newsfirstkannada.com

ಅಂದು ಅರೆಸ್ಟ್​ ಆಗಿದ್ರು ಇಸ್ರೋದ ಈ ಮಾಜಿ ವಿಜ್ಞಾನಿ.. ‘ವಿಕಾಸ್ ರಾಕೆಟ್’ ತಯಾರಿಸಲು ಇವರ ಕೊಡುಗೆ ಅಪಾರ 

Share :

23-08-2023

    ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಬಂಧನವಾಗಿದ್ದು ಯಾಕೆ?

    ವಿಕಾಸ್ ರಾಕೆಟ್ ಎಂಜಿನ್ ತಯಾರಿಸಲು ಅವರ ಕೊಡುಗೆ ಏನು?

    ಇಸ್ರೋದ ಕ್ರಯೋಜೆನಿಕ್ ವಿಭಾಗದ ಅಧಿಕಾರಿಯಾಗಿದ್ದ ನಂಬಿ ನಾರಾಯಣನ್

ಚಂದ್ರಯಾನ-3 ನೌಕೆ ಸಕ್ಸಸ್​ ಕಾಣಲು ಕ್ಷಣಗಣನೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್​ ಚಂದ್ರನನ್ನ ಸ್ಪರ್ಶಿಸಲಿದೆ. ಒಂದು ವೇಳೆ ವಿಕ್ರಂ ಸಾಫ್ಟ್ ಲ್ಯಾಂಡಿಂಗ್​ ಯಶಸ್ವಿಯಾದರೆ ಭಾರತದ ಚಂದ್ರನಲ್ಲಿಗೆ ಕಾಲಿಟ್ಟ 4ನೇ ದೇಶವಾಗಿ ಹೊರಹೊಮ್ಮಲಿದೆ. ಅಂದಹಾಗೆಯೇ ಇಂತಹ ಸಮಯಲ್ಲಿ ​ಭಾರತ ಮಾಜಿ ವಿಜ್ಞಾನಿ ನಾಗರಕೋಯಿಲ್ ನಂಬಿ ನಾರಾಯಣನ್​​ ಅವರನ್ನು ನೆನಪಿಸಿಕೊಳ್ಳಲೇಬೇಕಿದೆ. ಆರೋಪವೊಂದರಿಂದ ಬಂಧನಕ್ಕೊಳಗಾಗಿ ಕೊನೆಗೆ ತಾನು ನಿರಪರಾಧಿಯಾಗಿ ಹೊರಬಂದ ನಂಬಿ ನಾರಾಯಣನ್​​ ಅವರ ಕಥೆ ಹೀಗಿದೆ..

ನಂಬಿ ನಾರಾಯಣನ್​​ ಭಾರತದ ಮಾಜಿ ಏರೋಸ್ಪೇಸ್ ಎಂಜಿನಿಯರ್. ಇಸ್ರೋ ಸಂಸ್ಥೆಯಲ್ಲಿ ದುಡಿದು ವಿಕಾಸ್ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುವುದರ ಮೂಲಕ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಭಾರತದ ಮೊದಲ PSLV ಉಡಾವಣೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇಸ್ರೋದ ಕ್ರಯೋಜೆನಿಕ್ ವಿಭಾಗದ ಅಧಿಕಾರಿ ಕಾರ್ಯನಿರ್ವಹಿಸಿದ್ದರು.

ನಂಬಿ ನಾರಾಯಣನ್
ನಂಬಿ ನಾರಾಯಣನ್

ಬಂಧನಕ್ಕೊಳಗಾಗಿದ್ದ ನಂಬಿ ನಾರಾಯಣನ್​

1994ರಲ್ಲಿ ನಂಬಿ ನಾರಾಯಣನ್​​ನವರ ವಿರುದ್ಧ ಸ್ಫೋಟಕ ಆರೋಪವೊಂದು ಕೇಳಿಬಂದಿತ್ತು. ಭಾರತೀಯ ಬಾಹ್ಯಕಾಶ ಕೆಲವು ಗೋಪ್ಯ ದಾಖಲೆಗಳನ್ನ ಇಬ್ಬರು ವಿಜ್ಞಾನಿಗಳು ಮತ್ತು ಇಬ್ಬರು ಮಾಲ್ಡೀವಿಯನ್​ ಮಹಿಳೆಯರು ಸೇರಿದಂತೆ ಇತರ ನಾಲ್ವರು ವಿದೇಶಿಯರಿಗೆ ರವಾನೆ ಮಾಡಿದ್ದರು ಎಂಬ ಆರೋಪದ ಮೇರೆಗೆ ಅರೆಸ್ಟ್​ ಆಗಿದ್ದರು. ಪೊಲೀಸರು ಸುಳ್ಳು ಕಥೆ ಅವರನ್ನು ಅರೆಸ್ಟ್​ ಮಾಡಿದ್ದರು. ಆದರೆ ಸಿಬಿಐ 1996 ಸರಿಯಾದ ತನಿಖೆ ಬಳಿಕ ನಂಬಿ ನಾರಾಯಣನ್​​ ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿತು.

ಎ ಪಿ ಜೆ ಅಬ್ಬುಲ್​ ಕಲಾಂ ಜೊತೆಗೆ ನಂಬಿ ನಾರಾಯಣನ್

2018ರಲ್ಲಿ ಸೆ.14ರಂದು ಸುಪ್ರಿಂಕೋರ್ಟ್​ನಲ್ಲಿ ನಂಬಿ ನಾರಾಯಣನ್ ಅವರಿಗೆ ಮಾಡಿದ ಅವಮಾನದ​​ ಕುರಿತು ಕೇರಳ ಸರ್ಕಾರ 50 ಲಕ್ಷ ಪರಿಹಾರ ನೀಡುವಂತೆ ಘೋಷಿಸಿತು. ಆದರೆ ಕೇರಳ ಸರ್ಕಾರ 1.3 ಕೋಟಿ ಪರಿಹಾರವನ್ನು ನೀಡಿತು. 2019ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು. ಆದರೆ ಯಾವುದೋ ಸುಳ್ಳು ಆರೋಪದ ಮೇರೆಗೆ ಅಂದು ಅರೆಸ್ಟ್​ ಆಗಿ ಅವಮಾನಕ್ಕೆ ಒಳಗಾಗಿದ್ದ ನಂಬಿ ನಾರಾಯಣನ್​​ ಮಾಜಿ ವಿಜ್ಞಾನಿಯ ಕಥೆಯನ್ನು 2022ರಲ್ಲಿ ಸಿನಿಮಾ ಮಾಡಲಾಯಿತು. ಖ್ಯಾನ ನಟ ಮಾಧವನ್​ ರಾಕೆಟ್ರಿ; ದಿ ನಂಬಿ ಎಫೆಕ್ಸ್​ ಎಂಬ ಹೆಸರಿನಲ್ಲಿ ಸಿನಿಮಾದಲ್ಲಿ ನಟಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಅರೆಸ್ಟ್​ ಆಗಿದ್ರು ಇಸ್ರೋದ ಈ ಮಾಜಿ ವಿಜ್ಞಾನಿ.. ‘ವಿಕಾಸ್ ರಾಕೆಟ್’ ತಯಾರಿಸಲು ಇವರ ಕೊಡುಗೆ ಅಪಾರ 

https://newsfirstlive.com/wp-content/uploads/2023/08/Nambi-narayanan.jpg

Load More