ಇತರೆ ಆಟಗಾರರಂತೆ ಅಲ್ಲ, MS ಧೋನಿ
ಭಾರತಾಂಬೆ ಅಂದ್ರೆ ಧೋನಿಗೆ ಅಪಾರ ಪ್ರೀತಿ
ಬ್ಯಾಡ್ಜ್ ಧರಿಸದಿರೋದಕ್ಕೆ ಧೋನಿ ಹೇಳಿದ್ದೇನು?
ಈ ಹಿಂದೆ ಸಚಿನ್ ತೆಂಡುಲ್ಕರ್, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್.. ಈಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ.. ಹೀಗೆ ಭಾರತದ ಹಲ ಆಟಗಾರರು ಧರಿಸೋ ಹೆಲ್ಮೆಟ್ ಮೇಲೆ ನಮ್ಮ ಹೆಮ್ಮೆಯ ತಿರಂಗಾ ಇದೆ. ಆದ್ರೆ ದೇಶಾಭಿಮಾನಿ ಧೋನಿಯ ಹೆಲ್ಮೆಟ್ ಮೇಲೆ ಇರಲಿಲ್ಲ.
ಮಹೇಂದ್ರ ಸಿಂಗ್ ಧೋನಿಯ ದೇಶಾಭಿಮಾನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದೇಶ ಹಾಗೂ ದೇಶದ ಸೇನೆ ಬಗ್ಗೆ ಧೋನಿ ವಿಶೇಷವಾದ ಅಭಿಮಾನ ಹೊಂದಿದ್ದಾರೆ. ಹಿಂದೊಮ್ಮೆ ಟೀಮ್ ಇಂಡಿಯಾದಿಂದ 2 ತಿಂಗಳ ಕಾಲ ರಜೆ ಪಡೆದಿದ್ದ ಮಹೇಂದ್ರ ಸಿಂಗ್ ಧೋನಿ, 15 ದಿನ ಟೆರಿಟೋರಿಯಲ್ ಆರ್ಮಿ ಬಟಾಲಿಯನ್ ಪ್ಯಾರಾ ಕಮಾಂಡೋ ಯುನಿಟ್ನಲ್ಲಿ ಕಾರ್ಯ ನಿರ್ವಹಿಸಿದ್ದರು. ತ್ಯಾಗ ಬಲಿದಾನದ ಬ್ಯಾಡ್ಜ್ ತೊಟ್ಟು ವಿಶ್ವಕಪ್ ಪಂದ್ಯವನ್ನು ಆಡಿದ್ರು. ಅಷ್ಟೇ ಏಕೆ.. ಸ್ವಾತಂತ್ರ್ಯ ದಿನದಂದು ತಮ್ಮ ಫಾರ್ಮ್ಹೌಸ್ನಲ್ಲೇ ಫ್ಲ್ಯಾಗ್ ಹೋಸ್ಟ್ ಮಾಡಿ ದೇಶ ಪ್ರೇಮ ಮೆರೆದಿದ್ರು.
ಭಾರತ, ಭಾರತಾಂಬೆ ಅಂದ್ರೆ ಧೋನಿ ಅವ್ಯಕ್ತವಾದ ಪ್ರೀತಿಯಿದೆ. ಟೀಮ್ ಇಂಡಿಯಾದ ಉಳಿದೆಲ್ಲಾ ಕ್ರಿಕೆಟಿಗರು ಹೆಮ್ಮೆಯ ಭಾರತದ ಬಾವುಟದ ಬ್ಯಾಡ್ಜ್ ಅನ್ನ ಹೆಲ್ಮೆಟ್ ಮೇಲೆ ಧರಿಸಿದ್ರೆ, ಧೋನಿಯ ಹೆಲ್ಮೆಟ್ ಮೇಲೆ ಮಾತ್ರ ತ್ರಿವರ್ಣ ಧ್ವಜದ ಬ್ಯಾಡ್ಜ್ ಇಲ್ಲದಾಗಿತ್ತು. ದೇಶಾಭಿಮಾನ ಹೊಂದಿರುವ ಮಾಹಿ, ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ನೊಂದಿಗೆ ಮಾತ್ರವೇ ಅಂಗಳಕ್ಕಿಳಿಯುತ್ತಿದ್ದರು.
ಇದ್ಯಾಕೆ ಅನ್ನೋ ಪ್ರಶ್ನೆಗೆ ಧೋನಿ ಉತ್ತರ ರೆಸ್ಪೆಕ್ಟ್. ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುವ ವೇಳೆ ಹೆಲ್ಮೆಟ್ನ ನೆಲದ ಮೇಲೆ ಇಡಬೇಕಾಗುತ್ತದೆ. ತ್ರಿವರ್ಣ ಧ್ವಜ ಬ್ಯಾಡ್ಜ್ ಹೆಲ್ಮೆಟ್ ಮೇಲಿದ್ರೆ ರಾಷ್ಟ್ರಧ್ವಜವನ್ನ ನೆಲಕ್ಕಿಟ್ಟಂತೆ ಆಗಲಿದ್ದು, ಅಗೌರವ ತೋರಿದಂತಾಗುತ್ತೆ. ಹೀಗಾಗಿಯೇ ಧೋನಿ ತಿರಂಗಾ ಹೊಂದಿದ್ದ ಹೆಲ್ಮೆಟ್ ಧರಿಸಿ ಕಣಕ್ಕಿಳೀತಾ ಇರಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್