ಹಿಂದೂ ಫೈರ್ಬ್ರ್ಯಾಂಡ್ ಡಿಸಿಎಂ ಪವನ್ ಕಲ್ಯಾಣ್‌ಗೆ ಇರೋದು ಕ್ರಿಶ್ಚಿಯನ್ ಪತ್ನಿ!
ಹಿಂದೊಮ್ಮೆ ಮತಾಂತರವಾಗಿದ್ದೇನೆ ಅಂದಿದ್ದರು ಇದೇ ಪವನ್ ಕಲ್ಯಾಣ್ ಸ್ಟಾರ್ ನಟ!
ಮಗಳು, ಮಗ ಕ್ರಿಶ್ಚಿಯನ್ ಅಂದಿದ್ರಾ ಪವನ್ ? ಹಳೆ ವಿಡಿಯೋ ಹೇಳ್ತಿರೊದೇನು?
ರಾಜಕಾರಣಿಗಳು ಪಕ್ಷ ಬದಲಾವಣೆ ಮಾಡೋದು ಹೊಸ ವಿಷ್ಯವಲ್ಲ. ಆದ್ರೆ, ತತ್ವ ಸಿದ್ಧಾಂತಗಳನ್ನು ಬದಲಾಯಿಸೋದು ಕಂಡಿತವಾಗಿಯೂ ವಿಶೇಷ. ಇದನ್ನು ನಾವೇಕೆ ಹೇಳ್ತಿದ್ದೇವೆ ಅಂದ್ರೆ ಕಾರಣ ಹಿಂದೂ ಫೈರ್ ಬ್ರಾಂಡ್, ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್. ಹೌದು, ಇಂದು ಸನಾತನ ಧರ್ಮದ ಕಿಚ್ಚು ಹಚ್ಚಿಸಿರೋ ಪವನ್ ಕಲ್ಯಾಣ್ ಹಿಂದಿನ ವಿಡಿಯೋಗಳು ವೈರಲ್ ಆಗ್ತಿವೆ. ಅಷ್ಟಕ್ಕೂ ಆಂಧ್ರ ಡಿಸಿಎಂ ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ರಾ? ಅವರ ಮೂರನೇ ಕಲ್ಯಾಣ ರಹಸ್ಯ ಏನು?
ಪವನ್ ಕಲ್ಯಾಣ್, ಆಂಧ್ರ ಪ್ರದೇಶದ ಡಿಸಿಎಂ. ನೆರೆಯ ರಾಜ್ಯದ ಉಪಮುಖ್ಯಮಂತ್ರಿ. ತಮ್ಮ ಪಕ್ಷದ ಅತ್ಯಮೋಘ ಗೆಲುವಿನ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಪವರ್ಸ್ಟಾರ್. ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಮೇಲೆ ಎಲ್ಲರೂ ಹುಬ್ಬೇರಿಸಿದ್ದು ಒಂದೇ ಕಾರಣಕ್ಕೆ.ಇಷ್ಟೂ ವರ್ಷಗಳ ಕಾಲ ತೆರೆಯ ಮೇಲೆ ಬೆಂಕಿಯಂತೆ ಬೊಬ್ಬಿರಿಯುತ್ತಿದ್ದ ಪವನ್ ಕಲ್ಯಾಣ್ ಇನ್ಮುಂದೆ ರಾಜಕಾರಣದಲ್ಲಿ ಎದುರಾಳಿಗಳ ಪಾಲಿಗೆ ಅಕ್ಷರಶಃ ದುಸ್ವಪ್ನವಾಗ್ತಾರೆ ಅನ್ನೋ ನಿರೀಕ್ಷೆಯಿಂದ ಇಡೀ ರಾಜ್ಯದ ಜನರು ಹುಬ್ಬೇರಿಸಿದ್ದರು. ಆಂಧ್ರ ಜನರ ಆ ನಿರೀಕ್ಷೆ ಒಂದು ರೀತಿಯಲ್ಲಿ ನಿಜವಾಗಿದೆ ಅಂತಾನೇ ಹೇಳಬಹುದು. ಯಾಕಂದ್ರೆ, ಪವನ್ ಕಲ್ಯಾಣ್ ಒಬ್ಬ ಉಪಮುಖ್ಯಮಂತ್ರಿಯಾಗಿ ರಾಜಕಾರಣಿಯಾಗಿ ಮಾತ್ರ ಎದುರಾಳಿಗಳ ವಿರುದ್ಧ ಬೆಂಕಿಯುಗುಳುತ್ತಿಲ್ಲ.ಬದಲಾಗಿ ಕೋಟ್ಯಂತರ ಜನರ ಹಿಂದೂಗಳ ಪಾಲಿನ ಬ್ರ್ಯಾಂಡ್ ಅಂಬಾಸಿಡರ್ ಹಾಕುವತ್ತ ಹೆಜ್ಜೆ ಹಾಕ್ತಿದ್ದಾರೆ.
ತಿರುಪತಿ ಲಡ್ಡುವಿಗೆ ಅಪಚಾರವಾದ ಘಟನೆ ನಡೆದ ಬಳಿಕ ಪವನ್ ಕಲ್ಯಾಣ್ ಆಡ್ತಿರೋ ಒಂದೊಂದು ಮಾತುಗಳೂ ಪ್ರತಿಯೊಬ್ಬ ಹಿಂದೂವನ್ನ ಅಕ್ಷರಶಃ ಬಡಿದೆಬ್ಬಿಸುವಂತಿವೆ. ಹಿಂದೂಗಳಿಗೆ ಅನ್ಯಾಯವಾಗ್ತಿದೆ ಅನ್ನೋದರ ಪರ ನಿಂತು ವಿರೋಧಿಗಳಿಗೆ ಬೆಂಕಿಚೆಂಡುಗಳನ್ನ ಬಿಸಾಡುತ್ತಿರುವ ಪವನ್ ಕಲ್ಯಾಣ್ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ, ಅಮಿತ್ ಶಾರರಂತಹ ಕಟು ರಾಷ್ಟ್ರೀಯವಾದಿಗಳನ್ನ ನೆನಪು ಮಾಡ್ತಿದ್ದಾರೆ. ಅದ್ಯಾವಾಗ ಪವನ್ ಕಲ್ಯಾಣ್ ಎನ್ನುವಂತಹ ಖಡಕ್ ವ್ಯಕ್ತಿತ್ವದ ನಾಯಕ ಹಿಂದೂ ಧರ್ಮದ ಬಗ್ಗೆ, ಹಿಂದೂ ಧರ್ಮಕ್ಕಾಗ್ತಿರೋ ಅವಮಾನದ ಬಗ್ಗೆ, ಧರ್ಮ ಪಾಲನೆ ಬಗ್ಗೆ ದೀಕ್ಷೆ ತೊಟ್ಟು ಮಾತಿನ ರಾಕೆಟ್ಗಳನ್ನ ಉಡಾಯಿಸಲು ಶುರುಮಾಡಿದ್ರೋ ಆಗಿನಿಂದ ಪವನ್ ಕಲ್ಯಾಣ್ ವೈಯಕ್ತಿಕ ಜೀವನದ ಬಗ್ಗೆಯೂ ತುಸು ಹೆಚ್ಚಾಗಿಯೇ ಚರ್ಚೆಯಾಗ್ತಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ಹಿಂದೂ ಫೈರ್ಬ್ರ್ಯಾಂಡ್!
ಇತ್ತೀಚಿನ ದಿನಗಳಲ್ಲಿ ಪವನ್ ಕಲ್ಯಾಣ್ರ ನಡೆನುಡಿಗಳನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಯೋಗಿ ಆದಿತ್ಯನಾಥ್ ಸ್ಥಾನವನ್ನ ಅವ್ರು ತುಂಬುವಲ್ಲಿ ತೊಡಗಿಸಿಕೊಳ್ತಿದ್ದಾರಾ ಅನ್ನೋ ಶಂಕೆ ಮೂಡ್ತಿದೆ. ತಿರುಪತಿ ಲಡ್ಡುವಿಗೆ ಪ್ರಾಣಿಗಳ ಕೊಬ್ಬು ಮಿಕ್ಸ್ ಆಗ್ತಿದೆ ಅನ್ನೋ ವಿಚಾರ ಅದ್ಯಾವಾಗ ಸ್ಫೋಟಗೊಳ್ತೋ ಆವಾಗಿಂದ ಪವನ್ ಕಲ್ಯಾಣ್ ಅಕ್ಷರಶಃ ಸಿಡಿದೆದ್ದಿದ್ದಾರೆ. ಸನಾತನ ಧರ್ಮದ ಪರವಾಗಿ ಭರ್ಜರಿ ಬ್ಯಾಟ್ ಬೀಸ್ತಿದ್ದಾರೆ. ಹಿಂದೂ ಧರ್ಮದ ತಂಟೆಗೆ ಬರೋದಕ್ಕೂ ಮುನ್ನ 100 ಬಾರಿ ಯೋಚನೆ ಮಾಡಿ ಅಂತಾ ಎಚ್ಚರಿಕೆ ಕೊಡ್ತಿದ್ದಾರೆ. ಈ ಮಧ್ಯೆ ಇದೇ ಪವನ್ ಕಲ್ಯಾಣ್ ಈ ಹಿಂದೆ ಆಡಿದ್ದ ಮಾತುಗಳು ವೈರಲ್ ಆಗ್ತಿವೆ. ಇದೇ ಪವನ್ ಕಲ್ಯಾಣ್ ಚರ್ಚ್ಗಳ ಬಗ್ಗೆ, ಕ್ರಿಶ್ಚಿಯನ್ ಸಮಯದಾಯದ ಬಗ್ಗೆ, ಮುಸಲ್ಮಾನರ ಬಗ್ಗೆ ಆಡಿದ್ದ ಪ್ರೀತಿಯ ಮಾತುಗಳು ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದೆ. ಅಷ್ಟಕ್ಕೂ
ಪವನ್ ಕಲ್ಯಾಣ್ ಆವತ್ತು ಹೇಳಿದ್ದೇನು? ಈಗ ಹೇಳ್ತಿರೋದೇನು?
ನನ್ನ ಸ್ನೇಹಿತ ಒಬ್ಬ ಪಾಸ್ಟರ್ ಆಗಿದ್ದ. ನಾನು ಪಿಯುಸಿ ಇದ್ದಾಗಲೇ ಅವನು ಪಾಸ್ಟರ್ ಆಗಿದ್ದ. ದೇವರ ಕರೆ ಬಂದಾಗ ಮನುಷ್ಯರಲ್ಲಿ ಏನಾಗುತ್ತೆ ಅಂತ ನನಗೆ ಗೊತ್ತು. ಆಗ ನನ್ನ ಸ್ನೇಹಿತ ನನಗೆ ದೀಕ್ಷಾಸ್ನಾನ ಮಾಡಿಸಿದ್ದ. ತುಂಬಾ ಆತ್ಮೀಯ ನನಗೆ. ಮಂದಿರಗಳಿಗೆ ಹೇಗೆ ಹೋಗ್ತೀನೋ ಹಾಗೆ, ತುಂಬಾ ಜನಕ್ಕೆ ತಿಳಿಯದೇ ಇರೋದೇನಂದ್ರೆ..ನಾನು ಇಸ್ರೇಲ್ ಹೋಗಿದ್ದೇ, ಅಲ್ಲಿನ ಬೆಥ್‌ಲೆಹೆಮ್‌ಗೂ ಹೋಗಿದ್ದೆ, ಯೇಸು ಹುಟ್ಟಿದ ಸ್ಥಳವನ್ನ ನೋಡಿದ್ದೆ. ಅಲ್ಲಿ ಎಲ್ಲಾ ಹೇಳಿದ್ರು ಯೇಸು ಹುಟ್ಟಿದ ಸ್ಥಳದ ಬಗ್ಗೆ. ಇದು ತುಂಬಾ ಶ್ರೇಷ್ಠ ಧರ್ಮ ಅಂತ ಈ ಹಿಂದೆ ಪವನ್ ಕಲ್ಯಾಣ್ ಹೇಳಿದ್ದರು.
ಒಂದು ಹೇಳ್ತೀನಿ ಕೇಳಿ, ನಮಗೆ ತುಂಬಾ ನೋವಾಗಿದೆ. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ. ನಾವೆಲ್ಲಾ ತುಂಬಾ ತುಂಬಾ ನೊಂದಿದ್ದೇವೆ. ಈ ರೀತಿ ಹೋರಾಟ ಮಾಡಿದ್ರೆ ನಿಮಗೆ ಮಜಾ ಸಿಗ್ಬೋದು. ನಮಗೆ ಹಾಗಲ್ಲ, ತುಂಬಾ ಕೋಪ ಆಗುತ್ತೆ. ನೀವು ಸನಾತನ ಧರ್ಮದ ಬಗ್ಗೆ ಮಾತಾಡುವಾಗ ನೂರು ಬಾರಿ ಯೋಚಿಸಬೇಕು ಅನ್ನೋದು ಮರಿಬೇಡಿ. ಇದೆಲ್ಲಾ ಇಲ್ಲಿಗೆ ನಿಲ್ಲಿಸಿಬಿಡಿ. ಇದು ಸದ್ಯ ಪವನ್ ಕಲ್ಯಾಣ್ ಆಡಿರುವ ಮಾತು
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ಗೂ ಸಂಕಷ್ಟ; ಏನಿದು ಪ್ರಕರಣ..?
ಪವನ್ ಕಲ್ಯಾಣ್ ಅಂದು ಮಾತಾಡ್ತಾ ಇರೋ ರೀತಿಗೂ? ಇಂದು ಮಾತಾಡ್ತಾ ಇರೋ ರೀತಿಗೂ ಭಾರೀ ವ್ಯತ್ಯಾಸವಿದೆ. ಕೇವಲ ಅವರ ಮಾತಿನಲ್ಲಷ್ಟೇ ಅಲ್ಲ. ಹಾವಭಾವದಲ್ಲಿಯೂ ಬದಲಾವಣೆ ಅನ್ನೋದ್ ನೇರವಾಗಿಯೇ ಕಾಣಿಸ್ತಿದೆ. ಹೀಗಾಗಿಯೇ ಅಂದು ನನ್ನ ಮಗಳು ಕ್ರಿಶ್ಚಿಯನ್, ತಾನು ಚರ್ಚಿಗೆ ಹೋಗಿದ್ದೇನೆ, ಮಾನವೀಯತೆ ಅನ್ನೋದೊಂದೇ ಧರ್ಮ, ಮುಸ್ಲಿಮರಿಗೂ ದೇಶ ಪ್ರೇಮ ಇದೆ ಅಂತಾ ಹೇಳ್ತಿದ್ದ ಪವನ್ ಇವತ್ಯಾಕ್ ಸನಾತನ ಜಪ ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಪ್ರತಿಪಕ್ಷದವ್ರದ್ದಾಗಿದೆ.. ಅದೇ ರೀತಿ ಪವನ್‌ಗೆ ಸನಾತನ ಧರ್ಮದ ಬಗ್ಗೆ ಮಾತಾಡುವ ಯಾವ್ ಹಕ್ಕು ಇಲ್ಲ ಅಂತಾನೂ ಟೀಕಿಸ್ತಿದ್ದಾರೆ. ಹಾಗಾದ್ರೆ, ಪವನ್ ಕಲ್ಯಾಣ್‌ಗೆ ಈ ಹಿಂದೆ ಕ್ರಿಶ್ಚಿಯನ್ ಧರ್ಮದ ಜೊತೆಗೆ ಅದ್ಯಾಕೆ ಅಷ್ಟೊಂದು ಪ್ರೀತಿ ಇತ್ತು ಅನ್ನೋದನ್ನ ನೋಡೋದಕ್ಕೆ ಹೋದ್ರೆ, ಸಿಗೋದು ಒಂದೇ ಕಾರಣ.ಅದು ಬೇರೇನೂ ಅಲ್ಲ, ಪವರ್ ಸ್ಟಾರ್ರವರು ಪ್ರೀತಿಸಿ ಮದುವೆಯಾದ ಅವರ ಮೂರನೇ ಪತ್ನಿ, ಌನಾ ಲೆಜ್ನೆವಾ.
ಹಿಂದೂ ಫೈರ್ಬ್ರ್ಯಾಂಡ್ ಡಿಸಿಎಂಗೆ ಕ್ರಿಶ್ಚಿಯನ್ ಪತ್ನಿ!
ಪವನ್ ಕಲ್ಯಾಣ್ ಈಗ್ಯಾಕೆ ತಮ್ಮನ್ನ ತಾವು ಹಿಂದೂ ಫೈರ್ ಬ್ರಾಂಡ್ ರೀತಿ ಬಿಂಬಿಸಿಕೊಳ್ತಿದ್ದಾರೆ ಅನ್ನೋದಕ್ಕೆ ಉತ್ತರ ಸಿಗದೇ ಇದ್ರೂ? ಅವ್ರಿಗೆ ಹಿಂದೊಮ್ಮೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಯಾಕಷ್ಟು ಒಲವಿತ್ತು ಅನ್ನೋದಕ್ಕೆ ಕಾರಣವಿದೆ. ಅದು ಗೊತ್ತಾಗಬೇಕಾದ್ರೂ ಪವನ್ ಕಲ್ಯಾಣ್ರ ಪರ್ಸನಲ್ ಲೈಫ್ನನ್ನ ಕೊಂಚ ನೋಟ ಹರಿಸಲೇಬೇಕು. ಹೌದು, ತುಂಬಾ ಜನರಿಗೆ ಗೊತ್ತೋ ಗೊತ್ತಿಲ್ಲವೋ, 53 ವರ್ಷದ ಸೂಪರ್ಸ್ಟಾರ್ ಕಮ್ ಡಿಸಿಎಂ ಪವನ್ ಕಲ್ಯಾಣ್ ಇಲ್ಲಿವರೆಗೂ ಮೂರು ಮದುವೆಗಳನ್ನಾಗಿದ್ದಾರೆ. ಅದ್ರಲ್ಲಿ, 1997ರಲ್ಲಿ ನಂದಿನಿ ಅನ್ನೋರ ಜೊತೆಗೆ ವಿವಾಹವಾದ್ರೆ, ಆ ಸಂಬಂಧ 2008ರಲ್ಲಿ ಕೊನೆಯಾಗುತ್ತೆ..ಆನಂತರ 2009ರಲ್ಲಿ ರೇಣು ದೇಸಾಯಿ ಅನ್ನೋರನ್ನ ವಿವಾಹವಾದ್ರೂ 2012ರಲ್ಲಿ ಅವರಿಗೂ ವಿಚ್ಚೇದನ ಕೊಡ್ತಾರೆ. ಎರಡು ಸಂಬಂಧಗಳನ್ನ ಕಡಿದುಕೊಂಡು ಒಂಟಿಯಾಗಿರೋವಾಗ್ಲೇ ಪವನ್ ಕಲ್ಯಾಣ್‌ಗೆ ರಷ್ಯಾದ ಮಾಡೆಲ್ ಕಮ್ ನಟಿ ಌನಾ ಲೆಜ್ನೆವಾ ಪರಿಚಯವಾಗೋದು.ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, 2013ರಲ್ಲಿ ಈ ಜೋಡಿ ಹಸೆಮಣೆ ಏರುತ್ತೆ
ಅನ್ನಾ ಲೆಜ್ನೆವಾ ಮೂಲತಃ ರಷ್ಯಾದವರು. ಕ್ರಿಶ್ಚಿಯನ್ ಧರ್ಮವನ್ನ ಫಾಲೋ ಮಾಡುವ ಇವ್ರು ಪವನ್ ಕಲ್ಯಾಣ್‌ಗೆ ಮೂರನೇ ಪತ್ನಿಯಾಗ್ತಾರೆ. ಹಾಗೇ ಲೆಜ್ನೆವಾಗೆ ಮೊದಲನೆ ಮದುವೆಯಲ್ಲಿ ಒಬ್ಬ ಹೆಣ್ಣು ಮಗಳಿದ್ದಳು. ಆಕೆಯ ಹೆಸ್ರು ಪೋವೆನಾ ಅಂಜನಾ ಪವನ್ನೋವಾ ಅಂತಿದ್ದು, ಇನ್ನು ಪವನ್ ಮತ್ತು ಲೆಜ್ನೆವಾ ಜೋಡಿಗೆ ಒಬ್ಬ ಮಗನಿದ್ದಾರೆ. ಆತನಿಗೆ ಶಂಕರ್ ಪವನೋವಿಚ್ ಅಂತಾ ಹೆಸರಿಡಲಾಗಿದೆ. ಇನ್ನು, ಪವನ್ ಕಲ್ಯಾಣ್ ತಮ್ಮ ಮಗಳ ಬಗ್ಗೆ ಮಾತನಾಡ್ಬೇಕಾದ್ರೆ, ಹಿಂದೊಮ್ಮೆ ತನ್ನ ಮಗಳು ಕ್ರಿಶ್ಚಿಯನ್ ಧರ್ಮದವಳು ಅಂತಾ ಬಹಿರಂಗವಾಗಿ ಹೇಳ್ಕೊಂಡಿರೋದು ಕೂಡ ವೈರಲ್ ಆಗಿದೆ.
ಇದನ್ನೂ ಓದಿ: ಈ ಸರ್ಕಾರ ನನ್ನನ್ನು ಏನೂ ಮಾಡೋಕೆ ಆಗಲ್ಲ -ಸಿದ್ದರಾಮಯ್ಯಗೆ ಸವಾಲೆಸೆದ HD ಕುಮಾರಸ್ವಾಮಿ
ನನಗೆ ಒಮ್ಮೊಮ್ಮೆ ಅನಿಸುತ್ತೆ. ಎಲ್ಲೆಲ್ಲಿಂದಲೋ ಬಂದು ಇಲ್ಲಿ ಸ್ಥಾನಿಕವಾಗಿ ನೆಲೆಯೂರಿ, ಇಷ್ಟು ಮಂದಿ ಆ ಧರ್ಮವನ್ನ ನಂಬಿದ್ದಾರೆ ಅಂದ್ರೆ.. ಸೇವಾ ಮನೋಭಾವವಿದೆ ಈ ಕ್ರಿಶ್ಚಿಯನ್ ಮತದಲ್ಲಿ. ಅದನ್ನ ಪರಿಪೂರ್ಣ ಅರ್ಥ ಮಾಡಿಕೊಂಡು, ಸೇವಾಗುಣವನ್ನ ಅಳವಡಿಸಿಕೊಂಡು, ಇಷ್ಟು ಜನ ಈ ಧರ್ಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಿಮಗೆ ಗೊತ್ತು ನಮ್ಮ ಮನೆಯಲ್ಲೂ ಇಬ್ಬರು ಮಕ್ಕಳೂ ಕ್ರಿಶ್ಚಿಯನ್ ಧರ್ಮದವರು. ಇದನ್ನ ನಾನು ಮೊದಲಿಂದಲೂ ಹೇಳಿಕೊಂಡೆ ಬಂದಿದ್ದೇನೆ ಎಂದು ಆಂಧ್ರದ ಡಿಸಿಎಂ ಈ ಹಿಂದೊಮ್ಮೆ ಹೇಳಿದ್ದರು
ಏನಿದು ಪವನ್ ಕಲ್ಯಾಣ್ 3ನೇ ಕಲ್ಯಾಣ ರಹಸ್ಯ?
ಪವನ್ ಕಲ್ಯಾಣ್ ಟಾಲಿವುಡ್‌ನ ಪವರ್ ಸ್ಟಾರ್ ಆಗಿ ಗುರುತಿಸಿಕೊಂಡವರು. ಒಂದರ ಹಿಂದೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟ ಖ್ಯಾತಿ ಪವನ್ ಕಲ್ಯಾಣ್‌ಗೆ ಇದೆ. ಹಾಗೇ 2011 ರಲ್ಲಿ ರಿಲೀಸ್ ಆಗಿರೋ ತೀನ್ ಮಾರ್ ಸಿನಿಮಾ ಕೂಡ ಸೂಪರ್ ಹಿಟ್. ಅದೇ ಸಿನಿಮಾದಲ್ಲಿ ರಷ್ಯಾದ ಮಾಡೆಲ್ ಕಮ್ ನಟಿ ಅನ್ನಾ ಲೆಜ್ನೆವಾ ಆ್ಯಕ್ಟ್ ಮಾಡಿದ್ದಾರೆ. ಅಲ್ಲಿಂದಲೇ ಪವನ್ ಕಲ್ಯಾಣ್‌ಗೂ? ಅನ್ನಾ ಲೆಜ್ನೆವಾಗೂ ಪ್ರೇಮ ಅರಳಿದೆ. ಎರಡು ವರ್ಷಗಳ ಕಾಲ ಇಬ್ಬರೂ ಡೇಟಿಂಗ್‌ನಲ್ಲಿದ್ರು. ಅನಂತರ ಹಸೆಮಣೆ ಏರಿದ್ದಾರೆ.
ಇದನ್ನೂ ಓದಿ:ಲೋಕಾಯುಕ್ತರಿಂದ ಸಿಎಂ ಸಿದ್ದರಾಮಯ್ಯ ತನಿಖೆ.. ವಿಚಾರಣೆ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ವಿಶೇಷ ಅಂದ್ರೆ, ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಮದುವೆಯಾಗಿ ಬರೋಬ್ಬರಿ 11 ವವರ್ಷವೇ ಆಯ್ತು. ಬಟ್, ಇಷ್ಟು ವರ್ಷಗಳ ಕಾಲ ಅನ್ನಾ ಕ್ರಿಶ್ಚಿಯನ್ ಧರ್ಮವನ್ನು ಪಾಲನೆ ಮಾಡ್ತಿದ್ರೆ, ಪವನ್ ಕಲ್ಯಾಣ್ ಹಿಂದು ಧರ್ಮ ಪಾಲನೆ ಮಾಡ್ತಿದ್ದಾರೆ. ಪತ್ನಿ ಮತ್ತು ಮಗನಿಗೆ ಹಿಂದೂ ಧರ್ಮಗೆ ಬರುವಂತೆ ಒತ್ತಾಯ ಮಾಡದೇ ಅವರ ಧರ್ಮ ಅವರು ಪಾಲಿಸಲು ಅವಕಾಶ ಮಾಡ್ಕೊಟ್ಟಿದ್ದಾರೆ ಅನ್ನೋ ವಿಚಾರ ಕೇಳಿಬರ್ತಿದೆ. ಬಟ್, ಇಲ್ಲಿ ಇನ್ನೊಂದ್ ಸ್ಫೋಟಕ ವಿಚಾರ ಅಂದ್ರೆ, ಪವನ್ ಕಲ್ಯಾಣ್‌ಗಿಂತ ಅವ್ರ ಪತ್ನಿ ಅದೆಷ್ಟೋ ಪಟ್ಟು ಶ್ರೀಮಂತೆ. ಅವರ ಸಾಮ್ರಾಜ್ಯದ ಕಥೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ