ಬಗ್ಗೆ ಚರ್ಚೆಯಾಗುತ್ತಿದೆ. ಹಾವಿನ ವಿಷವನ್ನು ಅನೇಕರು ಮಾದಕ ವಸ್ತುವಾಗಿ ಬಳಸುತ್ತಿರುವ ಅನುಮಾನಗಳು ವ್ಯಕ್ತವಾಗಿದೆ. ಹಾವಿನ ವಿಷವು ಹೆರಾಯಿನ್ ಅಥವಾ ಇತರೆ ಮಾದಕದ್ರವ್ಯಗಳಾಗಿ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ನೋಯ್ಡಾ ರೇವ್‌ ಪಾರ್ಟಿಯಲ್ಲಿ 9 ಹಾವುಗಳ ಜೊತೆಗೆ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಸಂಗ್ರಹಿಸಿದ್ದ ವಿಷವನ್ನು ವಶಪಡಿಸಿಕೊಳ್ಳಲಾಗಿದೆ. ಆ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ 20-25 ಮಿಲಿ ಲೀಟರ್‌ನಷ್ಟು ಹಾವಿನ ವಿಷ ಪತ್ತೆಯಾಗಿದೆ. ಈ ವಿಷ ಮನುಷ್ಯನ ದೇಹದಲ್ಲಿ ಮಾದಕ ದ್ರವ್ಯವಾಗಿ ಬಳಕೆ ಮಾಡಲಾಗುತ್ತದೆ ಅನ್ನೋದು ಮತ್ತೊಂದು ಆಘಾತಕಾರಿ ಸಂಗತಿ.

ಹಾವಿನ ವಿಷದ ವಿರುದ್ಧ ಮನೇಕಾ ಗಾಂಧಿ ಸಮರ!

ಫೇಮಸ್ ಯುಟ್ಯೂಬರ್ ಎಲ್ವಿಶ್‌ ಯಾದವ್ ವಿರುದ್ಧ ಕೇಳಿ ಬಂದಿರೋ ಹಾವಿನ ವಿಷದ ಪ್ರಕರಣ ಬೆಳಕಿಗೆ ಬಂದಿದ್ದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ನಡೆಸುವ ಪೀಪಲ್ಸ್ ಫಾರ್ ಅನಿಮಲ್ಸ್ ಅನ್ನೋ NGO ಹಾಗೂ ಗೌರವ್ ಗುಪ್ತಾ ಅನ್ನೋ ಪ್ರಾಣಿ ಪ್ರಿಯ ಹೋರಾಟಗಾರರಿಂದ. ಗೌರವ್ ಗುಪ್ತಾ ಅವರು ಎಲ್ವಿಶ್ ಯಾದವ್‌ ನಡೆಸುತ್ತಿದ್ದ ರೇವ್ ಪಾರ್ಟಿಯಲ್ಲಿ ಹಾವುಗಳನ್ನ ಬಳಸುತ್ತಿದ್ದು, ಹಾವಿನ ವಿಷದಿಂದ ಯುವಕರು ಎಂಜಾಯ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪಾರ್ಟಿಯಲ್ಲಿ ಹಾವಿನ ವಿಷ ಬಳಸೋದು ಯಾಕೆ?

ಎಲ್ವಿಶ್ ಯಾದವ್ ಪ್ರಕರಣದಿಂದ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸೋದು ಯಾಕೆ ಅನ್ನೋದು ಕುತೂಹಲ ಕೆರಳಿಸಿದೆ. ಹಾವಿನ ವಿಷದ ನಶೆ ಯುವಕರಲ್ಲಿ ಹೆಚ್ಚು ಸಂತೋಷ ಮತ್ತು ಅತಿಯಾದ ನಿದ್ರೆಗೆ ಸಹಕಾರಿಯಾಗುತ್ತದೆ. 3-4 ವಾರಗಳ ಕಾಲ ಅದರ ನಶೆ ದೇಹದಲ್ಲಿ ಪ್ರಭಾವ ಬೀರುತ್ತದೆ. ಇಂತಹ ವ್ಯಸನಿಗಳು ಕೊನೆಗೆ ಹಾವಿನ ವಿಷವಿಲ್ಲದೆ ಬದುಕಲಾರರು ಎನ್ನಲಾಗಿದೆ. ದೇಶದಲ್ಲಿ ನಾಗರಹಾವು, ಹೆಬ್ಬಾವುಗಳ ಸಂಖ್ಯೆ ಬಹಳ ಕಡಿಮೆ ಇದ್ದು, ಅವುಗಳನ್ನು ಹಿಡಿಯುವುದು ಹಾಗೂ ಮಾರಾಟ ಮಾಡುವುದು ಅಪರಾಧವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸೋದು ಯಾಕೆ? ಎಲ್ವಿಶ್ ಯಾದವ್ ಪ್ರಕರಣದಿಂದ ‘ನಶೆ’ಯ ಸತ್ಯ ಬಹಿರಂಗ

https://newsfirstlive.com/wp-content/uploads/2023/11/Rev-Party-Snake-Venom-1.jpg

Load More