newsfirstkannada.com

ಹಾವುಗಳು ಕಚ್ಚಿದರೆ ನಿಮಿಷಗಳಲ್ಲಿ ಸಾಯುತ್ತೇವೆ.. ಹೀಗಿರುವಾಗ ಪಾರ್ಟಿಗಳಲ್ಲಿ ನಶೆಗಾಗಿ ಆ ವಿಷವನ್ನು ಹೇಗೆ ಬಳಸ್ತಾರೆ..?

Share :

04-11-2023

    ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಯಾಕೆ ಫೇಮಸ್ ಆಗ್ತಿದೆ..?

    ನಶೆ ಪಾರ್ಟಿಗಳಲ್ಲಿ ಹಾವುಗಳ ವಿಷದ ಡೋಸ್ ಟ್ರೆಂಡಿಂಗ್..!

    ಹಾವಿನ ವಿಷ ತೆಗೆದುಕೊಂಡರೆ ಎಷ್ಟು ದಿನ ಅಮಲು ಇರುತ್ತದೆ..?

ನವೆಂಬರ್ 2 ರಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಅರಣ್ಯ ಇಲಾಖೆಯ ಸಹಾಯ ಪಡೆದು 9 ಹಾವುಗಳೊಂದಿಗೆ ಐವರು ಆರೋಪಿಗಳನ್ನು ಬಂಧಿಸಿದ್ದರು. 9 ಹಾವುಗಳಲ್ಲಿ ಐದು ನಾಗರ ಹಾವುಗಳಾಗಿದ್ದವು. ವಿಷದ ಹಾವುಗಳ ಜೊತೆಗೆ ಹೆಬ್ಬಾವು ಮತ್ತು ಕುದುರೆ ಹಾವುಗಳನ್ನೂ ವಶಪಡಿಸಿಕೊಳ್ಳುವುದರ ಜೊತೆ ಆರೋಪಿಗಳಿಂದ 20 ಎಂಎಲ್​ ನಷ್ಟು ಹಾವಿನ ವಿಷವನ್ನೂ ಜಪ್ತಿ ಮಾಡಿದ್ದಾರೆ.

ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಗೊತ್ತಾದ ಆಘಾತಕಾರಿ ವಿಚಾರ ಏನಂದರೆ ಹಾವಿನ ವಿಷವನ್ನು ನೋಯ್ಡಾ ಮತ್ತು ಎನ್​​ಸಿಆರ್​ಗಳಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗಳಲ್ಲಿ ಬಳಸಲಾಗುತ್ತಿತ್ತು ಅನ್ನೋದು! ಖ್ಯಾತ ಯೂಟ್ಯೂಬರ್ ಎಲ್ವಿಸ್ ಯಾದವ್ ಹೆಸರು ಕೂಡ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಎಲ್ವಿಸ್ ಯಾದವ್ ಸೇರಿ ಇನ್ನೂ ಐವರ ಹೆಸರು ಕೂಡ ಇದೆ. ಸದ್ಯ ಇದರ ವಿಚಾರಣೆ ನಡೆಯುತ್ತಿದೆ. ಸತ್ಯಾಸತ್ಯೆಗಳನ್ನು ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಏನಿದು ಅಚ್ಚರಿ..!?

ಅಚ್ಚರಿ ವಿಷಯ ಏನಂದರೆ ನಾಗರ ಹಾವಿನಂತ ವಿಷದ ಹಾವುಗಳು ಕಚ್ಚಿದಾಗ ಕೆಲವೇ ನಿಮಿಷಗಳಲ್ಲಿ ಜನ ಸಾಯುತ್ತಾರೆ. ಹೀಗಿರುವಾಗ ನಾಗರ ಹಾವಿನಂತಹ ವಿಷವನ್ನು ರೇವ್ ಪಾರ್ಟಿಗಳಲ್ಲಿ ಹೇಗೆ ಬಳಸುತ್ತಾರೆ. ಅದನ್ನು ಸೇವಿಸಿದರೆ ಜನ ಸಾಯುವುದಿಲ್ಲವಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ವಿಷದಿಂದ ಅಮಲು ಬರೋದು ಹೇಗೆ?

ದೇಶದಲ್ಲಿ ಶೇಕಡಾ 30 ರಷ್ಟು ಹಾವುಗಳು ಮಾತ್ರ ವಿಷಪೂರಿತವಾಗಿವೆ. ಅವುಗಳಲ್ಲಿ ಕೆಲವು ಹಾವಿನ ವಿಷವು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಪರಿಣಾಮ ಪಾರ್ಶ್ವವಾಯು (ಸ್ಟ್ರೋಕ್) ಕೂಡ ಸಂಭವಿಸುತ್ತವೆ. ಇನ್ನು ಕೆಲವು ಹಾವಿನ ವಿಷವು ರಕ್ತದ ಮೇಲೆ ಪರಿಣಾಮ ಬೀರಿ, ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತವೆ. ವಿಷಯ ಹೀಗಿರುವಾಗ ಪಾರ್ಟಿಗಳಲ್ಲಿ ಮಾದಕತೆಗಾಗಿ ಹಾವಿನ ವಿಷವನ್ನು ಬಳಸುತ್ತಾರೆ. ರಕ್ತದ ಮೇಲೆ ಪರಿಣಾಮ ಬೀರುವ ಹಾವಿನ ವಿಷದ ಬದಲಾಗಿ, ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುವ ಹಾವಿನ ವಿಷವನ್ನು ರೇವ್ ಪಾರ್ಟಿಗಳಲ್ಲಿ ಬಳಸಲಾಗುತ್ತದೆ.

ಹೇಗೆ ಹಾವಿನ ವಿಷವನ್ನು ಚುಚ್ಚಲಾಗುತ್ತದೆ..?

ಹಾವಿನ ವಿಷದಿಂದ ಅಮಲೇರಿಸುವಾಗ ಹೆಚ್ಚಿನ ಜಾಗೃತೆ ವಹಿಸಲಾಗುತ್ತದೆ. ವಿಶೇಷವಾಗಿ ವಿಷದ ಡೋಸ್ ಲೈಟ್ ಆಗಿರುವಂತೆ ಕೆಲವು ಮಾನದಂಡಗಳನ್ನು ಬಳಸಲಾಗುತ್ತದೆ. ವಿಷಕ್ಕೆ ರಾಸಾಯನಿಕಗಳನ್ನು ಬಳಸಿ ಡೋಸ್​ ಯೂಸ್ ಮಾಡುತ್ತಾರೆ. ಹಾವಿನ ವಿಷ ಬಳಸಿದ ಡೋಸ್​ಗಳನ್ನು ತೆಗೆದುಕೊಂಡ ವ್ಯಕ್ತಿಯು ಹಲವು ಗಂಟೆಗಳ ಕಾಲ ಮಾದಕ ಲೋಕದಲ್ಲಿ ತೇಲಾಡುತ್ತಾನೆ.

ಇದನ್ನೂ ಓದಿಹಾವು, ಅವುಗಳ ವಿಷವನ್ನು ಲಕ್ಷಾಂತರ ರೂ.ಗೆ ಮಾರಾಟ.. ಭಯಾನಕವಾಗಿದೆ ಇವರ ಕಥೆ..!

ಅಂದರೆ ಹಾವಿನ ವಿಷದಿಂದ ತಯಾರಿಸಿದ ಅಮಲು ಸಾಮಾನ್ಯವಾಗಿ ಸಿಗುವ ಅಮಲುಗಳಿಗಿಂತ ತುಂಬಾನೇ ಭಿನ್ನ. ಅಲ್ಕೋಹಾಲ್, ಔಷಧಿ (ಡ್ರಗ್ಸ್​)ಗಳಿಗಿಂತ ಹೆಚ್ಚು ವೇಗವಾಗಿ ಮಾದಕತೆಯನ್ನು ಉಂಟುಮಾಡುತ್ತದೆ. ಪರಿಣಾಮ ದೀರ್ಘಕಾಲದವರೆಗೆ ದೇಹದೊಳಗೆ ಮಾದಕತೆ ಉಳಿದುಕೊಳ್ಳುತ್ತದೆ. ಹಾವಿನ ವಿಷದ ಡೋಸ್ ಯುವಕರಲ್ಲಿ ಹೆಚ್ಚು ಸಂತೋಷ ಮತ್ತು ಅತಿಯಾದ ನಿದ್ರೆಗೆ ಸಹಕಾರಿಯಾಗುತ್ತದೆ. 3-4 ವಾರಗಳ ಕಾಲ ಅದರ ನಶೆ ದೇಹದಲ್ಲಿ ಪ್ರಭಾವ ಬೀರುತ್ತದೆ ಎಂದು ವರದಿಗಳು ಹೇಳುತ್ತವೆ.

ರೇವ್ ಪಾರ್ಟಿಗಳಲ್ಲಿ ಹಾವುಗಳ ಮೋಡಿಗಾರರು..!

ಕೆಲವೊಮ್ಮೆ ಇದು ತುಂಬಾನೇ ಅಪಾಯಕಾರಿ. ಯಾರಿಗಾದರೂ ಆಕಸ್ಮಿಕವಾಗಿ ಹಾವಿನ ವಿಷದಿಂದ ತಯಾರಿಸಿದ ಡೋಸ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದರೆ ಸಾವು ಕೂಡ ಸಂಭವಿಸಬಹುದು. ಇತ್ತೀಚೆಗಿನ ವರದಿಗಳ ಪ್ರಕಾರ, ರೇವ್ ಪಾರ್ಟಿಗಳಂತಹ ಮೋಜು, ಮಸ್ತಿನ ವೇದಿಕೆಯಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹಾವಿನ ವಿಷವನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಅಪೀಮು, ತಂಬಾಕು, ಗಾಂಜಾ, ಎಂಡಿಎಂಎ ಮಾದಕ ವಸ್ತುಗಳಿಗಿಂತ ಹಾವುಗಳ ವಿಷ ಜಾಸ್ತಿ ಕಿಕ್ ನೀಡುವುದರಿಂದಲೇ ಕೆಲವರು ನೇರವಾಗಿ ಹಾವುಗಳಿಂದ ಕಚ್ಚಿಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಹಾವುಗಳೊಂದಿಗೆ ಮೋಡಿ ಮಾಡುವವರನ್ನು ರೇವ್ ಪಾರ್ಟಿಗಳಿಗೆ ಕರೆಸುತ್ತಾರೆ, ಜೊತೆಗೆ ಹಾವುಗಳು ಪಾರ್ಟಿಯಲ್ಲಿ ಭಾಗಿಯಾಗುವ ಯುವಕರಿಗೆ ಕಚ್ಚುವಂತೆ ಮಾಡುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ:ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸೋದು ಯಾಕೆ? ಎಲ್ವಿಶ್ ಯಾದವ್ ಪ್ರಕರಣದಿಂದ ‘ನಶೆ’ಯ ಸತ್ಯ ಬಹಿರಂಗ

ಹಾವಿನ ವಿಷ ಔಷಧಿಯಲ್ಲಿ..!

ಹಾವಿನ ವಿಷವನ್ನು ವೈದ್ಯಕೀಯ ಅಭ್ಯಾಸದಲ್ಲಿ ಮೊದಲಿನಿಂದಲೂ ಬಳಸಲಾಗುತ್ತಿದೆ. ನಾಗರ ಹಾವಿನ ವಿಷದಿಂದ ಅನೇಕ ಔಷಧಿಗಳನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ಅಮಲು ಪದಾರ್ಥವಾಗಿ ಬಳಸಲು ಶುರುಮಾಡಿದ್ದಾರೆ. ನಾಗರ ಹಾವಿನ ವಿಷವು ಅತ್ಯಂತ ದುಬಾರಿಯಾಗಿದೆ. ಅದರ ಒಂದೊಂದು ಹನಿಗೂ ಲಕ್ಷಾಂತರ ರೂಪಾಯಿ ಇದೆ. ಹಲವು ರಾಸಾಯನಿಕಗಳನ್ನು ಬಳಸಿ ಔಷಧಿ ತಯಾರಿಸಲಾಗುತ್ತದೆ. ಹಾವಿನ ವಿಷದಲ್ಲಿ neurotoxic, cardiotoxic and cytotoxic enzymes ಇರುತ್ತದೆ. ಹೀಗಾಗಿ ಹಾವುಗಳ ವಿಷವನ್ನು ಔಷಧಿಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಉದಾಹರಣೆಗೆ ರುಸೆಲ್ ವೈಪರ್ ಹಾವಿನ ವಿಷವು, Antiphospholipid ನಂತಹ ಸಿಂಡ್ರೋಮ್​ಗೆ ತುಂಬಾನೇ ಉಪಯುಕ್ತಕಾರಿಯಾಗಿದೆ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾವುಗಳು ಕಚ್ಚಿದರೆ ನಿಮಿಷಗಳಲ್ಲಿ ಸಾಯುತ್ತೇವೆ.. ಹೀಗಿರುವಾಗ ಪಾರ್ಟಿಗಳಲ್ಲಿ ನಶೆಗಾಗಿ ಆ ವಿಷವನ್ನು ಹೇಗೆ ಬಳಸ್ತಾರೆ..?

https://newsfirstlive.com/wp-content/uploads/2023/11/SNAKE-6.jpg

Load More