Advertisment

ಪರಮಾಣು ಬಾಂ*​ ಪರೀಕ್ಷೆಯಲ್ಲಿ ಈರಳ್ಳಿ ಆಲೂಗಡ್ಡೆ ಬಳಸೋದು ಯಾಕೆ? ಇಲ್ಲಿದೆ ಅಸಲಿ ಮಾಹಿತಿ

author-image
Ganesh
Updated On
ಪರಮಾಣು ಬಾಂ*​ ಪರೀಕ್ಷೆಯಲ್ಲಿ ಈರಳ್ಳಿ ಆಲೂಗಡ್ಡೆ ಬಳಸೋದು ಯಾಕೆ? ಇಲ್ಲಿದೆ ಅಸಲಿ ಮಾಹಿತಿ
Advertisment
  • ಪರೀಕ್ಷೆ ವೇಳೆ ಕ್ವಿಂಟಾಲ್​ಗಟ್ಟಲೇ ಈರಳ್ಳಿ ಆಲೂಗಡ್ಡೆ ಬಳಸುತ್ತಾರೆ
  • ಲಕ್ಷಾಂತರ ಟನ್​ಗಟ್ಟಲೇ ಈ ಎರಡು ತರಕಾರಿಯನ್ನು ಉಪಯೋಗಿಸುವುದೇಕೆ?
  • ಈರುಳ್ಳಿ-ಆಲೂಗಡ್ಡೆಯನ್ನು ಬಳಸದೇ ಪರಮಾಣು ಪರೀಕ್ಷೆ ಮಾಡಿದ್ರೆ ಏನಾಗುತ್ತೆ?

ಇಡೀ ಜಗತ್ತಿನಲ್ಲಿ ಒಟ್ಟು 9 ರಾಷ್ಟ್ರಗಳು ಪರಮಾಣು ಬಾಂಬ್​ ಹೊಂದಿದ ರಾಷ್ಟ್ರಗಳ ಎಂದು ಗುರುತಿಸಿಕೊಂಡಿವೆ. ಅಂತಹ ಬಲಿಷ್ಠ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ನೀವು ಪರಮಾಣು ಬಾಂಬ್ ಪರೀಕ್ಷೆಯ ಬಗ್ಗೆ ಅನೇಕ ಕುತೂಹಲಕಾರಿ ಅಂಶಗಳನ್ನು ಕೇಳಿರಬಹುದು. ಆದ್ರೆ ಪರಮಾಣು ಬಾಂಬ್ ಪರೀಕ್ಷೆ ವೇಳೆ ಕ್ವಿಂಟಾಲ್​ಗಟ್ಟಲೇ ಈರಳ್ಳಿ ಆಲೂಗಡ್ಡೆ ಬಳಸುತ್ತಾರೆ ಅನ್ನೋದನ್ನು ನೀವು ಕೇಳಿರುವುದಿಲ್ಲ. ಅಸಲಿಗೆ ಪರಮಾಣು ಬಾಂಬ್ ಪರೀಕ್ಷೆ ವೇಳೆ ಈ ಎರಡು ತರಕಾರಿಗಳನ್ನು ಬಳಸುತ್ತಾರೆ.

Advertisment

ಇದನ್ನೂ ಓದಿ:Rain Alert: ಕೆಮ್ಮು, ನೆಗಡಿ, ವೈರಲ್ ಫೀವರ್.. ಬೆಂಗಳೂರಲ್ಲಿ ಮಳೆ ಜೊತೆಗೆ ಆರೋಗ್ಯಕ್ಕೂ ಎಚ್ಚರಿಕೆ!

ಭಾರತ ತನ್ನ ಪರಮಾಣು ಬಾಂಬ್​ ಪರೀಕ್ಷೆಯನ್ನು ಪೋಖ್ರಾನ್​ನಲ್ಲಿ ಪರೀಕ್ಷಿಸಿದ ವೇಳೆ ಸಾಕಷ್ಟು ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಬಳಸಿತ್ತು ಎಂದು ವರದಿಗಳಾಗಿದ್ದವು. ಉಳಿದ ಅನೇಕ ದೇಶಗಳು ಪರಮಾಣು ಪರೀಕ್ಷೆ ವೇಳೆ ಈರುಳ್ಳಿ ಟೊಮೆಟೊವನ್ನು ಕೂಡ ಬಳಸಿವೆ. ಆದ್ರೆ ಅತಿಹೆಚ್ಚು ದೇಶಗಳು ಬಳಸಿದ್ದು ಈರುಳ್ಳಿ ಹಾಗೂ ಆಲೂಗಡ್ಡೆಯನ್ನೇ. ಹಾಗಿದ್ರೆ ಪರಮಾಣು ಬಾಂಬ್ ಪರೀಕ್ಷೆಗೆ ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಏಕೆ ಬಳಸುತ್ತಾರೆ ಅಂತ ನೋಡುವುದಾದ್ರೆ,

ಈರುಳ್ಳಿ ಹಾಗೂ ಆಲೂಗಡ್ಡೆಯಲ್ಲಿ ವಿಕಿರಣಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಪರಮಾಣು ಬಾಂಬ್ ಪರೀಕ್ಷೆ ಮಾಡುವಾಗ ಒಂದು ಬಾರಿ ಪರಮಾಣು ಬಾಂಬ್ ಸ್ಫೋಟಗೊಂಡಾಗ ಅದರಿಂದ ಅಲ್ಫಾ, ಬೆಟಾ ಗಾಮ್ಮಾ ಎನ್ನುವ ವಿಕಿರಣಗಳು (Gamma rays) ಹೊರಹೊಮ್ಮುತ್ತವೆ ಅವುಗಳನ್ನು ಹೀರಿಕೊಳ್ಳುವ ಶಕ್ತಿ ಈರುಳ್ಳಿಗೆ ಇದೆ. ಈ ಕಾರಣಕ್ಕಾಗಿಯೇ ಪರಮಾಣು ಬಾಂಬ್ ಪರೀಕ್ಷೆ ವೇಳೆ ಲಕ್ಷಾಂತರ ಟನ್ ಈರುಳ್ಳಿಯನ್ನು ಈ ವೇಳೆ ಉಪಯೋಗಿಸುತ್ತಾರೆ. ಈ ಪರೀಕ್ಷೆ ವೇಳೆ ಅಷ್ಟು ಪ್ರಮಾಣದ ಈರುಳ್ಳಿ ಉರಿದು ಬೂದಿಯಾಗುತ್ತದೆ.
ಪರಮಾಣು ಪರೀಕ್ಷೆ ವೇಳೆ ಹೊರಹೊಮ್ಮುವ ವಿಕರಣಗಳನ್ನು ತಡೆಯಲೇಬೇಕಾಗುತ್ತದ. ಒಂದು ವೇಳೆ ಇವು ಮನುಷ್ಯರ ಸಂಪರ್ಕಕ್ಕೆ ಬಂದಿದ್ದೇ ಆದಲ್ಲಿ ಮನುಷ್ಯನ ರಕ್ತದ ಕಣಗಳೇ ಸರ್ವನಾಶವಾಗಿ ಹೋಗುತ್ತವೆ ಎಂದು ಹೇಳಲಾಗುತ್ತದೆ.

Advertisment

ಇದನ್ನೂ ಓದಿ:ಸ್ಯಾಂಡಲ್​​ವುಡ್​ ನಟ ಮಯೂರ್ ಪಾಟೀಲ್ ವಿರುದ್ಧ ಎಫ್​ಐಆರ್; ಆಗಿದ್ದೇನು..?

ಇನ್ನು ಆಲೂಗಡ್ಡೆಯೂ ಕೂಡ ಇಂತಹುದೇ ಒಂದು ಪಾತ್ರವನ್ನು ಪರಮಾಣು ಬಾಂಬ್ ಪರೀಕ್ಷೆ ವೇಳೆ ನಿರ್ವಹಿಸುತ್ತದೆ. ಪ್ರಮುಖವಾಗಿ ಗಾಮ್ಮಾ ಅನ್ನುವ ವಿಕಿರಣವನ್ನು (Gamma rays) ಈ ಆಲೂಗಡ್ಡೆ ಹೀರಿಕೊಳ್ಳುತ್ತದೆ. ಹೀಗಾಗಿ ಪರಮಾಣು ಬಾಂಬ್​ ಪರೀಕ್ಷೆ ವೇಳೆ ಈ ಎರಡು ತರಕಾರಿಗಳನ್ನು ಲಕ್ಷಂತಾರ ಟನ್​ಗಟ್ಟಲೇ ಬಳಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment