newsfirstkannada.com

ಮಸಾಲೆ ಪದಾರ್ಥ, ತರಕಾರಿ ಬೆಲೆಯಲ್ಲಿ ದಿಢೀರ್​​​ ಏರಿಕೆ.. ಕಾರಣವೇನು ಗೊತ್ತಾ..?

Share :

27-06-2023

  ಗ್ಯಾರಂಟಿ ಜಾರಿ ಬೆನ್ನಲ್ಲೇ ರಾಜ್ಯದ ಜನತೆಗೆ ಬಿಗ್​ ಶಾಕ್​​

  ದಿನ ಬಳಕೆ ವಸ್ತುಗಳ ಬೆಲೆ ದಿಢೀರ್​​​​ ಏರಿಕೆಗೆ ಕಾರಣವೇನು?

  ಮಾರ್ಕೆಟ್​​ನಲ್ಲಿರೋ ಎಲ್ಲಾ ತರಕಾರಿಗಳಿಗೆ ಡಿಮ್ಯಾಂಡ್​

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿದೆ. ತರಕಾರಿ ಬೆಲೆ ಕಂಡು ಕೇಳರಿಯದ ಹಾಗೇ ಗಗನಕ್ಕೇರಿದೆ. ಗ್ಯಾರಂಟಿ ಖುಷಿಯಲ್ಲಿ ತೇಲಾಡುತ್ತಿದ್ದ ಜನರಿಗೆ ಇದೀಗ ಅಗತ್ಯ ವಸ್ತು ಬೆಲೆ ಏರಿಕೆಯ ಶಾಕ್. ಕರೆಂಟ್​ ಬೆಲೆ ಏರಿಕೆಯ ಶಾಕ್. ಇದೀಗ ತರಕಾರಿ ಅಂಗಡಿಗೋದ್ರೂ ಶಾಕ್, ದಿನಸಿ ಅಂಗಡಿಗೋದ್ರೂ ಶಾಕ್​ ಮೇಲೆ ಶಾಕ್.

ಮುನಿದ ಮುಂಗಾರು.. ಗಗನಕ್ಕೇರಿದ ತರಕಾರಿ ರೇಟು!

ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಸದ್ಯ ಮಾರ್ಕೆಟ್​​ನಲ್ಲಿರೋ ಎಲ್ಲಾ ತರಕಾರಿಗಳಿಗೆ ಡಿಮ್ಯಾಂಡ್​ ಜಾಸ್ತಿಯಾಗಿದೆ. ಕೆಲವು ಕಡೆ ಉತ್ತಮ ಬೆಳೆಯಾದ್ರೂ ಇಳುವರಿಯಿಲ್ಲ. ಬಿಸಿಲಿನ ಧಗೆಗೆ ಗಿಡಗಳು ಬಾಡಿ ಹೋಗಿವೆ. ಇಳುವರಿ ಕುಂಠಿತವಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ. ಕಳೆದ ತಿಂಗಳನಿಂದ ಮಾರುಕಟ್ಟೆಯಲ್ಲಿರುವ ತರಕಾರಿಗಳ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಲೇ ಇದೆ. ಆದರೀಗ, ಒಂದೇ ಬಾರಿ ಏಕಾಏಕಿ ಎಲ್ಲಾ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಜನರಿಗೆ ಆಘಾತ ಎದುರಾಗಿದೆ.

ಟೊಮ್ಯಾಟೋ ಬೆಲೆ ಏರಿಕೆ.. ಸುಡುತ್ತಿದೆ ಗ್ರಾಹಕರ ಜೇಬು

ವಿಪರ್ಯಾಸ ಎಂದರೆ ಟೊಮ್ಯಾಟೋ ಬೆಲೆ ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ. ಒಂದೇ ವಾರದಲ್ಲಿ ಟೊಮ್ಯಾಟೋ ಬೆಲೆ ಮೂರು ಪಟ್ಟಾಗಿದೆ. ಒಂದು ಕೆಜಿ ಟೊಮ್ಯಾಟೋ ದರ ನೂರರ ಗಡಿ ದಾಟಿ ಸಾಗುತ್ತಿದೆ. ಇತ್ತೀಚೆಗೆ 60 ರೂ. ಇದ್ದ ನಾಟಿ ಟೊಮ್ಯಾಟೋ ಬೆಲೆ ಇಂದು ಏಕಾಏಕಿ 110 ರೂ. ಜಿಗಿದಿದೆ. ಕೇವಲ ಎರಡೇ ದಿನದಲ್ಲಿ ಬರೋಬ್ಬರಿ 70 ರೂ. ಜಾಸ್ತಿಯಾಗಿದೆ. ಮೆಣಸಿನಕಾಯಿ ಬೆಲೆಯಂತೂ ಕಣ್ಣಲ್ಲಿ ನೀರು ತರಿಸುತ್ತೆ. ತರಕಾರಿ ಜತೆಗೆ ಬೇಳುಕಾಳುಗಳ ದರ ಏರಿಕೆಯಾಗಿದೆ.

ಗ್ಯಾರಂಟಿ ಗಮ್ಮತ್ತಿನಲ್ಲಿ ಮೈ ಮರೆತ್ತಿದ್ದ ಜನರಿಗೆ ತರಕಾರಿ ಬೆಲೆ ತಂದಿಟ್ಟ ಅವಾಂತರ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಹೀಗೆ ಎಲ್ಲಾ ರೇಟ್​ಗಳು ಜಾಸ್ತಿ ಆಗುತ್ತಿರುವ ಕಾರಣ ಜನ ಜೀವನ ನಡೆಸುವುದು ಕಷ್ಟಕರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಸಾಲೆ ಪದಾರ್ಥ, ತರಕಾರಿ ಬೆಲೆಯಲ್ಲಿ ದಿಢೀರ್​​​ ಏರಿಕೆ.. ಕಾರಣವೇನು ಗೊತ್ತಾ..?

https://newsfirstlive.com/wp-content/uploads/2023/06/Vegetables-1-1.jpg

Load More