newsfirstkannada.com

RCB ಫ್ರಾಂಚೈಸಿ ವಿರುದ್ಧ​ ಚಹಾಲ್​ ಆರೋಪಗಳ ಸುರಿಮಳೆ.. ಜಾಸ್ತಿ ದುಡ್ಡು ಕೇಳದಿದ್ರೂ ಫ್ರಾಂಚೈಸಿ ಕೈ ಬಿಟ್ಟಿತು..!

Share :

17-07-2023

    ಒಂದು ಫೋನ್ ಕಾಲ್ ಮಾಡದೆ ನನ್ನನ್ನು ತಂಡದಿಂದ ತೆಗೆದರು

    RCB ಯಿಂದ ಸ್ಟಾರ್ ಸ್ಪಿನ್ನರ್​ ಚಹಾಲ್​ಗೆ ಮಹಾಮೋಸನಾ..?

    ಚಹಾಲ್​ ಸ್ಥಾನ ತುಂಬಲು ವನಿಂದು ಹಸರಂಗ ಕೈಯಲ್ಲೂ ಆಗಿಲ್ಲ

ಸ್ಟಾರ್ ಸ್ಪಿನ್ನರ್​ ಯುಜವೇಂದ್ರ ಚಹಾಲ್ ಆರ್​ಸಿಬಿ ಸಖ್ಯ ತೊರೆದು 2 ವರ್ಷ ಕಳೆದಿದೆ. ಯುಜಿ ಇಲ್ಲದ ಆರ್​ಸಿಬಿಯನ್ನ ನೋಡಲು ಈಗಲು ಕಷ್ಟ ಆಗ್ತಿದೆ. ಇಂತಹ ಹೊತ್ತಲ್ಲಿ ಲೆಗ್ ಸ್ಪಿನ್ನರ್​​ ಆರ್​ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಫ್ರಾಂಚೈಸಿಯ ಸುಳ್ಳಿನ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಚಹಾಲ್​, ಆರ್​ಸಿಬಿ ವಿರುದ್ಧ ರೆಬೆಲ್ ಆಗಿದ್ದಾದರು ಏಕೆ..?

ಇದೊಂದೇ ಸ್ಟ್ಯಾಟ್ಸ್ ಸಾಕು, ಯುಜವೇಂದ್ರ ಚಹಾಲ್​​​​​ರ ಆರ್​ಸಿಬಿ ಜತೆಗಿನ ಜರ್ನಿ ಎಷ್ಟೊಂದು ವರ್ಣಮಯವಾಗಿತ್ತು ಅನ್ನೋದಕ್ಕೆ. 8 ವರ್ಷ ಆರ್​ಸಿಬಿ ಭಾಗವಾಗಿದ್ದ ಯುಜಿ 113 ಪಂದ್ಯವನ್ನಾಡಿದ್ರು. 113 ಪಂದ್ಯದಲ್ಲಿ 139 ವಿಕೆಟ್ ಕಮ್ಮಿ ಸಾಧನೆ ಏನಲ್ಲ. ಮ್ಯಾಚ್ ವಿನ್ನಿಂಗ್ ಬೌಲರ್​​​, ಆರ್​ಸಿಬಿಯನ್ನ ತೊರೆದು 2 ವರ್ಷ ಕಳೆದಿದೆ. ಇವರ ಸ್ಥಾನವನ್ನ ತುಂಬಲು ವನಿಂದು ಹಸರಂಗ ಕೈಯಲ್ಲೂ ಸಾಧ್ಯವಾಗಿಲ್ಲ.

ಇದನ್ನು ಓದಿ: Breaking News: ವಂದೇ ಭಾರತ್​​ ಎಕ್ಸ್​​ಪ್ರೆಸ್​​ನಲ್ಲಿ ಅಗ್ನಿ ಅನಾಹುತ.. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ..!

ಚಹಾಲ್​​ಗೆ ಆರ್​ಸಿಬಿ ನೇಮ್​ & ಫೇಮ್​​​​​​ ಎರಡನ್ನೂ ತಂದುಕೊಟ್ಟಿತು. ಇಂದು ಲೆಗ್ ಸ್ಪಿನ್ನರ್​​​​ ಸ್ಟಾರ್ ಕ್ರಿಕೆಟರ್​​​ ಆಗಿದ್ದಾರೆ ಅಂದ್ರೆ ಅದಕ್ಕೆ ಆರ್​ಸಿಬಿ ಕಾರಣ ಅನ್ನೋದನ್ನ ಮರೆಯುವಂತಿಲ್ಲ. ಕ್ರಿಕೆಟ್​ ಬದುಕು ಕಟ್ಟಿಕೊಟ್ಟ ಇದೇ ಆರ್​ಸಿಬಿ ತಂಡದ ವಿರುದ್ಧ ಚಹಾಲ್ ಕೆರಳಿ ಕೆಂಡವಾಗಿದ್ದಾರೆ.

ಕೊಟ್ಟ ಮಾತಿಗೆ ತಪ್ಪಿದ್ದಕ್ಕೆ ಚಹಾಲ್​ ನಿಗಿ ನಿಗಿ ಕೆಂಡ..!

ಆರ್​ಸಿಬಿಯ ನಂಬಿಗಸ್ಥ ಬೌಲರ್ ಆಗಿದ್ದ ಚಹಾಲ್​ರನ್ನ ಆಕ್ಷನ್​​​ನಲ್ಲಿ ರಿಟೈನ್ ಮಾಡಿಕೊಳ್ಳೋದಾಗಿ ಫ್ರಾಂಚೈಸಿ ಹೇಳಿತ್ತು. ಆದ್ರೆ ಇದೊಂದು ಸುಳ್ಳಿನ ಕಥೆ ಎಂದು ಚಹಾಲ್ ಹೇಳಿದ್ದು, ಫ್ರಾಂಚೈಸಿಯ ಅಸಲಿ ಮುಖವಾಡವನ್ನ ಕಳಚಿಟ್ಟಿದ್ದಾರೆ.

ನಿಜಕ್ಕೂ ಅದೊಂದು ನೋವಿನ ಸಂಗತಿ. ತಂಡದಿಂದ ನನ್ನನ್ನ ಕೈಬಿಡುವಾಗ ಫ್ರಾಂಚೈಸಿ ಒಂದು ಫೋನ್​​ ಕಾಲ್ ಆಗ್ಲಿ ಅಥವಾ ಸಂಪರ್ಕಿಸುವ ಪ್ರಯತ್ನ ಮಾಡ್ಲಿಲ್ಲ. ಆರ್​​ಸಿಬಿಗಾಗಿ 114 ಪಂದ್ಯಗಳನ್ನ ಆಡಿದೆ. ಹರಾಜಿನಲ್ಲಿ ಉಳಿಸಿಕೊಳ್ಳೋದಾಗಿ ಭರವಸೆ ನೀಡಿತ್ತು. ಆದರೆ ಉಳಿಸಿಕೊಳ್ಳಲಿಲ್ಲ. ಇದರಿಂದ ನನಗೆ ಸಿಟ್ಟು ಬಂತು. ಆರ್​ಸಿಬಿ ವಿರುದ್ಧ ಪಂದ್ಯದ ವೇಳೆ ನಾನು ಆ ಫ್ರಾಂಚೈಸಿಯ ಕೋಚ್​ ಜೊತೆ ಮಾತನಾಡಲಿಲ್ಲ.

ಚಹಾಲ್​, ಆರ್​ಸಿಬಿ ಮಾಜಿ ಆಟಗಾರ.

‘ದುಡ್ಡು ಜಾಸ್ತಿ ಕೇಳಿದೆ ಅನ್ನೋದು ಶುದ್ಧ ಸುಳ್ಳು..!’

ಇನ್ನು ಚಹಾಲ್​​ ದುಡ್ಡು ಜಾಸ್ತಿ ಕೇಳಿದ್ದರಿಂದ ಅವರನ್ನ ಹರಾಜಿನಲ್ಲಿ ಪಿಕ್​ ಮಾಡಲಿಲ್ಲ ಅಂತ ಫ್ರಾಂಚೈಸಿ ಹೇಳಿತ್ತು. ಇದನ್ನ ಎಲ್ಲರೂ ನಂಬಿದ್ರೂ. ಆದ್ರೆ ಈ ವಿಚಾರವನ್ನ ಚಹಾಲ್​ ಸಾರಸಗಟವಾಗಿ ತಿರಸ್ಕರಿಸಿದ್ದು, ಇದೊಂದು ಶುದ್ಧ ಸುಳ್ಳು ಎಂದಿದ್ದಾರೆ.

ನಾನು ಆರ್​ಸಿಬಿ ಪರ 8 ವರ್ಷ ಆಡಿದೆ. ಟೀಮ್ ಇಂಡಿಯಾ ಕ್ಯಾಪ್ ಧರಿಸಲು ಕೂಡ ಅವಕಾಶ ನೀಡಿತು. ವಿರಾಟ್ ಕೊಹ್ಲಿ ಭೈಯ್ ನನ್ನ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ರು. 8 ವರ್ಷ ತಂಡದ ಜೊತೆಗಿದ್ದು ಉಳಿಸಿಕೊಳ್ಳದಿದ್ದಾಗ ತುಂಬಾ ಬೇಜಾರಾಯ್ತು. ಬಳಿಕ ಕೆಲ ಗಾಳಿ ಸುದ್ದಿ ಕೇಳಿ ಬಂತು. ಅದೇನಂದ್ರೆ ನಾನು ಹೆಚ್ಚಿನ ಹಣ ಕೇಳಿದೆ ಎಂದು. ಆದ್ರೆ ಅದೆಲ್ಲ ಸುಳ್ಳು. ನಾನು ಹೆಚ್ಚಿನ ಹಣ ಕೇಳಿಲ್ಲ. ಎಷ್ಟಕ್ಕೆ ನಾನು ಅರ್ಹ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ.

ಚಹಾಲ್​, ಆರ್​ಸಿಬಿ ಮಾಜಿ ಆಟಗಾರ.

ಆಗಿದ್ದೆಲ್ಲ ಒಳ್ಳೆದಕ್ಕೆ, ಆರ್​ಸಿಬಿಗೆ ಸರಿಯಾಗಿ ತಿವಿದ ಚಹಾಲ್..!

ಇನ್ನು ಆರ್​ಸಿಬಿ ಬಗೆಗಿನ ಚಹಾಲ್​​ ಒಳಗಿನ ಆಕ್ರೋಶದ ಕಿಚ್ಚು ಇಲ್ಲಿಗೆ ನಿಂತಿಲ್ಲ. ನಾನು ಆರ್​ಸಿಬಿ ಬಿಟ್ಟು ಹೋಗಿದ್ದರಿಂದ ಮತ್ತಷ್ಟು ಒಳ್ಳೆದಾಯ್ತು ಅನ್ನುವ ಮೂಲಕ ಫ್ರಾಂಚೈಸಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.

ಆಕ್ಷನ್​​ನಲ್ಲಿ ಏನು ನಡೆಯಿತೋ ಅದೆಲ್ಲ ಆಗಿದ್ದು ಒಳ್ಳೆದಕ್ಕೆ. ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ನಾನು ಡೆತ್ ಬೌಲರ್ ಆಗಿ ಜರ್ನಿ ಶುರು ಮಾಡಿದೆ. ಆದ್ರೆ ಆರ್​ಸಿಬಿ ತಂಡದಲ್ಲಿ 16 ಓವರ್​​​ ಒಳಗೆ ನನ್ನ ಬೌಲಿಂಗ್ ಕೋಟಾ ಮುಗಿಯುತ್ತಿತ್ತು. ರಾಜಸ್ಥಾನ ಸೇರಿದ ಬಳಿಕ ನನ್ನ ಆಟದಲ್ಲಿ 5-10 %ಬೆಳವಣಿಗೆ ಕಂಡಿದೆ.

ಚಹಾಲ್​, ಆರ್​ಸಿಬಿ ಮಾಜಿ ಆಟಗಾರ.

ಲೈಫ್​ ಕೊಟ್ಟ ಆರ್​ಸಿಬಿ ತಂಡದ ವಿರುದ್ಧವೇ ಚಹಾಲ್ ನಿಗಿ ನಿಗಿ ಕೆಂಡಕಾಡಿದ್ದಾರೆ. ಚಹಲ್​​ರ ಮಾಜಿ ಟೀಮ್ ಮೇಲಿನ ಟೀಕಾಪ್ರಹಾರ ಇಲ್ಲಿಗೆ ನಿಲ್ಲುತ್ತಾ ? ಇಲ್ಲ ಕಂಟಿನ್ಯೂ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಫ್ರಾಂಚೈಸಿ ವಿರುದ್ಧ​ ಚಹಾಲ್​ ಆರೋಪಗಳ ಸುರಿಮಳೆ.. ಜಾಸ್ತಿ ದುಡ್ಡು ಕೇಳದಿದ್ರೂ ಫ್ರಾಂಚೈಸಿ ಕೈ ಬಿಟ್ಟಿತು..!

https://newsfirstlive.com/wp-content/uploads/2023/07/RCB_CHAHAL.jpg

Load More