ಕಿರಣ್‌ನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಿದ ಪೊಲೀಸರು
ಕೊಲೆ ಆರೋಪಿ ಕಿರಣ್‌ಗೆ ನವೆಂಬರ್ 15ನೇ ತಾರೀಖಿನವರೆಗೂ ಕಸ್ಟಡಿ
ನಾಲ್ಕು ವರ್ಷಗಳಿಂದ ಕಾಂಟ್ರ್ಯಾಕ್ಟ್ ಮೇಲೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ
ಬೆಂಗಳೂರು: ಗಣಿ ಇಲಾಖೆ ಅಧಿಕಾರಿ, ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣದಲ್ಲಿ ಕೊಲೆಗಾರನ ಕ್ರೌರ್ಯ ಭೀಕರವಾಗಿದೆ. ಆರೋಪಿ ಡ್ರೈವರ್ ಕಿರಣ್, ಪೊಲೀಸರ ವಿಚಾರಣೆಯಲ್ಲಿ ಅಂದು ನಿಜಕ್ಕೂ ನಡೆದಿದ್ದೇನು ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾನೆ. ಪ್ರತಿಮಾ ಅವರನ್ನು ಉಸಿರುಗಟ್ಟಿಸಿ ಕೊಂದಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರತಿಮಾ ಕೊಲೆ ಆರೋಪಿ ಕಿರಣ್ ಅನ್ನು ಬಂಧಿಸಿರುವ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 2ನೇ ACMM ಕೋರ್ಟ್ ಕೊಲೆ ಆರೋಪಿ ಕಿರಣ್‌ಗೆ 10 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಇದೇ ನವೆಂಬರ್ 15ನೇ ತಾರೀಖಿನವರೆಗೂ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರತಿಮಾ ಹಾಗೂ ಕಿರಣ್ ಕಿರಿಕ್‌ಗೆ ಕಾರಣವೇನು?
ಪ್ರತಿಮಾ ಕೊಲೆ ಆರೋಪಿ ಕಿರಣ್ ಕಳೆದ ನಾಲ್ಕು ವರ್ಷಗಳಿಂದ ಕಾಂಟ್ರ್ಯಾಕ್ಟ್ ಬೇಸಿಸ್ ಮೇಲೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದನಂತೆ. 2 ತಿಂಗಳ ಹಿಂದೆ ಭೂ ವಿಜ್ಞಾನಿ ಅಧಿಕಾರಿ ಪ್ರತಿಮಾ ಅವರಿಗೆ ಇಲಾಖೆಯಿಂದ ಹೊಸ ಕಾರು ಕೊಡಲಾಗಿದೆ. ಆ ಹೊಸ ಸರ್ಕಾರಿ ಕಾರನ್ನ ಚಾಲಕ ಕಿರಣ್ ಅಪಘಾತ ಮಾಡಿಕೊಂಡು ಬಂದಿದ್ದ. ಅಪಘಾತ ಆದ ತಕ್ಷಣ ಕಾರನ್ನ ಕಚೇರಿ ಬಳಿ ನಿಲ್ಲಿಸಿ ಕಿರಣ್ ಪರಾರಿಯಾಗಿದ್ದ.
ಇದನ್ನೂ ಓದಿ: ರಾತ್ರಿ 7 ಗಂಟೆಗೆ ಎಂಟ್ರಿಯಾಗಿದ್ದ.. ಕೊಲೆ ಆಗಿದ್ದು ಹೇಗೆ? ಪ್ರತಿಮಾ ಹತ್ಯೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಡಿಸಿಪಿ
ಹೊಸ ಸರ್ಕಾರಿ ಕಾರು ಅಪಘಾತ ಆದ ಮೇಲೆ ಕಿರಣ್ ಕೆಲಸಕ್ಕೆ ಬಂದೇ ಇರಲಿಲ್ಲ. ಕಾರು ಅಪಘಾತ ಆದ ಬಳಿಕ ಕೀ ಅನ್ನು ಕಿರಣ್ ವಾಚ್ ಮ್ಯಾನ್ ಕೈಗೆ ಕೊಟ್ಟು ಹೋಗಿದ್ದ. ಅನಿವಾರ್ಯವಾಗಿ ಪ್ರತಿಮಾ ಅವರು ತಾತ್ಕಾಲಿಕವಾಗಿ ಪರಿಚಯಸ್ಥರೊಬ್ಬರನ್ನ ಚಾಲಕರನ್ನಾಗಿ ನೇಮಿಸಿಕೊಂಡಿದ್ದಾರೆ. ಈ ಅಪಘಾತ ಮಾಡಿದ ವಿಚಾರಕ್ಕೆ ಪ್ರತಿಮಾ ಹಾಗೂ ಕಿರಣ್ ಅವರ ನಡುವೆ ಕಿರಿಕ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ