newsfirstkannada.com

ಟೀಂ ಇಂಡಿಯಾದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ.. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ‘ತಲೆದಂಡ’..!?

Share :

18-08-2023

    ಮಿಯಾಮಿಯಲ್ಲಿ ಹೈ-ವೋಲ್ಟೆಜ್​ ಮೀಟಿಂಗ್​..!

    ಜಯ್​​ ಶಾ, ದ್ರಾವಿಡ್ ಆ 2 ಗಂಟೆ ಚರ್ಚಿಸಿದ್ದೇನು..?

    ದ್ರಾವಿಡ್​ ವಿಕೆಟ್​ ಉರುಳುತ್ತಾ? ಉಳಿಯುತ್ತಾ..?

ಟೀಮ್​ ಇಂಡಿಯಾದ ವೆಸ್ಟ್​ ಇಂಡೀಸ್​ ಪ್ರವಾಸದ ಮುಗಿದು ವಾರ ಕಳೆದಿದೆ. ಎಲ್ಲರೂ ಐರ್ಲೆಂಡ್​ ಟೂರ್​​ನ ಶಿಫ್ಟ್​ ಆಗಿದ್ದಾಗಿದೆ. ವಿಂಡೀಸ್​ ಟೂರ್​​ನಲ್ಲಿ ನಡೆದ ಹೈ-ವೋಲ್ಟೆಜ್​ ಮೀಟಿಂಗ್​ನ ಸೀಕ್ರೆಟ್​​ ಈಗ ರಿವೀಲ್​​ ಆಗಿದೆ. ಅಂದು ಭಾರತೀಯ ಕ್ರಿಕೆಟ್​​ನ ಬಾಸ್​ಗಳಾದ ಜಯ್​​

ಶಾ, ರಾಹುಲ್​ ದ್ರಾವಿಡ್ ಆ ಎರಡು ಗಂಟೆ ಚರ್ಚಿಸಿದ್ದೇನು?

ಏಷ್ಯಾಕಪ್​​ಗೆ ಟೀಮ್​ ಯಾವಾಗ ಅನೌನ್ಸ್​ ಆಗುತ್ತೆ? ಐರ್ಲೆಂಡ್​​ ವಿರುದ್ಧದ T20 ಸರಣಿಯ ತಂಡದಲ್ಲಿ ಯಾರ್ಯಾರಿಗೆ ಚಾನ್ಸ್​ ಸಿಗುತ್ತೆ? ಅನ್ನೋ ಚರ್ಚೆಯಲ್ಲೇ ಕ್ರಿಕೆಟ್​ ವಲಯ ಬ್ಯುಸಿಯಾಗಿದೆ. ಆದ್ರೆ ಸದ್ದಿಲ್ಲದೇ ಮತ್ತೊಂದು ಬೆಳವಣಿಗೆ ಭಾರತೀಯ ಕ್ರಿಕೆಟ್​ನಲ್ಲಿ ನಡೆದಿದೆ. ಈ ಘಟನೆ ನಡೆದಿರೋದು ಲಾಸ್ಟ್​ ವೀಕೇ..! ಈಗ, ಈ ಸುದ್ದಿ ಲೇಟ್​ ಅನಿಸಿದ್ರೂ, ಲೆಟೆಸ್ಟ್​​ ಆಗೆ ಇದೆ.

ಮಿಯಾಮಿಯಲ್ಲಿ ಹೈವೋಲ್ಟೆಜ್​ ಮೀಟಿಂಗ್

ಈಗಲ್ಲ.. ವಿಂಡೀಸ್​​ ವಿರುದ್ಧದ ಟಿ20 ಸರಣಿಯ ವೇಳೆ ನಡೆದಿರೋ ಖಾಸ್​ ಬಾತ್​ ಇದು. ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಮಿಯಾಮಿಗೆ ಬಂದಿಳಿದ ಕೂಡಲೇ ಹೆಡ್​ ಕೋಚ್​ ದ್ರಾವಿಡ್​ಗೆ, ಬಿಸಿಸಿಐ ಸೆಕ್ರೆಟರಿ ಜಯ್​ ಶಾ ಬುಲಾವ್​ ಬಂದಿತ್ತು. ಅದ್ರಂತೆ ಜಯ್​ ಶಾ ತಂಗಿದ್ದ ಹೋಟೆಲ್​ಗೆ ತೆರಳಿದ್ದ ದ್ರಾವಿಡ್​, ಸುದೀರ್ಘ 2 ಗಂಟೆಗಳ ಚರ್ಚೆ ನಡೆಸಿದ್ದಾರೆ. ಈ ಒನ್​ ಟು ಒನ್​ ಹೈವೋಲ್ಟೆಜ್​ ಮೀಟಿಂಗ್​ನಲ್ಲಿ ಚರ್ಚೆಯಾಗಿರೋದು ಹಲವಾರು ವಿಚಾರ.

ಏಷ್ಯಾಕಪ್​, ವಿಶ್ವಕಪ್​ ಟೂರ್ನಿಗೆ ರೆಡಿನಾ?

ಟೀಮ್​ ಇಂಡಿಯಾ ಮುಂದಿರೋ ಪ್ರತಿಷ್ಟೆಯ ಸವಾಲುಗಳಾದ ಏಷ್ಯಾಕಪ್​ ಹಾಗೂ ತವರಲ್ಲೇ ನಡೆಯೋ ವಿಶ್ವಕಪ್​ ಟೂರ್ನಿಗಳೇ ಮೀಟಿಂಗ್​ನ​ ಮೇನ್​ ಅಜೆಂಡಾ ಆಗಿತ್ತು. ಈ ಮಹತ್ವದ ಸರಣಿಗಳ ಬಗ್ಗೆಯೇ ಮುಖ್ಯವಾಗಿ ಸೆಕ್ರೆಟರಿ ಹಾಗೂ ಹೆಡ್​ ಕೋಚ್​ ಚರ್ಚೆ ನಡೆಸಿದ್ದಾರೆ. ವಿಶ್ವಕಪ್​ ಸಿದ್ಧತೆ, ಪ್ಲಾನಿಂಗ್​ ಹಾಗೂ ಟೀಮ್​ ಸೆಲೆಕ್ಷನ್​ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿದೆ ಅನ್ನೋದು ಮೂಲಗಳ ಮಾಹಿತಿ.!

ಯಂಗ್​ಸ್ಟರ್ಸ್​ ರಿಪೋರ್ಟ್​​ ಕಾರ್ಡ್​ ಕೇಳಿದ ಜಯ್​​ ಶಾ

ವಿಂಡೀಸ್​ ಸರಣಿಯಲ್ಲಿ ಮಾಡಿದ ಪ್ರಯೋಗಗಳ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿವೆ. ಈ ಬಗ್ಗೆಯೂ ದ್ರಾವಿಡ್​ ಬಳಿ ಜಯ್​ ಶಾ ಸ್ಪಷ್ಟನೆ ಕೇಳಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಫಾರ್ಮ್​ನಲ್ಲಿಲ್ಲದ ಸೀನಿಯರ್ಸ್​ಗೆ ಕೊಕ್​ ಕೊಟ್ಟು, ಯಂಗ್​ ಟೀಮ್​ ಕಟ್ಟೋ ಪ್ಲಾನ್​ನಲ್ಲಿರೋ ಬಿಸಿಸಿಐ ಬಾಸ್​​, ಚಾನ್ಸ್​ ಗಿಟ್ಟಿಸಿಕೊಂಡ ಯಂಗ್​ಸ್ಟರ್​​ಗಳ ರಿಪೋರ್ಟ್​ ಕಾರ್ಡ್​​ ಕೇಳಿದ್ದಾರೆ ಅನ್ನೋದು ಮೂಲಗಳ ಮಾತಾಗಿದೆ.

ಸೀನಿಯರ್ಸ್ ಅನ್​ಫಿಟ್ ಆದ್ರೆ​ ಮುಂದೇನು.?

ಫಾರ್ಮ್​ ಕಳೆದುಕೊಂಡು ಈಗಾಗಲೇ ತಂಡದಿಂದ ಹೊರ ಬಿದ್ದಿರುವ ಸೀನಿಯರ್​ ಆಟಗಾರರ ಭವಿಷ್ಯದ ಬಗ್ಗೆಯೂ ಚರ್ಚಿಸಲಾಗಿದೆ. ವೈಟ್​​ ಬಾಲ್​ ಫಾರ್ಮೆಟ್​​ ಹಾಗೂ ರೆಡ್​ ಬಾಲ್​ ಫಾರ್ಮೆಟ್​​ಗೆ ಸಪರೇಟ್​​ ತಂಡಗಳ ಆಯ್ಕೆಯ ಸಾದ್ಯತೆಗಳ ಬಗ್ಗೆಯೂ ಮಹತ್ವದ ಮಾತುಕತೆ ನಡೆದಿದೆ.

ದ್ರಾವಿಡ್​ ಭವಿಷ್ಯದ ಬಗ್ಗೆಯೂ ನಡೆದಿದೆ ಚರ್ಚೆ..!

ದ್ರಾವಿಡ್​ ಹೆಡ್​ ಕೋಚ್​ ಹುದ್ದೆಗೇರಿದ ಬಳಿಕ ಟೀಮ್​ ಇಂಡಿಯಾ ಸಾಲು ಸಾಲು ಕಂಡಿದೆ. ಬಿಗ್​ ಟೂರ್ನಿಗಳಲ್ಲಿ ಮುಗ್ಗರಿಸಿದ್ದನ್ನ ಬಿಡಿ.. ದುರ್ಬಲ ವಿಂಡೀಸ್​ ವಿರುದ್ಧವೂ ಸೋಲುಂಡಿದೆ. ಈ ಬಗ್ಗೆಯೂ ಜಯ್​ ಶಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ವಿಶ್ವಕಪ್​ ಬಳಿಕ ದ್ರಾವಿಡ್​ ಕಾಂಟ್ರ್ಯಾಕ್ಟ್​ ಮುಗಿಯಲಿದ್ದು, ಆ ಬಳಿಕ ಮುಂದೇನು.? ಎಂಬ ಬಿಗ್​ ಕೊಶ್ಚನ್​ ಬಗ್ಗೆಯೂ ಚರ್ಚೆ ನಡೆದಿದೆ.
ಇದಿಷ್ಟೇ ಅಲ್ಲ.. ವರ್ಕ್​ಲೋಡ್​​ ಹಾಗೂ ಇಂಜುರಿ ಮ್ಯಾನೇಜ್​ಮೆಂಟ್​, ಸಪೋರ್ಟ್​ ಸ್ಟಾಫ್​ ರಿಪೋರ್ಟ್​ ಕಾರ್ಡ್​ಗೆ ಸಂಭಂದಿಸಿದಂತೆಯೂ ದ್ರಾವಿಡ್​ ಬಳಿ ಜಯ್​ ಶಾ ಕೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, 2 ಗಂಟೆಗಳ ಹೈವೋಲ್ಟೆಜ್​ ಸಭೆಯಲ್ಲಿ ಹಲವಾರು ಚರ್ಚೆಗಳಂತೂ ನಡೆದಿವೆ. ಈ ಚರ್ಚೆಗಳ ಎಫೆಕ್ಟ್​ ಏನು.? ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ.. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ‘ತಲೆದಂಡ’..!?

https://newsfirstlive.com/wp-content/uploads/2023/08/RAHUL_DRAVID.jpg

Load More